
ಬಾಲಿವುಡ್ ತಾರೆ ಶಾರುಖ್ ಖಾನ್ ಇಂದು ಅರ್ಥಾತ್ ನವೆಂಬರ್ 2ರಂದು ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು, ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯನ್ನು ನೀಡಿದರು. ಅವರು X ನಲ್ಲಿ "ಆಸ್ಕ್ ಮಿ ಎನಿಥಿಂಗ್" ಎಂಬ ಪ್ರಶ್ನೋತ್ತರ ಕಲಾಪ ಆಯೋಜಿಸಿದ್ದರು. ಈ ಹಿಂದೆ ಕೂಡ ಶಾರುಖ್ ಖಾನ್ ಹಲವು ಬಾರಿ ಇಂಥ ಸೆಷನ್ಸ್ ಮಾಡಿದ್ದಿದೆ. ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಅದೇ ರೀತಿ ಈಗಲು ಸೆಷನ್ ಮಾಡಿದ್ದರು. ಈ ಸೆಷನ್ನಲ್ಲಿ ಸಹಸ್ರಾರು ಅಭಿಮಾನಿಗಳು ವಿವಿಧ ಪ್ರಶ್ನೆಗಳನ್ನು ಕೇಳಿದ್ದು, ನಟ ಹಲವುಗಳಿಗೆ ಉತ್ತರ ನೀಡಿದ್ದಾರೆ.
ಕೆಲವರು ನಟನ ಕಾಲೆಳೆಯುವಂಥ ಪ್ರಶ್ನೆಗಳನ್ನೂ ಕೇಳುವುದು ಇದೆ. ನೆಟ್ಟಿಗನೊಬ್ಬ, ಬ್ರದರ್, ನಿಮ್ಮಲ್ಲಿ ಯಾವುದೇ ಪ್ರತಿಭೆ ಇಲ್ಲ. ನೀವು ನೋಡಲು ಕೂಡ ಅಷ್ಟೇನೂ ಚೆನ್ನಾಗಿಲ್ಲ. ಹೀಗಿದ್ದರೂ ನೀವು ಹೇಗೆ ಸ್ಟಾರ್ ಆದಿರಿ? ಎಂದು ಪ್ರಶ್ನಿಸಿದ್ದಾನೆ. ನಾನು ನೋಡಲು ನಿಮಗಿಂತ ತುಂಬಾ ಸುಂದರವಾಗಿದ್ದೇನೆ, ಆದರೆ ನನ್ನನ್ನು ಯಾರೂ ಗುರುತಿಸುವುದಿಲ್ಲ. ಇದು ಏಕೆ ಎಂದು ಪ್ರಶ್ನಿಸಿದಾಗ, ಶಾರುಖ್ ಅವರು ಅಷ್ಟೇ ಸಮಾಧಾನದಿಂದ ತಿರುಗೇಟು ನೀಡಿದ್ದಾರೆ. ಅದರಲ್ಲಿ ಅವರು, "ಬ್ರದರ್, ನಿಮಗೆ ಬಾಹ್ಯದಲದ್ಲಿ ಒಳ್ಳೆಯ ಸೌಂದರ್ಯವಿದೆ, ಆದರೆ ತಲೆಯೊಳಗೆ ಏನಿದೆ, ಅದರ ಬಗ್ಗೆ ಹೇಳಲೇ ಇಲ್ಲವಲ್ಲಾ ಎಂದಿದ್ದಾರೆ!
ಹೀಗೆ ಶಾರುಖ್ ಖಾನ್, ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, "ನಿಮ್ಮ ಮಗ ನಿಮ್ಮ ಸಿನಿಮಾವನ್ನು ನಿರ್ದೇಶಿಸುವುದನ್ನು ನಾವು ನೋಡಬಹುದೇ?ಎಂದಿದ್ದಾರೆ. ಅದಕ್ಕೆ ಶಾರುಖ್ " ನನ್ನ ಕೋಪೋದ್ರೇಕಗಳನ್ನು ಆತ ಸಹಿಸಿಕೊಳ್ಳಲು ಸಾಧ್ಯವಾದರೆ, ಬಹುಶಃ ಹಾಗೆ ಮಾಡಬಹುದು" ಎಂದಿದ್ದಾರೆ. ಮತ್ತೋರ್ವ ಫ್ಯಾನ್, ಶಾರುಖ್ ಖಾನ್ ಅವರನ್ನು ಅವರ ಮಗ ಆರ್ಯನ್ ಖಾನ್ ನಿರ್ದೇಶನದ ಚೊಚ್ಚಲ ಚಿತ್ರ "ಬ್ಯಾಡ್ಸ್ ಆಫ್ ಬಾಲಿವುಡ್" ನ ಎರಡನೇ ಭಾಗಕ್ಕಾಗಿ ವಿನಂತಿಸಿದರು. , "ಸರ್, ನಮಗೆ ಬ್ಯಾಡ್ಸ್ ಆಫ್ ಬಾಲಿವುಡ್ ನ ಎರಡನೇ ಭಾಗ ಬೇಕು ಎಂದು ಆರ್ಯನ್ ಗೆ ಹೇಳಿ" ಎಂದಿದ್ದಾರೆ.
ಸೆಪ್ಟೆಂಬರ್ 18 ರಂದು OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳುವ ಅವರ ಮಗ ಆರ್ಯನ್ ಖಾನ್ ನಿರ್ದೇಶನದ ಚೊಚ್ಚಲ ಚಿತ್ರ "ದಿ ಬ್ಯಾಡ್ಸ್ ಆಫ್ ಬಾಲಿವುಡ್" ನಲ್ಲಿ ಶಾರುಖ್ ಖಾನ್ ಕೊನೆಯ ಬಾರಿಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಈ ಸರಣಿಯಲ್ಲಿ ಬಾಬಿ ಡಿಯೋಲ್, ಲಕ್ಷ್ಯ, ಸಹೇರ್ ಬಂಬಾ, ಮನೋಜ್ ಬಾವಾ, ಮೋನಾ ಸಿಂಗ್, ಮನೀಶ್ ಚೌಧರಿ, ರಾಘವ್ ಜುಯಾಲ್ ಮತ್ತು ಗೌತಮಿ ಕಪೂರ್ ನಟಿಸಿದ್ದಾರೆ, ಆದರೆ ಸಲ್ಮಾನ್ ಖಾನ್, ಕರಣ್ ಜೋಹರ್ ಮತ್ತು ರಣವೀರ್ ಸಿಂಗ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.