ಚುಂಬಿಸಿದ್ದೇ ತಪ್ಪಾಗೋಯ್ತಾ? ಕರಾಳ ದಿನವನ್ನು ನೆನೆದ 'ಗಜ' ನಟಿ ನವ್ಯಾ ನಾಯರ್​!

By Suvarna News  |  First Published Mar 3, 2024, 12:33 PM IST

ಸಂಬಂಧಿಕರ ಮಗುವೊಂದನ್ನು ಚುಂಬಿಸಿದ ಕಾರಣ, ತಮಗಾಗಿ ಕರಾಳ ಅನುಭವವನ್ನು ಹೇಳಿಕೊಂಡಿದ್ದಾರೆ ಗಜ, ದೃಶ್ಯಂ ನಟಿ ನವ್ಯಾ ನಾಯರ್​
 


 ದರ್ಶನ ಅಭಿನಯದ ಗಜ ಹಾಗೂ ರವಿಚಂದ್ರನ್​ ಅಭಿಯನದ ದೃಶ್ಯ ಚಿತ್ರಗಳನ್ನು ನೋಡಿದವರಿಗೆ ನವ್ಯಾ ನಾಯರ್​ ಯಾರೆಂದು ಚೆನ್ನಾಗಿ ಗೊತ್ತು. ಮುದ್ದಾದ ಮುಖ, ಅದ್ಭುತ ಅಭಿನಯದಿಂದ ಮನಸೂರೆಗೊಂಡ ನವ್ಯಾ, ಮೂಲತಃ ಮಲಯಾಳದವರು. ಮಾಲಿವುಡ್‌ನಲ್ಲಿ ಬಾಲನಟಿಯಾಗಿ ಪಯಣ ಆರಂಭಿಸಿರೋ  ನವ್ಯಾ ಇದೀಗ ಕನ್ನಡ ಸೇರಿದಂತೆ ಕೆಲವು ಭಾಷೆಗಳಲ್ಲಿ ನಟಿಸಿದ್ದಾರೆ.  ಮಲಯಾಳಂನ  ಇಷ್ಟಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿರುವ ನವ್ಯಾ, ನಂದನಂ ಎಂಬ ಒಂದೇ ಒಂದು ಚಿತ್ರದಿಂದ ಹೆಚ್ಚಾಗಿ ಗಮನಸೆಳೆದಿದ್ದಾರೆ. ಚಿತ್ರದಲ್ಲಿನ ಬಾಲಾಮಣಿ ಪಾತ್ರ ಇಂದಿಗೂ ಅಪಾರ ಜನಪ್ರಿಯತೆ ಗಳಿಸುತ್ತಿದೆ. 

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನವ್ಯಾ ತಮ್ಮ ಜೀವನದ ಕುರಿತು ಆಗಾಗ ಅನುಭ ಹಂಚಿಕೊಳ್ಳುತ್ತಿರುತ್ತಾರೆ. ಸಂತೋಷ್​ ಮೆನನ್​ ಎಂಬುವವನ್ನು ವಿವಾಹವಾಗಿ ಈಗ 13 ವರ್ಷದ ಮಗನ ಅಮ್ಮನಾಗಿರುವ ನವ್ಯಾ ತಮಗೆ ಆಗಿರುವ ಅಹಿತಕರ ಅನುಭವದ ಬಗ್ಗೆ ಮಾತನಾಡಿದ್ದಾರೆ.  ನವ್ಯಾ ತಮ್ಮ ರಕ್ತ ಸಂಬಂಧಿ ಮಗುವಿಗೆ ಮುತ್ತು ನೀಡಿದ್ದೇ ತಪ್ಪಾಗೋಯ್ತು ಎಂದು ಕರಾಳ ಅನುಭವವನ್ನು ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಸಂಬಂಧಿ ಒಬ್ಬರ ಮಗುವನ್ನು ಮುದ್ದಿಸಿದ ಕಾರಣ, ಆ ಮಗುವಿನ ಅಮ್ಮ ಹೇಗೆ ಕೋಪಗೊಂಡು ತಮಗೆ ಬೈದರು ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ.

 
 
 
 
 
 
 
 
 
 
 
 
 
 
 

Tap to resize

Latest Videos

A post shared by Navya Nair (@navyanair143)

ಅಂಬಾನಿ ಪುತ್ರನ ಮದ್ವೆಯಲ್ಲಿ ಗರ್ಭಿಣಿ ದೀಪಿಕಾ ಭರ್ಜರಿ ಡ್ಯಾನ್ಸ್​: ಹಣದ ದುರಾಸೆ ಯಾಕಮ್ಮಾ ಎಂದ ಫ್ಯಾನ್ಸ್​
 
ಇದು ಕೆಲ ವರ್ಷಗಳ ಹಿಂದಿನ ಘಟನೆ. ಆ ಪುಟಾಣಿ ಮಗು  ನನ್ನ ಸ್ವಂತ ಮನೆಯ ಮಗು. ಅವಳು ಹೊರಗೆ ಬೆಳೆದ ಕಾರಣ ಇಂಗ್ಲಿಷ್ ಮತ್ತು ಮಲಯಾಳಂ ಬೆರೆಸಿದ ಮಾತನಾಡುತ್ತಿದ್ದಳು. ಅವಳ ಮಾತು ಕೇಳಲು ತುಂಬಾ ಖುಷಿ ಕೊಡುತ್ತಿತ್ತು. ಅವಳಿಗೂ ನಾನೆಂದರೆ ತುಂಬಾ ಇಷ್ಟ. ಆದ್ದರಿಂದ ನನ್ನನ್ನು ಕಂಡಾಗಲೆಲ್ಲ ಅವಳು ಮಾತನಾಡಿಸುತ್ತಿದ್ದಳು. ನಾನು ಅವಳ ಕೆನ್ನೆ, ಹಣೆ ಮತ್ತು ತುಟಿಗಳಿಗೆ ಮುತ್ತು ಕೊಡುತ್ತಿದ್ದೆ. ಆಕೆಯ ಅಪ್ಪ ನಮ್ಮ ಸಂಬಂಧಿಯಾಗಿರುವ ಕಾರಣ ಹಾಗೂ ಇಬ್ಬರೂ ಒಟ್ಟಿಗೇ ಬೆಳೆದಿರುವ ಕಾರಣ, ಆ ಮಗುವಿನ ಮೇಲೆ ತುಂಬಾ ಇಷ್ಟವೂ ಇತ್ತು. ಆದರೆ ಅದೊಂದು ದಿನ ಆಕೆಯನ್ನು ಎತ್ತಿಕೊಂಡಾಗ, ಅವಳ ತಾಯಿ ಕೋಪಗೊಂಡು ವಾಚಾಮಗೋಚರವಾಗಿ ಬೈದಳು. ಅವಳು ತನ್ನ ಮಗುವನ್ನು ಎತ್ತಿಕೊಂಡು ಅವಳಿಗೂ ಬೈದಳು. ಜೊತೆ ನನ್ನನ್ನು ನೋಡಿ  ಅಪರಿಚಿತರೊಂದಿಗೆ ಈ ರೀತಿ ಕಿಸ್ ಮಾಡಬಾರದು ಎಂದು ಗೊತ್ತಿಲ್ಲವೇ ಎಂದು ಬೈಯುತ್ತಲೇ ಮಗಳನ್ನು ಎತ್ತಿಕೊಂಡು ಹೋಗಿಬಿಟ್ಟಳು ಎಂದು ನಟಿ ಹೇಳಿದ್ದಾರೆ.

ಏಕೆ ಹೀಗಾಯ್ತು ಎಂದು ನನಗೆ ತಿಳಿದಿಲ್ಲ.  ನಾನು ಒಂದು ಕ್ಷಣ ಬೆಚ್ಚಿಬಿದ್ದೆ, ಅವಳ ತಂದೆ ಮತ್ತು ನಾನು ಒಂದೇ ಮನೆಯಲ್ಲಿ ಬೆಳೆದಿದ್ದೇವೆ, ನಾವು ರಕ್ತ ಸಂಬಂಧಿಗಳು. ನನ್ನ ಕಣ್ಣುಗಳಲ್ಲಿ ನೀರು ತುಂಬಿತು ಮತ್ತು ನಾನು ಏನನ್ನೂ ಹೇಳದೆ ಹೊರಟೆ" ಎಂದು ನವ್ಯಾ ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು,  ಮಗುವಿನೊಂದಿಗೆ ಇರುವ ವಿಡಿಯೋ ಹಾಕಿದ್ದಾರೆ. ಆ ಪುಟಾಣಿ ನನ್ನನ್ನು  ತಾಜ್ ಮಹಲ್‌ನಷ್ಟು ಮೋಹಿಸಿದಳು. ಅದೇ ನನ್ನಲ್ಲಿ ಧನ್ಯತಾ ಭಾವ ತುಂಬುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನು ನೋಡಿದ ಕೆಲವರು ತಮಗೆ ಮಕ್ಕಳಿಲ್ಲದ ಕಾರಣ, ಬೇರೆ ಮಕ್ಕಳನ್ನು ಎತ್ತಿಕೊಳ್ಳಲು ಹೇಗೆ ಬಿಡಲಿಲ್ಲ, ಬೇರೆ ಮಕ್ಕಳನ್ನು ಮುಟ್ಟಲೂ ಕೂಡ ಹೇಗೆ ಬಿಟ್ಟಿಲ್ಲ ಎನ್ನುವ ನೋವಿನ ಮಾತುಗಳನ್ನು ಹೇಳಿಕೊಂಡಿದ್ದಾರೆ. 

ಮಥುರಾಕ್ಕೆ ಹೇಮಾ ಮಾಲಿನಿ ಫಿಕ್ಸ್​! ಕಂಗನಾ ರಣಾವತ್​ ಕಥೆ ಏನು? ಬಿಜೆಪಿ ಪಟ್ಟಿ ಹೇಳ್ತಿರೋದೇನು?

click me!