ಮನೆ ಬಾಡಿಗೆ ಕಟ್ಟಲು ಸಿನಿಮಾಗಳನ್ನು ಮಾಡುತ್ತಿದ್ದೆ ಎಂದು ಸೈಫ್ ಅಲಿ ಖಾನ್ ತಾಯಿ ಶರ್ಮಿಳಾ ಟ್ಯಾಗೋರ್ ಹೇಳಿದ್ದಾರೆ.
ಬಾಲಿವುಡ್ ಹಿರಿಯ ನಟಿ, ಖ್ಯಾತ ನಟ ಸೈಫ್ ಅಲಿ ಖಾನ್ ತಾಯಿ ಶರ್ಮಿಳಾ ಟ್ಯಾಗೋರ್ ಅನೇಕ ವರ್ಷಗಳ ಬಳಿಕ ಮತ್ತೆ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. 2010ರಲ್ಲಿ ಕೊನೆಯ ಬಾರಿಗೆ ತೆರೆಮೇಲೆ ಕಾಣಿಸಿಕೊಂಡಿದ್ದ ಶರ್ಮಿಳಾ ಇದೀಗ ಗುಲ್‌ಮೊಹರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಅನೇಕ ವರ್ಷಗಳ ಬಳಿಕ ಸಿನಿಮಾ ಮಾಡುತ್ತಿರುವ ನಟಿ ಶರ್ಮಿಳಾ ಸದ್ಯ ಪ್ರಮೋಷನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೆ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಶರ್ಮಿಳಾ ಅನೇಕ ವಿಚಾರಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಅಂದು ಬಾಡಿಕೆ ಕಟ್ಟಲು ಸಿನಿಮಾಗಳನ್ನು ಮಾಡುತ್ತಿದ್ದೆ ಎಂದು ಶರ್ಮಿಳಾ ಬಹಿರಂಗ ಪಡಿಸಿದ್ದಾರೆ.
ಶರ್ಮಿಳಾ ಟ್ಯಾಗೋರ್ 1960 ಮತ್ತು 1970 ರ ದಶಕದಲ್ಲಿ ಜನಪ್ರಿಯ ಚಲನಚಿತ್ರ ನಟಿಯರಲ್ಲಿ ಒಬ್ಬರಾಗಿದ್ದರು. ಕಳೆದ ಎರಡು ದಶಕಗಳಿಂದ ಶರ್ಮಿಳಾ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೂ ಭಾರತೀಯ ಸಿನಿಮಾರಂಗ ಕಂಡ ಅತ್ಯುತ್ತಮ ನಟಿಯರಲ್ಲಿ ಒಬ್ಬರು ಎನ್ನಲಾಗುತ್ತದೆ. ಅನೇಕ ಹಿಟ್ ಸಿನಿಮಾಗಳಲ್ಲಿ ಶರ್ಮಿಳಾ ಮಿಂಚಿದ್ದಾರೆ. ಆರಾಧನಾ, ಅಮರ್ ಪ್ರೇಮ್, ಚುಪ್ಕೆ ಚುಪ್ಕೆ ಅಂತಹ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇಂಡಿಯಾ ಟುಡೇ ಜೊತೆ ಮಾತನಾಡಿದ ನಟಿ ಶರ್ಮಿಳಾ ಸಿನಿಮಾಗಳನ್ನು ಹೇಗೆ ಆಯ್ಕೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ. 'ನಾನು ವೃತ್ತಿಪರರು, ಕೆಲವೊಮ್ಮೆ ಸಿನಿಮಾಗಳನ್ನು ಬಾಡಿಗೆ ಕಟ್ಟಲು ಹಣಕ್ಕಾಗಿ ಸಹಿ ಹಾಕುತ್ತಿದ್ದೆ. ಇನ್ನು ಕೆಲವೊಮ್ಮೆ ಸಹ ಕಲಾವಿದರಿಗೆ ಸಹಾಯ ಬೇಕಾದರೆ ಸಹಿ ಮಾಡುತ್ತಿದ್ದೆ, ಇನ್ನು ಕೆಲವು ಬಾರಿ ಆ ಪ್ರಾಜೆಕ್ಟ್‌ಗೆ ನಾನು ಸೂಟ್ ಆಗ್ತೀನಿ ಅಂತ ಆದರೆ ಆ ಸಿನಿಮಾ ಚೆನ್ನಾಗಿ ಆಗಲಿ ಎಂದು ಸಹಿ ಮಾಡುತ್ತಿದ್ದೆ. ಹಲವು ಕಾರಣಗಳಿಗೆ ನಾನು ಸಿನಿಮಾ ಮಾಡಿದ್ದೇನೆ' ಎಂದು ಹೇಳಿದರು.
ಒಂದು ವೇಳೆ ತಾಯಿನ ಕಳೆದು ಕೊಂಡರೂ ಪರ್ಫ್ಯೂಮ್‌ನಿಂದ ಅವಳನ್ನು ನೆನಪಿಸಿಕೊಳ್ತೀನಿ: ನಟಿ ಸೋಹಾ ಅಲಿ ಖಾನ್
'ಒಟ್ಟಾರೆಯಾಗಿ ನಾನು ಸ್ಕ್ರಿಪ್ಟ್ ಅನ್ನು ಇಷ್ಟಪಟ್ಟಿದ್ದರಿಂದ ಮತ್ತು ಆ ಸಮಯದಲ್ಲಿ ಅದು ಅಗತ್ಯವಾಗಿತ್ತು ಎಂದು ನಾನು ಭಾವಿಸುತ್ತೇನೆ. ಆದರೆ ನಾನು ಇಂದು ಇರುವ ಈ ಸಮಯದಲ್ಲಿ, ಕುಸುಮ್ (ಗುಲ್‌ಮೊಹರ್ ಸಿನಿಮಾದ ಪಾತ್ರ) ಅಗತ್ಯವಾಗಿತ್ತು' ಎಂದು ಹೇಳಿದರು. ಶರ್ಮಿಳಾ ಟ್ಯಾಗೋರ್ ಚಿಕ್ಕ ವಯಸ್ಸಿನಲ್ಲೇ ಸಿನಿಮಾಗೆ ಎಂಟ್ರಿ ಕೊಟ್ಟರು. ಬಳಿಕ 1968 ರಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು ಮದುವೆಯಾದ ನಂತರವೂ ಕೆಲಸ ಮುಂದುವರೆಸಿದ್ದರು. ಶರ್ಮಿಲಾ ಟ್ಯಾಗೋರ್ ಮತ್ತು ಮನ್ಸೂರ್ ಅಲಿ ಖಾನ್ ದಂಪತಿ ಅವರಿಗೆ 3 ಮಕ್ಕಳು. ಸೈಫ್ ಅಲಿ ಖಾನ್, ಸಬಾ ಅಲಿ ಖಾನ್ ಮತ್ತು ಸೋಹಾ ಅಲಿ ಖಾನ್ ಮೂವರು ಮಕ್ಕಳು. ಸೈಫ್ ಅಲಿ ಖಾನ್ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ.
ಕರೀನಾ ಕೆಲಸಕ್ಕೆ ಹೋಗಲಿ ಎಂದ ಸೈಫ್ ಅಲಿ- ಅಮ್ಮ ಶರ್ಮಿಳಾ ಟ್ಯಾಗೋರ್ ಹೇಳಿದ್ದೇನು?
ಗುಲ್ಮೊಹರ್ ಸಿನಿಮಾದಲ್ಲಿ ಮನೋಜ್ ಬಾಜಪಾಯಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಹುಲ್ ವಿ ಚಿತ್ತೆಲ್ಲಾ ನಿರ್ದೇಶನದಲ್ಲಿರುವ ಬಂದಿರುವ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ಸದ್ಯ ಪ್ರಚಾರದಲ್ಲಿ ಸಿನಿಮಾತಂಡ ಬ್ಯುಸಿಯಾಗಿದೆ. ಅಂದಹಾಗೆ ಈ ಸಿನಿಮಾ ಮಾರ್ಚ್ 3ರಂದು ರಿಲೀಸ್ ಆಗುತ್ತಿದೆ.