'ಕಿರಿಕ್ ಪಾರ್ಟಿ' ರಶ್ಮಿಕಾರ ಫಸ್ಟ್ ಸಿನಿಮಾ ಅಲ್ವಂತೆ, ಮತ್ತೆ ವಿವಾದಕ್ಕೆ ಸಿಲುಕಿದ 'ನ್ಯಾಷನಲ್ ಕ್ರಶ್' ಸ್ಟಾರ್!

Published : Nov 02, 2025, 12:44 PM IST
Rashmika Mandanna

ಸಾರಾಂಶ

ಯಾವುದೇ ಗಾಡ್‌ ಫಾದರ್ ಇಲ್ಲದೇ, ಸಾಮಾನ್ಯ ಕುಟುಂಬದಿಂದ ಬಂದು ಇಂದು ಭಾರತದ ಸೂಪರ್ ಸ್ಟಾರ್ ಆಗಿ ಬೆಳೆದುನಿಂತಿರೋದು ನಿಜವಾದ ಅಚ್ಚರಿ. ವೃತ್ತಿಜೀವನದಲ್ಲಿ ಅವರು ಏರಿರುವ ಎತ್ತರ, ಸಾಧನೆ ಬಿಟ್ಟು ಅವರ ವೈಯಕ್ತಿಕ ಜೀವನ, ಮಾತುಕತೆಗಳ ಬಗ್ಗೆ ಮಾತನ್ನಾಡಿ ಕೆಲವರು ಚಿಕ್ಕವರಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಮತ್ತೆ ವಿವಾದದಲ್ಲಿ ರಶ್ಮಿಕಾ!

ರಶ್ಮಿಕಾ ಮಂದಣ್ಣಗೂ (Rashmika Mandanna) ವಿವಾದಕ್ಕೂ ಅದೇನು ನಂಟೋ ಗೊತ್ತಿಲ್ಲ! ರಶ್ಮಿಕಾ ಮಂದಣ್ಣ ಮತಾನ್ನಾಡಿದರೆ ಮಾತ್ರವಲ್ಲ ಸುಮ್ಮನಿದ್ದರೂ ಅವರನ್ನು ವಿವಾದ ಬೆನ್ನುಬಿಡುತ್ತಿಲ್ಲ. ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಹೊಸದೊಂದು ಕಾಂಟ್ರೋವರ್ಸಿ ಓಡಾಡುತ್ತಿದೆ. ಅದೇನು ಗೊತ್ತಾ? 'ನಟಿ ರಶ್ಮಿಕಾ ಮಂದಣ್ಣ ಅವರು ನಟಿಸಿದ ಮೊದಲ ಚಿತ್ರ 'ಕಿರಿಕ್ ಪಾರ್ಟಿ' ಅಲ್ವಂತೆ, ಮತ್ತೆ ಕನ್ನಡಿಗರ ಕೋಪಕ್ಕೆ ಗುರಿಯಾದ ನಟಿ' ಎಂಬ ಹೆಡ್‌ಲೈನ್ ಹೊತ್ತ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ. ಸುದ್ದಿ ಬಂದ ಮೇಲೆ ಅದಕ್ಕೆ ಒಂದಷ್ಟು ಪರ-ವಿರೋಧಗಳು ಬಂದೇ ಬರುತ್ತವೆ. ಅದು- ನಾಯಿ ಜೊತೆ ಬಾಲ ಬಂದಂತೆ' ಎನ್ನಬಹುದು!

ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಓಡಾಡುತ್ತಿರುವ ಆ ಸುದ್ದಿ ಹೊಸತೇನೂ ಅಲ್ಲ. ಅದನ್ನು ಸ್ವತಃ ನಟಿ ರಶ್ಮಿಕಾ ಅವರು ಈ ಮೊದಲೇ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿದ್ದಾರೆ. 'ಬಿಡುಗಡೆಯಾದ ನನ್ನ ಮೊದಲ ಸಿನಿಮಾ 'ಕಿರಿಕ್ ಪಾರ್ಟಿ', ಆದರೆ ಅದಕ್ಕೂ ಮೊದಲು ನಾನು 'ಗೆಳೆಯರೇ ಗೆಳತಿಯರೇ' ಹೆಸರಿನ ಇನ್ನೊಂದು ಸಿನಿಮಾಗೆ ಆಯ್ಕೆಯಾಗಿದ್ದೆ. ನಾಲ್ಕೈದು ತಿಂಗಳೂ ರಿಹರ್ಸಲ್ ನಡೆದಿತ್ತು. ಆದರೆ, ಶೂಟಿಂಗ್ ಶುರುವಾಗುವ ಮೊದಲೇ ಅದು ನಿಂತುಹೋಯ್ತು' ಎಂದಿದ್ದರು. ಆದರೆ, ಈಗ ನಟಿ ರಶ್ಮಿಕಾ ಸೂಪರ್ ಸ್ಟಾರ್ ಆದ್ಮೇಲೆ, ಭಾರತದ ಟಾಪ್ ನಟಿ ಆದ್ಮೇಲೆ ಮತ್ತೆ ಈ ಸುದ್ದಿ ಯಾಕೆ ಹರಡುತ್ತಿದೆ?

ರಶ್ಮಿಕಾ ಈಗ ಫ್ಯಾನ್ ಇಂಡಿಯಾ ಸ್ಟಾರ್

ಇದಕ್ಕೆ ಕಾರಣವನ್ನು ನೆಟ್ಟಿಗರಲ್ಲೇ ಕೆಲವರು ಕೊಟ್ಟಿದ್ದಾರೆ. ನಟಿ ರಶ್ಮಿಕಾ ಈಗ ಫ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಅದನ್ನು ಸಹಿಸಲಾಗದ ಒಂದು ವರ್ಗ ಅವರನ್ನು ದೂಷಿಸುವುದನ್ನೇ ಒಂದು ಕೆಲಸ ಮಾಡಿಕೊಂಡಿದೆ. ಕನ್ನಡ ಚಿತ್ರರಂಗದಿಂದ ನಟನೆ ಪ್ರಾರಂಭಿಸಿ ಬಳಿಕ ಬೇರೆ ಭಾಷೆಗಳಲ್ಲಿ ಸ್ಟಾರ್ ಆಗಿ ಬೆಳೆದವರು ಬಹಳಷ್ಟು ಜನರಿದ್ದಾರೆ. ಆದರೆ, ನಟಿ ರಶ್ಮಿಕಾ ಅವರನ್ನೇ ಬೇಕಂತಲೇ ಟಾರ್ಗೆಟ್ ಮಾಡಲಾಗುತ್ತಿದೆ. ಕಾರಣ, ಅವರು ಕನ್ನಡವನ್ನು ಹೆಚ್ಚಾಗಿ ಮಾತನಾಡೋದಿಲ್ಲ. ನಟಿಯಾಗಿ ಅವರು ಬೆಳೆದ ರೀತಿ ನಿಜಕ್ಕೂ ಅದ್ಭುತ. ಅದನ್ನು ನೋಡಿ ಹೆಮ್ಮೆ ಪಡೋದು ಬಿಟ್ಟು ಅವರಲ್ಲಿರುವ ಮೈನಸ್ ಪಾಯಿಂಟ್ ಇಟ್ಟುಕೊಂಡು ಯಾಕೆ ಅವರನ್ನು ಟ್ರೋಲ್ ಮಾಡ್ಬೇಕು?' ಎಂದು ಹೆಲವು ನೆಟ್ಟಗರು ಪ್ರಶ್ನೆ ಮಾಡುತ್ತಿದ್ದಾರೆ.

ನ್ಯಾಷನಲ್ ಕ್ರಶ್

ಅದೇನೇ ಇದ್ದರೂ, ನಟಿ ರಶ್ಮಿಕಠಾ ಅವರು ಇಂದು 'ನ್ಯಾಷನಲ್ ಕ್ರಶ್' ಎನ್ನುವ ಹೆಸರು ಪಡೆದು ಇಂಡಿಯಾದ ಟಾಪ್ ಒನ್ ನಟಿ ಎನ್ನಿಸಿಕೊಂಡಿದ್ದಾರೆ. ರಶ್ಮಿಕಾ ನಟಿಸಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆಗುತ್ತಿವೆ. ರಶ್ಮಿಕಾ ಇವರೆಗೆ ನಟಿಸಿದ ಸಿನಿಮಾಗಳು ಬರೋಬ್ಬರಿ 5000 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿ, ಭಾರತದ ಯಾವೊಬ್ಬರೂ ನಟಿಯೂ ಮಾಡದಿರುವ ಸಾಧನೆ ಮಾಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಅದಕ್ಕಾಗಿ ಹೆಮ್ಮೆ ಪಡೋದು ಒಳ್ಳೆಯದು.

ಯಾವುದೇ ಗಾಡ್‌ ಫಾದರ್ ಇಲ್ಲದೇ, ಸಾಮಾನ್ಯ ಕುಟುಂಬದಿಂದ ಬಂದು ಇಂದು ಭಾರತದ ಸೂಪರ್ ಸ್ಟಾರ್ ಆಗಿ ಬೆಳೆದುನಿಂತಿರೋದು ನಿಜವಾದ ಅಚ್ಚರಿ. ವೃತ್ತಿಜೀವನದಲ್ಲಿ ಅವರು ಏರಿರುವ ಎತ್ತರ, ಸಾಧನೆ ಬಿಟ್ಟು ಅವರ ವೈಯಕ್ತಿಕ ಜೀವನ, ಮಾತುಕತೆಗಳ ಬಗ್ಗೆ ಮಾತನ್ನಾಡಿ ಯಾಕೆ ಕೆಲವರು ಚಿಕ್ಕವರಾಗುತ್ತಿದ್ದಾರೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ, ರಶ್ಮಿಕಾ ಮಾತ್ರ ಯಾವುದೇ ಪರ-ವಿರೋಧಕ್ಕೆ ತಲೆ ಕೆಡಿಸಿಕೊಳ್ಳದೇ ದಿನದಿನಕ್ಕೂ ಬೆಳೆಯುತ್ತಲೇ ಇದ್ದಾರೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಾಯಿಬಾಬ ನಟ ಸುಧೀರ್ ಆಸ್ಪತ್ರೆ ದಾಖಲು, ಚಿಕಿತ್ಸೆಗೆ 11 ಲಕ್ಷ ರೂ ನೀಡಲು ಶಿರಡಿ ಟ್ರಸ್ಟ್‌ಗೆ ಸೂಚನೆ
ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!