'ಪುಷ್ಪ 2' ಮಾಸ್ ಟೀಸರ್ ರಿಲೀಸ್; ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜನ್ಮದಿನಕ್ಕಾಗಿ ಸ್ಪೆಷಲ್ ಗಿಫ್ಟ್‌!

Published : Apr 08, 2024, 07:11 PM ISTUpdated : Apr 08, 2024, 07:20 PM IST
'ಪುಷ್ಪ 2' ಮಾಸ್ ಟೀಸರ್ ರಿಲೀಸ್; ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜನ್ಮದಿನಕ್ಕಾಗಿ ಸ್ಪೆಷಲ್ ಗಿಫ್ಟ್‌!

ಸಾರಾಂಶ

ಅಲ್ಲು ಅರ್ಜುನ್ ಅವರು ಮಹಿಳೆಯ ಗೆಟಪ್‌ನಲ್ಲಿ ಸೀರೆ ಧರಿಸಿ, ಕೊರಳಲ್ಲಿ ನಿಂಬೆ ಹಣ್ಣಿನ ಹಾರ ಮತ್ತು ಹೂವಿನ ಹಾರವನ್ನು ಹಾಕಿಕೊಂಡು, ಕಾಲಿಗೆ ಗಜ್ಜೆ ಹಾಕಿಕೊಂಡು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಮತ್ತು ತ್ರಿಶೂಲ ಹಿಡಿದುಕೊಂಡು ಭರ್ಜರಿಯಾಗಿ ಫೈಟ್ ಮಾಡಿದ್ದಾರೆ.

'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ಹುಟ್ಟುಹಬ್ಬದ (Allu Arjun Birthday) ಹಿನ್ನೆಲೆಯಲ್ಲಿ 'ಪುಷ್ಪ 2: ದಿ ರೂಲ್‌' ಸಿನಿಮಾದ ಟೀಸರ್ ಟೀಸರ್ ಬಿಡುಗಡೆ ಮಾಡಲಾಗಿದೆ. 'ಪುಷ್ಪ 2' ಸಿನಿಮಾದ ಟೀಸರ್ ಪಕ್ಕಾ ಮಾಸ್ ಶೈಲಿಯಲ್ಲಿ ಇದೆ. ಈ ಟೀಸರ್‌ನಲ್ಲಿ ಅಲ್ಲು ಅರ್ಜುನ್ ಅವರನ್ನು ಹೊಸ ರೀತಿಯಲ್ಲಿ ತೋರಿಸಲಾಗಿದೆ. 

ಅಲ್ಲು ಅರ್ಜುನ್ ಅವರು ಮಹಿಳೆಯ ಗೆಟಪ್‌ನಲ್ಲಿ ಸೀರೆ ಧರಿಸಿ, ಕೊರಳಲ್ಲಿ ನಿಂಬೆ ಹಣ್ಣಿನ ಹಾರ ಮತ್ತು ಹೂವಿನ ಹಾರವನ್ನು ಹಾಕಿಕೊಂಡು, ಕಾಲಿಗೆ ಗಜ್ಜೆ ಹಾಕಿಕೊಂಡು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ ಮತ್ತು ತ್ರಿಶೂಲ ಹಿಡಿದುಕೊಂಡು ಭರ್ಜರಿಯಾಗಿ ಫೈಟ್ ಮಾಡಿದ್ದಾರೆ. ಜಾತ್ರೆಯ ಬ್ಯಾಗ್ರೌಂಡ್‌ನಲ್ಲಿ ಈ ಟೀಸರ್ ಮೂಡಿಬಂದಿದೆ. 

ಬೆಂಗಳೂರು ಹೆಚ್‌ಎಎಲ್‌ ಆವರಣದಲ್ಲಿ 'ಟಾಕ್ಸಿಕ್' ಶೂಟಿಂಗ್ ಸೆಟ್; ಜಗತ್ತಿಗೇ ಕೊಡುತ್ತಿರುವ ಮೆಸೇಜ್ ಏನು?

'ಪುಷ್ಪ 2: ದಿ ರೂಲ್' (Pushpa 2) ಸಿನಿಮಾದ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್‌ಗಟ್ಟಲೇ ವೀವ್ಸ್ ಪಡೆದುಕೊಂಡಿದೆ. 'ಪುಷ್ಪ 2' ಟೀಸರ್ ಅನ್ನು ಇಷ್ಟಪಟ್ಟು ಲಕ್ಷಾಂತರ ಮಂದಿ ಲೈಕ್ ಒತ್ತಿದ್ದಾರೆ. ಪುಷ್ಪ 2 ಸಿನಿಮಾವು ಆಗಸ್ಟ್ 15ರಂದು ತೆರೆಕಾಣುತ್ತಿದೆ. ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು,  ಫಹಾದ್ ಫಾಸಿಲ್, ರಾವ್ ರಮೇಶ್, ಸುನಿಲ್, ಅನಸೂಯಾ ಭಾರದ್ವಾಜ್‌, 'ಡಾಲಿ' ಧನಂಜಯ, ಜಗದೀಶ್‌ ಮುಂತಾದವರು ಅಭಿನಯಿಸಿದ್ದಾರೆ.

ಕೊಟ್ಟಿದ್ದು ಒಂದೇ ಸೂಪರ್ ಹಿಟ್, 'ಸುಸ್ತಾಗಿ ಎದ್ದು ಹೋದ್ರಾ' ಕನ್ನಡ ನಟಿಯರಿವರು!

'ಪುಷ್ಪ 2' ಸಿನಿಮಾವನ್ನು ತೆಲುಗು,  ಕನ್ನಡ, ಹಿಂದಿ, ತಮಿಳು, ಮಲಯಾಳಂ, ಭೋಜಪುರಿ ಭಾಷೆಗಳಲ್ಲಿ ತೆರೆಗೆ ತರಲಾಗುತ್ತಿದೆ. ಈ ಸಿನಿಮಾಗೆ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸುಕುಮಾರ್ ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾವು 1000 ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಕಲೆಕ್ಷನ್ ಮಾಡಬಹುದು ಎಂಬ ಲೆಕ್ಕಾಚಾರದ ಮಾತುಗಳು ಕೇಳಿಬಂದಿವೆ.

ದೊಡ್ಮನೆಯ 'ಯುವ' ಸಿನಿಮಾಗೆ ಕಾಂತಾರ ಚೆಲುವೆ ಸಪ್ತಮಿ ಗೌಡ ಸೆಲೆಕ್ಟ್ ಆಗಿದ್ದ ಗುಟ್ಟು ರಟ್ಟಾಯ್ತು!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!