
ಹಿಂದೊಮ್ಮೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಪಟ್ಟದಲ್ಲಿ ಮೆರೆದಿದ್ದ ನಟಿ ಜ್ಯೋತಿಕಾ (Jyothika) ಬಾಲಿವುಡ್ ಸಿನಿಮಾದಲ್ಲಿ ಯಾಕೆ ನಟಿಸಿಲ್ಲ? ಈ ಬಗ್ಗೆ ಹಲವರು ಸಂದೇಹ ಹೊಂದಿದ್ದಾರೆ. ಕಾರಣ, ಶ್ರೀದೇವಿ, ರೇಖಾ ಸೇರಿದಂತೆ ದಕ್ಷಿಣ ಭಾರತದ ಹಲವು ನಟಿಯರು ಬಾಲಿವುಡ್‌ನಲ್ಲಿ ಅವಕಾಶ ಪಡೆದು ಬಹಳಷ್ಟು ಮಿಂಚಿದ್ದಾರೆ. ಆದರೆ, ನಟಿ ಜ್ಯೋತಿಕಾಗೆ ಯಾಕೆ ಬಾಲಿವುಡ್ ಕಡೆಯಿಂದ ಆಫರ್ ಸಿಗಲಿಲ್ಲ ಎಂಬ ಸಂಗತಿ ಕೆಲವರ ಪಾಲಿಗೆ ಬಹಳಷ್ಟು ಅಚ್ಚರಿ ವಿಷಯ ಎನಿಸಿದೆ.
ಈ ಬಗ್ಗೆ ಸ್ವತಃ ನಟಿ ಜ್ಯೋತಿಕಾ ಬಾಯ್ಬಿಟ್ಟಿದ್ದಾರೆ. ನನಗೆ ಬಾಲಿವುಡ್ ಕಡೆಯಿಂದ ಆಫರ್ ಬರಲಿಲ್ಲ ಎಂಬುದು ಸುಳ್ಳು. 26 ವರ್ಷಗಳ ಹಿಂದೆ, ನಾನು ಹಿಂದಿಯ 'ಡೋಲಿ ಸಜಾ ಕೆ ರಖನಾ' ಚಿತ್ರದಲ್ಲಿ ನಟಿಸಿದ್ದೇನೆ. ಆ ಬಳಿಕ ನನಗೆ ಆಫರ್ ಮತ್ತೆ ಬರಲಿಲ್ಲ ಎಂಬುದು ಮಾತ್ರ ಸತ್ಯ. ಆ ಚಿತ್ರ ಗೆಲ್ಲಲಿಲ್ಲ. ಅದ್ಯಾಕೋ ಸಿನಿಮಾ ಪ್ರೇಕ್ಷಕರಿಗೆ ಹಿಡಿಸಲಿಲ್ಲ. ಹೀಗಾಗಿ ನನಗೆ ಬಾಲಿವುಡ್‌ನಿಂದ ಮತ್ತೆ ಅವಕಾಶ ಬರಲೇ ಇಲ್ಲ. ಯಾವುದೇ ಚಿತ್ರರಂಗವಿರಲಿ, ಗೆದ್ದರಷ್ಟೇ ಬೆಲೆ, ಸೋತರೆ ಮತ್ತೆ ಅವಕಾಶ ಸಿಗುವುದು ತೀರಾ ಕಡಿಮೆ. ಸಿನಿಮಾ ಸೋಲು ನಮ್ಮದೇ ಸೋಲಾಗುವುದು ನಿಶ್ಚಿತ' ಎಂದಿದ್ದಾರೆ ನಟಿ ಜ್ಯೋತಿಕಾ.
ಜಡೇಜಾ ಫ್ಯಾಮಿಲಿ ಸೊಸೆಯಾಗಲಿಲ್ಲ ಮಾಧುರಿ ದೀಕ್ಷಿತ್; ಕ್ರಿಕೆಟಿಗನ ಲವ್ ಬ್ರೇಕಪ್ ಆಗಿದ್ದೇಕೆ?
ನಟಿ ಜ್ಯೋತಿಕಾ ತಮಿಳು ಸೂಪರ್ ಸ್ಟಾರ್ ನಟ ಸೂರ್ಯ (Actor Suriya) ಹೆಂಡತಿ. ತೆಲುಗಿನಲ್ಲೂ ಸ್ಟಾರ್ ನಟಿಯಾಗಿ ಮೆರೆದಿರುವ ನಟಿ ಜ್ಯೋತಿಕಾ, ಕನ್ನಡದಲ್ಲಿ ಸಹ ನಟಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ನಾಗರಹಾವು' ಚಿತ್ರದಲ್ಲಿ ನಟಿ ಜ್ಯೋತಿಕಾ ನಟಿಸಿದ್ದಾರೆ. ಇತ್ತೀಚೆಗೆ, ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿರುವ ನಟಿ ಜ್ಯೋತಿಕಾ, ಸಿನಿಮಾ ಆಯ್ಕೆಗಳಲ್ಲಿ ಸಾಕಷ್ಟು ಚೂಸಿಯಾಗಿದ್ದಾರೆ. ಇತ್ತೀಚೆಗೆ ಜ್ಯೋತಿಕಾ ಮಲಯಾಳಂ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು.
ಕಾಮ ಕಸ್ತೂರಿ' ಖ್ಯಾತಿ ನಟಿ ಪೂನಂ ಧಿಲ್ಲಾನ್ ಈಗೆಲ್ಲಿದ್ದಾರೆ? ಮುರಿದು ಬಿದ್ದ ಮದುವೆಗಳೆಷ್ಟು?
ಒಟ್ಟಿನಲ್ಲಿ, ನಟಿ ಜ್ಯೋತಿಕಾ ಪಾಲಿಗೆ ಬಂದಿದ್ದ ಒಂದು ಬಾಲಿವುಡ್ ಆಫರ್ ಮತ್ತೆ ಬರಬಹುದಾದ ಎಲ್ಲಾ ಅವಕಾಶಗಳ ಬಾಗಿಲನ್ನೇ ಬಂದ್ ಮಾಡಿದೆ ಎನ್ನಬಹುದು. ಈ ಸಂಗತಿ ಅಚ್ಚರಿಯಾದರೂ ಸತ್ಯ ಸಂಗತಿ. ಸೂಪರ್ ಸ್ಟಾರ್ ಆಗಿದ್ದಾಗಲೇ ಸಿಗದ ಅವಕಾಶ ಇನ್ಮುಂದೆ ಸಿಗುವುದು ಕಷ್ಟಸಾಧ್ಯ ಎನ್ನಬಹುದು. ಆದರೂ ಹೇಳಲಿಕ್ಕಾಗದು. ಏಕೆಂದರೆ, ನಟಿ ಶ್ರೀದೇವಿ ತಮ್ಮ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ 'ಇಂಗ್ಲಿಷ್ ವಿಂಗ್ಲಿಷ್' ಸಿನಿಮಾ ಮೂಲಕ ಮತ್ತೆ ಬಾಲಿವುಡ್‌ನಲ್ಲಿ ಮಿಂಚಿದ್ದರು. ಹಾಗೇ ನಟಿ ಜ್ಯೋತಿಕಾ ಕೂಡ ಬಾಲಿವುಡ್ ಉದ್ಯಮದಲ್ಲಿ ಚಾನ್ಸ್ ಪಡೆದು ಮಿಂಚಬಹುದು. ಕಾದು ನೋಡಬೇಕಷ್ಟೇ!
ಡಾ ರಾಜ್‌ಗೆ ಪದ್ಮಭೂಷಣ, ವಿಷ್ಣುವರ್ಧನ್‌ಗೆ ಚಪ್ಪಲಿ ಎಸೆತ; ಯಾಕಿಂಥ ಅನ್ಯಾಯ ನಡೆದಿತ್ತು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.