ಸಲಾರ್ ಮುಂದೆ ಮಂಡಿಯೂರಿದ ಶಾರುಖ್ ಖಾನ್ ಡಂಕಿ; ಸೌತ್ ಸಿನಿಮಾ ಹವಾ ನೋಡಿ ಕಂಗೆಟ್ಟ ಬಾಲಿವುಡ್!

By Shriram Bhat  |  First Published Dec 23, 2023, 8:03 PM IST

ಸಾಲು ಸಾಲು ಸೋಲಿನಿಂದ ಹತಾಶರಾಗಿದ್ದ ತೆಲುಗು ಸೂಪರ್ ಸ್ಟಾರ್ ಪ್ರಭಾಸ್ ಅವರಿಗೆ ಪ್ರಶಾಂತ್ ನೀಲ್ ಜೀವ ತುಂಬಿದ್ದಾರೆ. ಬಾಲಿವುಡ್ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿದ ಸಲಾರ್.


ಬಾಲಿವುಡ್ ಸಿನಿಮಾಗಳ ರೆಕಾರ್ಡ್ ಬ್ರೇಕ್ ಮಾಡಿದ ಸಲಾರ್. ಫಸ್ಟ್ ಡೇ ಕಲೆಕ್ಷನ್ ನೋಡಿ ಥಂಡಾ ಹೊಡೆದ ಬಾಲಿವುಡ್ ಮಂದಿ. ಬರೊಬ್ಬರಿ 6 ವರ್ಷಗಳ ನಂತರ ಬಾಹುಬಲಿ ಪ್ರಭಾಸ್ ಮತ್ತೆ ವಾಪಸ್ ಬಂದಿದ್ದಾರೆ. ಸಾಲು ಸಾಲು ಸೋಲಿನಿಂದ ಹತಾಶರಾಗಿದ್ದ ತೆಲುಗು ಸೂಪರ್ ಸ್ಟಾರ್ ಪ್ರಭಾಸ್ ಅವರಿಗೆ ಪ್ರಶಾಂತ್ ನೀಲ್ ಜೀವ ತುಂಬಿದ್ದಾರೆ. ಸಾಲು ಸಾಲು ಸಕ್ಸಸ್ ಸಿನಿಮಾಗಳನ್ನ ನೀಡಿರೋ ಹೊಂಬಾಳೆ ಫಿಲ್ಮಂ ಸಲಾರ್‌ಗೆ 100 ಕೋಟಿ ಬಂಡವಾಳ ಹೂಡಿ, ಸಲಾರ್ ರಿಲೀಸ್ ಮಾಡಿದ್ರು.

ಕೆಜಿಎಫ್ ಲೆವಲ್ನಲ್ಲಿ ಹೈಪ್ ಸೃಷ್ಟಿಸಿದ್ದ ಸಲಾರ್, ಫಸ್ಟ್ ಡೇ ಎಷ್ಟು ದುಡಿದಿದೆ ಅನ್ನೋದು ಕುತೂಹಲದ ಪ್ರಶ್ನೆಯಾಗಿದೆ. ಹಾಗಾದ್ರೆ ಸಲಾರ್ ಸಿನಿಮಾ ಫಸ್ಟ್ ಡೇ ಕಲೆಕ್ಷನ್ ಎಷ್ಟು ಅನ್ನೋದನ್ನ ಹೇಳ್ತಿವಿ ನೋಡಿ. ಸಲಾರ್ ಮೊದಲ ದಿನ ಗಳಿಸಿದ್ದು ಬರೋಬ್ಬರಿ 95 ಕೋಟಿಗೂ ಹೆಚ್ಚು. ಸಲಾರ್ ಸಿನಿಮಾಗೆ ಟಕ್ಕರ್ ಕೊಡೊಕೆ ಬಾಲಿವುಡ್ನ ಡಂಕಿ ಸಿನಿಮಾ ರಿಲೀಸ್ ಆಗಿತ್ತು. ಶಾರೂಖ್ ಖಾನ್ರ ಮೊದ್ಲೆ 2 ಹಿಟ್ ಸಿನಿಮಾ ಕೊಟ್ಟಿದ್ದವರ ಮುಂದೆ ಸಲಾರ್ ಸೋಲುತ್ತೆ ಅಂತ ಹೇಳಲಾಗಿತ್ತು, ಆದ್ರೆ ಸಲಾರ್ ಫಸ್ಟ್ ಡೇ 95 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡೋ ಮೂಲಕ, ಬಾಲಿವುಡ್ಗೆ ಸೌತ್ ಸಿನಿಮಾ ಶಾಕ್ ಕೊಟ್ಟಿದೆ. 

Tap to resize

Latest Videos

ಸಲಾರ್ ಸಿನಿಮಾ ಮೊದಲ ದಿನವೇ ಭರ್ಜರಿ ಬೂಸ್ಟ್ ಪಡೆದಿದ್ದು, ಆಂದ್ರ ಪ್ರದೇಶ ಮತ್ತು ತೆಲಂಗಾಣ 70 ಕೋಟಿ ಗಳಿಸಿದೆ.  ಕರ್ನಾಟಕದಲ್ಲಿ 12 ಕೋಟಿ, ಕೇರಳ- 5 ಕೋಟಿ ಗಳಿಸಿ, ಬಾಕ್ಸಾಫಿಸ್ನಲ್ಲಿ ರೆಕಾರ್ಡ್ ಬೆರೆದಿದೆ. ಇನ್ನು ಶಾರೂಖ್ ಖಾನ್ರ ಡಂಕಿ ಸಿನಿಮಾ ರಿಲೀಸ್ ಆಗಿ 3 ದಿನವಾದ್ರೂ, ಇನ್ನು 100 ಕೋಟಿ ದಾಟಿಲ್ಲ. ಡಂಕಿ ಕಲೆಕ್ಷನ್ 1st day- 30 ಕೋಟಿ, 2nd day- 22 ಕೋಟಿ, 3rd day- 25 ಕೋಟಿ, ಈ ಮೂಲಕ ಒಟ್ಟೂ 77 ಕೋಟಿ ಮಾತ್ರ ಗಳಿಸಿದೆ. 

ಮುಂಬೈನಲ್ಲಿ ಹೊಟೆಲ್ ವೇಟರ್ ಆಗಿದ್ದವನ ಮಗ ಬಾಲಿವುಡ್ ನಿರ್ಮಾಪಕ, ಸ್ಟಾರ್ ಡೈರೆಕ್ಟರ್!

ಈ ಮೊದಲು ಬಂದಿದ್ದ ಶಾರುಖ್ ಖಾನ್ ನಟನೆಯ ಸಿನಿಮಾಗಳಲ್ಲಿ, ಮೊದಲ ದಿನ ಪಠಾನ್- 57 ಕೋಟಿ, ಜವಾನ್- 75 ಕೋಟಿ ಹಾಗು ಅನಿಮಲ್- 64 ಕೋಟಿ ರೂ ಕಲೆಕ್ಷನ್ ಮಾಡಿದ್ದವು. ಈ ವರ್ಷದ ಅಂತ್ಯಕ್ಕೆ ಯವೇಲ್ಲಾ ಸಿನಿಮಾಗಳು ಫಸ್ಟ್ ಡೇ ಕಮ್ಮಿ ಗಳಿಸಿ, ಸಲಾರ್ ಮುಂದೆ ಮೊಂಡಿಯುರಿದ ಸಿನಿಮಾಗಳು ಯಾವವು ಅಂತ ನೋಡೋದಾದ್ರೆ, ಪಠಾನ್- 57 ಕೋಟಿ ಗಳಿಸಿತ್ತು.  ಜವಾನ್- 75 ಕೋಟಿ, ಅನಿಮಲ್- 64 ಕೋಟಿ ಗಳಿಸಿತ್ತು. ಆದ್ರೆ ಈ ಬಾಲಿವುಡ್ ಸಿನಿಮಾಗಳನ್ನ ಹಿಂದಿಕ್ಕಿ ಸಲಾರ್ ಬರೊಬ್ಬರಿ ಒಂದೇ ದಿನ 95 ಕೋಟಿ ಗಳಿಸಿ, ಹೊಸ ವರ್ಷಕ್ಕೆ ಡಬಲ್ ಬೋನಸ್ ಕೊಟ್ಟಿದೆ.

ಕಾರ್ಪೆಂಟರ್ ಆಗಿದ್ದವ ಗ್ಯಾಂಗ್‌ಸ್ಟರ್‌, ಬಳಿಕ ಬಾಲಿವುಡ್ ಫೈಟರ್; ಮಗ ಬಾಲಿವುಡ್ ಸೂಪರ್ ಸ್ಟಾರ್!

ಅದೇನೆ ಇರ್ಲಿ, 2023ರ ಅಂತ್ಯಕ್ಕೆ ಸಲಾರ್ ಸಿನಿಮಾ ಬಿಗ್ ಹಿಟ್ ಲಿಸ್ಟ್ನಲ್ಲಿ ಸೇರಿದ್ದು, ಮುಂದಿನ ವರ್ಷ ಮತ್ತೆ ನಾವೇ ಕಿಂಗ್ ಅಂತ ಬಾಲಿವುಡ್ಗೆ ವಾರ್ನ್ ಮಾಡಿದ್ದಾರೆ. ಯಾಕಂದ್ರೆ 2024ಕ್ಕೆ ಹೊಂಬಾಳೆ ಫಿಲ್ಮಂ ಅವರ ಕಾಂತಾರ ಸಿನಿಮಾ  ಜೊತೆಗೆ ಇನ್ನೂ ಹಲವು ಸಿನಿಮಾಗಳು ಬರಲಿದ್ದು, ಮುಂದಿನ ವರ್ಷವೂ ಸೌತ್ ಸಿನಿಮಾಗಳದ್ದೇ ದರ್ಬಾರ್ ಇರಲಿದೆ.  ಒಟ್ಟಿನಲ್ಲಿ, ಸೌತ್ ಟೀಮ್‌ನ ಸಲಾರ್ ಮುಂದೆ ಬಾಲಿವುಡ್‌ ಚಿತ್ರ ಡಂಕಿ ಮಂಕಾಗಿ ಮೂಲೆಯಲ್ಲಿ ಕೂತಿದೆ. 

click me!