
ಸದ್ಯ ಶಾರುಖ್ ಖಾನ್ ವಯಸ್ಸು 60 ಆದರೂ ಕ್ರೇಜ್ ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಈಗ ತಾನೇ ಎಂಟ್ರಿ ಕೊಡುವ 20-22ರ ಹರೆಯದ ಅರ್ಥಾತ್ ಮಗಳ ವಯಸ್ಸಿನ ನಾಯಕಿಯರ ಜೊತೆಗೂ ರೊಮಾನ್ಸ್ ಮಾಡುವಲ್ಲಿ ಎತ್ತಿದ ಕೈ. ಇನ್ನು ನಟಿ ಪ್ರೀತಿ ಜಿಂಟಾ. ಸದ್ಯ ಕ್ರಿಕೆಟ್ನಲ್ಲಿ ಗುರುತಿಸಿಕೊಂಡಿದ್ದಾರೆ ಇವರು. ಅಂದಹಾಗೆ, 1990 ಮತ್ತು 2000ರ ನಡುವೆ ಶಾರುಖ್ ಮತ್ತು ಪ್ರೀತಿ ಜಿಂಟಾ ಬಾಲಿವುಡ್ನ ಅತ್ಯಂತ ಪ್ರೀತಿಯ ಆನ್-ಸ್ಕ್ರೀನ್ ಜೋಡಿಗಳಿವರು. ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಅವರು ದಿಲ್ ಸೆ, ಕಭಿ ಅಲ್ವಿದಾ ನಾ ಕೆಹನಾ, ಮತ್ತು ಕಲ್ ಹೋ ನಾ ಹೋ ಮುಂತಾದ ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಪ್ರೀತಿ ಜಿಂಟಾ ಮತ್ತು ಶಾರುಖ್ ಖಾನ್ ಅವರ ಜೋಡಿಯನ್ನು ಬಾಲಿವುಡ್ನ ಸೂಪರ್ಹಿಟ್ ಜೋಡಿ ಎಂದೇ ಹೇಳಲಾಗಿದೆ. ಈ ಜೋಡಿ ಹಲವಾರು ಚಿತ್ರಗಳಲ್ಲಿ ಒಟ್ಟಿಗೇ ನಟಿಸಿದ್ದು, ಇವರ ಕೆಮೆಸ್ಟ್ರಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಕೂಡ ಒಳ್ಳೆಯ ಸ್ನೇಹಿತರು. ಐಪಿಎಲ್‌ನಲ್ಲಿ ಪ್ರೀತಿ ಜಿಂಟಾ-ಶಾರುಖ್ ಖಾನ್ ಇಬ್ಬರೂ ಕೂಡ ತಂಡವನ್ನು ಹೊಂದಿದ್ದಾರೆ.
ಆದರೆ ಇದೀಗ ಇವರಿಬ್ಬರ ವಿಡಿಯೋ ಒಂದು ಸಕತ್ ವೈರಲ್ ಆಗಿದೆ. ಇದರಲ್ಲಿ ಶಾರುಖ್ ಖಾನ್ ಮಾತು ಭಾರಿ ಟೀಕೆಗೆ ಒಳಗಾಗುತ್ತಿದೆ. ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಮಾತುಕತೆ ನಡೆಸುತ್ತಿರುವ ಈ ವಿಡಿಯೋದ ತುಣುಕು ಮಾತ್ರ ಇದಾಗಿದ್ದು, ಇದರಲ್ಲಿ ಶಾರುಖ್, ಪ್ರೀತಿ ಅವರಿಗೆ ಕೇಳಿರುವ ಮಾತಿಗೆ ನಟ ಟ್ರೋಲ್ಗೆ ಒಳಗಾಗುತ್ತಿದ್ದಾರೆ. ಅಷ್ಟಕ್ಕೂ ಈ ವಿಡಿಯೋದ ಹಿಂದೆ ಮತ್ತು ಮುಂದೆ ಏನಿದೆ ಎನ್ನುವುದು ತಿಳಿದಿಲ್ಲ. ಆದರೆ ಇಷ್ಟೇ ಭಾಗ ಮಾತ್ರ ಕಟ್ ಮಾಡಿ ವೈರಲ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಕೇಳುವುದು ಏನೆಂದರೆ, ಶಾರುಖ್ ಖಾನ್ ಅವರು ಪ್ರೀತಿ ಜಿಂಟಾಗೆ ನೀವು ಮಗುವಿನ ನಿರೀಕ್ಷೆಯಲ್ಲಿದ್ದೀರಾ ಎಂದು ಕೇಳಿದ್ದಾರೆ. ಅಷ್ಟಕ್ಕೂ 29 ಫೆಬ್ರವರಿ 2016 ರಂದು ಪ್ರೀತಿ ಅವರು, ಲಾಸ್ ಏಂಜಲೀಸ್‌ನಲ್ಲಿ ಅಮೆರಿದ ಜೀನ್ ಗುಡ್‌ನಫ್ ಅವರನ್ನು ವಿವಾಹವಾಗಿದ್ದಾರೆ. ಈಗ ವೈರಲ್ ಆಗ್ತಿರೋ ವಿಡಿಯೋ ಮದುವೆಗೂ ಮುಂಚಿನದ್ದಾ ಅಥವಾ ಆಮೇಲಿನದ್ದಾ ಎಂದು ತಿಳಿದಿಲ್ಲ. ಆದರೂ ಶಾರುಖ್ ಅವರು ಪ್ರೀತಿಗೆ ಮಗುವಿನ ವಿಷಯ ಕೇಳಿದ್ದಾರೆ. ಏಕಾಏಕಿ ಈ ಪ್ರಶ್ನೆ ಕೇಳಿದ ನಟಿ ಅರೆಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ. ಆಕೆಗೆ ಅದು ಮುಜುಗರ ತಂದಂತೆ ಕಾಣುತ್ತಿದೆ. ಆದರೆ ಏನೂ ಉತ್ತರಿಸಿದೇ ಆಕೆ ಜೋರಾಗಿ ನಕ್ಕಿದ್ದಾರೆ.
ಆದರೆ ಅಷ್ಟಕ್ಕೇ ಸುಮ್ಮನಾಗದ ಶಾರುಖ್ ಖಾನ್, ನೀವು ಮಗುವನ್ನು ನಿರೀಕ್ಷೆ ಮಾಡುತ್ತಿರುವುವಿರಾ? ಬೇಕಿದ್ದ ನಾನು ಅದನ್ನು ಮಾಡಬಲ್ಲೆ. ನಾನು ನಿಮ್ಮನ್ನು ಗರ್ಭಿಣಿಯಾಗಿಸಬಲ್ಲೆ ಎಂದಿದ್ದಾರೆ. ಇಷ್ಟಾಗುತ್ತಿದ್ದಂತೆಯೇ ನಟಿ ಮತ್ತೊಮ್ಮೆ ನಕ್ಕಿದ್ದಾರೆ. ಆಗ ಶಾರುಖ್ ಖಾನ್ ಪ್ರೀತಿ ಜಿಂಟಾಗೆ ನಗುನಗುತ್ತಲೇ ಸಾರಿ ಎಂದು ಹೇಳಿದ್ದಾರೆ. ಇಂಥ ವಿಷಯಗಳಲ್ಲಿ ತಮಾಷೆ ಮಾಡುವುದಾ ಎನ್ನುವುದು ನೆಟ್ಟಿಗರ ಪ್ರಶ್ನೆ. ಶಾರುಖ್ ಮಾತಿಗೆ ಸಿಕ್ಕಾಪಟ್ಟೆ ಟೀಕೆಗಳು ವ್ಯಕ್ತವಾಗುತ್ತಿದ್ದು, ಇಂಥ ಮಾತು ಒಬ್ಬ ನಟನಿಗೆ ಸರಿಯಾಗಿ ಕಾಣಿಸುವುದಿಲ್ಲ. ಅದೂ ಇಂಥ ಷೋನಲ್ಲಿ ಸಾರ್ವಜನಿಕವಾಗಿ ಹೀಗೆ ಹೇಳುವುದು ಸರಿಯಲ್ಲ ಎನ್ನುತ್ತಿದ್ದಾರೆ.
ಇನ್ನು ಪ್ರೀತಿ ಕುರಿತು ಹೇಳುವುದಾದರೆ, ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಮಕ್ಕಳಾಗುವುದಕ್ಕೆ ಬಾಡಿಗೆ ತಾಯ್ತನದ ಮೊರೆ ಹೋಗಿದ್ದರು ನಟಿ. 13 ವರ್ಷದವರಿದ್ದಾಗ ತಂದೆಯನ್ನು ಕಳೆದುಕೊಂಡಿರೋ ಪ್ರೀತಿ, ಎರಡೇ ವರ್ಷದೊಳಗೆ ತಾಯಿಯನ್ನು ಕಳೆದುಕೊಂಡು ಅನಾಥರಾದವರು. ಇದೇ ಕಾರಣಕ್ಕೆ ಅವರು, ಬಾಲಿವುಡ್ನಲ್ಲಿ ಒಂದು ಸ್ಥಾನ ಗಳಿಸಿದ ಮೇಲೆ 34 ಅನಾಥ ಮಕ್ಕಳ ಪಾಲಿಗೆ ತಾಯಿ ಎನಿಸಿಕೊಂಡವರು. ಸದ್ಯಕ್ಕೆ ತಮ್ಮ ವೈವಾಹಿಕ ಜೀವನದ ಜೊತೆಗೆ ಐಪಿಎಲ್ ತಂಡ ಹಾಗೂ 34 ಮಕ್ಕಳ ಜವಾಬ್ದಾರಿಯನ್ನು ಸರಿ ಸಮನಾಗಿ ಹೊತ್ತಿರುವ ನಟಿ ಪ್ರೀತಿ ಜಿಂಟಾ ಅವರು ಸನ್ನಿ ಡಿಯೋಲ್ ಅವರೊಂದಿಗೆ 1947 ಎಂಬ ಸಿನಿಮಾದಲ್ಲಿ ನಟಿಸಿ ಬಾಲಿವುಡ್‌ಗೆ ಮತ್ತೆ ಮರಳುವ ಮಾಡುವ ಪ್ರಯತ್ನದಲ್ಲಿದ್ದಾರೆ. ಶಾರುಖ್ ಬಗ್ಗೆಯಂತೂ ಹೇಳುವುದೇ ಬೇಡ. ವಯಸ್ಸು 58 ಆದರೂ ಇಂದಿಗೂ ನಾಯಕನಾಗಿ ವರ್ಚಸ್ಸು ಹೆಚ್ಚಿಸಿಕೊಳ್ತಿದ್ದಾರೆ ನಟ. ಆದರೆ ಅವರ ಇಂಥ ಬಾಲಿಶ ಹೇಳಿಕೆಗಳು ಮತ್ತೆ ಮತ್ತೆ ವೈರಲ್ ಆಗುತ್ತಿದ್ದು, ನಟನ ವರ್ಚಸ್ಸನ್ನು ಕುಂದಿಸುವಂತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.