ಕಾಂತಾರ, ವಿಕ್ರಾಂತ್ ರೋಣ, ಕಾಶ್ಮೀರ್ ಫೈಲ್ಸ್; ಆಸ್ಕರ್ ರೇಸ್‌ನಲ್ಲಿ ಭಾರತದ ಸಿನಿಮಾಗಳೆಷ್ಟು? ಇಲ್ಲಿದೆ ಸಂಪೂರ್ಣ ವಿವರ

By Shruthi Krishna  |  First Published Jan 10, 2023, 5:09 PM IST

ಈ ವರ್ಷದ ಆಸ್ಕರ್ ರೇಸ್‌ನಲ್ಲಿ ಕನ್ನಡದ ಎರಡು ಸಿನಿಮಾ ಸೇರಿದಂತೆ ಭಾರತದಿಂದ ಒಟ್ಟು 10ಕ್ಕೂ ಹೆಚ್ಚು ಸಿನಿಮಾಗಳಿವೆ. ಕನ್ನಡದಿಂದ ಕಾಂತಾರ, ವಿಕ್ರಾಂತ್ ರೋಣ ಸಿನಿಮಾಗಳು ಈ ಬಾರಿಯ ಆಸ್ಕರ್ ಲಿಸ್ಟ್‌ನಲ್ಲಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.


ಈ ವರ್ಷದ ಆಸ್ಕರ್ ರೇಸ್‌ನಲ್ಲಿ ಕನ್ನಡದ ಎರಡು ಸಿನಿಮಾ ಸೇರಿದಂತೆ ಭಾರತದಿಂದ ಒಟ್ಟು 10ಕ್ಕೂ ಹೆಚ್ಚು ಸಿನಿಮಾಗಳಿವೆ. ಕನ್ನಡದಿಂದ ಕಾಂತಾರ, ವಿಕ್ರಾಂತ್ ರೋಣ ಸಿನಿಮಾಗಳು ಈ ಬಾರಿಯ ಆಸ್ಕರ್ ಲಿಸ್ಟ್‌ನಲ್ಲಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ದಕ್ಷಣ ಭಾರತದ ಅನೇಕ ಸಿನಿಮಾಗಳು ಆಸ್ಕರ್ ಅಂಗಳದಲ್ಲಿದೆ. ಕನ್ನಡದ ಎರಡು ಸಿನಿಮಾಗಳ ಜೊತೆಗೆ ತೆಲುಗಿನ ಆರ್ ಆರ್ ಆರ್, ತಮಿಳಿನಿಂದ ರಾಕೆಟ್ರಿ; ದಿ ನಂಬಿ ಎಫೆಕ್ಟ್ ಮತ್ತು ಇರವಿನ್ ನಿಳಲ್ ಮರಾಠಿಯ ತುಜ್ಯಾ ಸಾಥಿ ಕಹೀ ಹೈ, ಮಿ ವಸಂತರಾವ್, ಹಿಂದಿಯ ಗಂಗೂಬಾಯಿ ಕಾಠಿಯವಾಡಿ, ದಿ ಕಾಶ್ಮೀರ್ ಪೈಲ್ಸ್ ಸಿನಿಮಾಗಳು ಸ್ಪರ್ಧೆಯಲ್ಲಿವೆ. ಒಟ್ಟು 301ಸಿನಿಮಾಗಳ ಪೈಕಿ ಭಾರತದಿಂದ 10ಕ್ಕೂ ಹೆಚ್ಚು ಸಿನಿಮಾಗಳು ಆಸ್ಕರ್ ಅಂಗಳಕ್ಕೆ ಎಂಟ್ರಿ ಕೊಟ್ಟಿರುವುದು ಸಂತಸದ ವಿಚಾರವಾಗಿದೆ. 

ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್ ಆಸ್ಕರ್‌ಗೆ ಅರ್ಹವಾಗಿರುವ 301 ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ ಅಧಿಕೃತ ಆಸ್ಕರ್ ಪ್ರವೇಶವಾಗಿರುವ ಪಾನ್ ನಳಿನ್ ಅವರ ಚೆಲೋ ಶೋ ಸಿನಿಮಾ ಕೂಡ ಇದೆ. ಇನ್ನು ಶನಕ್ ಸೇನ್ ಅವರ ಆಲ್ ದಟ್ ಬ್ರೀಥ್ಸ್ ಸಾಕ್ಷ್ಯಚಿತ್ರ ಮತ್ತು ಕಾರ್ತಿಕಿ ಗೊನ್ಸಾಲ್ವ್ಸ್ ಅವರ ದಿ ಎಲಿಫೆಂಟ್ ವಿಸ್ಪರರ್ಸ್ ಕೂಡ ಲಿಸ್ಟ್ ನಲ್ಲಿ ಇದೆ.

Tap to resize

Latest Videos

RRR ಸಿನಿಮಾದ ನಾಟು ನಾಟು ಅಕಾಡೆಮಿ ಪ್ರಶಸ್ತಿಗಳಿಗೆ ಆಯ್ಕೆಯಾದ ಮೊದಲ ಭಾರತೀಯ ಹಾಡಾಗಿದೆ. ಆಸ್ಕರ್ ಜೊತೆಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್‌ನಲ್ಲೂ ಸ್ಪರ್ಧೆ ಮಾಡಿದೆ. 95ನೇ ಅಕಾಡೆಮಿ ಪ್ರಶಸ್ತಿ ಮಾರ್ಚ್ 12, 2023 ರಂದು ಲಾಸ್ ಏಂಜಲೀಸ್‌ನ ಡಾಲಿ ಥಿಯೇಟರ್‌ನಲ್ಲಿ ನಡೆಯಲಿದೆ. ಟಿವಿ ನಿರೂಪಕ ಜಿಮ್ಮಿ ಕಿಮ್ಮೆಲ್ ಈ ವರ್ಷ ಆಸ್ಕರ್ ಪ್ರಶಸ್ತಿಯನ್ನು ಆಯೋಜಿಸಲಿದ್ದಾರೆ.

ಕಾಂತಾರ ಎಂಟ್ರಿ ಬಗ್ಗೆ ಸಿನಿಮಾತಂಡ ಸಂತಸ 

ಟ್ವೀಟ್ ಮಾಡಿರುವ ಹೊಂಬಾಳೆ ಫಿಲ್ಮ್ಸ್, 'ಕಾಂತಾರ ಸಿನಿಮಾ 2 ವಿಭಾಗಳಲ್ಲಿ ಆಸ್ಕರ್‌‌ಗೆ ಅರ್ಹತೆ ಸಿಕ್ಕಿದೆ ಎಂದು ಹಂಚಿಕೊಳ್ಳಲು ನಮಗೆ ತುಂಬಾ ಸಂತಸವಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಪ್ರಯಾಣವನ್ನು ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ' ಎಂದು ಹೇಳಿದ್ದಾರೆ. 

ವಿಕ್ರಾಂತ್ ರೋಣ ನಿರ್ದೇಶಕ ಹೇಳಿದ್ದೇನು?

ಸುವರ್ಣನ್ಯೂಸ್ ಡಿಜಿಟಲ್ ಜೊತೆ ಮಾತನಾಡಿದ ನಿರ್ದೇಶಕ ಅನೂಪ್ ಭಂಡಾರಿ ಸಂತಸ ಹಂಚಿಕೊಂಡರು. 'ಸದ್ಯ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಅತ್ತ್ಯುತ್ತಮ ಸಿನಿಮಾ ವಿಭಾಗಕ್ಕೆ ವಿಕ್ರಾಂತ್ ರೋಣ ಅರ್ಹತೆ ಪಡೆದುಕೊಂಡಿದೆ. ಈಗಷ್ಟೆ ಮಾಹಿತಿ ತಿಳಿಯಿತು. ಇನ್ನೂ ಯಾವೆಲ್ಲ ವಿಭಾಗಗಳಿಗೆ ಅರ್ಹತೆ ಪಡೆದುಕೊಂಡಿದೆ ಎನ್ನುವುದು ಗೊತ್ತಾಗಬೇಕಿದೆ. ರಂಗಿತರಂಗ ಬಳಿಕ ಆಸ್ಕರ್ ಅಂಗಳಕ್ಕೆ ವಿಕ್ರಾಂತ್ ರೋಣ ಎಂಟ್ರಿ ಕೊಟ್ಟಿದೆ' ಎಂದು ಹೇಳಿದರು. 

click me!