ನಿಂಗೇನಾದ್ರೂ ಹುಚ್ಚು ಹಿಡಿದಿದ್ಯಾ?; ಅಮಿತಾಭ್ - ಅಭಿಷೇಕ್‌ ಬಗ್ಗೆ ಮಾಧ್ಯಮಗಳಿಗೆ ಜಯಾ ಬಚ್ಚನ್ ಖಡಕ್ ಉತ್ತರ

Published : Mar 01, 2023, 11:47 AM IST
ನಿಂಗೇನಾದ್ರೂ ಹುಚ್ಚು ಹಿಡಿದಿದ್ಯಾ?; ಅಮಿತಾಭ್ - ಅಭಿಷೇಕ್‌ ಬಗ್ಗೆ ಮಾಧ್ಯಮಗಳಿಗೆ ಜಯಾ ಬಚ್ಚನ್ ಖಡಕ್ ಉತ್ತರ

ಸಾರಾಂಶ

ಬಿ-ಟೌನ್‌ ಮಂದಿ ಪದೇ ಪದೇ ಅಮಿತಾಭ್ ಬಚ್ಚನ್‌ ಬಗ್ಗೆ ಜಯಾ ಬಳಿ ಕೇಳುತ್ತಿದ್ದ ಏಕೈಕ ಪ್ರಶ್ನೆ ಏನು ಗೊತ್ತಾ? ಇಲ್ಲಿದೆ ನೋಡಿ ಉತ್ತರ.... 

1971ರಲ್ಲಿ ಗುಡ್ಡಿ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಜಯಾ 70 ರಿಂದ 20ರ ದಶಕವನ್ನು ರೂಲ್ ಮಾಡಿದ್ದಾರೆ. ಬಿಗ್ ಬಿ ಅಮಿತಾಭ್ ಬಚ್ಚನ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಜಯಾ ಬಚ್ಚನ್ ಬಣ್ಣದ ಪ್ರಪಂಚದಿಂದ ದೂರ ಉಳಿದರು. ಇದೇ ಸಮಯಕ್ಕೆ ಮಗ ಅಭಿಷೇಕ್ ಬಚ್ಚನ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅಮಿತಾಭ್‌ ಮತ್ತು ಜಯಾ ಗಳಿಸಿದ ನೇಮ್ ಆಂಡ್‌ ಫೇಮ್‌ನ ಗಳಿಸುವುದರಲ್ಲಿ ವಿಫಲವಾದರು ಎಂದು ಕಾಮೆಂಟ್ ಮಾಡಲಾಗುತ್ತಿದೆ. ಗಂಡ-ಮಗನ ಬಗ್ಗೆ ಜಯಾಗೆ ಪದೇ ಪದೇ ಕೇಳುವ ಪ್ರಶ್ನೆ ಏನು ಗೊತ್ತಾ? 

1969ರಲ್ಲಿ ಸಾತ್ ಹಿಂದೂಸ್ತಾನಿ ಚಿತ್ರದಲ್ಲಿ ಅಮಿತಾಭ್ ಮತ್ತು ಜಯಾ ಒಟ್ಟಿಗೆ ಅಭನಯಿಸಿದರು. ಅದಾದ ಮೇಲೆ ಏಕ್ ನಜರ್,ಜಂಜೀರ್ ಮತ್ತು ಅಭಿಮಾನ್,ಚುಪ್ಕೆ ಚುಪ್ಕೆ,ಶೋಲೆ ಮತ್ತು ಮಿಲಿ, ಸಿಲ್ಸಿಲಾ ಮತ್ತು ಕಭಿ ಖುಷಿ ಕಭೀ ಗಮ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅಮಿತಾಭ್‌ ಎಂಟ್ರಿ ಕೊಡುವಷ್ಟರಲ್ಲಿ ಜಯಾ ಹೆಸರು ಮತ್ತು ಹಣ ಮಾಡಿದ್ದರು. 2010ರಲ್ಲಿ Rediffಗೆ ನೀಡಿದ ಸಂದರ್ಶನದಲ್ಲಿ ಅಭಿಷೇಕ್ ಮತ್ತು ಅಮಿತಾಭ್ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. 'ಅಭಿಷೇಕ್‌ಗೆ ಒಳ್ಳೆ ನಟನೆ ಗೊತ್ತಿದ್ದರೆ ಅದನ್ನು ತೋರಿಸಿ ತಂದೆ ಅಮಿತಾಭ್‌ನ ಮೀರಿಸುತ್ತಾನೆ.  ಸಾಧನೆ ಮಾಡಬೇಕು ಅಂದ್ರೆ ಕಷ್ಟ ಪಡಬೇಕು. ಅಮಿತಾಭ್ ಬಚ್ಚನ್ ಚಿತ್ರರಂಗಕ್ಕೆ ಬಂದಾಗ ಅನೇಕರು ನನ್ನನ್ನು ಕೇಳುತ್ತಿದ್ದರು ನಿಂಗೇನಾದ್ರೂ ಹುಚ್ಚು ಹಿಡಿದಿದ್ಯಾ? ಯಾಕೆ ಅವನ ಜೊತೆ ಸಿನಿಮಾ ಮಾಡುತ್ತಿರುವೆ ಆತ ಎಂದೂ ಹೆಸರು ಮಾಡುವುದಿಲ್ಲ ಆತ ಸೋಲುತ್ತಾನೆ ಎನ್ನುತ್ತಿದ್ದರು. ಅದೇ ಜನ ಅಮಿತಾಭ್‌ ಸ್ಟಾರ್ ಆದ್ಮೇಲೆ ಅವರ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದರು' ಎಂದು ಜಯಾ ಮಾತನಾಡಿದ್ದಾರೆ.

ಅಮಿತಾಭ್​ ಪ್ರೀತಿ ತೊರೆದ ಮೇಲೆ... ನೋವಿನ ಸರಮಾಲೆ ತೆರೆದಿಟ್ಟ ನಟಿ ರೇಖಾ!

'ತಾಯಿಯಾಗಿ ಮಾತ್ರ ನಾನು ಮಾತನಾಡುವುದಿಲ್ಲ ಸಿನಿಮಾ ಮತ್ತು ಆಕ್ಟಿಂಗ್ ಸ್ಟುಡೆಂಟ್‌ ಆಗಿ ನಾನು ಕಲಾವಿದೆಯಾಗಿ ಹೇಳಬೇಕು ಅಂದ್ರೆ ಅಭಿಷೇಕ್‌ ಮಾತ್ರ ಅಮಿತಾಭ್‌ನ ಮೀರಿಸುತ್ತಾನೆ ಅನ್ನೋದು ಸುಳ್ಳು. ಯಾರು ಬೇಕಿದ್ದರೂ ಇಷ್ಟು ದೊಡ್ಡ ಮಟ್ಟಕ್ಕೆ ಬೇಕಿದ್ದರೂ ಸಾಧನೆ ಮಾಡಬಹುದು. ಅಮಿತಾಭ್‌ಗಿಂತ ಬೆಟರ್‌ ಆಗಿ ನಟನೆ ಮಾಡುವವರು ಖಂಡಿತ ಇರುತ್ತಾರೆ. ಶಾರುಖ್‌ ಖಾನ್ ಬೇಕಿದ್ದರೂ ಅಮಿತಾಭ್‌ನ ಮೀರಿಸಬಹುದು' ಎಂದು ಜಯಾ ಹೇಳಿದ್ದಾರೆ.

ಪೀರಿಯೆಡ್ಸ್ ಬಗ್ಗೆ ಜಯಾ ಬಚ್ಚನ್:

'ಆಗೆಲ್ಲ ಈಗಿನ ಹಾಗೆ ಸ್ಯಾನಿಟರಿ ಪ್ಯಾಡ್‌ಗಳು ಇರಲಿಲ್ಲ. ಮುಟ್ಟಿನ ವೇಳೆ ಬಟ್ಟೆಯನ್ನೇ ಪ್ಯಾಡ್ ನಂತೆ ಧರಿಸುತ್ತಿದ್ದೆವು. ಪೀರಿಯೆಡ್ಸ್ ಇದ್ದಾಗಲೂ ಶೂಟಿಂಗ್‌ಗೆ ಹಾಜರಾಗೋದು ಅನಿವಾರ್ಯವಾಗಿತ್ತು. ಶೂಟಿಂಗ್‌ ಅಂದ್ಮೇಲೆ ಕೇಳ್ಬೇಕಾ, ಸಮಯದ ರಿಸ್ಟ್ರಿಕ್ಷನ್ಸ್ ಇರುತ್ತಿರಲಿಲ್ಲ. ಆಗೆಲ್ಲ ಮುಟ್ಟಿನ ಬಟ್ಟೆ ಬದಲಿಸೋದು ಮಹಾ ಹಿಂಸೆ. ದಟ್ಟವಾದ ಪೊದೆಗಳನ್ನು ಅರಸಿಕೊಂಡು ಹೋಗಬೇಕು. ಆ ಪೊದೆಗಳ ಹಿಂದೆ ನಿಂತು ಮುಟ್ಟಿನ ಬಟ್ಟೆ ಬದಲಿಸಬೇಕಿತ್ತು. ಕ್ಯಾರವಾನ್ ಬಿಡಿ, ಶೌಚಾಲಯಗಳೂ ಸಿಗುತ್ತಿರಲಿಲ್ಲ. ಸೆಟ್‌ನಲ್ಲಿ ಮುಟ್ಟಿನ ಬಟ್ಟೆಗಳನ್ನು ಬದಲಿಸಲು ನಾನು ಪಡುತ್ತಿದ್ದ ಪಾಡು ದೇವರಿಗೇ ಪ್ರೀತಿ' ಎಂದು ಆ ದಿನಗಳು ಎಂಥಾ ನರಕ ಸದೃಶವಾಗಿರುತ್ತಿದ್ದವು ಅನ್ನೋದನ್ನು ಜಯಾ ಬಾಧುರಿ ವಿವರಿಸುತ್ತಾರೆ.

ಐಶ್ವರ್ಯ ರೈನ ಮದುವೆ ಆಗಿದ್ದಕ್ಕೆ ಜೀವನದಲ್ಲಿ ಜವಾಬ್ದಾರಿ ಹೆಚ್ಚಾಯ್ತು: ಅಭಿಷೇಕ್ ಬಚ್ಚನ್ ಹೇಳಿಕೆ ವೈರಲ್

ಆಗ ಜಯಾ ಬಚ್ಚನ್ ತಮ್ಮ ಪೀರಿಯೆಡ್ಸ್ ಆರಂಭದ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. 'ನನಗೆ ಚೆನ್ನಾಗಿ ನೆನಪಿದೆ. ಶೂಟಿಂಗ್‌ ಸೆಟ್‌ನಲ್ಲಿ ಮುಟ್ಟಿನ ಬಟ್ಟೆಯನ್ನು ಬದಲಾಯಿಸಲು ಸಹ ಸಾಕಷ್ಟು ಹೆಣಗಾಡುತ್ತಿದ್ದೆ. ಆಗ ಶೂಟಿಂಗ್‌ ಸೆಟ್‌(Shooting set)ನಲ್ಲಿ ಸರಿಯಾದ ಶೌಚಾಲಯವೂ ಇರುತ್ತಿರಲಿಲ್ಲ. ಆ ಸಮಯದಲ್ಲಿ ಪಿರಿಯಡ್ಸ್(Periods) ಅನುಭವ ಬಹಳ ಭಯಾನಕವಾಗಿತ್ತು. ನಾವು ಹೊರಾಂಗಣ ಚಿತ್ರೀಕರಣ ಮಾಡುವಾಗ, ನಮ್ಮಲ್ಲಿ ಈಗ ಇರುವಂತೆ ಕ್ಯಾರವಾನ್‌ಗಳು ಇದ್ದಿಲ್ಲ. ಆದ್ದರಿಂದ ನಾವು ಪೊದೆಗಳ ಹಿಂದೆ ಹೋಗಿ ಬಟ್ಟೆ ಬದಲಿಸಬೇಕಿತ್ತು ಎಂದಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!