Kamal Sarika Divorce: ಅವಕಾಶ ಕೊಟ್ಟರೇ ಅದೇ ಜೀವನ ಬದುಕುವ, ಕಮಲ್‌ ಬಗ್ಗೆ ಮೌನ ಮುರಿದ ಮಾಜಿ ಪತ್ನಿ

By Vaishnavi ChandrashekarFirst Published Nov 13, 2022, 11:54 AM IST
Highlights

ಸಿನಿಮಾ ಬಿಟ್ಟು ಮದುವೆಯಾಗಿದ್ದಕ್ಕೆ ಬೇಸರವಿಲ್ಲ. ಕಮಲ್ ಹಾಸನ್‌ ಮಾಜಿ ಪತ್ನಿ ಸಾರಿಕಾ ಮೊದಲ ಬಾರಿ ಮದುವೆ ಬಗ್ಗೆ ಮಾತನಾಡಿದ್ದಾರೆ. 

1988ರಲ್ಲಿ ಬಹುಭಾಷಾ ನಟ ಕಮಲ್ ಹಾಸನ್ ಮತ್ತು ಸ್ಟಾರ್ ನಟಿ ಸಾರಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಗೂ ಮುನ್ನ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದು ಗರ್ಭಿಣಿ ಆಗಿದ್ದ ಕಾರಣ ಮದುವೆ ಆಗಲು ಮುಂದಾದ್ದರು. ಇವರಿಗೆ ಶ್ರುತಿ ಮತ್ತು ಅಕ್ಷರಾ ಎಂಬ ಮುದ್ದಾದ ಮಕ್ಕಳಿದ್ದು, ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 16 ವರ್ಷಗಳ ಕಾಲ ಜೊತೆಗಿದ್ದು 2004ರಲ್ಲಿ ವಿಚ್ಛೇದನ ಪಡೆದುಕೊಂಡರು. ಕಮಲ್ ಮತ್ತು ಸಾರಿಕಾ ಇಬ್ಬರೂ ಮಕ್ಕಳಿಗೆ ಕೋ-ಪೇರೆಂಟಿಂಗ್ ಮಾಡುತ್ತಿದ್ದಾರೆ. ಇಂಡಿಯಾ ಟುಡೇ ಸಂದರ್ಶನಲ್ಲಿ ರಾಜದೀಪ್ ಸರ್ದೇಸಾಯಿ ಜೊತೆ ಮುರಿದು ಬಿದ್ದಿರುವ ಮದುವೆ ಬಗ್ಗೆ ಮಾತನಾಡಿದ್ದಾರೆ.

Shruti Haasan Nepotism ಕಮಲ್‌ ಹಾಸನ್‌ ಮಗಳಿಗೆ ಅವಕಾಶ ಸಿಗುತ್ತೆ ಆದ್ರೆ ಉಳಿಯಲು ಜಾಗ ಸಿಗಲ್ಲ

ಸಾರಿಕಾ ವೃತ್ತಿ ಜೀವನ ಕೈ ಬಿಟ್ಟ ಕ್ಷಣ: 

'ವೃತ್ತಿ ಜೀವನದಲ್ಲಿ ಹೆಸರು ಮಾಡುತ್ತಿದ್ದ ಕ್ಷಣದಲ್ಲಿ ಕೆಲಸ ಬಿಟ್ಟು ಮುಂಬೈಯಿಂದ ಚೆನ್ನೈಗೆ ಹೋಗಿದ್ದು ನಿಜ ಆದರೆ ಅದರ ಬಗ್ಗೆ ಯಾವ ಪಶ್ಚಾತಾಪ ವಿಲ್ಲ. ನನಗೆ ಮತ್ತೆ ಅವಕಾಶ ಸಿಕ್ಕರೆ ನಾನು ಬದುಕಿದ ರೀತಿಯಲ್ಲಿ ಮತ್ತೆ ಜೀವನ ಮಾಡಲು ಇಷ್ಟ ಪಡುವೆ ಏಕೆಂದರೆ ನಾನು ಜೀವನದಲ್ಲಿ ನಡೆದ ಒಳ್ಳೆ ಕ್ಷಣಗಳು ಮತ್ತು ಘಟನೆಗಳನ್ನು ಮಾತ್ರ ನೆನಪು ಮಾಡಿಕೊಳ್ಳುವುದಕ್ಕೆ ಇಷ್ಟ ಪಡುವೆ. ನಾನು ಎಲ್ಲೇ ಇದ್ದರೂ ಹೇಗೆ ಇದ್ದರೂ ಅದೆಲ್ಲವೂ ನನ್ನ ಜೀವನದ ಭಾಗವಾಗಿರುತ್ತದೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ ಆನಂತರ ಪರಿಸ್ಥಿತಿ ಕೆಟ್ಟದಾಗುತ್ತದೆ ಇಲ್ಲದಿದ್ದರೆ ನಾನು ಎಲ್ಲಾ ಬಿಟ್ಟು ಹೋಗುತ್ತಿರಲಿಲ್ಲ. ಪ್ರತಿಯೊಬ್ಬರಿಗೂ ನಿರ್ಧಾರ ತೆಗೆದುಕೊಳ್ಳುವ ಅವಕಾಶವಿದೆ ಹೀಗಾಗಿ ಅವರ ಧ್ವನಿಯನ್ನು ಎತ್ತಬಹುದು. ಇಂದು ನಾನು ಧರಿಸಿರುವ ಸೀರೆ ಬಣ್ಣ ಒಬ್ಬರಿಗೆ ಇಷ್ಟ ಆಗಬಹುದು ಮತ್ತೊಬ್ಬರಿಗೆ ಇಷ್ಟ ಅಗುವುದಿಲ್ಲ ಹಾಗಂತ ಅವರ ವಿರುದ್ಧ ಮುನಿಸಿಕೊಳ್ಳುವುದಕ್ಕೆ ನಾನು ಇಷ್ಟ ಪಡುವುದಿಲ್ಲ. ಇದು ನನ್ನ ಜೀವನ ನನಗೆ ಏನು ಬೇಕು ಹೇಗೆ ಬೇಕು ಎಂದು ನಾನು ನಿರ್ಧಾರ ಮಾಡಬೇಕಿತ್ತು. ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಶ್ರುತಿ ಮತ್ತು ಅಕ್ಷರಾ ಜೊತೆಗಿರುವಾಗ ಯಾಕೆ ರಿಗ್ರೆಟ್‌ ಮಾಡಬೇಕು? ಈ ಮಾತುಗಳನ್ನು ಕೇವಲ ಪ್ರೀತಿಯಿಂದ ಹೇಳುತ್ತಿಲ್ಲ. ನನ್ನ ಇಬ್ಬರೂ ಹೆಣ್ಣು ಮಕ್ಕಳು ಕಷ್ಟ ಪಟ್ಟು ಕೆಲಸ ಮಾಡುತ್ತಿರುವುದನ್ನು ಜನರು ನೋಡುತ್ತಿದ್ದಾರೆ ಅವರದ್ದೇ ಹಾದಿ ಸೃಷ್ಟಿ ಮಾಡಿಕೊಂಡು ಸ್ವಂತ ದುಡಿಮೆಯಲ್ಲಿ ಅವರ ಕಾಲಿನ ಮೇಲೆ ಅವರು ನಿಲ್ಲುತ್ತಿದ್ದಾರೆ. ಹೀಗಿರುವಾಗ ಜೀವನದಲ್ಲಿ ನಡೆದಿರುವ ಘಟನೆಗಳಿಂದ ಬೇಸರ ಮಾಡಿಕೊಂಡು ಕೂರುವುದರಲ್ಲಿ ಅರ್ಥವಿಲ್ಲ.

ಪೋಷಕರ ಬಗ್ಗೆ ಶ್ರುತಿ: 

'ತಂದೆ ತಾಯಿ ದೂರ ಆಗಿದಕ್ಕೆ ನನಗೆ ಬೇಸರವಿಲ್ಲ. ಶಾಲೆಯಲ್ಲಿ ನಾನು ಯಾಕೆ ತಂದೆ ತಾಯಿ ಹೆಸರು ಹೇಳುತ್ತಿರಲಿಲ್ಲ ಅಂದ್ರೆ ನಾನು ನಾನಾಗಿ ಗುರುತಿಸಿಕೊಳ್ಳಬೇಕು ಅವರಿಂದ ಅಲ್ಲ..ತಂದೆ ತಾಯಿ ಬಗ್ಗೆ ಗೊತ್ತಾದರೆ ಅವರ ಬಗ್ಗೆ ಪ್ರಶ್ನೆ ಕೇಳುತ್ತಾರೆ ಅದು ನನಗೆ ಇಷ್ಟ ಆಗುವುದಿಲ್ಲ. ಡೆಂಟಿಸ್ಟ್‌ ರಾಮಚಂದ್ರನ್ ಮಗಳು ಅಂತ ಹೇಳಿಕೊಂಡು ಓಡಾಡುತಿದ್ದೆ. ಗಾಸಿಪ್ ಮ್ಯಾಗಜೀನ್‌ನಲ್ಲಿ ತಂದೆ ತಾಯಿ ವಿಚಾರ ಬಂದಾಗ ನನ್ನ ಮನಸಿಗೆ ಬೇಸರ ಅಗಲಿಲ್ಲ ಏಕೆಂದರೆ ಇಬ್ಬರೂ ದೂರವಿದ್ದರೆ ಸಂತೋಷವಾಗಿರುತ್ತಿದ್ದರು ಹೀಗಾಗಿ ಸತ್ಯ ಒಪ್ಪಿಕೊಳ್ಳಬೇಕಿತ್ತು. ಅಕ್ಷರಾ ಮತ್ತು ನನ್ನಲ್ಲಿ ಮಾನಸಿಕ ಬದಲಾವಣೆ ಆಗಿದ್ದು ನಿಜ ...ನಾವು ಬೆಳೆಯುತ್ತಿದ್ದ ರೀತಿ ಬದಲಾಗಿದ್ದು ನಿಜ. ಮದುವೆ ಆಗುವ ಮುನ್ನವೂ  ಅವರಿಬ್ಬರೂ ಸಪರೇಟ್‌ ವ್ಯಕ್ತಿಗಳಾಗಿದ್ದರು ಹೀಗಾಗಿ ಅವರ ಗುಣವನ್ನು ಗೌರವಿಸುವಷ್ಟು ಒಳ್ಳೆಯ ಮನಸ್ಥಿತಿ ನಮಗೆ ಬಂದಿತ್ತು. ಅವರಿಬ್ಬರಿಂದ ನಾವು ಬೇರೆ ಬೇರೆ ರೀತಿಯ ಪ್ರೀತಿ ಪಡೆದುಕೊಂಡಿದ್ದೀವಿ ಹಾಗಂತ ನಾನು ಅವರಿಗೆ ಬೇರೆ ಬೇರೆ ಪ್ರೀತಿ ಕೊಟ್ಟಿಲ್ಲ. ಇದು ಹೇಗೆ ಅಂದ್ರೆ ರಾಜಕೀಯಕ್ಕಿಂತ ಕೆಟ್ಟದು. ಈ ವಿಚಾರದ ಬಗ್ಗೆ ಮಾತನಾಡಬೇಕು ಅಂದ್ರೆ ಮನಸ್ಸಿಗೆ ತುಂಬಾನೇ ನೋವಾಗುತ್ತದೆ ನನ್ನ ಸ್ಥಾನದಲ್ಲಿ ನಿಂತ ಹಲವರಿಗೆ ಈ ಭಾವನೆ ಅರ್ಥವಾಗುತ್ತದೆ. ಹಣೆ ಬರಹದಲ್ಲಿ ಹೇಗಿದೆ ಎಂದು ನನಗೆ ಗೊತ್ತಿಲ್ಲ ಆದರೆ ಸದ್ಯದ ಪರಿಸ್ಥಿತಿಯನ್ನು ನಿರ್ಧಾರ ಮಾಡುವ ಶಕ್ತಿ ಇದೆ..ಹೀಗಾಗಿ ಪ್ರಪಂಚ ಜೊತೆ ನನ್ನ ತಂಗಿ ಅಕ್ಷರಾ ಮತ್ತು ನಾನು ಹೇಗೆ ಇರಬೇಕು ಹಾಗೆ ಇದ್ದೀವಿ ತಂದೆ ತಾಯಿಗೆ ಎಷ್ಟು ಪ್ರೀತಿ ಕೊಡಬೇಕು ಕೊಡುತ್ತಿದ್ದೀವಿ' 

click me!