ಸೀತಾರಾಮ ಸೀರಿಯಲ್ ಮುನ್ನೂರು ಕಂತುಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ರಾಮ್ ಪಾತ್ರಧಾರಿ ಗಗನ್ ಚಂಗಪ್ಪ ನೇರಪ್ರಸಾರದಲ್ಲಿ ಬಂದು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾರಾಮ ಸೀರಿಯಲ್ 300 ಕಂತುಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ, ರಾಮ್ ಪಾತ್ರಧಾರಿ ಗಗನ್ ಚಂಗಪ್ಪ ಅವರು ಇನ್‌ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಇಡೀ ಟೀಮ್ ಸದಸ್ಯರನ್ನು ಪರಿಚಯ ಮಾಡಿಸಿದ್ದಾರೆ. ಒಂದು ಧಾರಾವಾಹಿ ಇಷ್ಟೊಂದು ಯಶಸ್ವಿಯಾಗಬೇಕಾದರೆ ಕಲಾವಿದರ ಶ್ರಮ ಎಷ್ಟಿರುತ್ತದೆಯೋ, ಅದಕ್ಕಿಂತಲೂ ಹೆಚ್ಚಿನ ಶ್ರಮ ಇರುವುದು ಪರದೆಯ ಹಿಂದಿರುವ ಕೈಗಳಿಂದ. ನಿರ್ದೇಶಕರು, ತಂತ್ರಜ್ಞರು, ಆಫೀಸ್ ಬಾಯ್‌ಗಳು, ವೇಷ-ಭೂಷಣ ಮಾಡುವವರು, ಮೇಕಪ್ ಆರ್ಟಿಸ್ಟ್... ಹೀಗೆ ಒಂದು ಚಿತ್ರದ ಯಶಸ್ಸಿಗೆ ತೆರೆಮರೆಯಲ್ಲಿ ಶ್ರಮಿಸುವ ಜೀವಗಳೇ ಹಲವು. ಜನರಿಗೆ ಕಾಣುವುದು ತೆರೆ ಮೇಲೆ ಬರುವ ಕಲಾವಿದರು ಅಷ್ಟೇ.
ಈ ಹಿನ್ನೆಲೆಯಲ್ಲಿ ಇಡೀ ಸದಸ್ಯರನ್ನು ಪರಿಚಯ ಮಾಡಿಸಿದ್ದಾರೆ ಗಗನ್. ಇದೇ ವೇಳೆ ಕಲಾವಿದರಾದ ಸೀತಾ ಅಂದರೆ ವೈಷ್ಣವಿ ಗೌಡ, ಪ್ರಿಯಾ ಅಂದರೆ ಮೇಘನಾ ಶಂಕರಪ್ಪ ಸೇರಿದಂತೆ ಕೆಲ ಕಲಾವಿದರನ್ನು ರಾಮ್ ಪರಿಚಯ ಮಾಡಿದ್ದಾರೆ. ನಿಮಗೆ ಏನಾದರೂ ಪ್ರಶ್ನೆಗಳು ಇದ್ದರೆ ಕೇಳಿ ಎಂದು ಗಗನ್ ಹೇಳಿದ್ದರು. ಆದರೆ ಇದೇ ವೇಳೆ ಶೂಟಿಂಗ್ ಸೆಟ್ ಸೇರಿದಂತೆ ಸೀರಿಯಲ್‌ಗೆ ಸಂಬಂಧಿಸಿದ ಹಲವು ದೃಶ್ಯಗಳನ್ನು ವಿವರಿಸಿದ್ದು, ನೇರ ಪ್ರಸಾರದಲ್ಲಿಯೇ ಎಲ್ಲಾ ಜಾಗಗಳ ಪರಿಚಯ ಮಾಡಿಸಿದ್ದಾರೆ.
ಶೂಟಿಂಗ್ ಅಂದ್ರೆ ಸುಮ್ನೇನಾ? ಬೈಕ್‌ನಲ್ಲಿ ನಟಿಯನ್ನು ಕರ್ಕೊಂಡು ಹೋಗೋದಕ್ಕೂ ಎಷ್ಟು ಸರ್ಕಸ್ ಮಾಡ್ತಾರೆ ನೋಡಿ...
ಈ ನೇರಪ್ರಸಾರದಲ್ಲಿ ಅಭಿಮಾನಿಗಳು ಶುಭಾಶಯಗಳ ಸುರಿಮಳೆಯನ್ನೇ ಹರಿಸಿದ್ದಾರೆ. ನಿಮ್ಮ ಜೋಡಿ ಇಷ್ಟ, ನೀವೆಂದ್ರೆ ಇಷ್ಟ, ನಿಮ್ಮ ಸೀರಿಯಲ್ ಇಷ್ಟ, ದಿನವೂ ಈ ಸೀರಿಯಲ್‌ಗಾಗಿ ಕಾಯುತ್ತೇವೆ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಇದರಲ್ಲಿ ಕೆಲವರು ವಿಲನ್‌ಗಳಾದ ಭಾರ್ಗವಿ ಮತ್ತು ಚಾಂದನಿ ವಿರುದ್ಧ ಮಾತನಾಡಿದ್ದಾರೆ. ಸೀರಿಯಲ್‌ಗಳು ಎಂದ್ರೆ ಹಾಗೇ ಅಲ್ವಾ? ಅದನ್ನು ಧಾರಾವಾಹಿ ಎಂದು ನೋಡದೇ ನಿಜ ಜೀವನದ ಕಥೆ ಎಂದುಕೊಳ್ಳುವವರೇ ಹೆಚ್ಚು. ಇದೇ ಕಾರಣಕ್ಕೆ ವಿಲನ್ ಪಾತ್ರಧಾರಿಗಳು ಹೊರಕ್ಕೆ ಹೋದರೂ ಅವರನ್ನು ನಿಲ್ಲಿಸಿ ಬೈಯುವ ಜನರೂ ಇದ್ದಾರೆ.
ಇಲ್ಲಿಯೂ ಹಾಗೆ. ಕಮೆಂಟ್‌ಗಳಲ್ಲಿ ಭಾರ್ಗವಿ ಚಿಕ್ಕಿ ಒಳ್ಳೆಯವಳಲ್ಲ, ಅವಳನ್ನು ಮುಗಿಸಿಬಿಡು. ನಾವಿದ್ದೇವೆ ಎಂದು ಧೈರ್ಯ ತುಂಬುತ್ತಿದ್ದಾರೆ ಫ್ಯಾನ್ಸ್. ಇದೀಗ ಸೀರಿಯಲ್‌ನಲ್ಲಿ ಟ್ವಿಸ್ಟ್ ಬಂದಿದೆ. ಸಿಹಿ-ಸೀತಾಳ ರಹಸ್ಯ ಅರಿತಿರುವ ವೈದ್ಯೆಯ ಎಂಟ್ರಿ ಆಗಿದೆ. ಇನ್ನು ನಿನ್ನ ಕಥೆ ಮುಗಿದಂತೆ ಎಂದು ಭಾರ್ಗವಿ ಸೀತಾಳಿಗೆ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದಾಳೆ. ಇದರ ನಡುವೆಯೇ, ಸೀತಾಳಿಗೆ ಭಾರ್ಗವಿ ಕುತಂತ್ರದ ಅರಿವಾಗಿದೆ. ರಾಮ್‌ಗೂ ತನ್ನ ಚಿಕ್ಕಿ ಹೀಗೆ ಏಕೆ ಮಾಡಿದ್ದಾಳೆ ಎನ್ನುವುದೇ ಚಿಂತೆ. ಈಗ ಡಾಕ್ಟರ್ ಸೀತಾಲಕ್ಷ್ಮಿ ಏನು ಹೇಳುತ್ತಾಳೋ ಎನ್ನುವ ಕುತೂಹಲವಿದೆ.
ಭಗವದ್ಗೀತೆ, ಕಗ್ಗದ ಸಾಲುಗಳ ಮೂಲಕವೇ ಚಕಾಚಕ್ ಜಾದೂ ಮಾಡಿದ ನಟ ಎಂ.ಡಿ ಕೌಶಿಕ್!