ಆಸ್ಕರ್ ತಂದಾಗ ದಯವಿಟ್ಟು ನನಗೂ ಸ್ವಲ್ಪ ಮುಟ್ಟಲು ಕೊಡಿ ಎಂದು ಶಾರುಖ್ ಖಾನ್ RRR ತಂಡಕ್ಕೆ ವಿಶೇಷ ಮನವಿ ಮಾಡಿದ ಟ್ವೀಟ್ ವೈರಲ್ ಆಗಿದೆ.
ಆಸ್ಕರ್ 2023 ಭಾರತೀಯರಿಗೆ ಬಾರಿ ನಿರೀಕ್ಷೆ ಮೂಡಿಸಿದೆ. ಈ ಬಾರಿ ಆಸ್ಕರ್ ಅಂಗಳದಲ್ಲಿ ಭಾರತದ ಅನೇಕ ಸಿನಿಮಾಗಳಿವೆ. 10ಕ್ಕೂ ಹೆಚ್ಚು ಚಿತ್ರಗಳು ಪ್ರತಿಷ್ಠಿತ ಅಕಾಡೆಮಿ ಅವಾರ್ಡ್ ರೇಸ್‌ನಲ್ಲಿ ಇರುವುದು ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ. ಇಷ್ಟು ಸಿನಿಮಾಗಳ ಪೈಕಿ ಒಂದಾದರೂ ಆಸ್ಕರ್ ಗೆದ್ದು ಭಾರತಕ್ಕೆ ತರುತ್ತಾರಾ ಎನ್ನುವ ಕುತೂಹಲ ಮೂಡಿಸಿದೆ. ಈ ನಡುವೆ ಶಾರುಖ್ ಖಾನ್ ಟ್ವೀಟ್ ಅಚ್ಚರಿ ಮೂಡಿಸಿದೆ. ಆಸ್ಕರ್ ತಂದಾಗ ದಯವಿಟ್ಟು ಮುಟ್ಟಲು ಕೊಡಿ ಎಂದು ಕೇಳಿಕೊಂಡಿದ್ದಾರೆ. ಹೌದು, ಈ ಬಾರಿಯ ಆಸ್ಕರ್ ರೇಸ್ ನಲ್ಲಿ ಆರ್ ಆರ್ ಆರ್ ಸಿನಿಮಾ ಕೂಡ ಇದೆ. ಆರ್ ಆರ್ ಆರ್ ತಂಡಕ್ಕೆ ಬಾಲಿವುಡ್ ಕಿಂಗ್ ಖಾನ್ ವಿಶೇಷ ಮನವಿ ಮಾಡಿದ್ದಾರೆ.
ಇತ್ತೀಚಿಗೆ ಹಿಂದಿ ಚಿತ್ರರಂಗದ ಸ್ಟಾರ್ ನಟರು ದಕ್ಷಿಣದ ಹೀರೋಗಳ ಜೊತೆ ಉತ್ತಮ ಬಾಂಧವ್ಯಹೊಂದಿದ್ದಾರೆ. ಆಗಾಗ ದಕ್ಷಿಣ ಹೀರೋಗಳ ಜೊತೆ ಕಾಣಿಸಿಕೊಳ್ಳುತ್ತಿರುತ್ತಾರೆ. ಟ್ವೀಟ್ ಮೂಲಕ ಮಾತನಾಡುತ್ತಿರುತ್ತಾರೆ. ಶಾರುಖ್ ಖಾನ್ ಮತ್ತು ರಾಮ್ ಚರಣ್ ಇಬ್ಬರೂ ಉತ್ತಮ ಸ್ನೇಹಿತರು. ಶಾರುಖ್ ನಟನೆಯ ‘ಪಠಾಣ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ರಾಮ್ ಚರಣ್ ಸೋಶಿಯಲ್ ಮೀಡಿಯಾದಲ್ಲಿ ಪಠಾಣ್ ಟ್ರೈಲರ್ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಾಮ್ ಚರಣ್‌ಗೆ ಶಾರುಖ್ ಖಾನ್ ಪ್ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಆಗ ಆಸ್ಕರ್ ಬಗ್ಗೆ ಶಾರುಖ್ ಪ್ರಸ್ತಾಪಿಸಿದ್ದಾರೆ.
'ಆಸ್ಕರ್ ಪ್ರಶಸ್ತಿಯನ್ನು ಆರ್ಆರ್ಆರ್ ಚಿತ್ರತಂಡ ಭಾರತಕ್ಕೆ ತಂದಾಗ ನನಗೆ ಅದನ್ನು ಮುಟ್ಟಲು ಕೊಡಿ ಪ್ಲೀಸ್’ ಎಂದು ಶಾರುಖ್ ಖಾನ್ ಮನವಿ ಮಾಡಿದ್ದಾರೆ. ಶಾರುಖ್ ಖಾನ್ ಮಾತಿಗೆ ರಾಮ್ ಚರಣ್ ಕೂಡ ಪ್ರತಿಕ್ರಿಯಿಸಿದ್ದಾರೆ. 'ಖಂಡಿತವಾಗಿಯೂ ಶಾರುಖ್ ಸರ್. ಆ ಪ್ರಶಸ್ತಿ ಭಾರತೀಯ ಚಿತ್ರರಂಗಕ್ಕೆ ಸೇರಿದ್ದು’ ಎಂದು ಟ್ವೀಟ್ ಮಾಡಿದ್ದಾರೆ. ಈ ನಟರಿಬ್ಬರ ಟ್ವಿಟರ್ ಮಾತುಕತೆ ವೈರಲ್ ಆಗಿದೆ. ಅಭಿಮಾನಿಗಳು ಇದಕ್ಕೆ ವಿವಿಧ ರೀತಿ ಕಮೆಂಟ್ ಮಾಡುತ್ತಿದ್ದಾರೆ. ಇಬ್ಬರ ನಡುವಿನ ಸ್ನೇಹವನ್ನು ಫ್ಯಾನ್ಸ್ ಕೊಂಡಾಡುತ್ತಿದ್ದಾರೆ.
RRR ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ..
ಅಂದಹಾಗೆ ಪಠಾಣ್ ಟ್ರೈಲರ್ ಅನ್ನು ದಕ್ಷಿಣ ಭಾರತದ ಅನೇಕ ಕಲಾವಿದರು ಮೆಚ್ಚಿಕೊಂಡಿದ್ದಾರೆ. ಹಾಡಿ ಹೊಗಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಶಾರುಖ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಸ್ ಎಸ್ ರಾಜಮೌಳಿ, ತಮಿಳು ಸ್ಟಾರ್ ದಳಪತಿ ವಿಜಯ್, ರಾಮ್ ಚರಣ್ ಸೇರಿದಂತೆ ಅನೇಕರು ಟ್ವೀಟ್ ಮಾಡಿದ್ದಾರೆ. ಎಲ್ಲರಿಗೂ ಶಾರುಖ್ ಪ್ರತಿಕ್ರಿಯೆ ನೀಡಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಮತ್ತು ಉತ್ತರ ಭಾರತದ ಸ್ಟಾರ್ ನಡುವಿನ ಸ್ನೇಹ ಬಾಂಧವ್ಯ ಅಭಿಮಾನಿಗಳ ಹೃದಯ ಗೆದ್ದಿದೆ.
Thank u so much my Mega Power Star . When ur RRR team brings Oscar to India, please let me touch it!!
(Mee RRR team Oscar ni intiki tecchinappudu okkasaari nannu daanini touch cheyyanivvandi! )
Love you.
ವನವಾಸ ಮುಗಿಸಿ ಕೊನೆಗೂ ಬಂತು ಪಠಾಣ್ ಟ್ರೇಲರ್: ಜಾನ್ ಅಬ್ರಹಾಂ, ಶಾರುಖ್ ನಡುವಿನ ಫೈಟಿದು!
ಶಾರುಖ್ ಖಾನ್ ಅನೇಕ ವರ್ಷಗಳ ಬಳಿಕ ಸಿದ್ದಾರ್ಥ್ ಆನಂದ್ ನಿರ್ದೇಶನದ ‘ಪಠಾಣ’ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ಪಠಾಣ್ ಇದೇ ತಿಂಗಳು ಜನವರಿ 25ಕ್ಕೆ ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಬಾಲಿವುಡ್‌ನ ಮತ್ತೋರ್ವ ಖ್ಯಾತ ನಟ ಜಾನ್ ಅಬ್ರಾಹಂ ವಿಲನ್ ಆಗಿ ಅಬ್ಬರಿಸಿದ್ದಾರೆ. ಟ್ರೈಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಪಠಾಣ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.