ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut) ನಡೆಸಿಕೊಡುತ್ತಿರುವ ಲಾಪ್ ಅಪ್ ರಿಯಾಲಿಟಿ ಶೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಶೋನಲ್ಲಿ ಸ್ಪರ್ಧಿಗಳು ತಮ್ಮ ವೈಯಕ್ತಿಕ ಜೀವನದ ಕರಾಳ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. ನಟಿ ಮಂದನಾ ಕರೀಮಿ(Mandana Karimi) ಖ್ಯಾತ ನಿರ್ದೇಶಕರ ಜೊತೆ ಹೊಂದಿದ್ದ ಸಂಬಂಧದ ಬಗ್ಗೆ ಬಹಿರಂಗ ಪಡಿಸಿದ್ದಾರೆ.
ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut) ನಡೆಸಿಕೊಡುತ್ತಿರುವ ಲಾಪ್ ಅಪ್ ರಿಯಾಲಿಟಿ ಶೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಶೋನಲ್ಲಿ ಅನೇಕ ವಿವಾದಾತ್ಮಕ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಸದಾ ವಿವಾದಗಳ ಮೂಲಕ ಸದ್ದು ಮಾಡುತ್ತಿದ್ದ ಈ ಸೆಲೆಬ್ರಿಟಿಗಳ ಮತ್ತೊಂದು ಮುಖ ಲಾಕ್ ಅಪ್ ಶೋನಲ್ಲಿ ಅನಾವರಣವಾಗುತ್ತಿದೆ. ಅನೇಕ ರಹಸ್ಯ ವಿಚಾರಗಳನ್ನು ನಟಿಯರು ಬಹಿರಂಗ ಪಡಿಸಿದ್ದಾರೆ. ಪೂನಂ ಪಾಂಡೆ, ಮಂದನಾ ಕರೀಮಿ ಹಾಗೂ ಇನ್ನು ಕೆಲವರು ತಮ್ಮ ವೈಯಕ್ತಿಕ ಜೀವನದ ಕರಾಳ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. ನಟಿ ಮಂದನಾ ಕರೀಮಿ(Mandana Karimi) ಖ್ಯಾತ ನಿರ್ದೇಶಕರ ಜೊತೆ ಹೊಂದಿದ್ದ ಸಂಬಂಧದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಅಲ್ಲದೆ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಆತ ದೂರ ಸರಿದನು ಎಂದು ಹೇಳಿದ್ದಾರೆ. ಮಂದನಾ ಜೀವನದ ಕತೆ ಕೇಳಿ ನಟಿ ಕಂಗನಾ ಕೂಡ ಕಣ್ಣೀರಾಕಿದ್ದಾರೆ.
ನಟಿ ಕಂಗನಾ, ಮಂದನಾ ಬಳಿ ತಮ್ಮ ಜೀವನದ ರಹಸ್ಯವನ್ನು ಬಹಿರಂಗ ಪಡಿಸುವಂತೆ ಕೇಳಿದರು. ಆಗ ಮಂದನಾ, ಮಹಿಳಾ ಹಕ್ಕುಗಳ ಬಗ್ಗೆ ಆಗಾಗ್ಗೆ ಮಾತನಾಡುವ ಪ್ರಸಿದ್ಧ ನಿರ್ದೇಶಕರ ಜೊತೆ ರಹಸ್ಯ ಸಂಬಂಧವನ್ನು ಹೊಂದಿರುವ ಬಗ್ಗೆ ಬಹಿರಂಗ ಪಡಿಸಿದರು. 'ಆ ಸಂಬಂಧ ಕೆಲವೇ ತಿಂಗಳುಗಳಲ್ಲಿ ತುಂಬಾ ಗಟ್ಟಿಯಾಗಿತ್ತು, ಮತ್ತು ಇಬ್ಬರು ಸೆಟ್ಲ್ ಆಗುವ ಪ್ಲಾನ್ ಮಾಡಿದ್ದೆವು. ಆದರೆ ಇಬ್ಬರೂ ತಮ್ಮ ಸಂಬಂಧವನ್ನು ರಹಸ್ಯವಾಗಿ ಇಡಲು ನಿರ್ಧರಿಸಿದ್ದೆವು. ಯಾಕೆಂದರೆ ಮಾಜಿ ಪತಿಯಿಂದ ವಿಚ್ಛೇದನಕ್ಕಾಗಿ ಕಾಯುತ್ತಿದ್ದೆ. ಆ ಸಮಯದಲ್ಲಿ ನಾನು ಗರ್ಭಿಣಿಯಾದೆ. ವಿಷಯ ಗೊತ್ತಾಗುತ್ತಿದ್ದಂತೆ ಆತ ದೂರ ಸರಿದನು. ಕಾರಣ ಆತ ಈ ಜವಾಬ್ದಾರಿಯನ್ನು ನಿಭಾಯಿಸಲು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಸಿದ್ಧನಾಗಿರಲಿಲ್ಲ. ಅಲ್ಲದೆ ಗರ್ಭಪಾತ ಮಾಡಿಸುವಂತೆ ಆತ ಮನವಲಿಸಿದ. ಮಗುವನ್ನು ನೋಡಿಕೊಳ್ಳಲು ನಿರಾಕರಿಸಿದನು. ಆಗ ನಾನು ತುಂಬಾ ಸ್ಟ್ರಾಂಗ್ ಆಗಿ ಗರ್ಭಪಾತ ಮಾಡಿಸುವ ನಿರ್ಧಾರ ತೆಗೆದುಕೊಂಡೆ' ಎಂದು ಬಹಿರಂಗ ಪಡಿಸಿದರು.
ನನ್ನ ಪತಿ ಬೇರೆ ಮಹಿಳೆಯರ ಜೊತೆ ಮಲಗಿದ್ದರು; ಮಂದನಾ ಕರೀಮಿ ಗಂಭೀರ ಆರೋಪ
ಮಾಜಿ ಪತಿಯ ಅಫೇರ್ ಬಿಚ್ಚಿಟ್ಟಿದ್ದ ಮಂದನಾ
ತಂದೆ ಬಗ್ಗೆ ಮಗುವಿಗೆ ಅರಿವಿಲ್ಲದಿರುವಾಗ ನಾನು ಮಗುವಿಗೆ ಜನ್ಮ ನೀಡಲು ಸಿದ್ಧವಿರಲಿಲ್ಲ ಎಂದು ಹೇಳಿದರು. ಮಂದನಾ ಕಥೆ ಕೇಳಿ ಸ್ಪರ್ಧಿಗಳು ಕಣ್ಣೀರಾಕಿದ್ದಾರೆ. ಕಂಗನಾ ಕೂಡ ಕಣ್ಣೀರಾಗಿ ಆಕೆಯನ್ನು ಸಮಾಧಾನ ಮಾಡಿದರು. ಇತ್ತೀಚಿಗಷ್ಟೆ ಮಂದನಾ ತನ್ನ ಮಾಜಿ ಪತಿಯ ಅಫೇರ್ ಗಳ ಬಗ್ಗೆ ಬಹಿರಂಗ ಪಡಿಸಿದ್ದರು. ಮಂದನಾ ಮಾಜಿ ಪತಿ ಗೌರವ್ ಗುಪ್ತ ಅವರಿಂದ ವಿಚ್ಛೇದನ ಪಡೆದು ದೂರ ಆಗಿರುವ ಮಂದನಾ, ತನ್ನ ಮಾಜಿ ಪತಿ ಅನೇಕ ಮಹಿಳೆಯರ ಜೊತೆ ಮಲಗಿದ್ದರು, ನಾವು ಬೇರೆ ಆಗಿ ನಾಲ್ಕು ವರ್ಷಗಳಲ್ಲಿ ಗೌರವ್ ಯಾವ ಯಾವ ಮಹಿಳಯರ ಜೊತೆ ಮಲಗಿದ್ದಾರೆ ಎನ್ನುವುದು ತನಗೆ ಗೊತ್ತಿದೆ ಎಂದು ಅಚ್ಚರಿಕರ ಹೇಳಿಕೆ ನೀಡಿದ್ದರು. ಇದೀಗ ಖ್ಯಾತ ನಿರ್ದೇಶಕನ ಜೊತೆ ಇದ್ದ ರಹಸ್ಯ ಅಫೇರ್ ಬಗ್ಗೆ ಬಹಿರಂಗ ಪಡಿಸಿದರು.
Kangana Ranaut: ಸೌತ್ ಸೂಪರ್ ಸ್ಟಾರ್ಸ್‌ಗೆ ಬಾಲಿವುಡ್‌ನಿಂದ ದೂರವಿರಿ ಎಂದಿದ್ದೇಕೆ ಬಾಲಿವುಡ್ ಕ್ವೀನ್?