ಈ ಏಳು ಗುಣವಿದ್ದರೆ ಸುಹಾನಾ ಖಾನ್​ ಜೊತೆ ಡೇಟಿಂಗ್​ ಮಾಡಲು ಅಪ್ಪ ಶಾರುಖ್​ ಗ್ರೀನ್​ ಸಿಗ್ನಲ್​!

By Suchethana D  |  First Published May 24, 2024, 6:10 PM IST


ಈ ಏಳು ಗುಣವಿದ್ದರೆ ಸುಹಾನಾ ಖಾನ್​ ಜೊತೆ ಡೇಟಿಂಗ್​ ಮಾಡಲು ಅಪ್ಪ ಶಾರುಖ್​  ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಏನದು ಗುಣಗಳು?
 


‘ಪಠಾಣ್’ ಸೂಪರ್ ಸ್ಟಾರ್ ಶಾರುಖ್ ಖಾನ್ (Sharukh Khan)  ಪುತ್ರಿ ಸುಹಾನಾ ಖಾನ್ (Suhana Khan) ಮೊನ್ನೆ ಅಂದರೆ   ಮೇ 22ರಂದು  24ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಸುಹಾನಾ ಈ ವರ್ಷ ಬೆಳ್ಳಿತೆರೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಅದಕ್ಕಾಗಿ ತಯಾರಿ ಕೂಡ ಮಾಡಿಕೊಂಡಿದ್ದಾರೆ. 100 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.  ಸುಹಾನಾ ಖಾನ್ ಮತ್ತು ಅಮಿತಾಭ್​ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರು ಡೇಟಿಂಗ್​  ಮಾಡುತ್ತಿದ್ದಾರೆ ಎಂದು ವರ್ಷಗಳ ಹಿಂದೆಯೇ ಸಕತ್​ ಸುದ್ದಿಯಾಗಿತ್ತು.  ಇದಾಗಲೇ ಬಿಕಿನಿ ಡ್ರೆಸ್​ ತೊಟ್ಟು ಭಾರಿ ಸುದ್ದಿಯಾಗಿರೋ ಸುಹಾನಾ ಖಾನ್​ ತಮಗಿಂತ ಆರು ತಿಂಗಳು ಚಿಕ್ಕ ವಯಸ್ಸಿನ ಅಗಸ್ತ್ಯ ನಂದಾ ಜೊತೆ  ಹಲವು ಸ್ಥಳಗಳಲ್ಲಿ, ಪಾರ್ಟಿಗಳಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದು, ಭಾರಿ ಸದ್ದು ಮಾಡುತ್ತಿದ್ದಾರೆ.  

ಇದರ ಹೊರತಾಗಿಯೂ ಮಗಳು ಸುಹಾನಾ ಖಾನ್​ ಜೊತೆ ಡೇಟಿಂಗ್​ ಮಾಡಬಯಸುವ ಹುಡುಗರು ಏಳು ಗುಣಗಳನ್ನು ಹೊಂದಿರಬೇಕು ಎಂದು ಅಪ್ಪ ಶಾರುಖ್​ ಹೇಳಿದ್ದಾರೆ. ಅವರು ಹೇಳಿದ್ದೇನೆಂದರೆ 
1)  ಹುಡುಗನಿಗೆ ಮಹತ್ವಾಕಾಂಕ್ಷೆಯ ವ್ಯಕ್ತಿತ್ವ ಇರಬೇಕು.  ಸುಹಾನಾ  ಗೆಳೆಯನಿಗೆ ಸ್ಪಷ್ಟ ಗುರಿಗಳು ಇರಬೇಕು. ವೈಯಕ್ತಿಕ ಬೆಳವಣಿಗೆಗೆ ಬದ್ಧರಾಗಿರಬೇಕು.
 2) ಕುಟುಂಬದಲ್ಲಿ ತನ್ನದೇ ಆದ ಸ್ಥಾನವನ್ನು ಮಾಡಿಕೊಂಡಿರಬೇಕು. ಕುಟುಂಬದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿರಬೇಕು. 
3)  ಸೂಕ್ತ ತಿಳಿವಳಿಕೆ ಇರಬೇಕು.  ಪರಸ್ಪರ ಗೌರವವು ಸಂಬಂಧದ ತಿರುಳಾಗಿದೆ ಎಂದು ಅರಿತಿರಬೇಕು.
 4) ಸುಹಾನಾ ತಮ್ಮ ರಾಜಕುಮಾರಿ ಎಂದಿರುವ ಶಾರುಖ್​, ಆಕೆಯ ಹುಡುಗ  ಸುಹಾನಾಳನ್ನು ಗೌರವಿಸುವ ಮತ್ತು ಅವಳನ್ನು ಎಲ್ಲ ಸಮಯದಲ್ಲೂ ಅತ್ಯಂತ ಘನತೆಯಿಂದ ನಡೆಸಿಕೊಳ್ಳಬೇಕು.  
5) ಆತ ತನ್ನ ಮಗಳೊಂದಿಗಿನ ಎಲ್ಲಾ ವ್ಯವಹಾರಗಳಲ್ಲಿ ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸಬೇಕು. 
 6)  ಶಾರೀರಿಕ ಅಥವಾ ಭಾವನಾತ್ಮಕ ಯಾವುದೇ ರೀತಿಯ ಹಾನಿಯನ್ನು ಮಗಳಿಗೆ  ಮಾಡಬಾರದು. ಇದು ಕಟ್ಟುನಿಟ್ಟಾಗಿ ಪಾಲಿಸಬೇಕು.
 7) ದಯೆ ಮತ್ತು ಸೌಜನ್ಯವನ್ನು ಪ್ರದರ್ಶಿಸುವ ಸಂಭಾವಿತ ವ್ಯಕ್ತಿಯಾಗಿರಬೇಕು.

Tap to resize

Latest Videos

ನಟ ಶಾರುಖ್​ ಖಾನ್​ ಆಸ್ಪತ್ರೆಯಿಂದ ಡಿಸ್​ಚಾರ್ಜ್​: ಹೀಟ್​ಸ್ಟ್ರೋಕ್​ ಜೊತೆ ತೀವ್ರ ಜ್ವರ- ಪತ್ನಿ ಹೇಳಿದ್ದೇನು?

ಈ ಏಳು ಗುಣಗಳು ಹೊಂದಿದ್ದರೆ ಆತ ಮಗಳು ಸುಹಾನಾಳ ಬಾಯ್​ಫ್ರೆಂಡ್ ಆಗಬಹುದು ಎಂದಿದ್ದಾರೆ. ಇನ್ನು ಸುಹಾನಾ ಕುರಿತು ಹೇಳುವುದಾದರೆ, ತನ್ನ ಚೊಚ್ಚಲ ಪ್ರವೇಶಕ್ಕೂ ಮುಂಚೆಯೇ, ಸುಹಾನಾ ಖಾನ್ ಸೌಂದರ್ಯ ಉತ್ಪನ್ನವಾದ ಮೇಬೆಲಿನ್ನ ಬ್ರಾಂಡ್ ಅಂಬಾಸಿಡರ್ ಆದರು, ಈ ಕಂಪನಿ ಜಾಹೀರಾತುಗಳಲ್ಲಿ ಅವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಲಕ್ಸ್ ಸೋಪ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅವರ ವೀಡಿಯೊವನ್ನು ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಜಾಹೀರಾತುಗಳ ಮೂಲಕವೇ ಸುಹಾನಾ ಖಾನ್ ಕೋಟಿ ಕೋಟಿಗಳನ್ನು ಗಳಿಸುತ್ತಾರೆ.


ಕೊಯಿಮೊಯ್ ಅವರ ವರದಿಯ ಪ್ರಕಾರ, ಸುಹಾನಾ ಅವರ ನಿವ್ವಳ ಮೌಲ್ಯ ಸುಮಾರು 13 ಕೋಟಿ ರೂ. ಇದೆ. ಕಿಂಗ್ ಸಿನಿಮಾದಲ್ಲಿ ತಂದೆಯೇ ಜೊತೆ ಸುಹಾನಾ ಪರಿಚಿತರಾಗುತ್ತಿದ್ದಾರೆ. ತನ್ನ ಚೊಚ್ಚಲ ಪ್ರವೇಶಕ್ಕೂ ಮುಂಚೆಯೇ, ಸುಹಾನಾ ಖಾನ್ ಸೌಂದರ್ಯ ಉತ್ಪನ್ನವಾದ ಮೇಬೆಲಿನ್ನ ಬ್ರಾಂಡ್ ಅಂಬಾಸಿಡರ್ ಆದರು, ಈ ಕಂಪನಿ ಜಾಹೀರಾತುಗಳಲ್ಲಿ ಅವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಲಕ್ಸ್ ಸೋಪ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಅವರ ವೀಡಿಯೊವನ್ನು ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಜಾಹೀರಾತುಗಳ ಮೂಲಕವೇ ಸುಹಾನಾ ಖಾನ್ ಕೋಟಿ ಕೋಟಿಗಳನ್ನು ಗಳಿಸುತ್ತಾರೆ. 

ಮದ್ವೆಯಾಗ್ತೀಯಾ ಎಂದು ಪ್ರಿಯಾಂಕಾಗೆ ಕೇಳಿದ್ದ ಶಾರುಖ್​! ಮತ್ತೆ ಮುನ್ನೆಲೆಗೆ ಬಂತು ಹಳೆಯ ಸಂಬಂಧ

click me!