
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್(Shah Rukh Khan) ಅನೇಕ ವರ್ಷಗಳ ಬಳಿಕಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಸಿನಿಮಾ ಮಾಡುವುದನ್ನೆ ನಿಲ್ಲಿಸಿದ್ದರು. ಝೀರೋ ಸಿನಿಮಾ ಬಳಿಕ ಶಾರುಖ್ ಮತ್ತೆ ತೆರೆಮೇಲೆ ಬಂದಿಲ್ಲ. ಸುಮಾರು ನಾಲ್ಕು ವರ್ಷಗಳ ಬಳಿಕ ಶಾರುಖ್ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಇದೀಗ ಶಾರುಖ್ ಬಳಿ ಅನೇಕ ಸಿನಿಮಾಗಳಿವೆ. ಈಗಾಗಲೇ ಪಠಾಣ್(Pathan) ಸಿನಿಮಾದ ಚಿತ್ರೀಕರಣ ಮುಗಿಸಿರುವ ಶಾರುಖ್ ಮುಂದಿನ ಸಿನಿಮಾಗೆ ತಯಾರಾಗಿದ್ದಾರೆ. ಈ ನಡುವೆ ಪಠಾಣ್ ಚಿತ್ರೀಕರಣ ಮುಗಿಸಿದ ಖುಷಿಗೆ ಶಾರುಖ್ ಪಠಾಣ್ ಟೀಂಗೆ ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ.
ಶಾರುಖ್ ತನ್ನ ಕೈಯಾರೆ ಪ್ರೀತಿಯಿಂದ ಬರೆದ ಪತ್ರವನ್ನು ಸಹಾಯಕ ನಿರ್ದೇಶಕ ಅಭಿಷೇಕ್ ತಿವಾರಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಪತ್ರಕ್ಕೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಂದಹಾಗೆ ಶಾರುಖ್ ಪತ್ರದಲ್ಲಿ, 'ಪಠಾಣ್ ಸಿನಿಮಾಗಾಗಿ ಧನ್ಯವಾದಗಳು ಅಭಿಷೇಕ್. ನಮಗೆಲ್ಲರಿಗೂ ಎಂಥ ಅದ್ಭುತವಾದ ಅನುಭವ, ಅದರಲ್ಲೂ ನನಗೆ ತುಂಬಾ ವಿಶೇಷವಾಗಿತ್ತು. ಕಠಿಣ ಶ್ರಮ, ದಕ್ಷತೆ, ನಗು ತುಂಬಾ ಮೆಚ್ಚುಗೆಯಾಗಿದೆ. ಸಿನಿಮಾದಲ್ಲಿ ನಿಮಗೆ ಉತ್ತಮ ಭವಿಷ್ಯವಿದೆ. ಮಿಸ್ ಯು' ಎಂದು ಬರೆದಿದ್ದಾರೆ.
ಶಾರುಖ್ ಮನೆಯಲ್ಲಿ ಸೌದಿ ಮಿನಿಸ್ಟರ್, ಬಾಲಿವುಡ್ ಸ್ಟಾರ್ಸ್ ಭೇಟಿ; ಫೋಟೋ ವೈರಲ್
ಅನೇಕ ವರ್ಷಗಳ ಬಳಿಕ ಮೊಲ ಸಿನಿಮಾದ ಚಿತ್ರೀಕರಣ ಮುಗಿಸಿರುವ ಸಂತಸದಲ್ಲಿದ್ದಾರೆ ಶಾರುಖ್. ಅಂದಹಾಗೆ ಕಳೆದ ತಿಂಗಳು ಶಾರುಖಅ ಅವರ ಪಠಾಣ್ ಸಿನಿಮಾದ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸ್ಪೇನ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಶಾರುಖ್ ಮತ್ತು ತಂಡದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಶಾರುಖ್ ಖಾನ್ ಅBರ ಲುಕ್ ಅಭಿಮಾನಿಗಳು ಬೆರಗಾಗುವಂತೆ ಮಾಡಿತ್ತು. ಶರ್ಟ್ ಲೆಸ್ ಆಗಿ ಬೇರ್ ಬಾಡಿಯಲ್ಲಿ ಕಾಣಿಸಿಕೊಂಡಿದ್ದ ಶಾರುಖ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಅಂದಹಾಗೆ ಶಾರುಖ್ ಪಠಾಣ್ ಸಿನಿಮಾದಲ್ಲಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಇಲ್ಲಿ ಯಾವುದೂ ಶಾಶ್ವತವಲ್ಲ; ಶಾರುಖ್, ಸಲ್ಮಾನ್ ಗೆ ಹೋಲಿಸಿದ್ದಕ್ಕೆ ಯಶ್ ಪ್ರತಿಕ್ರಿಯೆ
ಚಿತ್ರಕ್ಕಾಗೆ ಶಾರುಖ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ. ದೇಹ ಹುರಿಗೊಳಿಸಿ 8 ಪ್ಯಾಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಪೇನ್ ಚಿತ್ರೀಕರಣ ವೇಳೆ ಶಾರುಖ್ ಅವರ 8 ಪ್ಯಾಕ್ ಬಾಡಿ ರಿವೀಲ್ ಆಗಿತ್ತು. ಇನ್ನು ಚಿತ್ರದಲ್ಲಿ ಶಾರುಖ್, ನಟಿ ದೀಪಿಕಾ ಪಡುಕೋಣೆ(Deepika Padukone) ಜೊತೆ ನಟಿಸಿದ್ದಾರೆ. ದೀಪಿಕಾ ಫೋಟೋಗಳು ಸಹ ವೈರಲ್ ಆಗಿತ್ತು. ಬಿಕಿನಿಯಲ್ಲಿ ಮಿಂಚಿದ್ದ ದೀಪಿಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದ್ದವು. ಅಂದಹಾಗೆ ಸಿದ್ಧಾರ್ಥ್ ನಿರ್ದೇಶನದ ಪಠಾಣ್ ಸಿನಿಮಾ ಮುಂದಿನ ವರ್ಷ ಜನವರಿ 25 ರಂದು ತೆರೆಗೆ ಬರಲು ಸಿದ್ಧವಾಗಿದೆ. ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿದ್ದಾರೆ. ಸಲ್ಮಾನ್ ಖಾನ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.