
ಬಾಲಿವುಡ್‌ನ ಮೂವರು ಖಾನ್‌ಗಳು - ಅಮೀರ್ ಖಾನ್, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ರ ವಿವಾಹಪೂರ್ವ ಗಾಲಾದ ಎರಡನೇ ದಿನದಂದು ಪ್ರದರ್ಶನಗಳನ್ನು ನೀಡಲು ಒಟ್ಟಿಗೆ ಸೇರಿದರು. ಮೂವರೂ ಸಂಗೀತಕ್ಕೆ ಕುಣಿಯುತ್ತಿರುವ ಹಲವಾರು ವೀಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದವು.
ಶಾರುಖ್ ಖಾನ್, ಸಲ್ಮಾನ್ ಮತ್ತು ಅಮೀರ್ ವರ್ಷಗಳ ನಂತರ ಒಟ್ಟಿಗೆ ಬಂದಿದ್ದಾರೆ. ಈವೆಂಟ್‌ಗಾಗಿ ಶಾರುಖ್ ಮತ್ತು ಸಲ್ಮಾನ್ ಖಾನ್ ಕಪ್ಪು ಕುರ್ತಾ ಮತ್ತು ಪೈಜಾಮಾ ಧರಿಸಿದ್ದರೆ, ಅಮೀರ್ ಹಸಿರು ಉಡುಗೆಯನ್ನು ಆರಿಸಿಕೊಂಡಿದ್ದಾರೆ.
ನಾಟು ನಾಟು ಬಾರದೆ ಅಮೀರ್, ಸಲ್ಮಾನ್, ಶಾರುಖ್ ಒದ್ದಾಟ
ಕ್ಲಿಪ್‌ನಲ್ಲಿ, ಅವರು ರಾಮ್ ಚರಣ್ ಮತ್ತು ಎನ್‌ಟಿಆರ್ ಜೂನಿಯರ್ ಅಭಿನಯದ ಆರ್‌ಆರ್‌ಆರ್‌ನ ನಾಟು ನಾಟು ಹಾಡಿನ ಹುಕ್ ಸ್ಟೆಪ್ ಮಾಡುತ್ತಿರುವುದು ಕಾಣಬಹುದು. ಆದರೆ, ಆ ಸ್ಟೆಪ್ ಹಾಕಲು ಅವರಿಂದ ಸಾಧ್ಯವಾಗಿಲ್ಲ. ಇದು ತಮ್ಮಿಂದ ಆಗಲ್ಲ ಎಂದು ತೋರುತ್ತಲೇ ಅವರೆಲ್ಲರೂ ಪರಸ್ಪರರ ಪ್ರಸಿದ್ಧ ಹಾಡುಗಳ ಸ್ಟೆಪ್ಸ್ ಹಾಕಿ ಪ್ಯಾಚಪ್ ಮಾಡಲು ಪ್ರಯತ್ನಿಸಿದರು.
ವೀಡಿಯೊದಲ್ಲಿ ಸಲ್ಮಾನ್, ಅಮೀರ್ ಮತ್ತು ಶಾರುಖ್ ಅವರು ದಿಲ್ ಸೇ ಚಿತ್ರದ ಚೈಯಾ ಚೈಯಾ, ಮುಜ್ಸೆ ಶಾದಿ ಕರೋಗಿಯಿಂದ ಜೀನೆ ಕೆ ಹೈ ಚಾರ್ ದಿನ್ ಮತ್ತು ರಂಗ್ ದೇ ಬಸಂತಿಯಿಂದ ಮಸ್ತಿ ಕಿ ಪಾಠಶಾಲಾ ಹಾಡಿನ ಟ್ರೆಂಡೀ ಸ್ಟೆಪ್ಸ್‌ಗಳನ್ನು ಹಾಕಿದರು.
ಸಲ್ಮಾನ್, ಶಾರುಖ್ ಏಕವ್ಯಕ್ತಿ ಪ್ರದರ್ಶನ
ಹಮ್ ಆಪ್ಕೆ ಹೈ ಕೌನ್, ಸಲಾಮ್-ಇ-ಇಷ್ಕ್ ಮತ್ತು ಕುಚ್ ಕುಚ್ ಹೋತಾ ಹೈ ಸೇರಿದಂತೆ ಹಲವು ಹಿಟ್ ಚಿತ್ರಗಳ ಹಾಡುಗಳಿಗೆ ಸಲ್ಮಾನ್ ಒಬ್ಬರೇ ನೃತ್ಯ ಮಾಡಿದ್ದಾರೆ. ಒಂದು ಕ್ಲಿಪ್‌ನಲ್ಲಿ, ಶಾರುಖ್ ಪಠಾನ್‌ನ ಝೂಮ್ ಜೋ ಪಠಾನ್ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.
ಈ ಫೋಟೋದಲ್ಲಿರುವ ಕನ್ನಡತಿ, ಖ್ಯಾತ ನಟಿಯನ್ನು ಗುರುತಿಸಿ..
ಅನಂತ್-ರಾಧಿಕಾ ಅವರ ವಿವಾಹಪೂರ್ವ ಸಮಾರಂಭದಲ್ಲಿ ಗಣ್ಯರು
ಉದ್ಯಮಿ ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ, ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರನ್ನು ಈ ವರ್ಷ ಜುಲೈನಲ್ಲಿ ವಿವಾಹವಾಗಲಿದ್ದಾರೆ. ಸಧ್ಯ ನಡೆಯುತ್ತಿರುವ ವಿವಾಹಪೂರ್ವ ಸಮಾರಂಭದಲ್ಲಿ ಶಾರುಖ್, ಸಲ್ಮಾನ್ ಮತ್ತು ಅಮೀರ್ ಅಲ್ಲದೆ, ಹಲವಾರು ಬಾಲಿವುಡ್ ತಾರೆಯರು ಕಾಣಿಸಿಕೊಂಡರು. ಇವರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್, ವರುಣ್ ಧವನ್, ಸಾರಾ ಅಲಿ ಖಾನ್, ಅನನ್ಯ ಪಾಂಡೆ, ರಾಣಿ ಮುಖರ್ಜಿ, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ರಣಬೀರ್ ಕಪೂರ್ ಸೇರಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.