ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಸದಾ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಕುತೂಹಲ ಡಬಲ್ ಮಾಡುತ್ತಾರೆ. ಆದರೆ ಈ ಬಾರಿ ಪೂನಂ ಪಾಂಡೆ ಮಾವಿನ ಹಣ್ಣಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ರಸಭರಿತ ಹಣ್ಣಿನ ಸೂಪರ್ ರೆಸಿಪಿ ಹೇಳಿದ್ದಾರೆ.
ಮುಂಬೈ(ಮೇ.27) ಬಿಕಿನಿ, ಟಾಪ್‌ಲೆಸ್, ಬೆತ್ತಲಾಗುವ ಮೂಲಕ ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಕೋಲಾಹಲ ಸೃಷ್ಟಿಸುವುದು ಸಾಮಾನ್ಯ. ಇತ್ತೀಚೆಗೆ ಗರ್ಭಕಂಠ ಕ್ಯಾನ್ಸರ್ ಪ್ರಚಾರದಿಂದ ಭಾರಿ ಟೀಕೆ ಎದುರಿಸಿದ ಪೂನಂ ಪಾಂಡೆ ಇದೀಗ ಅಭಿಮಾನಿಗಳಿಗೆ ಹೊಸ ರೆಸಿಪಿ ನೀಡಿದ್ದಾರೆ. ಸದ್ಯ ಮಾವಿನ ಹಣ್ಣಿ ಸೀಸನ್ ಕಾರಣ, ರಸಭರಿತ ಮಾವಿನ ಹಣ್ಣಿನ ರೆಸಿಪಿ ನೀಡಿದ್ದಾರೆ. ಈ ಕುರಿತು ವಿಡಿಯೋ ಪೋಸ್ಟ್ ಮಾಡಿ ಅಭಿಮಾನಿಗಳ ಖುಷಿ ಡಬಲ್ ಮಾಡಿದ್ದಾರೆ.
ಪೂನಂ ಪಾಂಡೆ ಸ್ಪೆಷಲ್ ಮಾವಿನ ಹಣ್ಣಿನ ರೆಸಿಪಿ ಇದೀಗ ಪೂನಂ ರೀತಿಯಲ್ಲಿ ಹಾಟ್ ಅಂಡ್ ಬೋಲ್ಡ್ ಆಗಿ ವೈರಲ್ ಆಗಿದೆ. ಇದಕ್ಕಾಗಿ ಪೂನಂ ಪಾಂಡೆ ನಾಲ್ಕು ಮಾವಿನ ಹಣ್ಣುಗಳನ್ನು ತೆಗೆದುಕೊಂಡಿದ್ದಾಳೆ. ಈ ಮಾವಿನ ಹಣ್ಣುಗಳನ್ನು ಕತ್ತರಿಸಲಾಗಿದೆ. ಬಳಿಕ ಮಾವಿನ ಹಣ್ಣಿಗೆ ಮೆಣಸಿನ ಪುಡಿ ಹಾಗೂ ಉಪ್ಪು ಹಾಕಿದ್ದಾರೆ. ಇದ್ದಾದ ಬಳಿಕ ಟೇಬಲ್ ಸ್ಪೂನ್ ತೆಗೆದು ಬಿಸಿ ಮಾಡಿ ಕತ್ತರಿಸಿದ ಪ್ರತಿಯೊಂದು ಮಾವಿನ ಹಣ್ಣಿನ ಮೇಲಿಟ್ಟು ಉದುರಿಸಿದ ಖಾರ ಪುಡಿ ಹಾಗೂ ಉಪ್ಪು ಸರಿಯಾಗಿ ಹಣ್ಣು ಎಳೆದುಕೊಳ್ಳುವಂತೆ ಮಾಡಿದ್ದಾರೆ.
ಮತ್ತೆ ಬೆತ್ತಲಾದ ಪೂನಂ ಪಾಂಡೆ, ಝಲಕ್ ಹರಿಬಿಟ್ಟು ನಿಮ್ಮ ಮನಸ್ಸಿನಲ್ಲಿದ್ದೇನೆ ಎಂದ ನಟಿ!
ರೆಸೆಪಿ ಕೆಲಸ ಮುಗಿದ ಬಳಿಕ ರೆಡಿ ಮಾಡಿದ ಮಾವಿನ ಹಣ್ಣುಗಳನ್ನು ಅಷ್ಟೇ ರಸಭರಿತವಾಗಿ ತಿಂದಿದ್ದಾರೆ. ಈ ವಿಡಿಯೋವನ್ನು ಪೂನಂ ಪಾಂಡೆ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಬಗೆ ಬಗೆಯ ಕಮೆಂಟ್‌ಗಳು ವ್ಯಕ್ತವಾಗಿದೆ. ಈ ರೀತಿಯ ಮ್ಯಾಂಗೋ ರೆಸಿಪಿ ಮಾಡಿದರೆ ನಾವು ಹೇಗಿರಲಿ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ರಸಭರಿತ ಮಾವಿನ ಹಣ್ಣು ತಿನ್ನುವ ಭಾಗ್ಯ ಕರುಣಿಸಿ ಎಂದು ಕಮೆಂಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಪೂನಂ ಪಾಂಡೆ ಬಾತ್‌ರೂಂ ಬೆತ್ತಲೆ ಫೋಟೋಗಳನ್ನು ಹಂಚಿಕೊಂಡಿದ್ದರು, ಹಲವು ದಿನಗಳ ಬಳಿಕ ಪೂನಂ ನಗ್ನ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋ ಭಾರಿ ವೈರಲ್ ಆಗಿತ್ತು. ವಿವಾದದ ಬಳಿಕ ಪೂನಂ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು.
ಪೂನಂ ಪಾಂಡೆ ಇತ್ತೀಚೆಗಿನ ಸಂದರ್ಶನ ಒಂದರಲ್ಲಿ ಕಹಿ ಘಟನೆ ಮೆಲುಕು ಹಾಕಿ ಭಾವುಕರಾಗಿದ್ದರು. ಮಾಜಿ ಗೆಳೆಯ ತನಗೆ ಮಾಡಿದ ವಂಚನೆ ಕುರಿತು ತುಟಿ ಬಿಚ್ಚಿಟ್ಟಿದ್ದರು. ಮಾಜಿ ಗೆಳೆಯನೇ ತನ್ನ ಬಾತ್ ರೂಂ ವಿಡಿಯೋಗಳನ್ನು ಲೀಕ್ ಮಾಡಿದ್ದ. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹರಿಬಿಟ್ಟಿದ್ದ. ಈ ಘಟನೆ ನಾನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಮಾನಸಿಕವಾಗಿ ತೀವ್ರವಾಗಿ ನೊಂದು ಹೋಗಿದ್ದೆ ಎಂದು ಪೂನಂ ಪಾಂಡೆ ಹೇಳಿದ್ದರು.
ಬಾಯ್‌ಫ್ರೆಂಡ್‌ನಿಂದಲೇ ಪೂನಂ ಪಾಂಡೆ ಬಾತ್ ರೂಂ ವಿಡಿಯೋ ಲೀಕ್, ಕ್ಷಮಿಸಲ್ಲ ಎಂದ ನಟಿ!