ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್‌ಗೆ ದಿನಕ್ಕೆ 8-10 ಬಾರಿ ಕಾಲ್ ಮಾಡುತ್ತಿದ್ದರಂತೆ. ಅದರ ವಿಡಿಯೋ ವೈರಲ್ ಆಗಿದ್ದು, ಫ್ಯಾನ್ಸ್ ಹೇಳಿದ್ದೇನು?
ನಟ ಶಾರುಖ್ ಖಾನ್ (Shah Rukh Khan) ಮತ್ತು ಅವರ ಪತ್ನಿ ಗೌರಿ ಖಾನ್ ಅವರ ದಾಂಪತ್ಯ ಜೀವನಕ್ಕೆ 32 ವರ್ಷಗಳಾಗುತ್ತಾ ಬಂದಿವೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಬ್ಬಳ ಜೊತೆ ಮದುವೆಯಾಗುವ ಬಗ್ಗೆ ಹಲವಾರು ತರಕಾರುಗಳು ಇರುವ ನಡುವೆಯೂ ಈ ದಂಪತಿ ಮೂರು ದಶಕಗಳಿಂದ ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. ಶಾರುಖ್ ಖಾನ್ ವಯಸ್ಸು 57 ಆದರೂ ತರುಣರನ್ನೂ ನಾಚಿಸುವಂತೆ ಚಿತ್ರರಂಗದಲ್ಲಿ ನಾಯಕನಾಗಿಯೇ ಮಿಂಚುತ್ತಿದ್ದರೆ, ಅವರ ಪತ್ನಿ 52 ವರ್ಷದ ಗೌರಿ ಖಾನ್ ಅವರು ಇಂಟೀರಿಯರ್ ಡಿಸೈನರ್ ಆಗಿದ್ದು ಸದ್ಯ ಅದರಲ್ಲಿಯೇ ಬಿಜಿ ಇದ್ದಾರೆ. ಈಚೆಗಷ್ಟೇ ಇಂಟೀರಿಯರ್ ಡಿಸೈನ್ ಕುರಿತು ಗೌರಿ ಖಾನ್ ಅವರು ಬರೆದಿರುವ ಪುಸ್ತಕದ ಬಿಡುಗಡೆಯಾಗಿದೆ. ಗೌರಿ ಖಾನ್ ಅವರ ಮೂಲ ಹೆಸರು ಗೌರಿ ಚಿಬ್ಬರ್. ಗೌರಿಯವರು ಮದುವೆಯ ನಂತರವೂ ಹಿಂದೂ ಮತ್ತು ಮುಸ್ಲಿಂ ಧರ್ಮಗಳನ್ನು ಅನುಸರಿಸುತ್ತಿದ್ದಾರೆ. ವಿಶೇಷವೆಂದರೆ, ಮೊದಲು ಶಾರುಖ್-ಗೌರಿ (Shah rukh- Gouri) ರಿಜಿಸ್ಟರ್ ಮದುವೆ ಆಗಿದ್ದರು. ಆನಂತರ ಮುಸ್ಲಿಂ ಸಂಪ್ರದಾಯದ ಪ್ರಕಾರ, ನಂತರ ಪಂಜಾಬಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದರು. ಅಂದಹಾಗೆ, ಆ ವೇಳೆ 'ರಾಜು ಬನ್ ಗಯಾ ಹೀರೋ' ಸಿನಿಮಾದಲ್ಲಿ ಶಾರುಖ್ ನಟಿಸುತ್ತಿದ್ದರು. ಆ ಸಿನಿಮಾದ ಸೆಟ್‌ನಿಂದಲೇ ಸ್ಯೂಟ್ ಅನ್ನು ತಂದಿದ್ದ ಶಾರುಖ್, ಅದನ್ನೇ ಮದುವೆಗೆ ಧರಿಸಿದ್ದರಂತೆ! 1997ರ ನವೆಂಬರ್‌ನಲ್ಲಿ ಆರ್ಯನ್ ಖಾನ್‌ಗೆ ಗೌರಿ ಜನ್ಮ ನೀಡಿದರು. ಆನಂತರ 2000ರಲ್ಲಿ ಸುಹಾನಾ ಖಾನ್ ಕೂಡ ಜನಿಸಿದರು. ಮದುವೆಯಾಗಿ 22 ವರ್ಷಗಳ ನಂತರ ಬಾಡಿಗೆ ತಾಯ್ತನದ ಮೂಲಕ ಮತ್ತೊಂದು ಮಗುವನ್ನು ಈ ದಂಪತಿ ಪಡೆದುಕೊಂಡರು. ಆ ಮಗುವಿಗೆ ಅಬ್‌ರಾಮ್ ಎಂದು ಹೆಸರಿಟ್ಟಿದ್ದಾರೆ. ಒಟ್ಟು ಮೂವರು ಮಕ್ಕಳು ಈ ದಂಪತಿಗೆ ಇದ್ದಾರೆ.
ಈ ಸುಖಿ ದಂಪತಿಯ ಕುರಿತು ಈಗ ಕುತೂಹಲದ ಮಾಹಿತಿಯೊಂದು ಇದೀಗ ಬಹಿರಂಗಗೊಂಡಿದೆ. ಈ ಹಿಂದೆ ಗೌರಿ ಖಾನ್ ಅವರು ತಮ್ಮ ಪತಿ ತಮ್ಮ ಬಗ್ಗೆ ಎಷ್ಟು ಪೊಸೆಸಿವ್ ಆಗಿದ್ದರು ಎಂಬ ಬಗ್ಗೆ ಮಾತನಾಡಿದ್ದರು. ಶಾರುಖ್ ಖಾನ್ ಅವರ ಸ್ವಭಾವದ ಬಗ್ಗೆ ಹೇಳಿದ್ದ ಗೌರಿ ಖಾನ್, ಬಿಳಿ ಬಟ್ಟೆಯನ್ನು ಹಾಕದಂತೆ ತಮಗೆ ಶಾರುಖ್ ಆರಂಭದಲ್ಲಿ ಹೇಳುತ್ತಿದ್ದರು. ಅದಕ್ಕೆ ಕಾರಣ ಅದು ಪಾರದರ್ಶಕ (Transparent) ಆಗಿತ್ತು ಎನ್ನುವ ಕಾರಣಕ್ಕೆ ಎಂದು ಹೇಳಿದ್ದರು. ಬಿಳಿ ಬಣ್ಣದ ಡ್ರೆಸ್ ಧರಿಸಲು ನನಗೆ ಬಿಡುತ್ತಿರಲಿಲ್ಲ ಎಂದಿದ್ದರು. ಆದರೆ ಶಾರುಖ್ ಖಾನ್ ಅವರ ಈ ಸ್ವಭಾವದ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಅದನ್ನು ಹೇಗ್ಹೇಗೋ ನಿಭಾಯಿಸಿದೆ. ಇದು ತುಂಬಾ ಹಳೆಯ ವಿಷಯ ಆಗಿರು ಕಾರಣ ಅಲ್ಲಿಯೇ ಬಿಟ್ಟಿದ್ದೇನೆ ಎಂದಿದ್ದರು. ಶಾರುಖ್ ಖಾನ್ ಕೂಡ ಅಂದು ತಾವು ಮಾಡಿದ್ದು ತಪ್ಪು ಎಂದು ತಪ್ಪೊಪ್ಪಿಕೊಂಡಿದ್ದರು.
Shah Rukh and Gouri: ಹಿಂದೂ-ಮುಸ್ಲಿಂ ಇಂಟರೆಸ್ಟಿಂಗ್ ಲವ್ ಸ್ಟೋರಿ; ಬಿಳಿ ಡ್ರೆಸ್ಗೆ ನಿಷೇಧ ಹೇರಿದ್ರಂತೆ ಶಾರುಖ್!
ಆದರೆ ಈಗ ಇನ್ನೊಂದು ಹಳೆಯ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಶಾರುಖ್ ಖಾನ್ ಅವರು ತಾವು ಪತ್ನಿ ಗೌರಿ ಖಾನ್‌ಗೆ ದಿನಕ್ಕೆ 8-10 ಬಾರಿ ಕಾಲ್ ಮಾಡುತ್ತಿರುವ ವಿಷಯ ತಿಳಿಸಿದ್ದಾರೆ. ಕೆಲವೊಮ್ಮೆ ಐದು ನಿಮಿಷಕ್ಕೊಮ್ಮೆ ಕಾಲ್ ಮಾಡುತ್ತಿರುವುದಾಗಿ ಹೇಳಿದ್ದಾರೆ. ಸಂದರ್ಶನವೊಂದರ (Interview) ವೇಳೆ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಅದರಲ್ಲಿ ಯುವಕನೊಬ್ಬ ನೀವು ಪ್ರತಿ ಶೂಟಿಂಗ್ ಮುಗಿದ ಬಳಿಕ 8-10 ಬಾರಿ ಪತ್ನಿಗೆ ಕಾಲ್ ಮಾಡುತ್ತೀರಂತೆ ಹೌದೆ ಎಂದು ಕೇಳಿದರು. ನೀವೇನಾದ್ರೂ ಅವ್ರಿಗೆ ಹೆದರ್ತಿರಾ ಎಂದು ಪ್ರಶ್ನಿಸಿದರು. ಅದಕ್ಕೆ ಶಾರುಖ್, ಫೋನ್ ಮಾಡಿದರೆ ಏನಂತೆ? ಆಕೆಯ ನೆನಪಾದಾಗಲೆಲ್ಲಾ ಫೋನ್ ಮಾಡ್ತೇನೆ. ಕೆಲವೊಮ್ಮೆ ಐದು ನಿಮಿಷಕ್ಕೇ ಕಾಲ್ ಮಾಡ್ತೇನೆ. ನನ್ನ ಪತ್ನಿಗೆ ತಾನೆ ಕಾಲ್ ಮಾಡೋದು, ಪಕ್ಕದ ಮನೆಯ ಪತ್ನಿಗಲ್ವಲ್ಲಾ ಎಂದರು. ಆಗ ಅಲ್ಲಿದ್ದವರು ಗೊಳ್ಳೆಂದು ನಕ್ಕರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪತ್ನಿಯ ಮೇಲೆ ಭಯವಲ್ಲ, ಆಕೆಯ ಮೇಲೆ ಡೌಟ್ ಪಡ್ತಿರಬೇಕು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಅಂದಹಾಗೆ ಗೌರಿ ಅವರು, ಇಂಟೀರಿಯರ್ ಡಿಸೈನಿಂಗ್ ಹೊರತಾಗಿಯೂ ಗೌರಿ ಖಾನ್ 1999ರಲ್ಲಿ ಸಿನಿಮಾ ನಿರ್ಮಾಣಕ್ಕಿಳಿದರು. ಗೌರಿ (Gowri Khan) ಪೂರ್ಣಪ್ರಮಾಣದಲ್ಲಿ ನಿರ್ಮಾಣ ಮಾಡಿದ ಮೊದಲ ಸಿನಿಮಾ 'ಮೈ ಹೂಂ ನಾ'. ಆ ಸಿನಿಮಾ ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು. ಆನಂತರ ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಬ್ಯಾನರ್ (Banner) ಮೂಲಕ 'ಪಹೇಲಿ' , 'ಓಂ ಶಾಂತಿ ಓಂ', 'ಮೈ ನೇಮ್ ಈಸ್ ಖಾನ್', 'ರಾ ಓನ್', 'ಚೆನ್ನೈ ಎಕ್ಸ್‌ಪ್ರೆಸ್', 'ಹ್ಯಾಪಿ ನ್ಯೂ ಇಯರ್' ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ಗೌರಿ ನಿರ್ಮಿಸಿದ್ದಾರೆ.
ಐಶ್ವರ್ಯ ರೈಗಾಗಿ ಶಾರುಖ್-ಸಲ್ಮಾನ್ 5 ವರ್ಷಗಳ ಭಯಂಕರ ಶತ್ರುತ್ವ; ಬಿರಿಯಾನಿ ಮೂಲಕ ಪ್ಯಾಚಪ್!