
ಅಪ್ರತಿಮ ಸುಂದರಿ ಎನಿಸಿಕೊಂಡ ನಟಿಯರಲ್ಲಿ ಒಬ್ಬರು ಬಾಲಿವುಡ್ ತಾರೆ ಪರ್ವೀನ್ ಬಾಬಿ (Parveen babi).90 ರ ದಶಕದ ಪ್ರಸಿದ್ಧ ನಟಿಯೀಕೆ. 1954ರ ಏಪ್ರಿಲ್ 4ರಂದು ಜನಿಸಿದ್ದ ಪರ್ವೀನ್ ಬಾಬಿ ಇಂದು ಬದುಕಿರುತ್ತಿದ್ದರೆ, 68 ವರ್ಷಗಳಾಗುತ್ತಿದ್ದವು. ಆದರೆ 2005ರಲ್ಲಿ ಭಯಾನಕ, ಘೋರ ಅಂತ್ಯ ಕಂಡರು. ಅವರ ಮನಮೋಹಕ ನಟನೆಯನ್ನು ಜನರು ಇನ್ನೂ ನೆನಪಿಸಿಕೊಳ್ಳುತ್ತಾರೆ. ತನ್ನ ಸೌಂದರ್ಯ ಮತ್ತು ನಟನೆಯಿಂದ ಕೋಟ್ಯಂತರ ಜನರ ಮನಗೆದ್ದಿದ್ದ ಪರ್ವೀನ್ ಬಾಬಿಯ ಸಾವು ಮಾತ್ರ ಭಯಾನಕವಾದದ್ದು. ಬಾಲಿವುಡ್ ಚಿತ್ರರಂಗದ ಬೋಲ್ಡ್ ಮತ್ತು ಬ್ಯೂಟಿಫುಲ್ ನಟಿ ಎಂದು ಗುರುತಿಸಿಕೊಂಡಿದ್ದ ನಟಿಯ 2005ರಲ್ಲಿ ಭಯಾನಕ ಅಂತ್ಯ ಕಂಡವರು. ಮೃತಪಟ್ಟು 18 ವರ್ಷವಾದರೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ಅಮರ್ ಅಕ್ಬರ್ ಆಂಥೋನಿ, ದೀವಾರ್, ನಮಕ್, ಹಲಾಲ್, ಶಾನ್ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದ್ದರು. ನಟ ಅಮಿತಾಭ್ ಬಚ್ಚನ್ ಮತ್ತು ಪರ್ವೀನ್ ಬಾಬಿ ಜೋಡಿ ಸಿನಿಪ್ರಿಯರನ್ನು ಮೋಡಿ ಮಾಡಿತ್ತು. ಆದರೆ ಏಕಾಏಕಿಯಾಗಿ ಇವರ ಜೀವನದಲ್ಲಿ ಬಿರುಗಾಳಿಯೇ ಎದ್ದುಬಿಟ್ಟಿತ್ತು.
ಪರ್ವೀನ್ ಸಾವು ಎಷ್ಟು ಘೋರವಾಗಿದೆ ಎಂದರೆ ಅವರು ಸತ್ತು 17 ವರ್ಷಗಳಾದರೂ ಅವರು ಮೃತಪಟ್ಟ ಮನೆಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಮನೆಯಿನ್ನೂ ಖಾಲಿಯಾಗಿಯೇ ಉಳಿದಿದೆ. ಪರ್ವೀನ್ ಬಾಬಿ ಮುಂಬೈನ ಜುಹುವಿನ (Juhu) ರಿವೇರಿಯಾ ಬಿಲ್ಡಿಂಗ್‌ನಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು ಮತ್ತು ಅವರು ಇಲ್ಲಿಯೇ ಭಯಾನಕ ಸಾವು ಕಂಡರು. ಅಪಾರ್ಟ್ಮೆಂಟ್ನಲ್ಲಿ ದಿಢೀರ್ ಸಾವು ಕಂಡಿದ್ದ ನಟಿಯ ಸಾವಿನ ಬಗ್ಗೆ ತಿಳಿದದ್ದು, ಮೂರು ದಿನಗಳ ಬಳಿಕ! ಅಪಾರ್ಟ್ಮೆಂಟ್ ಜನರು ನಟಿಯ ಮನೆಯ ಹೊರಗೆ ಹಾಲಿನ ಪ್ಯಾಕೆಟ್‌ಗಳು ಮತ್ತು ಪತ್ರಿಕೆಗಳು ಇದ್ದುದನ್ನು ನೋಡಿ ಅನುಮಾನಗೊಂಡಿದ್ದರು. ಅದಾಗಲೇ ಆಕೆಯ ಮನೆಯಿಂದ ಕೆಟ್ಟ ವಾಸನೆಯೂ ಬರುತ್ತಿತ್ತು. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಟಿಯ ಮನೆಯ ಬಾಗಿಲು ಒಡೆದು ನೋಡಿದಾಗ ಪರ್ವೀನ್ ಬಾಬಿ ಶವ ಕೊಳೆತು ನಾರುತ್ತಿತ್ತು. 3 ದಿನಗಳ ಹಿಂದೆ ನಟಿ ಸಾವನ್ನಪ್ಪಿರುವುದು ತಿಳಿದಿತ್ತು.
ಬಾಲಿವುಡ್ ಇಂಡಸ್ಟ್ರಿಯಲ್ಲಿ ತಲ್ಲಣ ಸೃಷ್ಟಿಸಿದ ಶ್ರೀದೇವಿಯ ನಿಗೂಢ 'ತಂಗಿ'! ಯಾರೀಕೆ?
ಈ ಘಟನೆಯ ಪ್ರತ್ಯಕ್ಷದರ್ಶಿಗಳು ಇಂದಿಗೂ ಆ ದೃಶ್ಯವನ್ನು ಮರೆಯಲು ಸಾಧ್ಯವಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಮನೆಯಲ್ಲಿನ ನಕಾರಾತ್ಮಕ ಶಕ್ತಿಯಿಂದಾಗಿ ತೊಂದರೆಯಾಗುತ್ತದೆ ಎಂಬ ಭಯದಿಂದ ಯಾರೂ ಆ ಮನೆಯನ್ನು ಖರೀದಿಸುವುದಿಲ್ಲ ಅಥವಾ ಬಾಡಿಗೆಗೆ ನೀಡಲು ಸಿದ್ಧರಿಲ್ಲ. ಇನ್ನು ಪರ್ವೀನ್ ಬಾಬಿ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ ಈ ನಟಿ ಕೊನೆಯ ಕ್ಷಣದವರೆಗೂ ಮದುವೆಯಾಗಿರಲಿಲ್ಲ. ಆದಾಗ್ಯೂ, ಅವರು ತಮ್ಮ ಸಂಬಂಧದ ಸುದ್ದಿಯೊಂದಿಗೆ ಸಾಕಷ್ಟು ಸುದ್ದಿ ಮಾಡಿದರು. ಪರ್ವೀನ್ ಬಾಬಿ ನಟ ಕಬೀರ್ ಬೇಡಿ (Kabeer Bedi) ಜೊತೆ ಡೇಟಿಂಗ್ ಮಾಡುತ್ತಿದ್ದರು, ಆದರೆ ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಪರ್ವೀನ್ ಬಾಬಿ ತಮ್ಮ ವೃತ್ತಿಯ ಉತ್ತುಂಗದಲ್ಲಿರುವಾಗಲೇ ಮಹೇಶ್ ಭಟ್ (Mahesh Bhat) ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. 1977ರಲ್ಲಿಯೇ ಈ ಇಬ್ಬರ ನಡುವೆ ಪ್ರೇಮ ಅಂಕುರಿಸಿತ್ತು. ಆಗಲೇ, ಮಹೇಶ್ ಮಗುವಿನ ತಂದೆಯೂ ಆಗಿದ್ದರು. ಕಬೀರ್ ಜೊತೆ ಇದ್ದ ಪರ್ವೀನ್ ಸಂಬಂಧ ಹಳಸಲು ಶುರವಾಗಿತ್ತು.
ಪರ್ವೀನ್ ಜೊತೆ ಮಹೇಶ್ ಲೀವ್ ಇನ್ ಸಂಬಂಧದಲ್ಲಿದ್ದರು. ಅವರಿಬ್ಬರ ನಡುವೆ ಪ್ರೀತಿ ಹೊರತು ಪಡಿಸಿ ಬೇರೆ ಯಾವುದಕ್ಕೂ ಸ್ಥಾನವೇ ಇಲ್ಲ ಎನ್ನುವಷ್ಟು ಇಬ್ಬರೂ ಹತ್ತಿರವಾಗಿದ್ದರು. ಮನೆಯಲ್ಲಿರುವಾಗ ಒಬ್ಬ ಸಾಧಾರಣ ಹುಡುಗಿಯಂತಿರುತ್ತಿದ್ದ ಪರ್ವೀನ್, ಮಹೇಶ್ ಅವರನ್ನು ಹುಚ್ಚಿಯಂತೆ ಪ್ರೀತಿಸುತ್ತಿದ್ದರು. ಹೀಗಿರುವಾಗಲೇ ಪರ್ವೀನ್ ಮೇಲೆ ಸಿಟ್ಟಾದ ಮಹೇಶ್ ಮನೆಯಿಂದ ಒಮ್ಮೆ ಹೊರ ನಡೆದಿದ್ದರಂತೆ. ಅದೆಷ್ಟು ಮಹೇಶ್ ಮೇಲೆ ಹುಚ್ಚು ಪ್ರೇಮ ಇತ್ತು ಪರ್ವೀನ್‌ಗೆ ಅಂದರೆ, ಮೈಮೇಲೆ ಬಟ್ಟೆ ಇಲ್ಲ ಎಂಬ ಜ್ಞಾನವೂ ಇಲ್ಲದೇ ಮಹೇಶ್ ಹಿಂದೆ ಓಡಿದ್ದರಂತೆ. ಆ ರಾತ್ರಿ ಸಂಬಂಧ ಮುಂದುವರಿಸುವ ಬಗ್ಗೆ ಈ ಇಬ್ಬರಲ್ಲಿ ಮಾತಾಗಿತ್ತಂತೆ. ಮಹೇಶ್ ಒಂದೂ ಮಾತನಾಡದೇ ಹೋದರೂ, ಅವರ ಮನಸ್ಸಿನಲ್ಲಿ ಏನಿದೆ ಎಂಬುವುದನ್ನು ಪರ್ವೀನ್ ಅರ್ಥ ಮಾಡಿಕೊಂಡಿದ್ದರಂತೆ. ಬಟ್ಟೆ ತೊಟ್ಟ ಮಹೇಶ್ ರೂಮಿನಿಂದ ಹೊರ ನಡೆದರಂತೆ. ಆಗ ಪರ್ವೀನ್ ಕಣ್ಣಲ್ಲಿ ನೀರು ತುಂಬಿತ್ತೆಂದು, ಖುದ್ದು ಮಹೇಶ್ ಭಟ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಲಿಫ್ಟ್‌ಗೂ ಕಾಯದೇ ಮೆಟ್ಟಿಲಲ್ಲೇ ನಾನು ಇಳಿದು ಹೋಗುತ್ತಿದ್ದೆ. ನನ್ನನ್ನು ಪರ್ವೀನ್ ಹಿಂಬಾಲಿಸಿದ್ದು ಗಮನಕ್ಕೆ ಬಂದಿತ್ತು. ಬಟ್ಟೆ ಇಲ್ಲದೇ, ಈ ಸ್ಥಿತಿಯಲ್ಲಿ ಹೊರ ಬರಬೇಡವೆಂದು ಹೇಳಬೇಕೆಂದೆನಿಸಿದರೂ, ಹೇಳದೇ ಮುಂದೆ ನಡೆದೆ. ಈ ಘಟನೆಯಾದ ಕೆಲವು ದಿನಗಳಲ್ಲಿ ಅಂದರೆ 1980ರಲ್ಲಿಯೂ ಈ ಜೋಡಿ ಸಂಬಂಧ ಮುರಿದು ಬಿತ್ತು. ಆಗಲೇ ಪರ್ವೀನ್ ಖಿನ್ನತೆಗೆ ಜಾರಿದ್ದರು. ಪರ್ವೀನ್‌ಗೆ ಮಾನಸಿಕ ರೋಗವಿತ್ತು ಎನ್ನುವ ಕಾರಣದಿಂದಲೇ ಅವರನ್ನೂ ಈ ಭಟ್ ವರಿಸಲು ಮುಂದಾಗಲಿಲ್ಲ ಎಂದಿದ್ದರು! ನಂತರ ಅವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು (Death), ಕೊನೆಗೂ ಸಾವಿನ ನಿಗೂಢತೆ ಅವರ ಜೊತೆಗೇ ಸಮಾಧಿಯಾಗಿದೆ.
ಇಬ್ಬರು ಮಕ್ಕಳ ಅಪ್ಪನೊಂದಿಗೆ ಲವ್ ಆದಾಗ... ನೆನಪು ಬಿಚ್ಚಿಟ್ಟ ನಟಿ ಶಬನಾ ಅಜ್ಮಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.