ಪರೀಕ್ಷೆಯಲ್ಲಿ ಪುನೀತ್ ಬಗ್ಗೆ ಪ್ರಶ್ನೆ; ವೈರಲ್ ಆದ ಪ್ರಶ್ನೆಪತ್ರಿಕೆ

By Shruiti G Krishna  |  First Published Mar 26, 2022, 2:52 PM IST

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಗ್ಗೆ ಬೆಂಗಳೂರಿನ ಶಾಲೆಯೊಂದರಲ್ಲಿ ಪರೀಕ್ಷೆಯಲ್ಲಿ ಪ್ರಶ್ನೆ ಕೇಳಲಾಗಿದೆ. ಪ್ರಶ್ನೆ ಪತ್ರಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ (Puneeth Rajkumar) ಸಾಕ್ಷಾತ್ ದೇವರಾಗಿದ್ದಾರೆ. ಅನೇಕ ಅಭಿಮಾನಿಗಳು ಅವರನ್ನು ಪೂಜೆ ಮಾಡುತ್ತಿದ್ದಾರೆ. ಅಭಿಮಾನಿ ದೇವರುಗಳ ಮನೆಯ ದೇವರಗುಡಿಯಲ್ಲಿ ಅಪ್ಪು ಫೋಟೋ ಇಟ್ಟು ಪ್ರತಿದಿನ ಪೂಜೆ ಮಾಡಲಾಗುತ್ತಿದೆ. ಅಲ್ಲದೆ ದೇವಸ್ಥಾನಗಳಲ್ಲಿ, ಉತ್ಸವಗಳಲ್ಲಿ ಅಪ್ಪು ಫೋಟೋ ರಾರಾಜಿಸುತ್ತದೆ. ಅಪ್ಪು ಅವರ ಸಾಮಾಜಿಕ ಕೆಲಸಗಳು ಎಲ್ಲರಿಗೂ ಮಾದರಿ ಆಗಿದೆ. ನಟನೆ ಜೊತೆಗೆ ಅನೇಕ ಸಮಾಜಮುಖಿ ಕೆಲಸಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಅಪ್ಪು ತಾನು ಮಾಡಿದ ಸಹಾಯದ ಬಗ್ಗೆ ಎಲ್ಲಿಯೂ ಹೇಳಿಕೊಂಡವರಲ್ಲ. ಈ ಬಗ್ಗೆ ಪ್ರಚಾರ ಗಿಟ್ಟಿಸಿಕೊಂಡಿಲ್ಲ. ಅವರ ನಿಧನದ ಬಳಿಕವೇ ಎಲ್ಲಾ ಬಹಿರಂಗವಾಗಿರುವುದು. ಅಪ್ಪು ಮಾಡಿದ ಉತ್ತಮ ಕೆಲಸಗಳು ಎಲ್ಲರಿಗೂ ಅಚ್ಚರಿ ಪಡುವಂತೆ ಮಾಡಿತ್ತು. ಶಾಲೆಗಳ ಬಗ್ಗೆ ಮತ್ತು ವಿದ್ಯಾಭ್ಯಾಸದ ಬಗ್ಗೆ ಅಪ್ಪು ಅವರಿಗೆ ವಿಶೇಷ ಕಾಳಜಿ. ಎಲ್ಲಾ ಮಕ್ಕಳು ವಿದ್ಯೆ ಕಲಿಯಬೇಕು, ಶಾಲೆಗೆ ಹೋಗಬೇಕು ಎನ್ನುವುದು ಅವರ ದೊಡ್ಡ ಆಸೆ. ಅದಕ್ಕಾಗಿ ಅಪ್ಪು ಏನು ಬೇಕಾದರು ಮಾಡಲು ಸಿದ್ಧರಿದ್ದರು.

ಕನ್ನಡದ ಕೋಟ್ಯಧಿಪತಿ ಶೋ ನಿರೂಪಣೆ ಮಾಡಿದ್ದ ಅಪ್ಪು ಅಲ್ಲಿ ಸಿಕ್ಕ ಹಣವನ್ನು ಬಡ ಹೆಣ್ಣು ಮಕ್ಕಳ ಶಾಲೆ ನಿರ್ಮಾಣಕ್ಕಾಗಿ ಮೀಸಲಿಟ್ಟರು. ಇದೀಗ ಮೈಸೂರಿನ ಶಕ್ತಿಧಾಮದಲ್ಲಿ ಶಾಲೆಯ ಕಟ್ಟಡ ನಿರ್ಮಾಣ ಆಗಿದೆ. ಶೀಘ್ರದಲ್ಲೇ ಅದು ಕಾರ್ಯಾರಂಭ ಮಾಡಲಿದೆ. ಶಿಕ್ಷಣದ ಬಗ್ಗೆ ಅಪಾರ ಕನಸು ಕಂಡಿದ್ದ ಅಪ್ಪು ಅಂತಹ ಮಹಾನ್ ವ್ಯಕ್ತಿತ್ವದ ಬಗ್ಗೆ ಎಲ್ಲಾ ಮಕ್ಕಳು ತಿಳಿದಿಕೊಳ್ಳಬೇಕೆಂದು ಶಾಲೆಗಳು ಸಹ ಪ್ರಯತ್ನಿಸುತ್ತಿವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಪರೀಕ್ಷೆಯಲ್ಲಿ ಅಪ್ಪು ಬಗ್ಗೆ ಕೇಳಿದ ಪ್ರಶ್ನೆ. ಶಾಲಾ ಮಕ್ಕಳ ಪರೀಕ್ಷೆಯಲ್ಲಿ ಅಪ್ಪು ಬಗ್ಗೆ ಕೇಳಲಾದ ಪ್ರಶ್ನೆ ಕೇಳಲಾಗಿದ್ದು ಪ್ರಶ್ನೆ ಪತ್ರಿಕೆ ಈಗ ವೈರಲ್​ ಆಗಿದೆ.

Tap to resize

Latest Videos


ಪುನೀತ್ ರಾಜ್‌ಕುಮಾರ್ ಎಂದು ಅಚ್ಚೆ ಹಾಕಿಸಿಕೊಂಡ ಕಿರುತೆರೆ ನಟಿ ನಮ್ರತಾ ಗೌಡ!

ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಅಪ್ಪು ಅವರ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆ ಪತ್ರಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಾಲ್ಕನೇ ತರಗತಿ ಕನ್ನಡ ವಿಷಯದ ಪರೀಕ್ಷೆಯಲ್ಲಿ ಅಪ್ಪು ಬಗ್ಗೆ ಕೇಳಲಾಗಿದೆ. ಪುನೀತ್ ರಾಜ್ ಕುಮಾರ್ ಅವರನ್ನು ಅಭಿಮಾನಿಗಳು ಏನೆಂದು ಕರೆಯುತ್ತಿದ್ದರು, ಅವರ ತಂದೆಯ ಹೆಸರೇನು, ಪುನೀತ್ ಯಾವಾಗ ಜನಿಸಿದರು ಎನ್ನುವ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರ ಬರೆಯಬೇಕಿದೆ. ಈ ಪ್ರಶ್ನೆಪತ್ರಿಕೆ ನೋಡಿದ ಅಭಿಮಾನಿಗಳು ಸಂತಸ ಹೊರಹಾಕುತ್ತಿದ್ದಾರೆ. ಶಾಲೆಗೆ ಧನ್ಯವಾದ ತಿಳಿಸುತ್ತಿದ್ದಾರೆ. ಮಕ್ಕಳ ಪಠ್ಯಪುಸ್ತಕದಲ್ಲಿ ಪುನೀತ್ ಬಗ್ಗೆ ಪಾಠ ಸೇರಿಸಬೇನ್ನುವ ಮಾತು ಸಹ ಕೇಳಿಬರುತ್ತಿದೆ.

ಪುನೀತ್ ರಾಜ್ ಕುಮಾರ್ ಅನೇಕ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ. ಅನೇಕ ಶಾಲೆಗಳಿಗೆ ನೆರವು ನೀಡಿದ್ದಾರೆ. ಆದರೆ ಇದೆಲ್ಲಿಯೂ ಬಹಿರಗವಾಗದಂತೆ ನೋಡಿಕೊಂಡಿದ್ದರು. ಪುನೀತ್ ಅವರನ್ನು ದೇವರಂತೆ ಕಾಣಲು ಇಂತ ಕೆಲಸಗಳೇ ಕಾರಣ. ಇತ್ತೀಚಿಗಷ್ಟೆ ಪುನೀತ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಮರಣೋತ್ತರ ಗೌರವ ಡಾಕ್ಟರ್ ನೀಡಿದೆ. ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಡಾಕ್ಟರೇಟ್ ಸ್ವೀಕರಿಸಿದರು. ಈ ಸಮಯದಲ್ಲಿ ಇಡೀ ರಾಜ್ ಕುಟುಂಬ ಹಾಜರಿತ್ತು. ಈ ವೇಳೆ ಅಶ್ವಿನಿ ಭಾವುಕರಾಗಿದ್ದರು.

James: ಅಪ್ಪು ಚಿತ್ರ ಗೆದ್ದಿದ್ದಕ್ಕೆ ಶಿವಣ್ಣ ಏನ್ ಹೇಳಿದ್ರು ಗೊತ್ತಾ.?

ಇನ್ನು ಅಪ್ಪು ನಟನೆಯ ಕೊನೆಯ ಸಿನಿಮಾ ಜೇಮ್ಸ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಅಭಿಮಾನಿಗಳು ಜೇಮ್ಸ್ ಸಿನಿಮಾವನ್ನು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಅಪ್ಪು ಹುಟ್ಟಿದ ದಿನ ಮಾರ್ಚ್ 17ರಂದು ಸಿನಿಮಾ ಬಿಡುಗಡೆಯಾಗಿತ್ತು. ಸಿನಿಮಾ 100 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿ, ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ.

click me!