Pathaan; ಶಾರುಖ್ ಅಭಿಮಾನಿಗಳಿಗೆ ಗುಡ್ ನ್ಯೂಸ್; 'ಪಠಾಣ್' ಮುಂಗಡ ಟಿಕೆಟ್ ಬುಕ್ಕಿಂಗ್‌ಗೆ ರೆಡಿಯಾಗಿ

Published : Jan 17, 2023, 04:00 PM IST
Pathaan; ಶಾರುಖ್ ಅಭಿಮಾನಿಗಳಿಗೆ ಗುಡ್ ನ್ಯೂಸ್; 'ಪಠಾಣ್' ಮುಂಗಡ ಟಿಕೆಟ್ ಬುಕ್ಕಿಂಗ್‌ಗೆ ರೆಡಿಯಾಗಿ

ಸಾರಾಂಶ

ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ಮುಂಗಡ ಟೆಕೆಟ್ ಬುಕ್ಕಿಂಗ್ ದಿನಾಂಕ ಬಹಿರಂಗವಾಗಿದೆ. 

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅನೇಕ ವರ್ಷಗಳ ಬಳಿಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಪಠಾಣ್ ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿದ್ದು ಟ್ರೈಲರ್ ಮತ್ತು ಹಾಡುಗಳ ಮೂಲಕ ಕುತೂಹಲ ಹೆಚ್ಚಿಸಿದೆ. ಪಠಾಣ್ ನೋಡಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಪಠಾಣ್ ಸಿನಿಮಾದ ಮುಗಂಡ ಟಿಕೆಟ್ ಬುಕ್ಕಿಂಗ್‌ ಡೇಟ್ ಬಹಿರಂಗವಾಗಿದ್ದು ಅಭಿಮಾನಿಗಳು ಟಿಕೆಟ್ ಬುಕ್ ಮಾಡಲು ಕಾತರರಾಗಿದ್ದಾರೆ. ಶಾರುಖ್ ಮತ್ತು ಜಾನ್ ಅಬ್ರಹಾಂ ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. 

ಸಿದ್ದಾರ್ಥ್ ಆನಂದ್ ಅವರ ಸಾರಥ್ಯದಲ್ಲಿ ಮೂಡಿ ಬಂದಿರುವ ಪಠಾಣ್ ಸಿನಿಮಾ ಇದೇ ತಿಂಗಳು ಜನವರಿ 25ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಯಶ್ ರಾಜ್ ಫಿಲ್ಮ್ಸ್‌ ನಿರ್ಮಾಣ ಮಾಡಿರುವ ಪಠಾಣ್ ಗ್ರ್ಯಾಂಡ್ ಎಂಟ್ರಿಗೆ ಚಿತ್ರಮಂದಿರಗಳು ಸಹ ಸಜ್ಜಾಗಿವೆ. ಅನೇಕ ವಿವಾದಗಳು, ಆಕ್ರೋಶದ ನಡುವೆಯೂ ಪಠಾಣ್ ಅದ್ದೂರಿಯಾಗಿ ಚಿತ್ರಮಂದಿರಕ್ಕೆ ಬರ್ತಿದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್‌ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. 
 
YRFನ ಉಪಾಧ್ಯಕ್ಷ ಹಾಗೂ ವಿತರಕ ರೋಹನ್ ಮಲ್ಹೋತ್ರಾ ಪಠಾಣ್ ಸಿನಿಮಾದ ಮುಂಗಡ ಬುಕ್ಕಿಂಗ್ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಜನವರಿ 20ರಿಂದ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. 'ಭಾರತದಲ್ಲಿ ಪಠಾಣ್ ಮುಂಗಡ ಬುಕ್ಕಿಂಗ್ ಜನವರಿ 20ರಿಂದ ಪ್ರಾರಂಭವಾಗಲಿದೆ. ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ MAX, 4DX, D BOX ಮತ್ತು ICEಗಳಲ್ಲಿ ತೆರೆಗೆ ಬರುತ್ತಿದೆ' ಎಂದು ಹೇಳಿದ್ದಾರೆ. ಪಠಾಣ್ ಸಿನಿಮಾ ರಿಲೀಸ್‌ಗೂ 5 ದಿನಗಳ ಮುಂಚೆಯೇ ಮುಗಂಡ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗುತ್ತಿದ್ದು ಅಭಿಮಾನಿಗಳು ಕಾಯುತ್ತಿದ್ದಾರೆ. 

Pathaan Trailer; ದುಬೈನಲ್ಲಿ ಶಾರುಖ್ ಸಿನಿಮಾ ಪ್ರಚಾರ; ಬುರ್ಜ್ ಖಲೀಫ ಮೇಲೆ ರಾರಾಜಿಸಿದ ಪಠಾಣ್ ಟ್ರೈಲರ್

ಶಾರುಖ್ ಖಾನ್ ಸದ್ಯ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಭಾರತದಲ್ಲಿ ಪ್ರಚಾರ ಮಾಡುವ ಜೊತೆಗೆ ವಿದೇಶದಲ್ಲೂ ಪ್ರಮೋಷನ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ದುಬೈಗೆ ಹಾರಿದ್ದ ಶಾರುಖ್ ಪಠಾಣ್ ಪ್ರಚಾರ ಮಾಡಿದ್ದಾರೆ. ದುಬೈನ ವಿಶ್ವ ಪ್ರಸಿದ್ಧ ಬುರ್ಜ್ ಖಲೀಫಾ ಮೇಲೆ ಪಠಾಣ್ ಟ್ರೈಲರ್ ಪ್ಲೇ ಮಾಡಿ ಸಂಭ್ರಮಿಸಿದ್ದಾರೆ. ಅಲ್ಲಿನ ಅಭಿಮಾನಿಗಳ ಜೊತೆ ಹಾಡಿ, ಕುಣಿದು ಸಂತಸ ಪಟ್ಟಿದ್ದಾರೆ.  ಇದೀಗ ಭಾರತದಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ.

'ಪಠಾಣ್'​ ವಿಲನ್​ ಜಾನ್​ ಅಬ್ರಾಹಂ ಅಲ್ಲ, ಹಾಗಿದ್ರೆ ಯಾರು? ಕ್ಲೈಮ್ಯಾಕ್ಸ್ ರಿವೀಲ್‌

ಶಾರುಖ್ ಪಠಾಣ್ ಸಿನಿಮಾದ ಮೊದಲ ಹಾಡು ರಿಲೀಸ್ ಮಾಡಿದಾಗಿನಿಂದ ದೊಡ್ಡ ಮಟ್ಟದಲ್ಲಿ ಸುದ್ದು ಸುದ್ದಿ ಮಾಡುತ್ತಿದೆ. ಬೇಷರಂಗ್ ರಂಗ್ ಹಾಡು ದೊಡ್ಡ ಮಟ್ಟದ ವಿವಾದ ಸೃಷ್ಟಿಸಿದೆ. ಈ ಹಾಡಿನಲ್ಲಿ ದೀಪಿಕಾ ಅತಿಯಾದ ಗ್ಲಾಮರ್ ಪ್ರದರ್ಶಿಸಿದ್ದಾರೆ, ಅಶ್ಲೀಲವಾಗಿದೆ, ಕೇಸರಿ ಬಣ್ಣದ ಬಿಕಿನಿ ಧರಿಸಿ ನಾಚಿಕೆ ಇಲ್ಲದ ಬಣ್ಣ ಎಂದಿದ್ದಾರೆ ಅಂತ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಾಡನ್ನು ಬ್ಯಾನ್ ಮಾಡಬೇಕು, ಪಠಾಣ್ ಸಿನಿಮಾದ ವಿರುದ್ಧ ಬೈಕಾಟ್ ಟ್ರೆಂಡ್ ಜೋರಾಗಿತ್ತು. ಆದರೆ ಎಲ್ಲವನ್ನೂ ಎದುರಿಸಿ ಪಠಾಣ್ ಇದೀಗ ಚಿತ್ರಮಂದಿರಕ್ಕೆ ಬರ್ತಿದೆ. ಜನವರಿ 25ರಂದು ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?