
ಈ ವರ್ಷ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಜೋಡಿ ಎರಡು ಚಿತ್ರಗಳಲ್ಲಿ ಮೋಡಿ ಮಾಡಿದೆ. ಈ ಹಿಂದೆ ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್ ಅವರನ್ನು ಬೆಂಬಲಿಸುವ ಟೈಗರ್ ಪಾತ್ರದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದರು. ಇದಾದ ನಂತರ ಟೈಗರ್ 3 ಚಿತ್ರದಲ್ಲಿ ಶಾರುಖ್ ಖಾನ್ ಪಠಾಣ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವೆರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದು, ಭಾರೀ ಲಾಭವನ್ನೂ ಗಳಿಸಿವೆ. ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಸಿನಿಮಾದ ಬಗ್ಗೆ ಹೇಳುವುದಾದರೆ, ಅದು ಬಿಡುಗಡೆಯಾಗಿ 16 ದಿನಗಳು ಕಳೆದಿವೆ. ಸಲ್ಲು ಭಾಯಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂಪಾಯಿಗೂ ಹೆಚ್ಚು ಕಮಾಯಿ ಮಾಡಿದೆ. ಆದರೆ, ಟೈಗರ್-3 ಚಿತ್ರದ ಗಳಿಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. 16ನೇ ದಿನಕ್ಕೆ ಚಿತ್ರ ಗಳಿಸಿದ್ದು ಕೇವಲ 2 ಕೋಟಿ ರೂ. ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಇದರ ನಡುವೆಯೇ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡುತ್ತಿದೆ. ಆದರೆ ಇಲ್ಲಿ ಅಸಲಿ ಸಲ್ಮಾನ್ ಖಾನ್ ಜೊತೆ ನಕಲಿ ಶಾರುಖ್ ಖಾನ್ ಇದ್ದಾರೆ. ಶಾರುಖ್ ಖಾನ್ ಅವರನ್ನೇ ಹೋಲುವ ವ್ಯಕ್ತಿಯ ಜೊತೆ ಸಲ್ಮಾನ್ ಖಾನ್ ರೀಲ್ಸ್ ಶೇರ್ ಮಾಡಿಕೊಂಡಿದ್ದಾರೆ. ಅಸಲಿಗೆ ಅವರು, ಸೆಲೆಬ್ರಿಟಿ ಫೋಟೋಗ್ರಫರ್ ವೊಂಪಾಲಾ. ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಲ್ಮಾನ್ ಖಾನ್ ಅವರ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಶಾರುಖ್ ಖಾನ್ ಅವರ ಲುಕ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ಅವರಂತೆಯೇ ಮಾತನಾಡಿರುವ ಅವರು, ಸಲ್ಮಾನ್ ಖಾನ್ ಅವರನ್ನು ಟೈಗರ್ ಎಂದು ಕರೆದಿದ್ದಾರೆ.
ವಿಶ್ವ ಕಪ್ ಫೈನಲ್ನಲ್ಲಿ ಹೃದಯ ಗೆದ್ದ ಶಾರುಖ್ ಖಾನ್! ಆಶಾ ಭೋಸ್ಲೆ ಜತೆಗಿನ ವಿಡಿಯೋ ವೈರಲ್
ಶಾರುಖ್ ಖಾನ್ರಂತೆ ಮುಖಭಾವವನ್ನು ಮಾಡಿ ಮಾತನಾಡಿದ್ದನ್ನು ನೋಡಿ ಸಲ್ಮಾನ್ ಖಾನ್ ಅವರಿಗೆ ನಗು ತಡೆದುಕೊಳ್ಳಲಾಗಲಿಲ್ಲ. ಸಿಕ್ಕಾಪಟ್ಟೆ ನಕ್ಕಿದ್ದಾರೆ. ನೆಟ್ಟಿಗರು ಈ ವಿಡಿಯೋವನ್ನು ಸಕತ್ ಇಷ್ಟಪಡುತ್ತಿದ್ದಾರೆ. ಇಂಥ ತಮಾಷೆಗಳೆಲ್ಲಾ ಸಲ್ಮಾನ್ ಖಾನ್ರಿಂದ ಮಾತ್ರ ಸಾಧ್ಯ ಎಂದು ಹಲವರು ಹೇಳುತ್ತಿದ್ದರೆ, ಶಾರುಖ್ ಖಾನ್ ಅವರನ್ನು ಸಲ್ಮಾನ್ ಖಾನ್ ಆನ್ಲೈನ್ನಲ್ಲಿ ಪರ್ಚೇಸ್ ಮಾಡಿದ್ದಾರೆ ಎನಿಸುತ್ತಿದೆ. ಇದೇ ಕಾರಣಕ್ಕೆ ಇಂಥ ಶಾರುಖ್ ಖಾನ್ ಸಿಕ್ಕಿದ್ದಾರೆ ಎಂದು ಸಲ್ಲುಭಾಯಿ ಫ್ಯಾನ್ಸ್ ಕಾಲೆಳೆಯುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ಆನ್ಲೈನ್ ಮಾರುಕಟ್ಟೆ ಹೆಸರು ಹೇಳಿದ್ದಾರೆ. ಕೆಲವರು ಅಮೇಜಾನ್ ಎಂದೂ ಇನ್ನು ಕೆಲವು ಮೀಶೂ ಎಂದೂ ಹೇಳಿದ್ದಾರೆ. ಶಾರುಖ್ ಅವರನ್ನು ಎಷ್ಟಕ್ಕೆ ಖರೀದಿ ಮಾಡಿದ್ರಿ ಎಂದು ತಮಾಷೆ ಮಾಡುತ್ತಿದ್ದಾರೆ.
ಇನ್ನು ಕೆಲವರು ಪಠಾಣ್ ಮತ್ತು ಜವಾನ್ನಂತೆ ನಿಮ್ಮ ಚಿತ್ರ ಗಳಿಕೆ ಮಾಡಿಲ್ಲ ಎಂದು ಶಾರುಖ್ ಖಾನ್ ಮೇಲೆ ಹೀಗೆ ಸೇಡು ತೀರಿಸಿಕೊಂಡ್ರಾ ಎಂದು ಸಲ್ಮಾನ್ ಖಾನ್ರ ಕಾಲೆಳೆಯುತ್ತಿದ್ದಾರೆ. ಈ ಹಿಂದೆ ಕೆಲ ಕಾರಣಗಳಿಂದ ಈ ಇಬ್ಬರೂ ದೂರ ದೂರ ಆಗಿದ್ದರು. ಬಹಳ ವರ್ಷಗಳ ಬಳಿಕ ಇವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಮನೆಯ ಗಣೇಶೋತ್ಸವದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದರು.
ಗಾಯಕ ಗಿಪ್ಪಿ ಗ್ರೆವಾಲ್ ಬಂಗಲೆ ಮೇಲೆ ಗುಂಡಿನ ದಾಳಿ: ನಟ ಸಲ್ಮಾನ್ ಖಾನೇ ಟಾರ್ಗೆಟ್?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.