ಎಷ್ಟು ಪ್ರಯತ್ನ ಪಟ್ಟರೂ ಚಿಯಾನ್ ವಿಕ್ರಮ್‌ ಸಿಕ್ಕಿಲ್ಲ: ತಮಿಳು ಸ್ಟಾರ್ ಮೇಲೆ ಅನುರಾಗ್ ಕಶ್ಯಪ್ ಬೇಸರ

Published : May 22, 2023, 11:37 AM IST
ಎಷ್ಟು ಪ್ರಯತ್ನ ಪಟ್ಟರೂ ಚಿಯಾನ್ ವಿಕ್ರಮ್‌ ಸಿಕ್ಕಿಲ್ಲ: ತಮಿಳು ಸ್ಟಾರ್ ಮೇಲೆ ಅನುರಾಗ್ ಕಶ್ಯಪ್ ಬೇಸರ

ಸಾರಾಂಶ

ಚಿಯಾನ್ ವಿಕ್ರಮ್‌ ಭೇಟಿಗೆ ಎಷ್ಟು ಪ್ರಯತ್ನ ಪಟ್ಟರೂ ಸಿಕ್ಕಿಲ್ಲ ಎಂದು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಬೇಸರ ಹೊರಹಾಕಿದ್ದಾರೆ. 

ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪು ಸದ್ಯ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬ್ಯುಸಿಯಾಗಿದ್ದು ಫ್ರಾನ್ಸ್‌ಲ್ಲಿದ್ದಾರೆ. ಅನುರಾಗ್ ಕಶ್ಯಪ್ ಅವರ ಕೆನಡಿ ಸಿನಿಮಾ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಅನುರಾಗ್ ಕಶ್ಯಪ್, ಕಾಲಿವುಡ್ ಸ್ಟಾರ್ ಚಿಯಾನ್ ವಿಕ್ರಮ್ ಅವರನ್ನು ನೆನಪಿಸಿಕೊಂಡಿದ್ದಾರೆ. ಈ ಸಿನಿಮಾದ ಹೆಸರಿಗೂ ಕಾಲಿವುಡ್ ಸ್ಟಾರ್ ಚಿಯಾನ್ ವಿಕ್ರಮ್ ಅವರಿಗೂ ಸಂಬಂಧವಿದೆ ಎಂದು ಹೇಳಿದ್ದಾರೆ. ವಿಕ್ರಮ್ ಅವರನ್ನು ಕೆನಡಿ ಎಂದು ಕರೆಯುತ್ತಾರೆ ಎಂದು ಅನುರಾಗ್ ಬಹಿರಂದ ಪಡಿಸಿದರು.   

ಅನುರಾಗ್ ನೇತೃತ್ವದಲ್ಲಿ ಮೂಡಿ ಬಂದಿರುವ ಕೆನಡಿ ಸಿನಿಮಾದಲ್ಲಿ ರಾಹುಲ್ ಭಟ್, ಸನ್ನಿ ಲಿಯೋನ್ ಮತ್ತು ಅಭಿಲಾಷ್ ಥಪ್ಲಿಯಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ನಿದ್ರಾಹೀನತೆಯ ಮಾಜಿ ಪೋಲೀಸ ಸುತ್ತ ಸುತ್ತುತ್ತದೆ. ಈ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಅನುರಾಗ್ ಕಶ್ಯಪ್, ನಟ ರಾಹುಲ್ ಭಟ್ ಈ ಸಿನಿಮಾಗೆ ಮೊದಲ ಆಯ್ಕೆ ಆಗಿರಲಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ. 'ನಾನು ಈ ಸಿನಿಮಾಗೆ ಸ್ಟ್ರಿಪ್ಟ್ ಮಾಡುವಾಗ ನಿರ್ದಿಷ್ಟ ನಟನನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೆ. ಅದಕ್ಕಾಗಿಯೇ ಈ ಚಿತ್ರಕ್ಕೆ ಕೆನಡಿ ಎಂದು ಟೈಟಲ್ ಇಟ್ಟಿದ್ದು' ಎಂದು ಹೇಳಿದ್ದಾರೆ. 

ಅನುರಾಗ್ ಕಶ್ಯಪ್ ಪುತ್ರಿಯ ನಿಶ್ಚಿತಾರ್ಥ; ಭಾವಿ ಪತಿ ಜೊತೆ ಆಲಿಯಾ ಲಿಪ್‌ಕಿಸ್ ಫೋಟೋ ವೈರಲ್, ಹುಡುಗ ಯಾರು?

ಯಾವ ನಟನನ್ನು ಮನಸಲ್ಲಿ ಇಟ್ಟುಕೊಂಡು ಸಿನಿಮಾ ಮಾಡಿದ್ದೀರಾ ಎಂದು ಕೇಳಿದ ಪ್ರಶ್ನೆ ಉತ್ತರಿಸಿದ ಅನುರಾಗ್ ಕಶ್ಯಪ್, 'ಆ ನಟನ ನಿಕ್ ನೇಮ್ ಕೆನಡಿ. ಹಾಗಾಗಿ ಈ ಸಿನಿಮಾಗೆ ಕೆನಡಿ ಪ್ರಾಜೆಕ್ಟ್ ಎಂದು ಕರೆಯಲಾಯಿತು. ಅದು ಚಿಯಾನ್ ವಿಕ್ರಮ್. ಚಿಯಾನ್ ವಿಕ್ರಮ್ ಅವರ ನಿಜವಾದ ಹೆಸರು ಕೆನಡಿ. ನಾನು ಅವರನ್ನು ಸಂಪರ್ಕಿಸಿದೆ. ಅವರು ಯಾವತ್ತು ಪ್ರತಿಕ್ರಿಯೆ ನೀಡಿಲ್ಲ. ಆಗ, ನಾನು ರಾಹುಲ್‌ರನ್ನು ಭೇಟಿ ಮಾಡಿದೆ. ನಾನು ಸ್ಟ್ರಿಪ್ಟ್ ಕೊಟ್ಟು ಓದಲು ಹೇಳಿದೆ. ಅವರ ಪ್ರತಿಕ್ರಿಯೆ ಉತ್ಸಾಹಭರಿತವಾಗಿತ್ತು. ಈ ಪಾತ್ರವನ್ನು ಯಾರು ಮಾಡುತ್ತಿದ್ದಾರೆ? ಎಂದು ಕೇಳಿದ್ರು, ನಾನು, ನೀವು ಅದನ್ನು ಮಾಡುತ್ತೀರಾ? ಎಂದು ಕೇಳಿದೆ, ನಾನಾ? ಎಂದು ಕೇಳಿದರು. ಹೌದು ಎಂದು ಹೇಳಿದೆ. ತನ್ನ ಜೀವನದ ಎಂಟು ತಿಂಗಳನ್ನು ಕೆನಡಿಗೆ ಕೊಟ್ಟರು' ಎಂದು ಹೇಳಿದರು. 

ಮಾಜಿ ಪತ್ನಿ ಮನೆಯಿಂದ ಹೊರಹಾಕಿದ್ಲು, ಫುಟ್‌ಪಾತ್‌ಲ್ಲಿ ಮಲಗ್ತಿದ್ದೆ; ಕಷ್ಟದ ದಿನ ನೆನೆದ ಅನುರಾಗ್ ಕಶ್ಯಪ್

ಚಿಯಾನ್ ವಿಕ್ರಮ್ ಮೊದಲ ಹೆಸರು ಕೆನಡಿ ಜಾನ್ ವಿಕ್ಟರ್. ಈ ಹೆಸರು ಎಷ್ಟೊ ಜನಕ್ಕೆ ಗೊತ್ತಿಲ್ಲ. ಇದೀಗ ಅನುರಾಗ್ ಕಶ್ಯಪ್ ಈ ಹೆಸರಿನ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಚಿಯಾನ್ ವಿಕ್ರಮ್ ಬಗ್ಗೆ ಹೇಳುವುದಾದರೆ, ಸದ್ಯ ಪೊನ್ನಿಯಿನ್ ಸೆಲ್ವನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಪೊನ್ನಿಯಿನ್ ಸೆಲ್ವನ್ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಬಳಿಕ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Dhurandhar 2 : ಸಿಖ್ ಸಂಘಟನೆಯಿಂದ 'ಧುರಂಧರ್​ 2' ವಿರುದ್ಧ FIR; ನಟ ಮಾಧವನ್ ಕೊಟ್ಟ ಸ್ಪಷ್ಟನೆ ಏನು?
ರಶ್ಮಿಕಾ-ವಿಜಯ್ ಮದುವೆಯ ಖಾಸಗಿ ರಹಸ್ಯಗಳು ಲೀಕ್.. ಈ ಜೋಡಿ ಬಗ್ಗೆ ಏನಂತ ಹೇಳಿದಾರೆ 'ವೆಡ್ಡಿಂಗ್ ಪ್ಲಾನರ್'..?