Divya Bharati: ಸಾವಿನ ಜೊತೆಯೇ ಸುಟ್ಟು ಭಸ್ಮವಾದ ಮುದ್ದು ನಟಿ ಆ ರಹಸ್ಯ!

Published : Apr 05, 2023, 01:29 PM ISTUpdated : Apr 05, 2023, 03:34 PM IST
Divya Bharati: ಸಾವಿನ ಜೊತೆಯೇ ಸುಟ್ಟು ಭಸ್ಮವಾದ ಮುದ್ದು ನಟಿ ಆ ರಹಸ್ಯ!

ಸಾರಾಂಶ

19 ವರ್ಷಕ್ಕೆ ಹಿಟ್​ ಚಿತ್ರಗಳನ್ನು ನೀಡಿ ಎಲ್ಲರ ಮನದಲ್ಲಿ ಮನೆ ಮಾಡಿದ್ದ ನಟಿ ದಿವ್ಯಾ ಭಾರತಿ ಆ ಎಳೆ ವಯಸ್ಸಿನಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದರು. ಇಂದು ಈಕೆ ಸತ್ತು 30 ವರ್ಷ. ನಟ ಶಾರುಖ್​ ಹೇಳಿದ್ದೇನು?  

1992 ರಲ್ಲಿ ಬಂದ 'ದಿಲ್ ಆಶನಾ ಹೈ' ಮತ್ತು 'ದೀವಾನಾ' (Deewana) ಶಾರುಖ್ ಖಾನ್ ಅವರಿಗೆ ವಿಶೇಷವಾದ ಸಿನಿಮಾಗಳಾಗಿವೆ. ಈ ಎರಡೂ ಚಿತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಿದ್ದವು. ಅದರಲ್ಲಿ ಶಾರುಖ್ ಅವರು ಬಾಲಿವುಡ್​ನ ಮೋಸ್ಟ್​ ಬ್ಯೂಟಿಫುಲ್​ ನಟಿ ಎಂದೇ ಖ್ಯಾತರಾಗಿದ್ದ ಮುದ್ದು ಮೊಗದ ದಿವ್ಯಾ ಭಾರತಿ ಅವರೊಂದಿಗೆ ಕೆಲಸ ಮಾಡಿದ್ದರು.  ಆದರೆ 19 ವರ್ಷ ವಯಸ್ಸಿನಲ್ಲಿಯೇ ದಿವ್ಯಾ ನಿಗೂಢವಾಗಿ ಸಾವನ್ನಪ್ಪಿದಾಗ ಇಡೀ ಸಿನಿಮಾ ರಂಗವೇ ಬೆಚ್ಚಿಬಿದ್ದಿತ್ತು. 1993ರ ಏಪ್ರಿಲ್​ 5ರಂದು ನಟಿ ದಿವ್ಯಾ ನಿಗೂಢವಾಗಿಯೇ ಇಹಲೋಕ ತ್ಯಜಿಸಿದರು. 1992ರಲ್ಲಿ  ಖ್ಯಾತ ನಿರ್ಮಾಪಕ ಸಾಜಿದ್‌ ನಾಡಿಯಾದ್‌ವಾವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ, ಮದುವೆಯಾದ ಎರಡೇ ವರ್ಷಗಳಲ್ಲಿ ಸಾವನ್ನಪ್ಪಿದ್ದರು. ಏನೂ ಮಾತನಾಡದ ಸೂಜಿದ್‌ ಮೌನ ಅನೇಕ ಅನುಮಾಗಳಿಗೆ ಎಡೆ ಮಾಡಿಕೊಟ್ಟಿತ್ತು.   ಬಾಲ್ಕನಿಯಲ್ಲಿರುವ ಆಯಾ ತಪ್ಪಿ ಐದನೇ ಮಹಡಿಯಿಂದ ಬಿದ್ದು, ಮೃತಪಟ್ಟಿರುವುದಾಗಿ ಇಲ್ಲಿಯವರೆಗೂ ಹೇಳಿಕೊಂಡೇ ಬಂದಿದೆಯಾದರೂ ಕೆಲವು ಚಿತ್ರ ತಾರೆಯರ ಬಗೆಹರಿಯದ ಸಾವಿನ ರಹಸ್ಯದಂತೆ ದಿವ್ಯಾ ಭಾರತಿ (Divya Bharati) ಸಾವಿನ ರಹಸ್ಯ ಆಕೆಯೊಂದಿಗೆ ಸುಟ್ಟು ಭಸ್ಮವಾಗಿದೆ.

ಇಂದು ಅಂದರೆ ಏಪ್ರಿಲ್​ 5 ದಿವ್ಯಾ ಭಾರತಿ ಸಾವನ್ನಪ್ಪಿ 30 ವರ್ಷಗಳಾಗಿವೆ. ಆಕೆಯ ಜೊತೆ ಎರಡು ಚಿತ್ರಗಳಲ್ಲಿ ನಟಿಸಿದ್ದ ಶಾರುಖ್​ ಖಾನ್​ ಅಂದು ದಿವ್ಯಾ ಸತ್ತ ಸುದ್ದಿಯನ್ನು ಕೇಳಿದಾಗ ತಮಗಾಗಿದ್ದ ಅನುಭವವನ್ನು ಸಂದರ್ಶನವೊಂದರಲ್ಲಿ ಬಹಿರಂಗಗೊಳಿಸಿದ್ದಾರೆ. 1992ರಲ್ಲಿ ದೀವಾನಾ ಚಿತ್ರದ ಮೂಲಕ ಶಾರುಖ್​ ಎಂಟ್ರಿ ಕೊಟ್ಟಾಗ ಅವರಿಗೆ ನಾಯಕಿಯಾಗಿ ಸಿಕ್ಕಿದ್ದು, ದಿವ್ಯಾ ಭಾರತಿ. ಆಕೆಯೊಬ್ಬಳು ಅತ್ಯುತ್ತಮ ಸ್ನೇಹಿತೆ ಎಂದು ಶಾರುಖ್​ ಹೇಳಿಕೊಂಡಿದ್ದಾರೆ. 

Jayaprada Birthday: ಅಪ್ರತಿಮ ಸುಂದರಿ ಬಾಳಲ್ಲಿ ಬಿರುಗಾಳಿ- ಮದ್ವೆಯಾದ್ರೂ ಸಿಗಲಿಲ್ಲ ಪತ್ನಿಯ ಸ್ಥಾನಮಾನ!
 
'ದಿವ್ಯಾ ಅದ್ಭುತ ನಟಿಯಾಗಿದ್ದರು. ಎಲ್ಲಾ ಪಾತ್ರಗಳಿಗೂ ಜೀವ ತುಂಬುತ್ತಿದ್ದರು.  ‘ದೀವಾನಾ’ ಚಿತ್ರಕ್ಕೆ ಡಬ್ಬಿಂಗ್ ಮುಗಿಸಿ ಸೀ ರಾಕ್ ಹೋಟೆಲ್​ನಿಂದ ಹೊರಡುವಾಗ ದಿವ್ಯಾ ಎದುರಿಗೆ ಬಂದರು. ನಾನು ಹಲೋ ಹೇಳಿದೆ.  ನೀವು ಕೇವಲ ಉತ್ತಮ ನಟರಲ್ಲ, ಒಂದು ಅದ್ಭುತ ಕಲಾವಿದ ಎಂದು ಹೇಳಿದ್ದ ಆಕೆ ಬೈ ಬೈ ಹೇಳಿ ಹೋದರು. ಆದರೆ ಆ ಬೈ ಬೈ ಜೀವನಕ್ಕೆ ಹೇಳುತ್ತಿದ್ದ ವಿದಾಯ ಎಂದು ತಿಳಿದಾಗ ಆಘಾತದಿಂದ ಕುಸಿದು ಹೋದೆ' ಎಂದಿದ್ದಾರೆ ಶಾರುಖ್​.   'ಅಂದು ನಾನು ದೆಹಲಿಯ ಮನೆಯಲ್ಲಿ ಮಲಗಿದ್ದೆ. ಆಗ ‘ದೀವಾನ’ ಚಿತ್ರದ ‘ಐಸಿ ದೀವಾಂಗಿ...’ ಹಾಡು ಕೇಳುತ್ತಿದೆ. ಎಷ್ಟು ಸುಂದರ ಹಾಡುಗಳು ಎಂದು ಅದೇ ಹಾಡನ್ನು ಗುನುಗುತ್ತಿದ್ದೆ. ಅಷ್ಟರಲ್ಲಿಯೇ ದಿವ್ಯಾ ಸಾವಿನ ಸುದ್ದಿ ಬಂತು. ಇದು ಕನಸೋ ಅಥವಾ  ನಿಜವಾಗಿಯೂ ಈ ಸುದ್ದಿ ಬಂದಿದೆಯೋ ತಿಳಿಯದೇ ಗಲಿಬಿಲಿಗೊಂಡೆ.  ಏನೂ ಅರ್ಥವಾಗಲಿಲ್ಲ. ಅವರ ಜೊತೆ ಇನ್ನಷ್ಟು ಸಿನಿಮಾ ಮಾಡಬೇಕು ಅಂತ ಆಸೆ ಇತ್ತು, 1993ರಲ್ಲಿ ಬಂದ ‘ಕ್ಷತ್ರಿಯ’ ದಿವ್ಯಾ ಅವರ ಕೊನೆಯ ಸಿನಿಮಾ. ಅವರ ಸಾವಿನ ನಂತರ 3 ಚಿತ್ರಗಳು ಬಿಡುಗಡೆಯಾದವು. ಆ ರಾತ್ರಿ ಏನಾಯಿತೋ ಒಂದೂ ಗೊತ್ತಿಲ್ಲ. ಆದರೆ ದಿವ್ಯಾ ಸತ್ತಿದ್ದು ಮಾತ್ರ ನಿಜವಾಗಿತ್ತು' ಎಂದು ಶಾರುಖ್​ (Shahrukh Khan) ಭಾವುಕರಾದರು.

ಸುದ್ದಿಯ ಪ್ರಕಾರ, ಅಪಘಾತದ ದಿನ, ದಿವ್ಯಾ ಅವರು ತಮ್ಮ ಒಂದು ಚಿತ್ರೀಕರಣವನ್ನು ಮುಗಿಸಿ ಚೆನ್ನೈನಿಂದ ಹಿಂದಿರುಗಿದ್ದರು. ದಿವ್ಯಾ ಮರುದಿನ ಹೈದರಾಬಾದ್ ಶೂಟಿಂಗ್‌ಗೆ ಹೋಗಬೇಕಿತ್ತು. ಆದರೆ ಅವರ ಕಾಲಿನ ಗಾಯದಿಂದಾಗಿ ಶೂಟಿಂಗ್ ಅನ್ನು ಮುಂದೂಡಲಾಯಿತು. ದಿವ್ಯಾ ಸಾಜಿದ್ ನಾಡಿಯಾವಾಲಾ ಅವರನ್ನು ವಿವಾಹವಾಗಿದ್ದರು. ಅಪಘಾತದ ರಾತ್ರಿ ದಿವ್ಯಾ ಜೊತೆ ಸಾಜಿದ್ ಮತ್ತು ಫ್ಯಾಷನ್ ಡಿಸೈನರ್ ನೀತಾ ಲುಲ್ಲಾ ಪಾರ್ಟಿ ಮಾಡಿದ್ದಾರೆ. ದಿವ್ಯಾ ಕುಡಿದು ತನ್ನ ಬಾಲ್ಕನಿಯಲ್ಲಿ ಕುಳಿತಿದ್ದರು ಎನ್ನಲಾಗಿದೆ. ಅಲ್ಲಿ ಗ್ರಿಲ್ (Grill) ಇರಲಿಲ್ಲ, ದಿವ್ಯಾ ಎದ್ದೇಳಲು ಪ್ರಯತ್ನಿಸಿದ ತಕ್ಷಣ ಐದನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಆದರೆ ಪತಿ ಸಾಜಿದ್ ಸುತ್ತ ಅನುಮಾನ ಹುಟ್ಟುಕೊಂಡಿದ್ದವು. ನಂತರ ಅವರು ವಾರ್ದಾ ಎಂಬುವವರ ಜೊತೆ ಮದುವೆಯಾಗಿ ಸುಖವಾಗಿದ್ದಾರೆ. ಆದರೆ ದಿವ್ಯಾ ಸಾವು ಮಾತ್ರ ನಿಗೂಢವಾಗಿಯೇ ಉಳಿದಿದೆ. 

Varun Dhawan: ನಿಮ್​ ಹೆಂಡ್ತಿಗೂ ಕಿಸ್​ ಕೊಟ್ರೆ ಸುಮ್ಮನಿರ್ತೀರಾ? ನಟನ ವಿರುದ್ಧ ಕಿಡಿಕಿಡಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್