ಪಿಗ್ಗಿ ಮನೆಹಾಳಿ, ಶಾರುಖ್ ತಲೆ ಕೆಡಿಸಿದ್ದಾಳೆ, ಉದ್ಧಾರವಾಗಲ್ಲ ಅಂದಿದ್ರು ಗೌರಿ ಖಾನ್!

By Shriram Bhat  |  First Published May 24, 2024, 6:07 PM IST

ತಮ್ಮಿಬ್ಬರ ಸುತ್ತಾಟ-ಚೆಲ್ಲಾಟಗಳು ಶಾರುಖ್ ಹೋಮ್‌ ಮಿನಿಷ್ಟರ್ ಗೌರಿಗೆ ತಲುಪಿದೆ ಎಂಬ ಸಂದೇಶ ಸಿಕ್ಕದ್ದೇ ತಡ, ಪ್ರಿಯಾಂಕಾ-ಶಾರುಖ್ ಸಾಕಷ್ಟು ಸೈಲೆಂಟ್ ಆಗಿಬಿಟ್ಟರು. ನಟಿ ಪ್ರಿಯಾಂಕಾ ಹೋದಲೆಲ್ಲಾ ಶಾರುಖ್ ಅವರಿಂದ ಅಂತರ ಕಾಯ್ದುಕೊಂಡು...


ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಹಾಗೂ ನಟ ಶಾರುಖ್ ಖಾನ್ (Shah Rukh Khan) ಒಮ್ಮೆ ಒಳ್ಳೆಯ ಸ್ನೇಹಿತರಾಗಿದ್ದವರು. ಅವರಿಬ್ಬರ ಸ್ನೇಹ ಅದೆಷ್ಟು ಮುಂದುವರೆದಿತ್ತು ಎಂದರೆ, ಇಬ್ಬರೂ ಒಟ್ಟಿಗೇ ಸುತ್ತಾಡುತ್ತ ಶೂಟಿಂಗ್ ಹೊರತಾಗಿಯೂ ಕಾಲ ಕಳೆಯತೊಡಗಿದ್ದರು. ಈ ಸಂಗತಿ ಗೊತ್ತಾಗಿದ್ದೇ ತಡ, ಸಾಕಷ್ಟು ತಲೆ ಕೆಡಿಸಿಕೊಂಡ ಗೌರಿ ಖಾನ್ ಪ್ರಿಯಾಂಕಾ ಚೋಪ್ರಾ ವಿರುದ್ಧ ಬೂಗುಳಗಳ ಸುರಿಮಳೆ ಸುರಿಸಿದ್ದರು. ಅಚ್ಚರಿ ಎಂಬಂತೆ, ಎರಡೈ ಕೈ ಸೇರಿದರೆ ಮಾತ್ರ ಚಪ್ಪಾಳೆ ಎಂಬ ಲಾಜಿಕ್ ಅನ್ನೇ ಮರೆತಿದ್ದರು ಗೌರಿ ಖಾನ್!

ಅದೇನೇ ಇರಲಿ, ಡಾನ್, ಡಾನ್ 2, ರಾ ಒನ್ ಮುಂತಾದ ಸಿನಿಮಾಗಳಲ್ಲಿ ಒಟ್ಟಿಗೇ ಅಭಿನಯಿಸಿದ್ದ ಶಾರುಖ್ ಹಾಗೂ ಪ್ರಿಯಾಂಕಾ ರೀಲ್‌ ಬದಲು ರಿಯಲ್‌ ಲೈಫ್‌ನಲ್ಲಿ ಲವ್‌ಗೆ ಬಿದ್ದಿದ್ದರು ಎನ್ನಲಾಗಿದೆ. ಅವರಿಬ್ಬರ ಸುತ್ತಾಟ, ರೊಮಾನ್ಸ್ ಹಾಗು 'ಕುಚ್‌ ಕುಚ್‌ ಹೋತಾ ಹೈ' ಎಂಬ ನಡೆ ನೋಡಿದ ಬಾಲಿವುಡ್‌ ಮಂದಿ ತಮಗೆ ತಿಳಿದಿರುವ ಅಷ್ಟೂ ಸಂಗತಿಯನ್ನು ಶಾರುಖ್ ಪತ್ನಿ ಗೌರಿ ಖಾನ್‌ಗೆ ಹೇಳಿದ್ದಾರೆ. ಪತಿ ಪರರ ಪಾಲಾಗುತ್ತಿದ್ದಾರಾ ಎಂಬ ಶಂಕೆಗೆ ತುತ್ತಾದ ಗೌರಿ ಖಾನ್, ಪ್ರಿಯಾಂಕಾರನ್ನು ಸಿಕ್ಕಸಿಕ್ಕಲ್ಲಿ ಅವಮಾನ ಮಾಡುತ್ತ 'ನನಗೆ ಗೊತ್ತು' ಎಂಬ ಸಂದೇಶ ರವಾನಿಸಿದ್ದರು. 

Tap to resize

Latest Videos

ಪ್ಯಾಂಟ್ ಬಿಚ್ಚಿರುವಾಗಲೇ ಮೇಕಪ್‌ ವ್ಯಾನ್‌ಗೆ ಪರಿಣೀತಿ ಚೋಪ್ರಾ ಬರ್ತಾರೆ; ಹೀಗಂದ್ರಾ ರಣವೀರ್ ಸಿಂಗ್ ?

ತಮ್ಮಿಬ್ಬರ ಸುತ್ತಾಟ-ಚೆಲ್ಲಾಟಗಳು ಶಾರುಖ್ ಹೋಮ್‌ ಮಿನಿಷ್ಟರ್ ಗೌರಿಗೆ ತಲುಪಿದೆ ಎಂಬ ಸಂದೇಶ ಸಿಕ್ಕದ್ದೇ ತಡ, ಪ್ರಿಯಾಂಕಾ-ಶಾರುಖ್ ಸಾಕಷ್ಟು ಸೈಲೆಂಟ್ ಆಗಿಬಿಟ್ಟರು. ನಟಿ ಪ್ರಿಯಾಂಕಾ ಹೋದಲೆಲ್ಲಾ ಶಾರುಖ್ ಅವರಿಂದ ಅಂತರ ಕಾಯ್ದುಕೊಂಡು ತಮ್ಮಿಬ್ಬರಲ್ಲಿ ಯಾವ ಸ್ನೇಹವೂ ಯಾವ ಪ್ರೇಮವೂ ಇಲ್ಲ, ಎಲ್ಲವೂ ಕಟ್ಟುಕತೆ ಎಂಬ ಮೆಸೇಜ್ ತಲುಪಿಸಲು ಹರಸಾಹಸ ಪಟ್ಟರು. ಅತ್ತ ಶಾರುಖ್ ಕೂಡ ಪ್ರಿಯಾಂಕಾರಂತೆ ಸೇಫ್ ಗೇಮ್ ಆಡತೊಡಗಿದರು. ಹೀಗಾಗಿ, ಶಾರುಖ್-ಪ್ರಿಯಾಂಕಾ ಸುತ್ತಾಟ, ಆಟಗಳೆಲ್ಲಾ ನಿಂತುಹೋಗಿ ಬಾಲಿವುಡ್ ಬಾಯಿ ಬಂದ್ ಆಯ್ತು. 

A ಸೀಕ್ವೆಲ್‌ಗೆ ಸಜ್ಜಾದ ಚಾಂದಿನಿ-ಗುರುಕಿರಣ್‌ಗೆ ಟೆನ್ಷನ್, ಉಪೇಂದ್ರ ಹೂಂ ಅಂತಾರಾ ಇಲ್ವಾ?

ಶಾರುಖ್-ಪ್ರಿಯಾಂಕಾ ಲವ್ ಸ್ಟೋರಿ ಹರಡುತ್ತಿದ್ದ ಸಮಯದಲ್ಲೇ ನಟಿ ಪ್ರಿಯಾಂಕಾರನ್ನು ಹಲವಾರು ಸಿನಿಮಾಗಳಿಂದ ಹೊರಗಿಡಲಾಗಿತ್ತು. ಈ ಸುದ್ದಿಗೆ ಗೌರಿ ಖಾನ್ 'ಸಂಸಾರದಲ್ಲಿ ಹುಳಿ ಹಿಂಡುವ ನಟಿಯರಿಗೆ ಬಾಲಿವುಡ್ ಯಾವಾಗಲೂ ಬಾಗಿಲು ಬಂದ್ ಮಾಡುತ್ತದೆ; ಎಂಬರ್ಥದಲ್ಲಿ ಮಾತನಾಡಿದ್ದರು. 'ಶಾರುಖ್ ತಲೆ ಕೆಡಿಸುತ್ತಿರುವ ನಟಿ ಪ್ರಿಯಾಕಾ ಲೈಫಿನಲ್ಲಿ ಉದ್ಧಾರವಾಗಲ್ಲ' ಎಂದಿದ್ದರು ಗೌರಿ ಖಾನ್. 

click me!