ಈಜಿಪ್ತ್‌ನ ಟ್ರಾವೆಲ್ ಏಜೆಂಟ್‌ಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಶಾರೂಖ್ ಖಾನ್

Published : Jan 23, 2022, 04:46 PM ISTUpdated : Jan 23, 2022, 05:03 PM IST
ಈಜಿಪ್ತ್‌ನ ಟ್ರಾವೆಲ್ ಏಜೆಂಟ್‌ಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಶಾರೂಖ್ ಖಾನ್

ಸಾರಾಂಶ

ಶಾರೂಖ್ ಖಾನ್ ಈಜಿಪ್ತ್‌ನ ಅಭಿಮಾನಿಗೆ ಗಿಫ್ಟ್ ಕಳಿಸಿದ್ದಾರೆ. ಅದರ ಹಿಂದೆ ಕಾರಣವೂ ಇದೆ. ಏನದು ಗಿಫ್ಟ್, ಕೊಟ್ಟಿದ್ಯಾಕೆ ? ಶಾರೂಖ್‌ನಿಂದ ಗಿಪ್ಟ್ ಪಡೆದ ಆ ಲಕ್ಕಿ ಅಭಿಮಾನಿ ಯಾರು ?

ಶಾರೂಖ್ ಖಾನ್ ಅಭಿಮಾನಿಗಳಿಗೆ ನಟನ ಕುರಿತು ಅತೀವ ಪ್ರೀತಿ ಇದೆ. ಬಾಲಿವುಡ್ ಕಿಂಗ್ ಖಾನ್ ಬಗ್ಗೆ ಸೌತ್‌ನಲ್ಲಿಯೂ ಕ್ರೇಝ್ ಹೆಚ್ಚಿದೆ. ನಟ ಅಭಿಮಾನಿಗಳೊಂದಿಗೆ ಆಗಾಗ ಆಸ್ಕ್ ಶಾರೂಖ್ ಸೆಷನ್ ಕೂಡಾ ನಡೆಸುತ್ತಿರುತ್ತಾರೆ. ಇದೀಗ ನಟ ಈಜಿಪ್ತ್‌ನ ತಮ್ಮ ಅಭಿಮಾನಿಯೊಬ್ಬರಿಗೆ ವಿಶೇಷವಾದ ಗಿಫ್ಟ್ ಕಳುಹಿಸಿಕೊಟ್ಟು ಸುದ್ದಿಯಾಗಿದ್ದಾರೆ. ಆದರೆ ಶಾರೂಖ್ ಅಭಿಮಾನಿಗಳಿಂದ ಅಂತ ಕಾಯ್ದುಕೊಳ್ತಿದ್ದಾರೆ, ಸಂವಹನಕ್ಕೆ ಸಿಗುತ್ತಿಲ್ಲ ಎಂಬ ಅವರ ಅಭಿಮಾನಿಗಳ ಆರೋಪ ಇದ್ದೇ ಇದೆ.

ನೀವು ಕಟ್ಟಾ ಶಾರುಖ್ ಖಾನ್ ಅಭಿಮಾನಿಯಾಗಿರಲಿ ಅಥವಾ ಇಲ್ಲದಿರಲಿ, ಬಾಲಿವುಡ್‌ನ ಬಾದ್‌ಶಾ ಇತರರಿಗೆ ನೆರವಾದ ಸ್ಟೋರಿಗಳನ್ನು ಮಿಸ್ ಮಾಡಿಕೊಳ್ಳುವುದಿಲ್ಲ. ಅದಕ್ಕಾಗಿಯೇ ಅವರ ಅಭಿಮಾನಿಗಳ ವಿಷಯಕ್ಕೆ ಬಂದರೆ, ಅವರು ತಮ್ಮ ನೆಚ್ಚಿನ ಸೂಪರ್‌ಸ್ಟಾರ್ ತೋರಿಸಿದ ಮಾರ್ಗವನ್ನು ಅನುಸರಿಸುತ್ತಾರೆ. ಇತ್ತೀಚೆಗೆ ಈಜಿಪ್ಟ್‌ನ ಟ್ರಾವೆಲ್ ಏಜೆಂಟ್ ಭಾರತೀಯ ಮಹಿಳೆಯೊಬ್ಬರು ಶಾರೂಖ್ ದೇಶದಿಂದ ಬಂದಿದ್ದಾರೆ ಎಂದು ಹಣವನ್ನು ಪಡೆಯದೆ ಟಿಕೆಟ್‌ಗಳನ್ನು ಕಾಯ್ದಿರಿಸಿದಾಗ ಈ ವೈರಲ್ ಸ್ಟೋರಿ ಎಲ್ಲರ ಹೃದಯವನ್ನು ಮುಟ್ಟಿತ್ತು. ಇದೀಗ, ಬಾಲಿವುಡ್ ಮೆಗಾಸ್ಟಾರ್ ಟ್ರಾವೆಲ್ ಏಜೆಂಟ್ ಮತ್ತು ಅವರ ಮಗಳಿಗೆ ಸಹಿ ಮಾಡಿದ ಫೋಟೋಗಳನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ.

 

ಮಹಿಳೆ, ಅಶ್ವಿನಿ ದೇಶಪಾಂಡೆ ಟ್ವಿಟರ್‌ನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ. ಈಜಿಪ್ಟ್‌ನಲ್ಲಿರುವ ಟ್ರಾವೆಲ್ ಏಜೆಂಟ್‌ಗೆ ಹಣವನ್ನು ವರ್ಗಾಯಿಸುವ ಅಗತ್ಯವಿದೆ. ವರ್ಗಾವಣೆಯಲ್ಲಿ ಸಮಸ್ಯೆಗಳಿದ್ದವು. ಅವರು, ನೀವು ಶಾರೂಖ್ ಖಾನ್ ದೇಶದವರು. ನಾನು ನಿಮ್ಮನ್ನು ನಂಬುವೆ. ನಾನು ಬುಕಿಂಗ್ ಮಾಡುತ್ತೇನೆ, ನೀವು ನನಗೆ ನಂತರ ಪಾವತಿಸಿ. ಬೇರೆಲ್ಲಿಯೂ, ನಾನು ಇದನ್ನು ಮಾಡುವುದಿಲ್ಲ. ಆದರೆ ಶಾರೂಖ್‌ಗಾಗಿ ಏನಾದರೂ ಮಾಡುವೆ ಎಂದರು ಎಂದು ಅವು ಹೇಳಿದ್ದಾರೆ.

ಮಗ ಆರ್ಯನ್ ಖಾನ್ ಬಂಧನ-ಬಿಡುಗಡೆಯ ನಂತರ ಕಿಂಗ್ ಖಾನ್ ಅಷ್ಟಾಗಿ ಹೊರಗೆ ಕಾಣಿಸಿಕೊಳ್ಳುತ್ತಿಲ್ಲ. ಸೋಷಿಯಲ್ ಮೀಡಿಯಾದಿಂದಲೂ ಗಾಯಬ್ ಆಗಿದ್ದಾರೆ. ಎಲ್ಲರಿಂದ ಅಂತರ ಕಾಯ್ದುಕೊಂಡಿರುವ ಶಾರೂಖ್ ಖಾನ್ ಅವರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಬೆಂಬಲಿಗರು ಮತ್ತು ಫಾಲೋವರ್ಸ್ ಶಾರುಖ್ ಖಾನ್ ಅವರನ್ನು 'ಬಾಲಿವುಡ್ ರಾಜ' ಎಂದು ಕರೆಯುತ್ತಾರೆ. ಅವರ ನಟನೆ ಪ್ರೇಕ್ಷಕರನ್ನು ಮೋಡಿ ಮಾಡುತ್ತದೆ. ಪ್ರಣಯದ ಶೈಲಿಯು ಮಹಿಳೆಯರನ್ನು ಆಕರ್ಷಿಸುತ್ತದೆ. ಬಾಲಿವುಡ್ ಬಾದ್‌ಶಾ ಈಗ ದೀರ್ಘಕಾಲದಿಂದ ಗ್ಲಾಮರ್ ಪ್ರಪಂಚದಿಂದ ಕಾಣೆಯಾಗಿದ್ದಾರೆ ಎಂದೇ ಹೇಳಬಹುದು. ಅವರ ಕೊನೆಯ ಚಿತ್ರ ಝೀರೋ 2018 ರಲ್ಲಿ ಬಿಡುಗಡೆಯಾಯಿತು.

ಕಳೆದ ವರ್ಷ ಅವರ ಮಗ ಆರ್ಯನ್ ಖಾನ್ ಬಂಧನ, ಡ್ರಗ್ಸ್ ಕೇಸ್ ಪ್ರಕರಣದ ನಂತರ ಅವರು ಟ್ವಿಟರ್‌ನಲ್ಲಿ ಅವರ ಅಭಿಮಾನಿಗಳೊಂದಿಗೆ ಸಂವಹನ ನಡೆಸಲಿಲ್ಲ. ಗುರುವಾರ ಸಂಜೆ, ಅವರ ಅಭಿಮಾನಿಗಳು ತಮ್ಮ ಭಾವನೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸಿದ್ದಾರೆ. 'ವಿ ಮಿಸ್ ಯು ಎಸ್‌ಆರ್‌ಕೆ' ಎಂದು ಟ್ರೆಂಡ್ ಮಾಡಿದ್ದಾರೆ. ಸಾಮಾನ್ಯವಾಗಿ ಶಾರೂಖ್ ತಮ್ಮ ಮನೆ ಮನ್ನತ್‌ನ ಮಹಡಿಯಿಂದ ಅಭಿಮಾನಿಗಳೊಂದಿಗೆ ಬರ್ತ್‌ಡೇ ದಿನ ಹಾಯ್ ಮಾಡುತ್ತಾರೆ. ಆದರೆ ಈ ಬಾರಿ ಅದನ್ನೂ ಮಿಸ್ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?