
'ಫಿದಾ' (Fida) ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ (Tollywood) ಕಾಲಿಟ್ಟ ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಸಹೋದರ ನಾಗ ಬಾಬು (Naga Babu) ಪುತ್ರ ಜನವರಿ 19ರಂದು 32ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂದು ಸ್ನೇಹಿತರ ಜೊತೆ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ವರುಣ್ (Varun Tej) ಪ್ರೀತಿಸುತ್ತಿರುವ ಹುಡುಗಿಯೂ ಇದ್ದಾಳೆ ಎನ್ನಲಾಗಿತ್ತು. ಆದರೆ ಸೋಷಿಯಲ್ ಮೀಡಿಯಾದಲ್ಲಿ (Social Media) ಮೂಲಕ ಬೇರೆನೇ ಉತ್ತರ ಸಿಕ್ಕಿದೆ.
ಹೌದು! ವರುಣ್ ತೇಜ್ ಮತ್ತು ಲಾವಣ್ಯಾ ತ್ರಿಪಾಠಿ (Lavanya tripati) ಪ್ರೀತಿಸುತ್ತಿದ್ದಾರೆ, ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಬ್ಬರೂ ಮದುವೆ ಆಗಲಿದ್ದಾರೆ, ಎಂದು ಎಲ್ಲೆಡೆ ಗಾಸಿಪ್ (Gossip) ಹಬ್ಬಿತ್ತು. ಇಬ್ಬರೂ ಒಟ್ಟಿಗೇ ಪ್ರಯಾಣ ಮಾಡಿರುವುದು ಅವರೇ ಇನ್‌ಸ್ಟಾಗ್ರಾಂ (Instagram) ಮೂಲಕ ಅಪ್ಡೇಟ್ ಮಾಡಿದ್ದಾರೆ. ಆದರೂ ಇಬ್ಬರು ಒಂದೇ ಸ್ಥಳಕ್ಕೆ ಹೋಗಿದ್ದಾರೋ ಇಲ್ವಾ ಅನ್ನುವುದರ ಬಗ್ಗೆ ಸ್ಪಷ್ಟನೆ ಇರಲಿಲ್ಲ.
ಯಾಕೆ ಗೊಂದಲ?
ಲಾವಣ್ಯಾ ತ್ರಿಪಾಠಿ ಮತ್ತು ವರುಣ್ ತೇಜ್ ಸಹೋದರಿ ನಿಹಾರಿಕಾ ಕೋನಿಡೆಲಾ (Niharika Konidella) ಆಪ್ತ ಸ್ನೇಹಿತರು. ನಿಹಾರಿಕಾ ಜೈಪುರದಲ್ಲಿ (Jaipur wedding) ಮದುವೆಯಾದಾಗ ಲಾವಣ್ಯಾ ಭಾಗಿಯಾಗಿದ್ದರು. ಮದುವೆ ಸಂಭ್ರಮದಿಂದ ಲಾವಣ್ಯಾ ಮತ್ತು ವರುಣ್ ನಡುವೆ ಬಾಂಧವ್ಯ ಹೆಚ್ಚಾಗಿತ್ತು, ಫೋಟೋದಲ್ಲಿ ಇವರಿಬ್ಬರೂ ಒಟ್ಟಿಗೆ ಇರುವುದನ್ನು ಕಂಡು ನೆಟ್ಟಿಗರು ಏನೋ ನಡೆಯುತ್ತಿದೆ ಎಂದು ಮಾತನಾಡಿಕೊಳ್ಳಲು ಶುರು ಮಾಡಿದ್ದರು. ಪ್ರಯಾಣ ಮಾಡುವ ಮುನ್ನ ಲಾವಣ್ಯಾ ಆಭರಣದ ಅಂಗಡಿಗೆ ಭೇಟಿ ನೀಡಿ ಉಂಗುರ (Gold Ring) ಖರೀದಿ ಮಾಡಿರುವ ಫೋಟೋ ಹಂಚಿಕೊಂಡಿದ್ದರು. ವರುಣ್ ಹುಟ್ಟುಹಬ್ಬಕ್ಕೆ ಇದು ಗಿಫ್ಟ್ ಇರಬಹುದು, ಎಂಬ ಮಾತುಗಳು ಶುರುವಾಗಿತ್ತು.
ನಟ ವರುಣ್ ತೇಜ್ ಸ್ನೇಹಿತರ ಜೊತೆ ಅದ್ಧೂರಿಯಾಗಿ ಬರ್ತಡೇ ಆಚರಿಸಿಕೊಂಡು ಪಾರ್ಟಿ (Birthday Party) ಮಾಡಿದ್ದರು. ಪಾರ್ಟ್‌ಯಲ್ಲಿ ಲಾವಣ್ಯಾ ಭಾಗಿಯಾಗಿರಲಿಲ್ಲ ಎಂದು ತಿಳಿದಾಗ ನೆಟ್ಟಿಗರು ಪ್ರೈವೇಸಿ ಕಾಪಾಡಿಕೊಳ್ಳುತ್ತಿದ್ದಾರೆ ಎಂದಿದ್ದರು. ಎಲ್ಲದಕ್ಕೂ ಏನೋ ಒಂದು ಹೇಳುತ್ತಿದ್ದಾರೆ, ಎಂದು ಬೇಸರಗೊಂಡ ಲಾವಣ್ಯಾ ಪರೋಕ್ಷವಾಗಿ ನೆಟ್ಟಿಗರಿಗೆ ಉತ್ತರ ಕೊಟ್ಟಿದ್ದಾರೆ.
ಊರಿನಲ್ಲಿ ಫ್ಯಾಮಿಲಿ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡ ಲಾವಣ್ಯಾ ಪರೋಕ್ಷವಾಗಿ ಯಾವ ಪಾರ್ಟಿಯಲ್ಲೂ ಭಾಗಿಯಾಗಿಲ್ಲ, ಎಂದು ತಿಳಿಸಿದ್ದಾರೆ. ನಿಹಾರಿಕಾ ಮದುವೆ ನಂತರ ಸಾಲಿನಲ್ಲಿರುವ ವರುಣ್ ಮಾತ್ರ ಮನೆಯಲ್ಲಿ ಮದುವೆ ಯೋಚನೆ ಶುರುವಾಗಿದೆ. ಹೀಗಾಗಿ ವರುಣ್ ಬಗ್ಗೆ ಅಂತೆ ಕಂತೆಗಳು ಹರಡುತ್ತಿವೆ.
ವರುಣ್ - ಲಾವಣ್ಯಾ ಸಿನಿಮಾ:
2007ರಲ್ಲಿ ಬಿಡುಗಡೆಯಾದ ಮಿಸ್ಟರ್ (Mister) ಸಿನಿಮಾ ಮತ್ತು 2018ರಲ್ಲಿ ಬಿಡುಗಡೆಯಾದ ಅಂತರಿಕ್ಷಮ್ (Anthariksham) ಸಿನಿಮಾದಲ್ಲಿ ಲಾವಣ್ಯಾ ಮತ್ತು ವರುಣ್ ಒಟ್ಟಿಗೆ ನಟಿಸಿದ್ದಾರೆ. ಮೊದಲ ಸಿನಿಮಾದಲ್ಲಿ ಅವರಿಬ್ಬರ ಕೆಮಿಸ್ಟ್ರಿ ಅಷ್ಟಾಗಿ ಕ್ಲಿಕ್ ಆಗಲಿಲ್ಲ. ಆದರೆ, ಎರಡನೇ ಸಿನಿಮಾದಲ್ಲಿ ವೀಕ್ಷಕರ ಗಮನ ಸೆಳೆದಿತ್ತು. ಆನ್‌ಸ್ಕ್ರಿನ್ ರೊಮ್ಯಾನ್ಸ್ ನೋಡಿರುವ ಜನರು ಆಫ್ ಸ್ಕ್ರಿನ್‌ನಲ್ಲಿಯೂ ಈ ಜೋಡಿ ಸೂಪರ್ ಎನ್ನುತ್ತಿದ್ದಾರೆ.
ಸದ್ಯ ವರುಣ್ ತೇಜ್ 'ಗಣಿ' (Gani) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಕ್ಸರ್ (Boxer) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾಗೆ ಹೆಚ್ಚಿನ ಬಂಡವಾಳ ಹಾಕಲಾಗಿದೆಯಂತೆ. ಲಾವಣ್ಯಾ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಇನ್ನೂ ಮಾಹಿತಿ ರಿವೀಲ್ ಮಾಡಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.