
ದೇಶದಾದ್ಯಂತ ಕೆಜಿಎಫ್-2(KGF 2) ಹವಾ ಜೋರಾಗಿದೆ. ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2 ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು ಬಹುತೇಕ ಶೋಗಳು ಸೋಲ್ಡ್ ಔಟ್ ಆಗಿವೆ. ಟಿಕೆಟ್ ಬುಕ್ಕಿಂಗ್ ವಿಚಾರದಲ್ಲೂ ಕೆಜಿಎಫ್ -2 ದಾಖಲೆ ಮಾಡಿದೆ. ಕೆಜಿಎಫ್2 ಕ್ರೇಜ್ ನೋಡಿ ಭಾರತೀಯ ಸಿನಿಮಾರಂಗವೇ ದಂಗ್ ಆಗಿದೆ. ರಿಲೀಸ್ ಗೂ ಮೊದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಕೆಜಿಎಫ್2 ಬಿಡಗಡೆ ದಿನವೇ ಬಾಲಿವುಡ್ ನಟ ಶಾಹಿದ್ ಕಪೂರ್(Shahid Kapoor) ನಟನೆಯ ಜರ್ಸಿ(Jersey) ಸಿನಿಮಾ ತೆರೆಗೆ ಬರಲು ಸಜ್ಜಾಗಿತ್ತು. ತೂಫಾನ್ ಹಾಗೆ ಬರ್ತಿರುವ ಕೆಜಿಎಫ್-2 ಮುಂದೆ ಜರ್ಸಿ ಬಿಡುಗಡೆಗೆ ಧೈರ್ಯ ಮಾಡಿದ್ದರು. ಆದ್ರೀಗ ಕೆಜಿಎಫ್-2 ಹವಾ ನೋಡಿ ಬಿಡುಗಡೆ ದಿನಾಂಕ ಮುಂದೂಡಿದ್ದಾರೆ.
ಬಾಲಿವುಡ್ ಸ್ಟಾರ್ ನಟ ಶಾಹಿದ್ ಕಪೂರ್ ಅಭಿನಯದ ಜರ್ಸಿ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರಲು ಸಜ್ಜಾಗಿತ್ತು. ಈಗಾಗಲೇ ಸಿನಿಮಾದ ಪ್ರಮೋಷನ್ ಕೂಡ ಪ್ರಾರಂಭ ಮಾಡಿದ್ದರು. ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡುತ್ತಲೇ ಬಂದಿದ್ದ ಸಿನಿಮಾತಂಡ ಏಪ್ರಿಲ್ 14ರಂದು ಬಿಡುಗಡೆ ದಿನಾಂಕ ಫಿಕ್ಸ್ ಮಾಡಿದ್ದರು. ಆದರೀಗ ಮತ್ತೆ ಪೋಸ್ಟ್ ಪೋನ್ ಮಾಡಿದ್ದಾರೆ. ಈ ಬಗ್ಗೆ ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ. ಶಾಹಿದ್ ಕಪೂರ್ ಸಿನಿಮಾ ಮುಂದಕ್ಕೆ ಹೋಗಿರುವ ಬಗ್ಗೆ ಟ್ವೀಟ್ ಮಾಡಿರುವ ತರಣ್, 'ಬ್ರೇಕಿಂಗ್ ನ್ಯೂಸ್ ಜರ್ಸಿ ಸಿನಿಮಾ ಒಂದು ವಾರ ಮುಂದೂಡಲಾಗಿದೆ. ಏಪ್ರಿಲ್ 22ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ತಡರಾತ್ರಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಧರ್ಮಸ್ಥಳದಲ್ಲಿ KGF 2 ತಂಡ; ಶ್ರೀ ಮಂಜುನಾಥನ ಆಶೀರ್ವಾದ ಪಡೆದ ಯಶ್
ಜರ್ಸಿ ಸಿನಿಮಾದಲ್ಲಿ ಶಾಹಿದ್ ಕಪೂರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಮೃಣಾಲ್ ಠಾಕೂರ್ ನಟಿಸಿದ್ದಾರೆ. ದಿಲ್ ರಾಜು, ಎಸ್ ನಾಗವಂಶಿ ಮತ್ತು ಅಮನ್ ಗಿಲ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಂದಹಾಗೆ ಈ ಸಿನಿಮಾ ತೆಲುಗಿನ ಜರ್ಸಿ ಸಿನಿಮಾದ ರಿಮೇಕ್ ಆಗಿದೆ. ತೆಲುಗಿನಲ್ಲಿ ನಟ ನಾನಿ ಮತ್ತು ಶ್ರದ್ಧಾ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಗೌತಮ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿತ್ತು. ಹಿಂದಿ ಜರ್ಸಿಗೂ ಗೌತಮ್ ಆಕ್ಷನ್ ಕಟ್ ಹೇಳಿದ್ದಾರೆ.
'KGF 2' ನಟಿಯ 'ಮ್ಯೂಟ್' ಸಿನಿಮಾಗೆ ಸಾಥ್ ನೀಡಿದ ಬಾಲಿವುಡ್ ಬೆಡಗಿ ರವೀನಾ ಟಂಡನ್
ಬಿಡುಗಡೆಗೆ ಎಲ್ಲಾ ಸಿದ್ಧತೆ ನಡೆಸಿದ್ದ ಜರ್ಸಿ ಇದೀಗ ಕೆಜಿಎಫ್-2 ಮುಂದೆ ಬರಲು ಭಯಬಿದ್ದು ಬಿಡುಗಡೆ ಮುಂದೂಡಿದೆ. ಅಂದಹಾಗೆ ಕೆಜಿಎಫ್ ಮೊದಲ ಭಾಗ ಬಿಡುಗಡೆಯಾದಾಗ ಶಾರುಖ್ ಖಾನ್ ನಟನೆಯ ಝೀರೋ ಸಿನಿಮಾ ಬಿಡುಗಡೆಯಾಗಿತ್ತು. ಕೆಜಿಎಫ್ ಮುಂದೆ ಝೀರೋ ಹೀನಾಯವಾಗಿ ಸೋತಿತ್ತು. ಅದೇ ಕಾರಣಕ್ಕೆ ಜರ್ಸಿ ಸಿನಿಮಾತಂಡ ಈ ನಿರ್ಧಾರಕ್ಕೆ ಬಂದಿದೆ. ಇದೀಗ ಏಪ್ರಿಲ್ 22ರಂದು ರಿಲೀಸ್ ಮಾಡುವುದಾಗಿ ಬಹಿರಂಗ ಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.