ಕಾಶಿಯಲ್ಲಿ ಬಾಹುಬಲಿಯ ಮಾಸ್ಟರ್​ ಮೈಂಡ್! ರಾಜಮೌಳಿಯಿಂದ ವಾರಣಾಸಿ ರೀ ಕ್ರಿಯೆಟ್..!

Published : Mar 30, 2026, 03:17 PM IST
SS Rajamouli

ಸಾರಾಂಶ

ಎಸ್.ಎಸ್. ರಾಜಮೌಳಿ ಅವರು ಮಹೇಶ್ ಬಾಬು ಜೊತೆಗಿನ ತಮ್ಮ ಮುಂದಿನ ಜಾಗತಿಕ ಚಿತ್ರಕ್ಕಾಗಿ ಹೈದರಾಬಾದ್‌ನಲ್ಲಿ ವಾರಣಾಸಿಯ ಬೃಹತ್ ಸೆಟ್ ಅನ್ನು ನಿರ್ಮಿಸಿದ್ದಾರೆ. ಸುಮಾರು 1,400 ಕೋಟಿ ಬಜೆಟ್‌ನ ಈ ಚಿತ್ರದ ಶೂಟಿಂಗ್ ಸೆಟ್‌ನ ಫೋಟೋಗಳು ಲೀಕ್ ಆಗಿದ್ದು, ಇದು 'ಬಾಹುಬಲಿ' ಮತ್ತು 'RRR' ಚಿತ್ರಗಳನ್ನು ಮೀರಿಸುವ ನಿರೀಕ್ಷೆಯಿದೆ.

ಬೆಂಗಳೂರು: ಸಿನಿಮಾಗಾಗಿ ಹೊಸ ಪ್ರಪಂಚವನ್ನೇ ಸೃಷ್ಟಿಸೋ ಮಹಾನ್ ಮಾಂತ್ರಿಕ ಎಸ್​ ಎಸ್​​ ರಾಜಮೌಳಿ. ಬಾಹುಬಲಿಯಲ್ಲಿ ಐತಿಹಾಸಿಕ ಜಗತ್ತನ್ನೇ ತೆರೆದಿಟ್ಟದ್ದ ಮೌಳಿ, ಆರ್‌ಆರ್‌ಆರ್‌ನಲ್ಲಿ ಬ್ರಿಟೀಷ್​​​​ ಪ್ರಪಂಚವನ್ನ ತೋರಿಸಿದ್ರು. ಈಗ ಗ್ಲೋಬಲ್​ ಮೂವಿಗಾಗಿ ವಾರಣಾಸಿಯನ್ನೇ ಕ್ರಿಯೆಟ್ ಮಾಡಿದ್ದಾರೆ. ಆ ವಾರಣಾಸಿಯ ಸೆಟ್​ ನೋಡಿದ್ರೆ ನಿಮಗೆ ಕಾಶಿಗೆ ಹೋದ ಅನುಭವ ಆಗುತ್ತೆ. ಹಾಗಾದ್ರೆ ಮೌಳಿ ಕಲ್ಪನೆಯ ಕಾಶಿ ವಾರಣಾಸಿ ಹೇಗಿದೆ? ನೋಡೋಣ ಬನ್ನಿ.

ಹೌದು, ಭಾರತೀಯ ಚಿತ್ರರಂಗದ ಜಕ್ಕಣ್ಣ ಎಸ್​.ಎಸ್​ ರಾಜಮೌಳಿಯ ಬಹು ದೊಡ್ಡ ಕನಸು ವಾರಣಾಸಿ ಸಿನಿಮಾ. ಪ್ರಿನ್ಸ್​ ಮಹೇಶ್​ ಬಾಬುರನ್ನ ತನ್ನ ವಾರಣಾಸಿಯ ಹೀರೋ ಮಾಡ್ಕೊಂಡಿರೋ ರಾಜಮೌಳಿ ಒಂದೊಂದೇ ಹೆಜ್ಜೆಯನ್ನಿಡುತ್ತಾ ಕಾಶಿಯ ಸಂಪೂರ್ಣ ಕಥೆಯನ್ನ ಕೆತ್ತಿದ್ದಾರೆ. ಸಿನಿಮಾ ಶೂಟಿಂಗ್ ಕೂಡ ಭಾರಿ ಅದ್ಧೂರಿಯಾಗಿ ನಡೆಯುತ್ತಿದೆ. ಈ ಟೈಮ್​​ನಲ್ಲಿ ಮೌಳಿ ಕಲ್ಪನೆಯ ವಾರಣಾಸಿ ಹೇಗಿರುತ್ತೆ ಅನ್ನೊದಕ್ಕೆ ಶೂಟಿಂಗ್​ ಸೆಟ್​​ನ ಹಲವು ಫೋಟೋಗಳು ಲೀಕ್ ಆಗಿವೆ.

ವಾರಣಾಸಿ ಸೆಟ್ ಲೀಕ್, ಕಾಶಿ ರೀ-ಕ್ರಿಯೇಟ್..!

ಪ್ರಿನ್ಸ್ ಮಹೇಶ್ ಬಾಬು ಜೊತೆ ರಾಜಮೌಳಿ ನಿರ್ದೇಶನ ಮಾಡುತ್ತಿರೋ ಗ್ಲೋಬಲ್ ಮೂವಿ ವಾರಣಾಸಿ. ಆ ಸಿನಿಮಾಗಾಗಿ ವಿಶ್ವನಾಥ ನೆಲೆಸಿರೋ ಕಾಶಿಯನ್ನೇ ಕಂಪ್ಲೀಟ್ ಆಗಿ ರೀ-ಕ್ರಿಯೇಟ್ ಮಾಡಿದ್ದಾರೆ ರಾಜಮೌಳಿ. ಹೈದ್ರಾಬಾದ್‌‌ನಲ್ಲಿ ಜಕ್ಕಣ್ಣನ ವಾರಣಾಸಿ ತಲೆ ಎತ್ತಿದೆ. ಈ ಸೆಟ್​​ ನೋಡಿದ್ರೆ ನಿಮಗೆ ಕಾಶಿಗೆ ಹೋದ ಫೀಲ್ ಆಗುತ್ತೆ. ಒಂದೊಂದು ಘಾಟ್ ಕೂಡ ಕಣ್ಣಿಗೆ ಕಟ್ಟಿದಂತಿದೆ.

ಇದು 1,400 ಕೋಟಿ ಬಜೆಟ್‌ನ 'ವಾರಣಾಸಿ'!

ಸಕ್ಸಸ್‌‌ಗೆ ಕೇರ್ ಆಫ್ ಅಡ್ರೆಸ್ ಅಂದ್ರೆ ಅದು ಎಸ್ ಎಸ್ ರಾಜಮೌಳಿ. ಮಾಡಿದ ಎಲ್ಲಾ ಸಿನಿಮಾಗಳು ಆಲ್ ಟೈಂ ಬ್ಲಾಕ್ ಬಸ್ಟರ್‌ಗಳೇ. ಸಿನಿಮಾಗಾಗಿ ಹೊಸ ಪ್ರಪಂಚವನ್ನೇ ಕಟ್ಟಿ, ಅದರೊಳಗೆ ಪ್ರೇಕ್ಷಕರಿಗೆ ವೆಲ್ಕಮ್ ಹೇಳುವ ಮೌಳಿ, ನಿರೀಕ್ಷೆಗೆ ಮೀರಿದ ಥ್ರಿಲ್ ಕೊಡ್ತಾರೆ. ಅದಕ್ಕೆ ಬಾಹುಬಲಿ, ತ್ರಿಬಲ್ ಆರ್ ಸಿನಿಮಾಗಳೇ ಸಾಕ್ಷಿ.

ಬಾಹುಬಲಿ, ಆರ್‌ಆರ್‌ಆರ್​ ಮೀರಿಸೋ ವಾರಣಾಸಿ

ರಾಜಮೌಳಿಯ ರೆಕಾರ್ಡ್​ ಬುಕ್​​ನಲ್ಲಿ ಬಾಹುಬಲಿ ಹಾಗು ಆರ್‌ಆರ್‌ಆರ್ ಸಿನಿಮಾಗಳ ತೂಕ ಒಂದುಕಡೆ ಆದ್ರೆ, ಈಗ ಬರುತ್ತಿರೋ ವಾರಣಾಸಿಯದ್ದು ಮತ್ತೊಂದು ಲೆವೆಲ್. ಯಾಕಂದ್ರೆ ಇದು ಗ್ಲೋಬಲ್​ ಸಿನಿಮಾ. ಸೂಪರ್ ಸ್ಟಾರ್ ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ಜೊತೆಗೂಡಿ ವಾರಣಾಸಿ ಮೂವಿ ಮಾಡ್ತಿದ್ದಾರೆ. ಸುಮಾರು 1,400 ಕೋಟಿ ಬಿಗ್ ಬಜೆಟ್ ಮೂವಿ ಇದಾಗಿದ್ದು, ಸಿಂಗಲ್ ಟೀಸರ್‌ನಿಂದಲೇ ನೋಡುಗರ ಹುಬ್ಬೇರಿಸಿದೆ.

ವಾರಣಾಸಿ ಟೈಟಲ್‌ಗೆ ತಕ್ಕನಾಗಿ ಕಾಶಿ ಬ್ಯಾಕ್‌ಡ್ರಾಪ್‌ನಲ್ಲೇ ಶೂಟಿಂಗ್ ಮಾಡಲಾಗ್ತಿದೆ. ಆದ್ರೆ ಕಾಶಿಗೇ ಹೋಗಿ ಮೌಳಿಗೆ ಬೇಕಾದ ಹಾಗೆ ಸಿನಿಮಾ ಚಿತ್ರೀಕರಿಸೋದು ಅಸಾಧ್ಯ. ಹೀಗಾಗಿ ಕಂಪ್ಲೀಟ್ ಕಾಶಿಯನ್ನೇ ರೀ ಕ್ರಿಯೇಟ್ ಮಾಡಿ ಚಿತ್ರ ಪ್ರೇಮಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಜೆಸ್ಟ್​ ಫೋಟೋಗಳೇ ಇಷ್ಟೊಂದು ಥ್ರಿಲ್ ಕೊಡಿತ್ತೆ ಅಂದ್ರೆ ಇನ್ನು ಸಿನಿಮಾ ಅದಿನ್ನೇಗೆ ಇರಬಹುದು ಊಹಿಸಿ.

ವಿಜಯ್ ಪಟೆದಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

RGV: 'ಚಿತ್ರರಂಗದ ಮೇಲೆ ಆಟಂಬಾಂಬ್ ಸ್ಫೋಟ' ಎಂದ ಆರ್‌ಜಿವಿ ಮಾತಿಂದ ಹೊಸ ಸಂಚಲನ, ಪರ-ವಿರೋಧ ಸೃಷ್ಟಿ!
ಹೊಸ ಶೆಟ್ರು ಬಳಗ ಸೃಷ್ಟಿಸಿಕೊಂಡ್ರಾ ಕುಂದಾಪುರ ಕುವರ? ಬೇರೆಯವರಿಗೆ ದುಡಿದದ್ದು ಸಾಕು ತತ್ವ ಪಾಲಿಸ್ತಾರಾ ರಿಷಬ್ ಶೆಟ್ರು..?