Shruti Haasan Nepotism ಕಮಲ್‌ ಹಾಸನ್‌ ಮಗಳಿಗೆ ಅವಕಾಶ ಸಿಗುತ್ತೆ ಆದ್ರೆ ಉಳಿಯಲು ಜಾಗ ಸಿಗಲ್ಲ

Published : Nov 13, 2022, 10:05 AM IST
Shruti Haasan Nepotism ಕಮಲ್‌ ಹಾಸನ್‌ ಮಗಳಿಗೆ ಅವಕಾಶ ಸಿಗುತ್ತೆ ಆದ್ರೆ ಉಳಿಯಲು ಜಾಗ ಸಿಗಲ್ಲ

ಸಾರಾಂಶ

 ಸ್ಟಾರ್ ಮಕ್ಕಳ ನೆಪೋಟಿಸಂ ಬಗ್ಗೆ ಸ್ಪಷ್ಟನೆ ಕೊಟ್ಟ ಶ್ರುತಿ ಹಾಸನ್. ಬಾಗಿಯಲು ತೆರೆಯಲು ಜನರಿದ್ದಾರೆ ಆದರೆ ಉಳಿದುಕೊಳ್ಳುವುದು ಜನರ ಪ್ರೀತಿ ಸಂಪಾದಿಸುವುದು ನಮ್ಮ ಕೈಯಲಿದೆ. 

ಬಹುಭಾಷ ನಟ ಕಮಲ್ ಹಾಸ್ (Kamal Haasan) ಹಿರಿಯ ಪುತ್ರಿ ಶ್ರುತಿ ಹಾಸನ್ (Shruti Haasan) ಮತ್ತು ಎರಡನೇ ಮಾಜಿ ಪತ್ನಿ ಸಾರಿಕಾ (Sarika) ಇಂಡಿಯಾ ಟುಡೇ ಸಂದರ್ಶನಲ್ಲಿ ರಾಜದೀಪ್ ಸರ್ದೇಸಾಯಿ ಜೊತೆ ಮಾತನಾಡುವಾಗ ನೆಪೋಟಿಸಂ ಬಗ್ಗೆ ಚರ್ಚೆ ಮಾಡಿದ್ದಾರೆ. ಸ್ಟಾರ್ ಮಕ್ಕಳು ಬೇರೆ ಕೆಲಸ ಮಾಡುವುದಿಲ್ಲ ಸುಲಭವಾಗಿ ಜೀವನ ನಡೆಸುತ್ತಾರೆ ಎಂದು ಕಾಮೆಂಟ್ ಮಾಡುವವರಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಮಗಳ ಧ್ವನಿ ಬಗ್ಗೆ ಸಾರಿಕಾ ಹೆಮ್ಮೆಯಿಂದ ಮಾತನಾಡಿದ್ದಾರೆ.

ತಂದೆ-ತಾಯಿ ಪ್ರೇರಣೆ:

'ಒಬ್ಬರನ್ನು ನೋಡಿ ಇವರಂತೆ ನಟಿಸಬೇಕು ಅಂತ ಆಸೆ ಪಟ್ಟವಳು ನಾನಲ್ಲ ಆ ರೀತಿ ನನಗೆ ಮಾಡಲು ಬರೋದೂ ಇಲ್ಲ ಹೀಗಾಗಿ ನನ್ನ ತಂದೆ- ತಾಯಿ ಸಿನಿಮಾ ನನಗೆ ಪ್ರೇರಣೆ ಆಗಲಿಲ್ಲ. ಎಲ್ಲವೂ ನಾನೇ ಕಲಿಯಬೇಕಿತ್ತು, ಕ್ಯಾಮೆರಾ ಕಂಡರೆ ಹೇಗಿರಬೇಕು, ಜನರಿದ್ದರೆ ಹೇಗಿರಬೇಕು, ಒಳ್ಳೆ ಕಥೆಯನ್ನು ಆಯ್ಕೆ ಮಾಡಿಕೊಳ್ಳುವ ರೀತಿ ....ಆರಂಭದಲ್ಲಿ ಯಾವುದೂ ನನಗೆ ಸುಲಭವಾಗಿರಲಿಲ್ಲ. ಜೀವನದಲ್ಲಿ ಈ ಸ್ಥಾನಕ್ಕೆ ಬರಲು ನಡೆದುಕೊಂಡು ಬಂದ ಹಾದಿಯನ್ನು ಮರೆಯುವುದಿಲ್ಲ ಇದೊಂದು ಅರೇಂಜ್ಡ್‌ ಮ್ಯಾರೇಜ್‌ ರೀತಿ ಈಗಿ ಕಾಲದಲ್ಲಿ ನನಗೆ ತುಂಬಾ ಇಷ್ಟವಾಗುತ್ತದೆ. ಲವ್ ಮ್ಯಾರೇಜ್‌ಗೆ ಬೆಲೆ ಇಲ್ಲ' ಎಂದು ಶ್ರುತಿ ಮಾತನಾಡಿದ್ದಾರೆ.

ನೆಪೋಟಿಸಂ:

'ಸ್ಟಾರ್ ಮಕ್ಕಳಾಗಿ ಹುಟ್ಟಿ ಚಿತ್ರರಂಗದಲ್ಲಿ ಕೆಲಸ ಮಾಡಬೇಕು ಅಂದ್ರೆ ಬಾಗಿಲು ತೆರೆಯುತ್ತಾರೆ ಆದರೆ ಉಳಿದುಕೊಳ್ಳುವುದು ನಮ್ಮ ಕೈಯಲ್ಲಿ ಇರುತ್ತದೆ. ಒಂದು ವಿಚಾರಕ್ಕೆ ಹೆಮ್ಮೆ ಪಡುವೆ ಏನೆಂದರೆ ನನ್ನ ತಂದೆ-ತಾಯಿ ಚಿತ್ರರಂಗದವರಿಗೆ ಕರೆ ಮಾಡಿ ನನ್ನ ಮಕ್ಕಳಿಗೆ ಅವಕಾಶ ನೀಡಿ ಎಂದು ಕೇಳಿಲ್ಲ. ಹೀಗಾಗಿ ಈ ಜರ್ನಿ ತುಂಬಾನೇ ರೋಚಕವಾಗಿತ್ತು ...ಪ್ರತಿ ಹಂತದಲ್ಲೂ ನನಗೆ ಪೋಷಕರು ಸಲಹೆ ಕೊಡುತ್ತಾರೆ. ನೆಪೋಟಿಸಂ ಇಲ್ಲ...ಅವಕಾಶ ಸಿಗುತ್ತದೆ ಆದರೆ ಚಿತ್ರರಂಗದಲ್ಲಿ ಉಳಿದುಕೊಳ್ಳುವುದು ನಮ್ಮ ಕೈಯಲ್ಲಿದೆ.' ಎಂದು ಹೇಳಿದ್ದಾರೆ.

ನಾನು ಆರೋಗ್ಯವಾಗಿದ್ದೀನಿ; ಅನಾರೋಗ್ಯ ವದಂತಿಗೆ ಶ್ರುತಿ ಹಾಸನ್ ಖಡಕ್ ಉತ್ತರ

ತಾಯಿ ಸಾರಿಕಾ ಮಾತು:

'ಇಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಟ್ಯಾಲೆಂಟ್ ಇದೆ. ನಾವು ಕಲಾವಿದರು ಬೇರೆ ಕೆಲಸ ಕೂಡ ಮಾಡುತ್ತೀವಿ. ಕಮಲ್ ಹಾಸನ್ ಮತ್ತು ನಾನು ಬೇರೆ ಬೇರೆ ದಾರಿಯಲ್ಲಿ ಜೀವನ ನಡೆಸುವವರು. ನನಗೆ ಹಾಡಲು ಬರುವುದಿಲ್ಲ ಒಂದು ವೇಳೆ ಹಾಡಿದ್ದರೆ ಮನೆಯಲ್ಲಿರುವವರು ಓಡಿ ಹೋಗುತ್ತಾರೆ ಅಷ್ಟು ಕೆಟ್ಟ ಧ್ವನಿ, ಕಮಲ್ ಚೆನ್ನಾಗಿ ಹಾಡುತ್ತಾರೆ...ಆದರೆ ಶ್ರುತಿ ಅದ್ಭುತ ಗಾಯಕಿ. ನನ್ನ ಮಗಳು ಅಂತ ಹೇಳುತ್ತಿಲ್ಲ ನಂಬಲಾಗದ ಧ್ವನಿ ಅವಳಿಗೆ ಆಶೀರ್ವಾದವಾಗಿ ಸಿಕ್ಕಿದೆ. ಸಂಗೀತವನ್ನು ಸರಿಯಾದ ಕ್ರಮದಲ್ಲಿ ಒಳ್ಳೆ ಗುರುಗಳ ಬಳಿ ಕಲಿತಿದ್ದಾಳೆ. ಹಾಡುವುದು ಶ್ರುತಿ ಟ್ಯಾಲೆಂಟ್, ಕಿರಿಯ ಮಗಳು ಅಕ್ಷರಾ ನಟನೆ, ಡ್ಯಾನ್ಸಿಂಗ್ ಮತ್ತು ಫುಟ್‌ಬಾಲ್‌ನಲ್ಲಿ ಸೂಪರ್. ಕಮಲ್ ಮತ್ತು ನಾನು ಬಂದ ಹಾದಿಯಲ್ಲಿ ಮಕ್ಕಳು ಬೆಳೆಯಬೇಕಿಲ್ಲ ಹಾಗೇ ನಮ್ಮಂತೆ ಇರುವ ಅಗತ್ಯವೂ ಇಲ್ಲ. ಅವರಿಗೆ ಏನು ಬೇಕು ಅದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಮಕ್ಕಳಿಗೆ ಕೊಟ್ಟಿದ್ದೀವಿ.' ಎಂದಿದ್ದಾರೆ ಸಾರಿಕಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?