ಆರ್ಯನ್​ ಖಾನ್​ ಜೈಲಿನ ಮಿಸ್ಟ್ರಿಗೆ ಭಾರಿ ಟ್ವಿಸ್ಟ್​: ಶಾರುಖ್​ ಮೊಬೈಲ್​ ಬಳಸಿದವರ್ಯಾರು?

By Suvarna NewsFirst Published May 22, 2023, 11:41 AM IST
Highlights

ಆರ್ಯನ್​ ಖಾನ್​ ನಿರಪರಾಧಿ ಎನ್ನುವುದನ್ನು ಸಾಬೀತು ಮಾಡುವಲ್ಲಿ ವಕೀಲರು ಯಶಸ್ವಿಯಾಗಿದ್ದು, ಆರ್ಯನ್​ ಖಾನ್​ ಹಾಗೂ ಶಾರುಖ್​ ಕುಟುಂಬ ಸದ್ಯ ನೆಮ್ಮದಿಯಿಂದ ಇದ್ದರೂ ಈ ಕೇಸ್​ ಮಾತ್ರ ದಿನದಿಂದ ದಿನಕ್ಕೆ ಕುತೂಹಲದ ತಿರುವು ಪಡೆಯುತ್ತಲೇ ಇದೆ. 

2021ರಲ್ಲಿ ಶಾರುಖ್​ ಖಾನ್​ (Shah rukh Khan) ಪುತ್ರ ಆರ್ಯನ್​ ಖಾನ್​ ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಹಾಗೂ ಅವರ ಮಕ್ಕಳ ಡ್ರಗ್ಸ್​ ಕೇಸ್​ ಭಾರಿ ಸುದ್ದಿ ಮಾಡಿತ್ತು. 2021 ಅಕ್ಟೋಬರ್ 2 ರಂದು, ಕ್ರೂಸ್ ಶಿಪ್ Cruise Drugs Case) ಮೇಲೆ ಎನ್ ಸಿಬಿ ದಾಳಿ ನಡೆಸಿತ್ತು. ಇದರಲ್ಲಿ ಡ್ರಗ್ಸ್​ ಪತ್ತೆ ಇದರಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು.  ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿತ್ತು. ನಂತರ ಆರ್ಯನ್​ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. 28 ದಿನಗಳವರೆಗೆ ಜೈಲಿನಲ್ಲಿದ್ದ ಆರ್ಯನ್ (Aryan Khan)​ ಅವರಿಗೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕೊನೆಗೆ ಕೋರ್ಟ್​ ಕ್ಲೀನ್​ ಚಿಟ್​ ನೀಡಿತ್ತು. ಈ ಘಟನೆ ನಡೆದು ಒಂದೂವರೆ ವರ್ಷಗಳಾದರೂ ಇದರ ಕುರಿತು ಇನ್ನಷ್ಟು ಇಂಟರೆಸ್ಟಿಂಗ್​ ಘಟನೆಗಳು ಹೊರಬರುತ್ತಲೇ ಇದೆ. ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ   6 ಸಾವಿರ ಪುಟಗಳ ಚಾರ್ಜ್ ಶೀಟ್ (Chargesheet) ಸಲ್ಲಿಕೆ ಮಾಡಿದ್ದು, 14 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿದೆ. ಹಲವರು ಇನ್ನೂ ಕೇಸ್​ನಲ್ಲಿ ಒಳಗೇ ಇದ್ದರೆ, ಆರ್ಯನ್​ ಖಾನ್​ ನಿರಪರಾಧಿ ಎನ್ನುವುದನ್ನು ಸಾಬೀತು ಮಾಡುವಲ್ಲಿ ವಕೀಲರು ಯಶಸ್ವಿಯಾಗಿದ್ದು, ಆರ್ಯನ್​ ಖಾನ್​ ಹಾಗೂ ಶಾರುಖ್​ ಕುಟುಂಬ ಸದ್ಯ ನೆಮ್ಮದಿಯಿಂದ ಇದ್ದರೂ ಈ ಕೇಸ್​ ಮಾತ್ರ ದಿನದಿಂದ ದಿನಕ್ಕೆ ಕುತೂಹಲದ ತಿರುವು ಪಡೆಯುತ್ತಲೇ ಇದೆ.

ನಿನ್ನೆಯಷ್ಟೇ ಶಾರುಖ್​ ಅವರು ತನಿಖಾಧಿಕಾರಿ ಸಮೀರ್ ವಾಂಖೆಡೆ (Sameer Wakende) ಅವರಿಗೆ ಬರೆದಿದ್ದರು ಎನ್ನಲಾದ ಚಾಟ್​ ಲೀಕ್​ ಆಗಿತ್ತು. ಆದರೆ ಕುತೂಹಲದ ಬೆಳವಣಿಗೆಯಲ್ಲಿ,  ಆರ್ಯನ್‌ ಖಾನ್‌ಗೆ ಕ್ಲೀನ್‌ಚಿಟ್‌ (Cleanchit) ಅಂದರೆ ಅವರ ನಿರಪರಾಧಿ ಎಂದು ಸಾಬೀತು ಮಾಡಲು  ರಾಷ್ಟ್ರೀಯ ಮಾದಕವಸ್ತು ನಿಗ್ರಹ ದಳದ ಹಿಂದಿನ ಅಧಿಕಾರಿ ಸಮೀರ್‌ ವಾಂಖೇಡೆ 25 ಕೋಟಿ ರೂ. ಲಂಚ ಕೇಳಿದ್ದ ಗಂಭೀರ ಆರೋಪ ಕೇಳಿಬಂದಿತ್ತು.  ಡ್ರಗ್ಸ್‌ ಪ್ರಕರಣದಲ್ಲಿ ತಾವೇ ಹಿಡಿದಿದ್ದ ಆರ್ಯನ್‌ ಖಾನ್‌ಗೆ ಕ್ಲೀನ್‌ಚಿಟ್‌ ಕೊಡಿಸಲು ಸಮೀರ್‌ ವಾಂಖೇಡೆ ತಂತ್ರ ರೂಪಿಸಿದ್ದರು. ಇದಕ್ಕಾಗಿ 25 ಕೋಟಿ ರೂ. ಕೇಳಿದ್ದರು ಎಂಬ ಆರೋಪದ ನಡುವೆಯೇ ಶಾರುಖ್​ ಅವರು ಬರೆದಿದ್ದರು ಎನ್ನಲಾದ ಚಾಟ್​ ಒಂದು ಸಕತ್​ ಸದ್ದು ಮಾಡಿತ್ತು. ಸಮೀರ್ ವಾಂಖೆಡೆ ಅವರು ತಾವು ಯಾವುದೇ ಲಂಚವನ್ನು ನೀಡಿಲ್ಲ ಎಂದು ಸಾಬೀತುಪಡಿಸಲು ಶಾರುಖ್ ಖಾನ್ ಅವರೊಂದಿಗಿನ ಚಾಟ್‌ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Latest Videos

ಡ್ರಗ್ಸ್​ ಕೇಸ್​ನಲ್ಲಿ ಆರ್ಯನ್​ ಜೈಲಲ್ಲಿದ್ದಾಗ ತನಿಖಾಧಿಕಾರಿಗೆ ಶಾರುಖ್​ ಬರೆದ ಪತ್ರ ವೈರಲ್

ಈ ಪತ್ರದಲ್ಲಿ ಶಾರುಖ್​ ಅವರು, 'ಆರ್ಯನ್, ಅಪರಾಧಿಯಂತೆ ಜೈಲಿನಲ್ಲಿರಲು ಅರ್ಹನಲ್ಲ. ದಯವಿಟ್ಟು  ನಮ್ಮ ಹುಡುಗನನ್ನು ನಿಧಾನವಾಗಿ ನಿಭಾಯಿಸಿ.  ನಾನು ಎಲ್ಲ ಸಮಯದಲ್ಲೂ ನಿಮ್ಮೊಂದಿಗೆ ನಿಲ್ಲುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ. ನೀವು ಒಳ್ಳೆಯದನ್ನು ಸಾಧಿಸಲು ಪ್ರಯತ್ನಿಸುತ್ತಿರುವುದದರಿಂದ  ನಿಮಗೆ ಸಹಾಯ ಮಾಡುತ್ತೇನೆ. ಎಲ್ಲಾ ರೀತಿಯಲ್ಲಿಯೂ ಸಹಕಾರ (Co operation) ಕೊಡುತ್ತೇನೆ.  ದಯವಿಟ್ಟು ನನ್ನ ಮತ್ತು ನನ್ನ ಕುಟುಂಬದ ಮೇಲೆ ಕರುಣೆ ತೋರಿ.  ನಾವು ಸರಳವಾದ ಜನರು.  ನನ್ನ ಮಗ ಸ್ವಲ್ಪ ದಾರಿ ತಪ್ಪಿದ್ದಾನೆ, ಆದರೆ ಅವನು ಕಠಿಣ ಅಪರಾಧಿಯಂತೆ ಜೈಲಿನಲ್ಲಿರಲು ಅರ್ಹನಲ್ಲ, ನಿಮಗೂ ತಿಳಿದಿದೆ. ದಯವಿಟ್ಟು ಹೃದಯವಂತರಾಗಿರಿ, ದಯವಿಟ್ಟು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ' ಎಂದು ಚಾಟ್​ನಲ್ಲಿಲ ಬರೆದಂತೆ ತೋರಿಸಲಾಗಿದೆ. 

  ಸಮೀರ್ ವಾಂಖೆಡೆ ಅವರ ಸಿಬಿಐ (CBI) ಕಚೇರಿಯೊಂದಿಗಿನ ಅವರ ವೈಯಕ್ತಿಕ ಚಾಟ್ ಸೋರಿಕೆಯಾಗಬಹುದೆಂದು ಅವರ ಇತರ ಅಭಿಮಾನಿಗಳು ನಿರಾಸೆ  ವ್ಯಕ್ತಪಡಿಸಿದ್ದರು. ಈ ರೀತಿ ದನನೀಯ ಸ್ಥಿತಿ  ಶಾರುಖ್​ಗೆ ಬರಬಾರದಿತ್ತು ಎಂದವರ ಹಲವರು. ಆದರೆ ಈ ಚಾಟ್​ ಸಂದೇಶವು ನಕಲಿ ಎಂದು ಹೇಳಲಾಗುತ್ತಿದೆ.  ಶಾರುಖ್ ಖಾನ್ ಆಪ್ತ ಸ್ನೇಹಿತ ಈ ಚಾಟ್​ ಕುರಿತು ಮಾತನಾಡಿದ್ದು, ಶಾರುಖ್​ ಇಂಥ ಚಾಟ್​ ಮಾಡಲು ಸಾಧ್ಯವೇ ಇಲ್ಲ. ಮಗನಿಗಾಗಿ ತನಿಖಾಧಿಕಾರಿಯ ಮುಂದೆ ಭಿಕ್ಷೆ ಬೇಡುವ ಸ್ಥಿತಿ ಶಾರುಖ್ ಅವರಿಗೆ ಬಂದಿಲ್ಲ ಎಂದಿದ್ದಾರೆ. ವೈರಲ್​ ಆಗಿರುವ ಚಾಟ್‌ಗಳು ನಕಲಿ ಎಂದಿದ್ದಾರೆ. 

ಆರ್ಯನ್‌ ಖಾನ್‌ ಡ್ರಗ್ಸ್‌ ಕೇಸ್‌: ಶಾರುಖ್‌ ಖಾನ್‌ ಬಳಿ 25 ಕೋಟಿ ಲಂಚ ಪಡೆಯಲು ಸಮೀರ್‌ ವಾಂಖೇಡೆ ಸಂಚು

 ಅವರು ETimes ನೊಂದಿಗೆ ಮಾತನಾಡಿದ ಸ್ನೇಹಿತ, ತಮ್ಮ ಹೆಸರನ್ನು ಹೇಳಲು ಇಚ್ಛೆ ವ್ಯಕ್ತಪಡಿಸಲಿಲ್ಲ. ಆದರೆ ಚಾಟ್​ ಮಾತ್ತ ಸುಳ್ಳು ಎಂದಿದ್ದಾರೆ.  "ಚಾಟ್‌ಗಳು ನಡೆಯಲು ಸಾಧ್ಯವಿಲ್ಲ. ಎಸ್‌ಆರ್‌ಕೆ ಎಂದಿಗೂ ವಾಟ್ಸಾಪ್ ಅನ್ನು ಬಳಸುವುದಿಲ್ಲ. ಈ ಚಾಟ್‌ಗಳು ಅಧಿಕೃತವಾಗಿದ್ದರೆ, ಅವರು  ವಾಂಖೆಡೆಗಾಗಿ ಚಾಟ್ ಬಾಕ್ಸ್  ರಚಿಸುತ್ತಿದ್ದರು.   ಸಾರ್ವಜನಿಕ ಡೊಮೇನ್‌ನಲ್ಲಿ  ಇದನ್ನು ಹೊರಹಾಕುವಷ್ಟು ಅವರು ಮೂರ್ಖರಲ್ಲ.  ಬಳಸಿದ ಭಾಷೆ, ವಿರಾಮಗಳು, ತಂದೆ ತನ್ನ ಮಗನನ್ನು ಬೇಡಿಕೊಳ್ಳುತ್ತಿರುವ ರೀತಿ ಇತ್ಯಾದಿಗಳೆಲ್ಲವೂ ಅಧಿಕೃತವಾಗಿರಲು ಸಾಧ್ಯವೇ ಇಲ್ಲ.  ಎಸ್‌ಆರ್‌ಕೆ ಹಾಗೆ ಎಂದಿಗೂ ಮಾತನಾಡುವುದಿಲ್ಲ. ಶಾರುಖ್​ ಖಾನ್​ ಮೊಬೈಲ್ ಫೋನ್​ ಬಳಸಿದವರ್ಯಾರು? ಅದು ಸಾಧ್ಯವೇ ಇಲ್ಲ. ಅವರ ಮಗ ಜೈಲಿಗೆ ಹೋದಾಗ, ಆರ್ಯನ್‌ನನ್ನು ಹೊರಗೆ ತರಲು ಶಾರುಖ್​ ಯಾರನ್ನೂ ಸಂಪರ್ಕಿಸಲಿಲ್ಲ. ಕಾನೂನಿನ ಮೇಲೆ ಅವರಿಗೆ ದೃಢ ನಂಬಿಕೆ ಇತ್ತು. ಇವೆಲ್ಲಾ  ಸುಳ್ಳು ಎಂದಿದ್ದಾರೆ.  ಹಾಗಿದ್ದರೆ ಈ ಚಾಟ್​  ಲೀಕ್​ ಮಾಡಿದ್ದು ಯಾರು? ನಿಜವಾಗಿಯೂ ಇದು ನಕಲಿಯೇ ಎನ್ನುವುದು ಇನ್ನಷ್ಟೇ ಸಾಬೀತಾಗಬೇಕಿದೆ.

click me!