
ಬಾಲಿವುಡ್ (Bollywood) ಸ್ಟಾರ್ ಶಾರುಖ್ ಖಾನ್ (Shah Rukh Khan) ಸಿನಿಮಾಗಳು ರಿಲೀಸ್ ಆಗದೆ ನಾಲ್ಕೈದು ವರ್ಷಗಳೇ ಆಗಿದೆ. ಆದರೂ ಶಾರುಖ್ ಖಾನ್ ಸದಾ ಸುದ್ದಿಯಲ್ಲಿರುತ್ತಾರೆ. ಒಂದಲ್ಲೊಂದು ವಿಚಾರಗಳ ಮೂಲಕ ಶಾರುಖ್ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಅದರಲ್ಲೂ ಜಾಹೀರಾತುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಶಾರುಖ್ ಇದೀಗ ಮತ್ತೊಂದು ಹೊಸ ಜಾಹೀರಾತು ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿರುವ ಶಾರುಖ್ ಖಾನ್ ಹೊಸ ಜಾಹೀರಾತು ವೈರಲ್ ಆಗಿದೆ. ಶಾರುಖ್ ಖಾನ್ ನೋಡಿ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ಇದು ಬಾಡಿ ವಾಶ್ ಜಾಹಿರಾತು ಆಗಿದೆ. ಶವರ್ ಮಾಡುತ್ತಿರುವ ಶಾರುಖ್ ಬಾಡ್ ವಾಶ್ ಬಳಲುತ್ತಾರೆ. ಸ್ನಾನ ಮಾಡುವಾಗ ಶಾರುಖ್ ಕೈಗೆ ಬಾಡ್ ವಾಶ್ ಸಿಗುತ್ತದೆ. ಆಶ್ಚರ್ಯ ಚಕಿತರಾಗುವ ಶಾರುಖ್ ಬಾಡಿ ವಾಶ್ ಕೈಯಲ್ಲಿ ಹಿಡಿದು ಇಂಡಿಯಾದ ಮೊದಲ ರೆಡಿ ಟು ಮಿಕ್ಸ್ ಬಾಡಿವಾಶ್ ಆಗಿದೆ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಈ ಜಾಹೀರಾತಿನಲ್ಲಿ ಶಾರುಖ್ ಮತ್ತಷ್ಟು ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಕಾಮೆಂಟ್ ಮಾಡಿ ಶಾರುಖ್ ಖಾನ್ ಗೆ ವಯಸ್ಸೇ ಆಗುವುದಿಲ್ಲವಾ ಎಂದು ಕೇಳುತ್ತಿದ್ದಾರೆ.
ಅಭಿಮಾನಿಗಳು ಕಾಮೆಂಟ್ ಮಾಡಿ, ಇನ್ನು ಚಿಕ್ಕವರಾಗಿ ಕಾಣಿಸುತ್ತಾರೆ, ವಾವ್ ಅವರ ಬಾಡಿ, ಉತ್ತಮವಾದ ಕಾನ್ಸೆಪ್ಟ್ ಹೀಗೆ ಅನೇಕ ಕಾಮೆಂಟ್ ಗಳು ಹರಿದುಬಂದಿವೆ. ಅಪಾರ ಸಂಖ್ಯೆಯ ಅಭಿಮಾನಿ ಬಳಗಹೊಂದಿರುವ ಶಾರುಖ್‌ನನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ನಟ ಶಾರುಖ್ ಖಾನ್‌ಗೆ ವಿಲನ್ ಆದ ಸೌತ್ ಸ್ಟಾರ್ ವಿಜಯ್ ಸೇತುಪತಿ
ಅಂದಹಾಗೆ ಶಾರುಖ್ ಖಾನ್ ಇತ್ತೀಚಿಗಷ್ಟೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 30ನೇ ವರ್ಷ ಪೂರೈಸಿದ್ದಾರೆ. 1992ರಲ್ಲಿ ಶಾರುಖ್ ಖಾನ್ ದೀವನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ದಿವ್ಯ ಭಾರತಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.ಅನೇಕ ವಿಭಿನ್ನ ಪಾತ್ರಗಳ ಮೂಲಕ ಶಾರುಖ್ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದೀಗ ಗ್ಯಾಪ್ ನ ಬಳಿಕ ಶಾರುಖ್ ಮತ್ತೆ ವಾಪಾಸ್ ಆಗುತ್ತಿದ್ದಾರೆ.
ನಮ್ಮಲ್ಲಿ ಅಣ್ಣ ಯಾರೆಂದು ಗೊತ್ತಿಲ್ಲ; ಸಲ್ಮಾನ್ ಬಗ್ಗೆ ಶಾರುಖ್ ಹೀಗಂದಿದ್ದೇಕೆ?
ಜೀರೋ ಸಿನಿಮಾದ ಸೋಲಿನ ಬಳಿಕ ಶಾರುಖ್ ಮತ್ತೆ ತೆರೆಮೇಲೆ ಬಂದಿಲ್ಲ. ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಸಿನಿಮಾ ಮಾಡುವುದನ್ನೆ ಬಿಟ್ಟಿದ್ದರು. ಇದೀಗ ಅನೇಕ ವರ್ಷಗಳ ಬಳಿಕ ಶಾರುಖ್ ಪಠಾಣ್, ಜವಾನ್, ದುನ್ಕಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಜವಾನ್ ಸಿನಿಮಾದಲ್ಲಿ ನಾಯನತಾರಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ನಯನತಾರಾ ಬಾಲಿವುಡ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಇನ್ನು ರಾಜ್ ಕುಮಾರ್ ಹಿರಾನಿ ನಿರ್ದೇಶನದ ದುನ್ಕಿ ಸಿನಿಮಾದಲ್ಲಿ ತಾಪ್ಸಿ ಪನ್ನು ಜೊತೆ ಶಾರುಖ್ ನಟಿಸುತ್ತಿದ್ದಾರೆ. ಈಗಾಗಲೇ ಜವಾನ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಮುಂದಿನ ವರ್ಷ ಜೂನ್ 2ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.