ಹಾಲುಂಡ ತವರು ಖ್ಯಾತಿ ಸಿತಾರಾ ಎಲ್ಲಿ ಹೋದರು? ಇದೀಗ ಫೋಟೋ ವೈರಲ್!

By Suvarna NewsFirst Published Jul 20, 2023, 7:36 PM IST
Highlights

ಹಾಲುಂಡ ತವರು, ನಾನು ನನ್ನ ಕನಸು ಸೇರಿದಂತೆ 30ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಖ್ಯಾತ ನಟಿ ಸೀತಾರ 2018ರ ಬಳಿಕ ಪತ್ತೆ ಇಲ್ಲ. ಇದೀಗ ಸೀತಾರ ಪ್ರತ್ಯಕ್ಷಗೊಂಡಿದ್ದಾರೆ. ಸೀತಾರ ಫೋಟೋಗಳು ವೈರಲ್ ಆಗಿದೆ. 
 

ಶಬರಿಮಲೆ(ಜು.20) ಸ್ಯಾಂಡಲ್‌ವುಡ್‌ನಲ್ಲಿ ಹಾಲುಂಡ ತವರು ಚಿತ್ರದ ಮೂಲಕ ಭಾರಿ ಖ್ಯಾತಿ ಗಳಿಸಿದ ದಕ್ಷಿಣ ಭಾರತದ ನಟಿ ಸಿತಾರ 2018ರ ಬಳಿಕ ಪತ್ತೆ ಇಲ್ಲ. ಕನ್ನಡ, ತಮಿಳು, ಮಳೆಯಾಂ ಸಿನಿಮಾಗಳಲ್ಲೂ ಸೀತಾರ ಕಾಣಿಸಿಕೊಂಡಿಲ್ಲ. ಕೇವಲ ತೆಲು ಚಿತ್ರಗಳಲ್ಲಿ ಅಲ್ಲೊಂದು ಇಲ್ಲೊಂದು ಪಾತ್ರ ಮಾಡಿದ್ದಾರೆ. ಸಣ್ಣ ಪಾತ್ರಗಳನ್ನು ಬಿಟ್ಟರೆ ಸಿತಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇತ್ತ ಸ್ಯಾಂಡಲ್‌ವುಡ್ ಅಭಿಮಾನಿಗಳಂತೂ ಸೀತಾರ ಎಲ್ಲಿ ಹೋಗಿದ್ದಾರೆ ಅನ್ನೋ ಪ್ರಶ್ನೆ ಕೇಳುತ್ತಿದ್ದ ಬೆನ್ನಲ್ಲೇ ನಟಿ ಪ್ರತ್ಯಕ್ಷರಾಗಿದ್ದಾರೆ. ಸಿತಾರ ಪ್ರಸಿದ್ಧ ಶಬರಿಮಲೆ ಯಾತ್ರೆ ಮಾಡಿದ್ದಾರೆ. ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದಿರುವ ಸಿತಾರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿಕೊಂಡಿದ್ದಾರೆ.

ಸಿತಾರ ಅಯ್ಯಪ್ಪನ ದರ್ಶನ ಪಡೆಯುತ್ತಿರುವ ಫೋಟೋಗಳು ವೈರಲ್ ಆಗಿದೆ. ಇರುಮುಡಿ ಹೊತ್ತು ಸಿತಾರ ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಕುಟುಂಬ ಸದಸ್ಯರ ಜೊತೆ ಸಿತಾರ ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಕಾರ್ತಿಕಮಾಸದ ಆರಂಭದಲ್ಲಿ ಅಯ್ಯಪ್ಪನ ದರ್ಶನಕ್ಕಾಗಿ  ದೇವಸ್ಥಾನದ ಬಾಗಿಲು ತರೆಯಲಾಗುತ್ತದೆ. ಎರಡು ದಿನಗಳ ಕಾಲ ಶಬರಿಮಲೆಯಲ್ಲಿ ತಂಗಿದ್ದ ಸಿತಾರ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Latest Videos

ರಜನಿಕಾಂತ್ 'ಜೈಲರ್' ಕರ್ನಾಟಕ ವಿತರಣೆ ಹಕ್ಕು ಸೋಲ್ಡ್ ಔಟ್: ಮತ್ತೆ ಜಯಣ್ಣ ಪಾಲಿನ ಆಪದ್ಬಾಂಧವ ಆಗ್ತಾರಾ ಶಿವಣ್ಣ?

2018ರ ಬಳಿಕ ಕನ್ನಡದಿಂದ ಮಾತ್ರವಲ್ಲ, ತಮಿಳು, ಮಲೆಯಾಳಂ ಸಿನಿಮಾದಿಂದಲೂ ಸಿತಾರ ದೂರ ಉಳಿದಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಸಿತಾರ ಅಭಿನಯಿಸಿದ ಕೊನೆಯ ಚಿತ್ರ ಅಮ್ಮಾ ಐ ಲವ್ ಯೂ. ಚಿರಂಜೀವಿ ಸರ್ಜಾ ನಾಯಕ ನಟನಾಗಿ ಕಾಣಿಸಿಕೊಂಡ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಬಳಿಕ ತೆಲುಗು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

1994ರಲ್ಲಿ ಹಾಲುಂಡ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಸಿತಾರ ಮೊದಲ ಚಿತ್ರದಲ್ಲೇ ಸೂಪರ್ ಹಿಟ್ ಆದರು. ಬಳಿಕ ಕರುಳಿನ ಕುಡಿ, ಇಂಡಿಯನ್, ಕಾವ್ಯ, ಬಂಗಾರದ ಕಳಶ, ಬೇಟೆಗಾರ, ಶಿವಲೀಲೆ, ದೀರ್ಘ ಸುಮಂಗಲಿ, ಗಣೇಶನ ಗಲಾಟೆ, ಶ್ರಾವಣ ಸಂಜೆ, ಆಯುಧ, ಅನುರಾಗ ದೇವತೆ, ಹೆತ್ತವಳ ಕೂಗು, ಮುದ್ದಿನ ಅಳಿಯ, ಮನೆ ಮನೆ ರಾಮಾಯಣ, ಬಂಗಾರದ ಮನೆ, ಸ್ತ್ರಿ, ಸಾಂಗ್ಲಿಯಾನಾ ಭಾಗ 3, ಗಣೇಶ ಐ ಲವ್ ಯೂ, ಜಾಕಿ ಚಾನ್, ಪೊಲೀಸ್ ಬೇಟೆ, ಅಮ್ಮಾವ್ರ ಗಂಡ, ಬಯಲು ದೀಪ, ಜೇನು ಗೂಡು, ನಾನು ನನ್ನ ಕನಸು, ಜನ್ಮ, ಮಿ.ಐರಾವತ, ಚಕ್ರವ್ಯೂಹ, ಬೃಹಸ್ಪತಿ, ಬಕಾಸುರ, ಅಮ್ಮಾ ಐ ಲವ್ ಯೂ ಎಂಬ ಕನ್ನಡ ಚಿತ್ರಗಳಲ್ಲಿ ಸಿತಾರ ನಟಿಸಿದ್ದಾರೆ. 

1989ರಲ್ಲಿ ತಮಿಳು ಚಿತ್ರರಂಗದ ಮೂಲಕ ನಟನಾ ವೃತ್ತಿಗೆ ಕಾಲಿಟ್ಟ ಸಿತಾರ ತಮಿಳು, ತೆಲುಗು, ಕನ್ನಡ ಹಾಗೂ ಮಳೆಯಾಳಂನಲ್ಲಿ ಸೂಪರ್ ಹಿಟ್ ಚಿತ್ರ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 37 ವರ್ಷದ ಸಿತಾರ ಇದೀಗ  ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇದರ ನಡುವೆ ಅಲ್ಲೊಂದು ಇಲ್ಲೊಂದು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2021ರ ಬಳಿಕ ಟಿವಿ ಧಾರಾವಾಹಿಯಿಂದಲೂ ಸಿತಾರ ದೂರ ಉಳಿದಿದ್ದಾರೆ.

ಬಾಲಿವುಡ್‌ಗೆ ಹಾರಿದ 'ಮಹಾನಟಿ' ಕೀರ್ತಿ: ಖ್ಯಾತ ನಟನ ಜೊತೆ ರೊಮ್ಯಾನ್ಸ್

ಇದೀಗ ಸಿತಾರಾ ಶಬರಿಮಲೆ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ದೇವಸ್ವಂ ಮಂಡಳಿಯ ನೇತೃತ್ವದಲ್ಲಿ ನಡೆಯುತ್ತಿರುವ ರಾಮಾಯಾಣ ಮಾಸಾಚರಣೆಯೂ ಶಬರಿಮಲೆಯಲ್ಲಿ ಆರಂಭಗೊಂಡಿದೆ. ಈ ಮಾಸದಲ್ಲಿ ರಾಮಾಯಣ ಪಾರಾಯಣ ನಡೆಯಲಿದೆ. ಅಯ್ಯಪ್ಪ ದರ್ಶನಕ್ಕಾಗಿ ಬಾಗಿಲು ತರೆಯಲಾಗಿದೆ. ಹೀಗಾಗಿ ಅನೇಕ ಭಕ್ತರು ಶಬರಿಮಲೆಗೆ ಆಗಮಿಸುತ್ತಿದ್ದಾರೆ.

click me!