
ರಿಯಲ್ ಸ್ಟಾರ್ ಉಪೇಂದ್ರ(Real Star Upendra) ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಮಿಂಚಿದ ಸೂಪರ್ ಸ್ಟಾರ್. 90 ದಶಕದಲ್ಲಿ ರಿಯಲ್ ಸ್ಟಾರ್ ತೆಲುಗಿನಲ್ಲೂ ಪ್ರಸಿದ್ಧ ಪಡೆದಿದ್ದರು. ಉಪೇಂದ್ರ ಅವರ ಎ ಮತ್ತು ಉಪೇಂದ್ರ ಸಿನಿಮಾಗಳು ತೆಲುಗಿನಲ್ಲೂ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಟಾಲಿವುಡ್ ನಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಮತ್ತೆ ರಿಯಲ್ ಸ್ಟಾರ್ ತೆಲುಗು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಐದು ವರ್ಷದ ಬಳಿಕ ಮತ್ತೆ ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ ರಿಯಲ್ ಸ್ಟಾರ್. ವರುಣ್ ತೇಜ್ ನಟನೆಯ ಗಣಿ(Gani) ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಏಪ್ರಿಲ್ 8ರಂದು ಬಿಡುಗಡೆಯಾಗಿದೆ.
ಮತ್ತೆ ತೆಲುಗು ಪ್ರೇಕ್ಷಕರ ಮುಂದೆ ಹೋಗಿರುವ ರಿಯಲ್ ಸ್ಟಾರ್ ಮೆಗಾಸ್ಟಾರ್ ಚಿರಂಜೀವಿ(Chiranjeevi) ಅವರಿಗೆ ಸಿನಿಮಾ ನಿರ್ದೇಶನ ಮಾಡುವ ಸಿಕ್ಕಿದ್ದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಆ ಕಾಲದಲ್ಲೇ ಉಪೇಂದ್ರ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ನಿರ್ದೇಶನ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದರು, ಆದರೆ ಆ ಸಿನಿಮಾ ಸೆಟ್ಟೇರಲೇ ಇಲ್ಲ. ಇದು ಇಂದಿಗೂ ಬೇಸರವಿದೆ ಎಂದು ರಿಯಲ್ ಸ್ಟಾರ್ ಬಹಿರಂಗ ಪಡಿಸಿದ್ದಾರೆ. ಗಣಿ ಸಿನಿಮಾದ ಪ್ರಿ ರಿಲೀಸ್ ಈವೆಂಟ್ ನಲ್ಲಿ ಮಾತನಾಡಿದ ರಿಯಲ್ ಸ್ಟಾರ್ ಚಿರಂಜೀವಿ ಅವರಿಗೆ ಸಿನಿಮಾ ಮಾಡಬೇಕಿದ್ದ ಅವಕಾಶ ಕೈತಪ್ಪಿ ಹೋದ ಬಗ್ಗೆ ಬಹಿರಂಗ ಪಡಿಸಿದ್ದಾರೆ.
Upendra: ಮಹೇಶ್ ಬಾಬು ಅಣ್ಣನಾಗ್ತಾರಾ ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್?
1997ರಲ್ಲಿ ಉಪೇಂದ್ರ ನಿರ್ದೇಶನದ ರಾಜಶೇಖರ್ ಜೊತೆಗಿನ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಳಿಕ ಉಪೇಂದ್ರ ಅವರಿಗೆ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಸಿನಿಮಾ ನಿರ್ದೇಶನ ಮಾಡಬೇಕಿತ್ತು. 'ನೀವು ನಂಬಿತ್ತೀರಾ ಇಲ್ವೋ ಅಶ್ವಿನಿ ದತ್ ಅವರ ನಿರ್ಮಾಣದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಸಿನಿಮಾ ನಿರ್ದೇಶನ ಮಾಡಲು ನನಗೆ ಅವಕಾಶ ಸಿಕ್ಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ನನ್ನ ಅದೃಷ್ಟ ಸರಿ ಇರ್ರಿಲ್ಲ ಅಂತ ಕಾಣುತ್ತೆ. ಈ ಬಗ್ಗೆ ನನಗೆ ಈಗಲೂ ಬೇಸರವಿದೆ' ಎಂದು ಹೇಳಿದ್ದಾರೆ.
ಬಳಿಕ ಉಪೇಂದ್ರ ಅವರು ತೆಲುಗಿನಲ್ಲಿ ಮೆಗಾಸ್ಟಾರ್ ಸಹೋದರ ನಾಗಬಾಬು ಅವರ ಓಕೆ ಮಾಟ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ 2000ರಲ್ಲಿ ಬಿಡುಗಡೆಯಾಯಿತು. ಬಳಿಕ ಅಲ್ಲು ಅರ್ಜುನ್ ಜೊತೆ ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಮೆಗಾಸ್ಟಾರ್ ಕುಟುಂಬದವರ ಜೊತೆ ಸಿನಿಮಾ ಮಾಡಿದ ಸಂತಸವನ್ನು ವ್ಯಕ್ತಪಡಿಸಿದರು. ಇದೀಗ ಮತ್ತೆ ಮೆಗಾಸ್ಟಾರ್ ಕುಟುಂಬದ ಜೊತೆಯೇ ಗಣಿ ಸಿನಿಮಾ ಮಾಡಿರುವ ಬಗ್ಗೆ ಮಾತನಾಡಿ, ನನ್ನನ್ನು ತೆಲುಗು ಜನರಿಗೆ ನಿರಂತರವಾಗಿ ಪರಿಚಯ ಮಾಡಿಸುತ್ತಿರುವ ಮೆಗಾ ಕುಟುಂಬದ ನಾಯಕರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.
Upendra: 'ಕಬ್ಜ' ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಚಂದ್ರು ಖಡಕ್ ವಾರ್ನಿಂಗ್!
ರಿಯಲ್ ಸ್ಟಾರ್ ಉಪೇಂದ್ರ ಕನ್ನಡ ಸಿನಿಮಾಗಳ ಜೊತೆಗೆ ಆಗಾಗ ತೆಲುಗಿನಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಸದ್ಯ ಕನ್ನಡದಲ್ಲಿ ರಿಯಲ್ ಸ್ಟಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟನೆ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಉಪ್ಪಿ ನಿರ್ದೇಶನದ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಕನ್ನಡದಲ್ಲಿ ಉಪೇಂದ್ರ ಹೋಮ್ ಮಿಸ್ಟರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಜೊತೆಗೆ ಬುದ್ದಿವಂತ, ಲಗಾಮ್, ತ್ರಿಶೂಲಮ್ ಹಾಗೂ ಕಬ್ಜ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿದೆ. ರೆಟ್ರೋ ಶೈಲಿಯ ಸಿನಿಮಾ ಇದಾಗಿದ್ದು ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.