ಹಿಂದೊಮ್ಮೆ ಸೌಂದರ್ಯದ ಘನಿಯಂತಿದ್ದ ನಟಿ ಶಬನಾ ಅಜ್ಮಿ ವಿವಾಹಿತ ಜಾವೇದ್ ಅಖ್ತರ್ ಜೊತೆ ಪ್ರೇಮಪಾಶಕ್ಕೆ ಸಿಲುಕಿದಾಗ ಆಗಿದ್ದೇನು?
70ರ ದಶಕದಿಂದ 2-3 ದಶಕಗಳವರೆಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು ನಟಿ ಶಬನಾ ಅಜ್ಮಿ. 1950ರಲ್ಲಿ ದೆಹಲಿಯಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಶಬನಾ (Shabana Azmi) ಅವರು, ಬಾಲಿವುಡ್ನಲ್ಲಿ ಬಹುದೊಡ್ಡ ಹೆಸರು ಮಾಡಿದವರು. ಚಲನಚಿತ್ರ ಕಲಾವಿದೆಯ ಜೊತೆ ಸಾಮಾಜಿಕ ಕಾರ್ಯಕರ್ತೆ ಕೂಡ. 1998ರಲ್ಲಿ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಗೆ ಸೌಹಾರ್ದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಬಾಲಿವುಡ್ ಆಳುತ್ತಿದ್ದ ಸಮಯದಲ್ಲಿ ಇವರ ದರ್ಶನ ಪಡೆಯಲು ಜನರು ಏನು ಬೇಕಾದರೂ ಮಾಡುತ್ತಿದ್ದರು ಎನ್ನಲಾಗುತ್ತದೆ. ಅಂಥ ಸೌಂದರ್ಯ ಹಾಗೂ ಅದ್ಭುತ ಪ್ರತಿಭೆಯಿಂದ ಮೋಡಿ ಮಾಡಿವರು ಈಕೆ. ತಮ್ಮ ಸೌಂದರ್ಯ ಮತ್ತು ಪ್ರತಿಭೆಯಿಂದ ಲಕ್ಷಾಂತರ ಜನರನ್ನು ಹುಚ್ಚನನ್ನಾಗಿ ಮಾಡಿದ ನಟಿ ಶಬಾನಾ ಅಜ್ಮಿ, ಬರಹಗಾರ ಜಾವೇದ್ ಅಖ್ತರ್ ಅವರಿಗೆ ಹೃದಯ ನೀಡಿ ವಿವಾದದಲ್ಲಿ ಸಿಲುಕಿದರು.
ಜಾವೇದ್ ಅಖ್ತರ್ ಖ್ಯಾತ ಗಾಯಕ, ಕೆಲ ದಿನಗಳ ಹಿಂದೆ ಪಾಕಿಸ್ತಾನಕ್ಕೆ ಹೋಗಿ ಪಾಕಿಗಳನ್ನು ಬಯ್ದು ಭಾರಿ ಸುದ್ದಿಯಾದವರು ಇವರು. ಪಾಕಿಗಳ ನೆಲದಲ್ಲಿಯೇ ನಿಂತು ಅವರ ವಿರುದ್ಧ ಗುಡುಗಿದವರು. 2008ರಲ್ಲಿ ಮುಂಬೈನಲ್ಲಿ ಉಗ್ರರ ದಾಳಿ ಮಾಡಿಸಿದವರು ಈಗಲೂ ಪಾಕಿಸ್ತಾನದಲ್ಲಿ ಆರಾಮವಾಗಿ ಅಡ್ಡಾಡುತ್ತಿದ್ದಾರೆ ಎಂದು ಲಾಹೋರ್ನಲ್ಲಿ ಹೇಳಿ ಭಾರಿ ಸುದ್ದಿ ಮಾಡಿರುವ ಇದೇ ಜಾವೇದ್ ಅಖ್ತರ್ (Javed Akhtar) ಅವರ ಪ್ರೇಮಪಾಶದಲ್ಲಿ ಹಿಂದೊಮ್ಮೆ ಸಿಲುಕಿದವರು ನಟಿ ಶಬನಾ ಅಜ್ಮಿ. ಅಷ್ಟಕ್ಕೂ ಇವರ ಪ್ರೀತಿ ಏಕೆ ವಿವಾದಕ್ಕೆ ಕಾರಣವಾಯಿತು ಎನ್ನುವುದನ್ನು ನಟಿ ಈಚೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
Jayaprada Birthday: ಅಪ್ರತಿಮ ಸುಂದರಿ ಬಾಳಲ್ಲಿ ಬಿರುಗಾಳಿ- ಮದ್ವೆಯಾದ್ರೂ ಸಿಗಲಿಲ್ಲ ಪತ್ನಿಯ ಸ್ಥಾನಮಾನ!
ತಾವು ಜಾವೇದ್ ಅವರಿಗೆ ಹೃದಯ ಕೊಟ್ಟಾಗ ಅವರ ಮದುವೆಯಾಗಿ ಹೋಗಿತ್ತು. ವಿವಾಹಿತ ವ್ಯಕ್ತಿಯನ್ನು ಪ್ರೀತಿಸುವುದು ನನಗೆ ಸುಲಭವಿರಲಿಲ್ಲ ಎಂದಿದ್ದಾರೆ. ಶಬಾನಾ ಅಜ್ಮಿ ತನ್ನ ಮತ್ತು ಜಾವೇದ್ ಅಖ್ತರ್ ಅವರ ಸಂಬಂಧವು ಅನೇಕ ಏರಿಳಿತಗಳ ಮೂಲಕ ಸಾಗಿತ್ತು. ಇವೆಲ್ಲವುಗಳ ಹೊರತಾಗಿ ಶಬನಾ ಮತ್ತು ಜಾವೇದ್ ಮದುವೆಯಾದರು. ಆದರೆ ಜಾವೇದ್ ಅಖ್ತರ್ ಮೊದಲ ಪತ್ನಿಗೆ ವಿಚ್ಛೇದನ ನೀಡದೆ 1984ರಲ್ಲಿ ಶಬಾನಾ ಅಜ್ಮಿ ಅವರನ್ನು ವಿವಾಹವಾದರು. ಈ ಮದುವೆಯಾದ ಒಂದು ವರ್ಷದ ನಂತರ, ಜಾವೇದ್ ಅಖ್ತರ್ ಅವರು ತಮ್ಮ ಮೊದಲ ಪತ್ನಿ ಮತ್ತು ಚಿತ್ರಕಥೆಗಾರ್ತಿ ಹನಿ ಇರಾನಿ (Honey Irani) ಅವರಿಗೆ ವಿಚ್ಛೇದನ ನೀಡಿದರು. ಈ ದಂಪತಿಗೆ ಅದಾಗಲೇ ಇಬ್ಬರು ಮಕ್ಕಳಿದ್ದರು. ಅವರೆಂದರೆ ಜೋಯಾ ಮತ್ತು ಫರ್ಹಾನ್ ಅಖ್ತರ್.
ವಿವಾಹಿತನ ಜೊತೆ ಮದುವೆಯಾಗಿ ತಾವು ಪಡಬಾರದ ಕಷ್ಟ ಪಟ್ಟಿರುವುದಾಗಿ ಶಬನಾ ಹೇಳಿದ್ದಾರೆ. ಮದುವೆಯಾಗಲೇಬಾರದು ಎಂದು ನಿರ್ಧರಿಸಲಾಗಿತ್ತು. ವಿವಾಹಿತನ ಪ್ರೀತಿಗೆ (Lovestrory) ಬಿದ್ದಾಗಿತ್ತು. ಆದರೆ ಅವರ ಇಬ್ಬರು ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದ ಕಾರಣ, ಹಲವಾರು ಬಾರಿ ಇಬ್ಬರೂ ಬ್ರೇಕ್ ಅಪ್ ಮಾಡಿಕೊಳ್ಳಲು ಚಿಂತಿಸಿದೆವು. ಆದರೆ ಕೊನೆಗೂ ಸಾಧ್ಯವಾಗಲೇ ಇಲ್ಲ ಎಂದಿದ್ದಾರೆ. ಮದುವೆಯ ಸಮಯದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದೆ. ತಮ್ಮ ಈ ನಿರ್ಧಾರಕ್ಕೆ ಸಮಾಜ ವಿರೋಧಿಸುವುದು ದೂರದ ಮಾತು, ಖುದ್ದು ಮನೆಯವರೇ ವಿರೋಧ ವ್ಯಕ್ತಪಡಿಸಿದ್ದರು ಎಂದಿದ್ದಾರೆ. 'ಇದು ತುಂಬಾ ಕಷ್ಟದ ಸಮಯವಾಗಿತ್ತು. ಅವರ ಮಕ್ಕಳ ಬಳಿ ಮಾತನಾಡಿ ನಂತರ ಮದುವೆಯಾಗುವ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಇದು ಸಾಧ್ಯವಾಗಲಿಲ್ಲ. ಎಲ್ಲರ ತಿರಸ್ಕಾರದ ನಡುವೆಯೇ ಮದುವೆಯಾದೆವು' ಎಂದು ನಟಿ ಹೇಳಿದರು. 'ಆದರೆ ಇಂದು ನಾನು ಪ್ರತಿಯೊಬ್ಬರ ಉತ್ತಮ ಸ್ನೇಹಿತನಂತೆ ಇದ್ದೇನೆ. ಫರ್ಹಾನ್ ಮತ್ತು ಜೋಯಾ ಅವರೊಂದಿಗಿನ ನನ್ನ ಸಂಬಂಧವು ತುಂಬಾ ಗಟ್ಟಿಯಾಗಿದೆ' ಎಂದಿದ್ದಾರೆ.
Neetu Shetty: 'ಮದುವೆ ವಿಡಿಯೋ' ಶೇರ್ ಮಾಡಿ ಅಭಿಮಾನಿಗಳ ತಬ್ಬಿಬ್ಬು ಮಾಡಿದ ನಟಿ