ಯುವಕನಂತೆ ಮೇಕಪ್​ ಮಾಡ್ಕೊಂಡು ಸುಸ್ತಾದ್ರಾ ಶಾರುಖ್? ಮುಂದಿನ ಚಿತ್ರದ ಹೇಳಿಕೆಗೆ ಫ್ಯಾನ್ಸ್​ ಬೇಸರ!

By Suvarna News  |  First Published Dec 24, 2023, 3:45 PM IST

ಯುವಕನಂತೆ ಮೇಕಪ್​ ಮಾಡ್ಕೊಂಡು ಸುಸ್ತಾದ್ರಾ ಶಾರುಖ್ ಖಾನ್​? ತಮ್ಮ ಮುಂಬರುವ ಚಿತ್ರದ ಮಾಹಿತಿ ನೀಡುವಾಗ ಅವರು ಹೇಳಿದ ಮಾತಿಗೆ  ಫ್ಯಾನ್ಸ್​ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆಗಿದ್ದೇನು? 
 


ನಟ ಶಾರುಖ್​ ಖಾನ್​ ಅವರಿಗೆ ಈಗ 58 ವರ್ಷ ವಯಸ್ಸು. ಕಳೆದ ನವೆಂಬರ್​ 2ರಂದು 58 ವರ್ಷ ಪೂರ್ತಿಗೊಳಿಸಿರುವ ನಟ, 59ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ವಯಸ್ಸು ಎನ್ನುವುದು ದೇಹಕ್ಕೇ ಹೊರತು ಮನಸ್ಸಿಗೆ ಅಲ್ಲ ಎನ್ನುವ ಕೆಲವೇ  ಕೆಲವು ನಟರ ಪೈಕಿ ಬಾಲಿವುಡ್​ ಬಾದ್​ಶಾಹ್​ ಕೂಡ ಒಬ್ಬರು. ವಯಸ್ಸು 58 ಆದರೂ ಅವರು ಫಿಟ್​ ಆ್ಯಂಡ್ ಫೈನ್​ ಆಗಿದ್ದಾರೆ. ಯುವಕರನ್ನೂ ನಾಚಿಸುವಂತೆ ಇಂದಿಗೂ ನಾಯಕನಾಗಿಯೇ ಮಿಂಚುತ್ತಿದ್ದಾರೆ. ನಿನ್ನೆ-ಮೊನ್ನೆ ಬಾಲಿವುಡ್​ಗೆ ಎಂಟ್ರಿ ಕೊಟ್ಟ 20 ಪ್ಲಸ್​ ಯುವತಿಯರ ಜೊತೆಗೂ 25ರ ಯುವಕನಂತೆ ನಟಿಸುವ ಕಲೆಯೂ ಶಾರುಖ್​ಗೆ ಗೊತ್ತು. ಸ್ವಲ್ಪ ಮೇಕಪ್​ ಮಾಡಿಕೊಂಡು ಬಿಟ್ಟರಂತೂ ಇವರ ವಯಸ್ಸನ್ನು ಕಂಡುಹಿಡಿಯುವುದೇ ಕಷ್ಟ. ಹಲವು ನಾಯಕರು 50 ದಾಟುತ್ತಿದ್ದಂತೆಯೇ ಒಂದೋ ಚಿತ್ರರಂಗ ಬಿಡುತ್ತಾರೆ, ಇಲ್ಲವೇ ಅಪ್ಪ, ಅಣ್ಣನ ರೋಲ್​ ಮಾಡುತ್ತಾರೆ. ಆದರೆ ಕೆಲವು ನಟರು ಮಾತ್ರ ನಾಯಕನಾಗಿಯೇ ಇಂದಿಗೂ ಮುಂದುವರೆಯುತ್ತಿದ್ದು ಅದರಲ್ಲಿ ಶಾರುಖ್​ ಕೂಡ ಒಬ್ಬರು.

2023 ವರ್ಷವು ಶಾರುಖ್ ಖಾನ್‌ಗೆ ಬಹಳ ವಿಶೇಷವಾಗಿದೆ. ಅವರು ತಮ್ಮ ನಟನೆಯ ಮೂಲಕ ಮಾತ್ರ ಜನರ ಹೃದಯವನ್ನು ಆಳುತ್ತಾರೆ. ಅವರು ಜನರಿಂದ ಎಷ್ಟು ಪ್ರೀತಿಯನ್ನು ಪಡೆಯುತ್ತಾರೆ ಎಂದರೆ ಅವರ ಚಿತ್ರಗಳು ಬಿಡುಗಡೆಯಾದ ತಕ್ಷಣ ಹಿಟ್ ಲಿಸ್ಟ್‌ಗೆ ಸೇರುತ್ತವೆ.  ಪಠಾಣ್​  ಮತ್ತು ಜವಾನ್​ ಭರ್ಜರಿ ಯಶಸ್ಸಿನ ಬಳಿಕ ಹ್ಯಾಟ್ರಿಕ್​ ಹೀರೋ ಆಗುವ ನಿಟ್ಟಿನಲ್ಲಿ ಶಾರುಖ್​ ಅವರ ಡಂಕಿ ಚಿತ್ರ ರಿಲೀಸ್​  ಆಗಿದೆ.   ಚಿತ್ರದ ಮುಂಗಡ ಬುಕ್ಕಿಂಗ್ ಶುರುವಾದಾಗ  ಡಂಕಿ ದಾಖಲೆ ಬರೆದಿತ್ತು.  ಇದನ್ನು  ನೋಡಿದ ನಂತರ, ಶಾರುಖ್ ಅವರ ಕೊನೆಯ ಎರಡು ಚಿತ್ರಗಳಾದ ಪಠಾಣ್ ಮತ್ತು ಜವಾನ್‌ನಂತೆ ಡಿಂಕಿ ಕೂಡ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿಯಲಿದೆ ಎಂದು ಊಹಿಸಲಾಗಿತ್ತು.  

Tap to resize

Latest Videos

ಮಾಡೋದೆಲ್ಲಾ ಮಾಡಿ ಕೈಕೊಡ್ತಾಳಾ? ನಟಿ ಜಾಕ್ವೆಲಿನ್​ ವಿಡಿಯೋ ಬಹಿರಂಗ ಮಾಡ್ತೇನೆಂದು ಜೈಲಿನಿಂದ್ಲೇ ಗುಡುಗಿದ ಸುಕೇಶ್​!

ಶಾರುಖ್ ಖಾನ್ ಅವರ ಡಂಕಿ  ತನ್ನ ಮುಂಗಡ ಬುಕ್ಕಿಂಗ್‌ನ ಮೊದಲ ದಿನದಲ್ಲಿ ಭಾರತದಾದ್ಯಂತ 1 ಲಕ್ಷ 45 ಸಾವಿರದ 384 ಟಿಕೆಟ್‌ಗಳನ್ನು ಮಾರಾಟ ಮಾಡಿತ್ತು. ಇದರೊಂದಿಗೆ ಚಿತ್ರ ಬಿಡುಗಡೆಗೂ ಮುನ್ನವೇ 4.49 ಕೋಟಿ ಬ್ಯುಸಿನೆಸ್ ಮಾಡಿತ್ತು. ಶಾರುಖ್ ಖಾನ್ ಮೊದಲ ದಿನವೇ ದಾಖಲೆಯ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಈ ಅಂಕಿ ಅಂಶಗಳು ತೋರಿಸಿತ್ತು.  ‘ಡಂಕಿ’ ಸಿನಿಮಾ ಡಿಸೆಂಬರ್ 21ರಂದು ಬಿಡುಗಡೆ ಆಯಿತು. ಈ ಸಿನಿಮಾಗೆ ರಾಜ್​ಕುಮಾರ್​ ಹಿರಾನಿ ನಿರ್ದೇಶನ ಮಾಡಿದ್ದಾರೆ. ತಾಪ್ಸಿ ಪನ್ನು ಅವರು ಶಾರುಖ್​ ಖಾನ್​ಗೆ ಜೋಡಿಯಾಗಿ ನಟಿಸಿದ್ದಾರೆ. ಅಂದುಕೊಂಡ ಮಟ್ಟಕ್ಕೆ ಈ ಸಿನಿಮಾ ಕಲೆಕ್ಷನ್​ ಮಾಡಿಲ್ಲ. ಮೂರು ದಿನಕ್ಕೆ ಅಂದಾಜು 75 ಕೋಟಿ ರೂಪಾಯಿ ಗಳಿಕೆ ಮಾಡಿದೆ. ‘ಸಲಾರ್​’ ಸಿನಿಮಾದಿಂದ ಭಾರಿ ಪೈಪೋಟಿ ಎದುರಿಸುತ್ತಿದೆ. 

 ಊಹೆಯಂತೆ ಡಂಕಿ ಸೌಂಡ್​ ಮಾಡುತ್ತಿಲ್ಲವಾದರೂ  ಶಾರುಖ್​ ಅವರು ತಮ್ಮ  ಮುಂದಿನ ಸಿನಿಮಾ ಬಗ್ಗೆ ಸುಳಿವು ಕೊಟ್ಟಿದ್ದಾರೆ. ‘ಮಾರ್ಚ್​ ಮತ್ತು ಏಪ್ರಿಲ್​ ತಿಂಗಳಲ್ಲಿ ನನ್ನ ಮುಂದಿನ ಸಿನಿಮಾದ ಶೂಟಿಂಗ್​ ಶುರು ಆಗಲಿದೆ ಎಂದಿರುವ ಅವರು, ಹೇಳಿರುವ ಒಂದು ಮಾತು ಫ್ಯಾನ್ಸ್​ಗೆ ಶಾಕ್​ ನೀಡಿದೆ. ಅದೇನೆಂದರೆ, ಅವರು ಸಂದರ್ಶನದಲ್ಲಿ ನನ್ನ ವಯಸ್ಸಿಗೆ ಸರಿ ಎನಿಸುವಂತಹ ಪಾತ್ರವನ್ನು ಮಾಡುತ್ತೇನೆ’ ಎಂದಿದ್ದಾರೆ. ಇದರಿಂದ ಹಾಗಿದ್ದರೆ ನಟ ನಾಯಕನಾಗಿ ಕಾಣಿಸಿಕೊಳ್ಳುವುದಿಲ್ಲವೆ ಎಂಬ ಟೆನ್ಷನ್​ ಅಭಿಮಾನಿಗಳಲ್ಲಿ ಶುರುವಾಗಿದೆ.  

ಸದ್ಯಕ್ಕೆ ಶಾರುಖ್​ ಅವರು ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.  ಆದರೆ ಯುವಕನಂತೆ ಕಾಣಿಸುವುದಿಲ್ಲ ಎಂಬ ಅವರ ಮಾತು ಹಲವರಿಗೆ ನೋವು ತಂದಿದೆ. ಸದಾ ತಮ್ಮ ನಟನನ್ನು ನಾಯಕನನ್ನಾಗಿಯೇ ನೋಡಲು ಬಯಸಿರುವ ಅಭಿಮಾನಿಗಳು ಈಗ ವಯಸ್ಸಾದ ಪಾತ್ರವನ್ನು ನೋಡುವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. 58 ಈ ಪ್ರಾಯದ ವ್ಯಕ್ತಿಯ ಪಾತ್ರದಲ್ಲಿ ಶಾರುಖ್​ ಹೇಗೆ ಕಾಣಿಸಿಕೊಳ್ಳಬಹುದು? ಕಥೆ ಯಾವ ರೀತಿ ಇರಬಹುದು ಎಂಬ ಕುರಿತು ಇದೀಗ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಶಾರುಖ್​ ಅವರು ತಮ್ಮ ಮುಂದಿನ ಚಿತ್ರದ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದೇ ಕಾರಣಕ್ಕೆ ಎಲ್ಲರ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.  

ಬೆಡ್​ರೂಂ, ರೇಪ್​ ಉಸಾಬರಿಗೆ ಹೋಗಿ ಹೈಕೋರ್ಟ್​ನಿಂದ ಒಂದು ಲಕ್ಷ ದಂಡ ಹಾಕಿಸ್ಕೊಂಡ ಖ್ಯಾತ ನಟ ಖಾನ್​!
 

click me!