2 ಗಂಟೆ ಮೂವತ್ತೈದು ನಿಮಿಷದ ಈ ಸಿನಿಮಾದಲ್ಲಿ ಏನಿಲ್ಲ ಅಂದರೂ ಮುಕ್ಕಾಲು ಗಂಟೆ ಕಾಲ ಈ ವೆಟ್ರಿವೇಲ್ ಪಾತ್ರ ತೆರೆ ಮೇಲಿರುತ್ತದೆ. ಆದರೆ ಒಂದರೆ ಸೆಕೆಂಡ್ ಸಹ ಇಲ್ಲಿ ನಮಗೆ ರಾಜ್ ಬಿ ಶೆಟ್ಟಿ ದರ್ಶನವಾಗುವುದಿಲ್ಲ.
ಪ್ರಿಯಾ ಕೆರ್ವಾಶೆ
ಕೆಂಪು ಅಂಚಿನ ಕಪ್ಪು ಬಣ್ಣದ ಸಾದಾ ಪಂಚೆ, ಕಪ್ಪು ಅಂಗಿ, ಅರ್ಧ ನುಣ್ಣಗಾದ ತಲೆ, ತುಂಬು ಗಡ್ಡ, ತೀಕ್ಷ್ಣ ನೋಟ, ಚುರುಕು ಚಲನೆ, ಆಜಾನುಬಾಹು. ಇದು ‘ಟರ್ಬೋ’ ಸಿನಿಮಾದ ಪ್ರಧಾನ ಖಳನಾಯಕ ವೆಟ್ರಿವೇಲ್ ಷಣ್ಮುಗ ಸುಂದರನ ಲುಕ್. ಈ ಪಾತ್ರದಲ್ಲಿ ನಟಿಸಿರುವುದು ರಾಜ್ ಬಿ ಶೆಟ್ಟಿ. ಹೊರ ಲುಕ್‌ನಲ್ಲಿ ಸಣ್ಣ ಬದಲಾವಣೆಯೂ ಇಲ್ಲದೇ ತಾವಿರುವ ಹಾಗೇ ಕಾಣಿಸಿದ್ದಾರೆ. ಆದರೆ ಇಲ್ಲೊಂದು ಮ್ಯಾಜಿಕ್ ನಡೆದಿದೆ. 2 ಗಂಟೆ ಮೂವತ್ತೈದು ನಿಮಿಷದ ಈ ಸಿನಿಮಾದಲ್ಲಿ ಏನಿಲ್ಲ ಅಂದರೂ ಮುಕ್ಕಾಲು ಗಂಟೆ ಕಾಲ ಈ ವೆಟ್ರಿವೇಲ್ ಪಾತ್ರ ತೆರೆ ಮೇಲಿರುತ್ತದೆ. ಆದರೆ ಒಂದರೆ ಸೆಕೆಂಡ್ ಸಹ ಇಲ್ಲಿ ನಮಗೆ ರಾಜ್ ಬಿ ಶೆಟ್ಟಿ ದರ್ಶನವಾಗುವುದಿಲ್ಲ.
undefined
ಅಷ್ಟೇ ಅಲ್ಲ, ಇವರ ಹಿಂದಿನ ಸಿನಿಮಾ ಪಾತ್ರಗಳ ಸಣ್ಣದೊಂದು ಚಹರೆಯೂ ಇಲ್ಲಿ ಕಾಣಸಿಗುವುದಿಲ್ಲ. ಇಲ್ಲಿ ಸಿಗುವುದು ಔಟ್ ಆ್ಯಂಡ್ ಔಟ್ ವೆಟ್ರಿವೇಲ್ ಷಣ್ಮುಗ ಸುಂದರ ಮಾತ್ರ! ‘I make small decisions about who should live or die’ ವೆಟ್ರಿವೇಲ್ ಹೇಳುವ ಈ ಡೈಲಾಗ್‌ನಂತೆ ಆತನ ವ್ಯಕ್ತಿತ್ವ. ಕಟ್ ಥ್ರೋಟ್ ಅಂತೀವಲ್ಲ, ಆ ಥರ. ಚೆನ್ನೈ ರಾಜಕೀಯದಲ್ಲಿ ಈತ ಕಿಂಗ್ ಮೇಕರ್. ಕೋಟಿಗಳಲ್ಲಿ ಡೀಲ್ ಮಾಡಿ ಶಾಸಕರನ್ನೆಲ್ಲ ತನ್ನ ವಶಕ್ಕೆ ಪಡೆದು ಪರೋಕ್ಷವಾಗಿ ಇಡೀ ರಾಜ್ಯದ ರಾಜಕೀಯವನ್ನೇ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುವ ಹುಟ್ಟಾ ಕ್ರೂರಿ.
ಭೈರತಿ ರಣಗಲ್ ಮೀರಿಸುವಂತಿದೆ ವೆಟ್ರಿ ಸ್ವ್ಯಾಗ್: ಸ್ಟಾರ್ ನಟ ಮಮ್ಮುಟ್ಟಿಯೊಂದಿಗೆ ರಾಜ್ ಬಿ ಶೆಟ್ಟಿ!
ಈತನದೊಂದು ಮೀನು ಸಂಸ್ಕರಣಾ ಘಟಕವಿದೆ. ಮಾಂಸ ಕೊಚ್ಚುವ ಯಂತ್ರಕ್ಕೆ ಜೋಡಿಸಿ ಸಾಲಾಗಿ ನೇತು ಹಾಕಿರುವ ದೈತ್ಯ ಮೀನುಗಳ ಜೊತೆ ಜೀವಂತ ಹುಡುಗಿಯೊಬ್ಬಳು ನೇತಾಡುತ್ತಿರುವ ದೃಶ್ಯ ಊಹಿಸಿಕೊಳ್ಳಿ. ಮೀನುಗಳಿಗಾಗುವ ಗತಿಯೇ ಈಕೆಗೂ ಆಗುತ್ತದೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲವೇನೋ. ಆದರೆ ಈತನ ಕ್ರೌರ್ಯ ಎಂಥಾದ್ದು ಎಂಬುದಕ್ಕೆ ಈ ಸಣ್ಣ ದೃಶ್ಯ ಸಾಕು. ನಿರ್ದೇಶಕ ವೈಶಾಖ್ ಸಿನಿಮಾದ ಅಲ್ಲಲ್ಲಿ ಇಂಥಾ ಸೂಕ್ಷ್ಮ ದೃಶ್ಯ ಹೆಣೆದಿದ್ದಾರೆ.
ಕ್ಲೀಷೆಯ ಬಗ್ಗೆ ಗೊಣಗುತ್ತಲೇ ಕ್ಲೀಷೆಯಿಂದ ಆಚೆ ನಿಲ್ಲುವ ಪ್ರಯತ್ನವನ್ನು ಮಾಡುವುದು ವೆಟ್ರಿವೇಲ್ ಪಾತ್ರದ ವಿಶೇಷತೆ. ರಕ್ತ ಬರುವಂತೆ ಹೊಡೆದರೂ ಕೈಗೆ ರಕ್ತದ ಕಲೆ ಸೋಕಬಾರದು ಎಂಬ ನಾಜೂಕಿನ ಡಿಗ್ನಿಫೈಡ್ ಪಾತ್ರ. ಸ್ಟೈಲಿಶ್ ಆದ ಆಕರ್ಷಕ ನಿಲುವು ಪ್ರೇಕ್ಷಕನನ್ನು ಕಣ್ಣು ಮಿಟುಕಿಸಲು ಬಿಡುವುದಿಲ್ಲ. ಕ್ಲೈಮ್ಯಾಕ್ಸ್ ಬಿಟ್ಟು ಉಳಿದೆಲ್ಲ ಸೀನ್‌ಗಳಲ್ಲೂ ಲೋ ಆ್ಯಂಗಲ್‌ನಿಂದಲೇ ಈ ಪಾತ್ರವನ್ನು ಕ್ಯಾಮರ ಕ್ಯಾಪ್ಚರ್ ಮಾಡಿರುವ ಕಾರಣ ಪಾತ್ರ ಎತ್ತರವಾಗಿಯೇ ನಿಲ್ಲುತ್ತದೆ.
RCB ಮ್ಯಾಚ್ ನೋಡ್ಬೇಕಾ, ಇಲ್ಲ ನಿಮ್ಮನ್ನ ನೋಡಬೇಕಾ: ಎದೆ ಸೀಳು ಪ್ರದರ್ಶಿಸಿದ ಪ್ರಿಯಾಂಕಾಗೆ ನೆಟ್ಟಿಗರ ಪ್ರಶ್ನೆ!
ನಾಯಕ ಟರ್ಬೋ ಪಾತ್ರದಲ್ಲಿ 72ರ ಹರೆಯದ ಮಮ್ಮುಟ್ಟಿ ಅವರ ಎನರ್ಜಿ ಎಂಥವರನ್ನೂ ಬೆರಗಾಗಿಸುತ್ತದೆ. ಮಮ್ಮುಟ್ಟಿ ಅಭಿಮಾನಿಗಳಿಗಂತೂ ಸಿನಿಮಾ ಭರ್ಜರಿ ಮನರಂಜನೆ ನೀಡುತ್ತದೆ. ನಾಯಕನ ತಾಯಿಯ ಪಾತ್ರವೂ ಚಿತ್ರಕ್ಕೆ ಕಳೆ ಏರಿಸುತ್ತದೆ. ಒಟ್ಟಿನಲ್ಲಿ ಭಾಷೆಯ ಗಡಿಮೀರಿ ರಾಜ್ ಬಿ ಶೆಟ್ಟಿ ಮೊದಲ ಬಾಲ್‌ಗೇ ಸಿಕ್ಸರ್ ಹೊಡೆದಿದ್ದಾರೆ. ಈ ಸಿನಿಮಾ ಶೆಟ್ಟರ ಪ್ರತಿಭೆಯ ಮತ್ತೊಂದು ಮುಖವನ್ನು ಅನಾವರಣ ಮಾಡಿರುವುದು ಸುಳ್ಳಲ್ಲ.