ಶಾರುಖ್ ಖಾನ್ ಮಂಗಳಮುಖಿಯಾಗಿ ನಟಿಸಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಈ ಸಿನಿಮಾ ಬಗ್ಗೆ ನಿಮಗೆ ಗೊತ್ತಾ?

By Anusha Kb  |  First Published Sep 10, 2024, 1:16 PM IST

ಇಂದು ಶಾರುಖ್ ಖಾನ್ ಹಿಂದಿ ಚಿತ್ರರಂಗವನ್ನು ಆಳುತ್ತಿರುವ ಬಾಲಿವುಡ್‌ನ ಮೇರುನಟ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಆದರೆ ಅವರ ವೃತ್ತಿಜೀವನದ ಆರಂಭ ಹೇಗಿತ್ತು? ಇಂದು ಬರೀ ಒಂದು ಸಿನಿಮಾಗಳಿಗೆ ಎಷ್ಟೋ ಕೋಟಿ ಸಂಭಾವನೆ ಪಡೆಯುವ ಶಾರುಖ್ ಖಾನ್ ಹಿಂದೊಮ್ಮೆ ಸಿನಿಮಾವೊಂದರಲ್ಲಿ ಮಂಗಳಮುಖಿಯ ಪಾತ್ರವನ್ನು ಮಾಡಿದ್ದರು ಎಂಬ ವಿಚಾರ ನಿಮಗೆ ಗೊತ್ತಾ?


ಇಂದು ಶಾರುಖ್ ಖಾನ್ ಹಿಂದಿ ಚಿತ್ರರಂಗವನ್ನು ಆಳುತ್ತಿರುವ ಬಾಲಿವುಡ್‌ನ ಮೇರುನಟ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಆದರೆ ಅವರ ವೃತ್ತಿಜೀವನದ ಆರಂಭ ಹೇಗಿತ್ತು? ಇಂದು ಬರೀ ಒಂದು ಸಿನಿಮಾಗಳಿಗೆ ಎಷ್ಟೋ ಕೋಟಿ ಸಂಭಾವನೆ ಪಡೆಯುವ ಶಾರುಖ್ ಖಾನ್ ಹಿಂದೊಮ್ಮೆ ಸಿನಿಮಾವೊಂದರಲ್ಲಿ ಮಂಗಳಮುಖಿಯ ಪಾತ್ರವನ್ನು ಮಾಡಿದ್ದರು ಎಂಬ ವಿಚಾರ ನಿಮಗೆ ಗೊತ್ತಾ? ಈ ಬಗ್ಗೆ ಇಲ್ಲಿದೆ ಒಂದು ಸ್ಟೋರಿ.

ಶಾರುಖ್ ಖಾನ್ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಬಹಳಷ್ಟು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು, ಒಳ್ಳೆಯ ನಟನಾಗಬೇಕೆಂಬ ಅವರ ವಿನಮ್ರತೆ ಹಾಗೂ ಕಠಿಣ ಶ್ರಮವೇ ಅವರಿಗೆ ಇಂದು ಬಾಲಿವುಡ್‌ನಲ್ಲಿ ಭದ್ರ ಬುನಾದಿ ಒದಗಿಸಿದೆ. ಆದರೆ ಅವರು ಮಂಗಳಮುಖಿಯಾಗಿಯೂ ನಟಿಸಿದ್ದರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಭಾರತೀಯ ಇಂಗ್ಲೀಷ್‌ ಸಾಹಿತಿ ಅರುಂಧತಿ ರಾಯ್ ಅವರು ಬರೆದ 'ಇನ್ ವಿಚ್ ಅನ್ನಿ ಗಿವ್ಸ್ ಇಟ್ ದೋಸ್ ಒನ್ಸ್' ಕಾದಂಬರಿ ಆಧರಿತ ಸಿನಿಮಾದಲ್ಲಿ ಶಾರುಖ್ ಖಾನ್, ಸಲಿಂಗಿಯ ಪಾತ್ರವನ್ನು ಮಾಡಿದ್ದರು. ಆ ಸಿನಿಮಾದ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಅದರಲ್ಲಿ ಶಾರುಖ್ ಖಾನ್ ಗೇ ಪಾತ್ರದಲ್ಲಿ ನಟಿಸುತ್ತಿದ್ದು, ಅದರ ವೀಡಿಯೋ ಈಗ ವೈರಲ್ ಆಗಿದೆ.

Tap to resize

Latest Videos

undefined

ಶಾರುಖ್​ ದರ್ಶನಕ್ಕಾಗಿ ಐದು ವಾರದಿಂದ ಮನೆಮುಂದೆ 'ತಪಸ್ಸು' ಮಾಡ್ತಾ ಇದ್ದಾನೀತ! ನಟ ಪ್ರತ್ಯಕ್ಷ ಆಗ್ತಾನಾ?

ಈ ಚಲನಚಿತ್ರವು ಆದರ್ಶವಾದಿಯಾದ ವಿದ್ಯಾರ್ಥಿ ಆನಂದ್ ಗ್ರೋವರ್ / ಅನ್ನಿ (ಅರ್ಜುನ್ ರೈನಾ) ಅವರ ಕಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ಆನಂದ್ ಗ್ರೋವರ್‌ ಅವರು ತಮ್ಮ ಅಧ್ಯಯನಕ್ಕಿಂತ ಹೆಚ್ಚಾಗಿ ಭಾರತದ ಸಮಸ್ಯೆಗಳಿಗೆ ರಾಮರಾಜ್ಯವೇ ಪರಿಹಾರ ಎಂಬಂತಹ ಕನಸು ಮಾಡುತ್ತಾರೆ. ಈ ಸಿನಿಮಾದಲ್ಲಿ ಲೇಖಕಿ ಅರುಂಧತಿ ರಾಯ್‌ ಕೂಡ ಆನಂದ್‌ನ ಗೆಳತಿಯಾಗಿ  ಬೋಹೀಮಿಯನ್ ರಾಧಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ರೋಷನ್ ಸೇಠ್, ರಿತುರಾಜ್ ಸಿಂಗ್ ಮತ್ತು ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮನೋಜ್ ಬಾಜಪೇಯಿ ಕೂಡ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

 ಅನ್ನಿ ಗಿವ್ಸ್ ಇಟ್ ದೋಸ್ ಒನ್ಸ್ , ಈ ಸಿನಿಮಾವನ್ನು ಅರುಂಧತಿ ರಾಯ್ ಅವರ ಮಾಜಿ ಪತಿ ಪ್ರದೀಪ್ ಕಿಶನ್ ನಿರ್ದೇಶಿಸಿದ್ದು, ಈ ಸಿನಿಮಾವೂ ಎರಡು  ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿತ್ತು.  ಒಂದು ಚಿತ್ರಕಥೆಗಾಗಿ ಹಾಗೂ ಇಂಗ್ಲೀಷ್‌ನಲ್ಲಿ ನಿರ್ಮಾಣವಾದ ತುಂಬಾ ವಿಶಿಷ್ಟವಾದ ಸಿನಿಮಾ ಎಂಬ ಕಾರಣಕ್ಕೆ ಇನ್ನೊಂದು ಪ್ರಶಸ್ತಿ ಸಿಕ್ಕಿದೆ. 1989ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾವೂ 1970ರ ದಶಕದ ದೆಹಲಿಯಲ್ಲಿನ ವಿದ್ಯಾರ್ಥಿ ಜೀವನದ ಬಗ್ಗೆ ಒಂದು ಹಿನ್ನೋಟವನ್ನು ನೀಡಿತ್ತು. 

ಕಿಂಗ್ ಖಾನ್ ಅಳಿಯ ಆಗ್ತಾರಾ ಅಗಸ್ತ್ಯ ನಂದಾ: ಮಗನ ಗರ್ಲ್‌ಫ್ರೆಂಡ್‌ ಫೋಟೋಗೆ ಶ್ವೇತಾ ಬಚ್ಚನ್ ಕಾಮೆಂಟ್ ವೈರಲ್

ಈ ಸಿನಿಮಾ ಬಿಡುಗಡೆಯಾಗುವುದಕ್ಕೆ ಒಂದು ವರ್ಷ ಮೊದಲು ಶಾರುಖ್ ಖಾನ್ ಟಿವಿ ಸೀರಿಯಲ್‌ಗಳ ಮೂಲಕ ಮನೋರಂಜನಾ ಕ್ಷೇತ್ರಕ್ಕೆ ಕಾಲಿರಿಸಿದ್ದರು. ಫೌಜಿ ಹೆಸರಿನ ಪ್ರಸಿದ್ಧ ಟಿವಿ ಸೀರಿಯಲ್‌ನಲ್ಲಿ ಕಾಣಿಸಿಕೊಂಡ ಶಾರುಕ್ ಟಿವಿ ಸೀರಿಯಲ್‌ಗಳಲ್ಲಿ ಸಣ್ಣ ಪುಟ್ಟ ರೋಲ್ ಮಾಡುತ್ತಿದ್ದರು. ಉಮೀದ್ ಮತ್ತು ವಾಗ್ಲೆ ಕಿ ದುನಿಯಾದಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡ ಶಾರುಖ್ ನಂತರ  ಅಜೀಜ್ ಮಿರ್ಜಾ ಅವರ ಸರ್ಕಸ್‌ನಲ್ಲಿ ನಾಯಕನಾಗಿ ನಟಿಸಿದ್ದರು.

ಆದರೆ ಶಾರುಖ್‌ ಖಾನ್ ಇಂದು ವಿಶ್ವದ ಅತಿದೊಡ್ಡ ಚಲನಚಿತ್ರ ತಾರೆಗಳಲ್ಲಿ ಒಬ್ಬರಾಗಿದ್ದಾರೆ ಬರೀ ಇಷ್ಟೇ ಅಲ್ಲ ಉದ್ಯಮ ಲೋಕದಲ್ಲಿಯೂ ಅವರು ಸಾಕಷ್ಟು ಸಾಧನೆ ಮಾಡಿದ್ದು, ಅವರ ಮಾಲೀಕತ್ವದ ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್‌ ಈ ಬಾರಿಯ ಐಪಿಎಲ್ ಚಾಂಪಿಯನ್ ಆಗಿದೆ. ಇದರ ಜೊತೆಗೆ ಅವರ ಸಿನಿಮಾ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಕೂಡ ಉದ್ಯಮ ಲೋಕದಲ್ಲಿ ಹೆಸರು ಮಾಡಿದೆ. ಇನ್ನು ಅವರ ಇತ್ತೀಚಿನ ಸಿನಿಮಾಗಳ ಬಗ್ಗೆ ಹೇಳುವುದಾದರೆ ಅವರು ಮುಂಬರುವ ಕಿಂಗ್ ಸಿನಿಮಾದ ಕೆಲಸದಲ್ಲಿ ಈಗ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಪುತ್ರಿ ಸುಹಾನಾ ಖಾನ್ ಕೂಡ ಅಪ್ಪನ ಜೊತೆ ನಟಿಸುತ್ತಿದ್ದಾರೆ. 


 

click me!