ಅಬ್ಬಬ್ಬಾ! ಶಾರುಖ್​ ಕಾಫಿಮಗ್​ ಇಷ್ಟು ದುಬಾರಿ? ಇದ್ರಲ್ಲಿ ಏನೇನಿದೆ ನೋಡಿ...

By Suvarna News  |  First Published Aug 8, 2023, 4:55 PM IST

ನಟ ಶಾರುಖ್​ ಖಾನ್​ ಅವರು ಬಲು ದುಬಾರಿಯ ಕಾಫಿ ಮಗ್​ನಲ್ಲಿ ನಿತ್ಯ ಕಾಫಿ ಕುಡಿಯುತ್ತಾರೆ. ಇದರ ಬೆಲೆ ಎಷ್ಟು ಗೊತ್ತಾ? ಇದಕ್ಕಿದೆ ಹಲವಾರು ವೈಶಿಷ್ಟ್ಯತೆ
 


ಎವರ್​ಗ್ರೀನ್​ ನಟ, ಬಾಲಿವುಡ್​ ಬಾದ್​ಶಾಹ್​ ಎಂದೆಲ್ಲಾ ಕರೆಸಿಕೊಳ್ತೀರೋ ನಟ ಶಾರುಖ್​ ಖಾನ್​ (Shah Rukh Khan) ಅವರಿಗೆ ಈಗ 57 ವರ್ಷ ವಯಸ್ಸು. ಆದರೆ 27ರ ಯುವಕರನ್ನೂ ನಾಚಿಸುವಂತೆ ಅವರು ಫಿಟ್​ ಆ್ಯಂಡ್​ ಫೈನ್​ ಆಗಿದ್ದಾರೆ.  ಅವರ ಎನರ್ಜಿಗೆ ಸಾಕ್ಷಿಯಾದದ್ದು ಪಠಾಣ್​ ಚಿತ್ರ ಹಾಗೂ ಇದೀಗ ಸದ್ದು ಮಾಡುತ್ತಿರುವ ಜವಾನ್​. ಜವಾನ್​ ಚಿತ್ರದ ಜಿಂದಾ ಬಂದಾ ಹಾಡು ಬಿಡುಗಡೆಯಾಗಿದ್ದು, ಸಕತ್​ ಸದ್ದು ಮಾಡುತ್ತಿದೆ. ಹೌದು. 57ರ ಹರೆಯದಲ್ಲಿಯೂ ಈ ಹಾಡಿನಲ್ಲಿ ಶಾರುಖ್​  ಯುವಕರಂತೆ ಕುಣಿದು ಕುಪ್ಪಳಿಸಿದ್ದಾರೆ. ಅವರ ಎನರ್ಜಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಈ ಹಾಡು ಬಿಡುಗಡೆಯಾಗುತ್ತಲೇ ಕೇವಲ 24 ಗಂಟೆಯೊಳಗೆ 46 ಮಿಲಿಯನ್​ ವ್ಯೂಸ್​ ಅಂದರೆ 4.6 ಕೋಟಿ ವೀಕ್ಷಣೆ ಪಡೆದುಕೊಂಡಿದೆ. ಇದೊಂದು ದೊಡ್ಡ ದಾಖಲೆಯೇ ಎನ್ನಲಾಗುತ್ತಿದೆ.  

 ಸ್ಟೈಲ್ ವಿಚಾರದಲ್ಲೂ ಶಾರುಖ್​ ಖಾನ್​ ಯಾರಿಗೂ ಕಮ್ಮಿ ಇಲ್ಲ, ಗ್ಯಾಜೆಟ್‌ಗಳ ಬಗ್ಗೆ ಮಾತನಾಡಿದರೆ ಅಲ್ಲೂ ಶಾರುಖ್ ಒಂದು ಕೈ ಮೇಲೆಯೇ.  ಈ ವಿಷಯದಲ್ಲೂ ಅವರು ತುಂಬಾ ಹೈಟೆಕ್. ಅವರ ಆಪ್ತರು ಮತ್ತು ಅಭಿಮಾನಿಗಳು ಇಷ್ಟಪಡುವ ಅನೇಕ ಆಲಂಕಾರಿಕ ವಸ್ತುಗಳನ್ನು ಶಾರುಖ್​ ಹೊಂದಿದ್ದಾರೆ. ಇವುಗಳಲ್ಲಿ ಒಂದು ಅವರು ಕಾಫಿ ಕುಡಿಯುವ ಕಪ್. ಶಾರುಖ್ ಅವರ ಮನೆ ಮನ್ನತ್ (Mannath), ಅವರ ಹೈಟೆಕ್ ವ್ಯಾನಿಟಿ ವ್ಯಾನ್ ಮತ್ತು ಸೂಪರ್‌ಸ್ಟಾರ್‌ನ ದುಬಾರಿ ಮತ್ತು ಐಷಾರಾಮಿ ವಸ್ತುಗಳ ಬಗ್ಗೆ ಅನೇಕ ಬಾರಿ ಚರ್ಚಿಸಲಾಗಿದೆ. ಅದೇ ರೀತಿ ಅವರ ಆಲಂಕಾರಿಕ ಕಾಫಿ ಮಗ್ ಬಗ್ಗೆಯೂ ನೀವು ತಿಳಿದುಕೊಳ್ಳಲೇಬೇಕು. ಏಕೆಂದರೆ ಅಷ್ಟು ವಿಶೇಷವಾಗಿದೆ ಈ ಕಾಫಿ ಮಗ್​. ಶಾರುಖ್ ಖಾನ್ 2017 ರಲ್ಲಿ ತಮ್ಮ ಮಗ್‌ನೊಂದಿಗೆ ವಿಡಿಯೋ ಒಂದನ್ನು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು, ಅದರಲ್ಲಿ ಅವರು ತಮ್ಮ ಕಾಫಿ ಮಗ್‌ನಿಂದ ಸಿಪ್ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು.

Tap to resize

Latest Videos

57ನೇ ವಯಸ್ಸಲ್ಲೂ ಶಾರುಖ್​ ಹ್ಯಾಂಡ್​ಸಮ್​ ಆಗಿರೋದ್ಯಾಕೆ? ಆನಂದ್​ ಮಹೀಂದ್ರಾ ಉತ್ತರ ಕೇಳಿ...

ಕಿಂಗ್ ಖಾನ್‌ ಅವರ ಈ ಕಾಫಿ ಮಗ್ ಹೀಟರ್ ಮತ್ತು ಎಲ್‌ಇಡಿ ಲೈಟಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ವಿಡಿಯೋದಲ್ಲಿ ಶಾರುಖ್ ಬಳಸಿರುವ ಕಾಫಿ ಮಗ್ (Coffee Mug) ಎಮರ್ ಟ್ರಾವೆಲ್ ಮಗ್ 2+ ಆಗಿದೆ.  ಈ ಸೂಪರ್ ಮಗ್  ಬೆಲೆ ಅವರು ಖರೀದಿಸಿದ್ದ ವೇಳೆ  35, 862 ಇತ್ತು! ಹೌದು. ಕುಡಿಯುವ ಕಾಫಿ ಕಪ್ ಕೂಡ ಇಷ್ಟೊಂದು ದುಬಾರಿಯಾಗಿದೆ. ಹಾಗಿದ್ದರೆ ಅಷ್ಟು ದುಬಾರಿ ಏಕಿರಬಹುದು ಎಂದು ನೀವು ಊಹಿಸಿರಲಿಕ್ಕೂ  ಇಲ್ಲ. ಮೊದಲೇ ಹೇಳಿದಂತೆ ಈ ಕಾಫಿ ಮಗ್​ ಹೀಟರ್ ಮತ್ತು ಎಲ್‌ಇಡಿ ಲೈಟಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗೆ ಈ ಮಗ್‌ನಲ್ಲಿ  ಯಾವುದೇ ಪಾನೀಯವನ್ನು ನಿಗದಿತ ತಾಪಮಾನದಲ್ಲಿ ಇರಿಸಬಹುದು. ಒಮ್ಮೆ ಚಾರ್ಜ್ ಮಾಡಿ ನಂತರ ಮೂರು ಗಂಟೆಗಳ ಕಾಲ ನಿರಾತಂಕವಾಗಿದ್ದರೆ ಮುಗಿಯಿತು.  ಚಾರ್ಜಿಂಗ್ ಕೋಸ್ಟರ್ ಮಗ್ ಜೊತೆಗೇ ಬರುತ್ತದೆ. ಮಗ್‌ನಲ್ಲಿ ಪ್ಲಸ್ ಅಥವಾ ಮೈನಸ್ ಚಿಹ್ನೆಯನ್ನು ಸ್ಪರ್ಶಿಸುವ ಮೂಲಕ ನಿಮಗೆ ಅದು ಎಷ್ಟು ಬೆಚ್ಚಗೆ ಬೇಕೋ ಅಷ್ಟು  ತಾಪಮಾನಕ್ಕೆ ಹೊಂದಿಸಬಹುದು.
 
ಅಂದಹಾಗೆ, ಜವಾನ್​ ಚಿತ್ರಕ್ಕೆ ಫ್ಯಾನ್ಸ್​ ಕಾತರದಿಂದ  ಕಾಯುತ್ತಿದ್ದಾರೆ. ಸೆಪ್ಟೆಂಬರ್​ 10ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಶಾರುಖ್ ಮಾತ್ರವಲ್ಲದೆ 10 ವಿಶೇಷ ಮುಖಗಳಿದ್ದು, ಹೊಸ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದಲ್ಲದೇ ಮೂರು ಸೂಪರ್​ ಸ್ಟಾರ್​ಗಳ ಅತಿಥಿ ಪಾತ್ರವೂ ಪ್ರೇಕ್ಷಕರನ್ನು ರಂಜಿಸಲಿದೆ. ಶಾರುಖ್ ಖಾನ್ ಚಿತ್ರದಲ್ಲಿ ವಿಭಿನ್ನ ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ದಕ್ಷಿಣದ ಬಹುತೇಕ ಕಲಾವಿದರು ಇದರಲ್ಲಿ ಅಭಿನಯಿಸಿದ್ದಾರೆ. ತಮಿಳಿನ ವಿಜಯ್ ಸೇತುಪತಿ ಮುಖ್ಯ ವಿಲನ್ ರೀತಿನೇ ಕಾಣಿಸುತ್ತಿದ್ದಾರೆ.  ನಟಿ ದೀಪಿಕಾ ಪಡುಕೋಣೆ (Deepika Padukone) ಇಲ್ಲಿ ಸ್ಪೆಷಲ್ ಅಪಿಯರೆನ್ಸ್ ಮಾಡಿದ್ದಾರೆ. ನಯನತಾರಾ ಇಲ್ಲಿ ಹೊಸ ಖದರ್ ಅಲ್ಲಿಯೇ ಬರ್ತಿದ್ದಾರೆ. ಕನ್ನಡದ ಪ್ರಿಯಾಮಣಿ ಕೂಡ ಅಭಿನಯಿಸಿದ್ದಾರೆ.

ಶಾರುಖ್​ ಖಾನ್​ ಜೊತೆ ನಟಿಸ್ತಿದ್ದಾರೆ ರಶ್ಮಿಕಾ ಮಂದಣ್ಣ! ಏನಿದು ಹೊಸ ವಿಷ್ಯ?
 

My new digitized Ember coffee mug. Customised temperature customized name & customised finger. pic.twitter.com/Rzm88GRm8F

— Shah Rukh Khan (@iamsrk)
click me!