
ಬಾಲಿವುಡ್ ಸ್ಟಾರ್ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ (karan Johar) ಸದ್ಯ ಕಾಫಿ ವಿತ್ ಕರಣ್ ಶೋ (Koffee With Karan Show) ಮೂಲಕ ಮತ್ತೆ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಕಾಫಿ ವಿತ್ ಕರಣ್ ಸೀಸನ್ 7 ಪ್ರಸಾರವಾಗುತ್ತಿದೆ. ಅಂದಹಗಾಗೆ ಈ ಬಾರಿ ಕಾಫಿ ವಿತ್ ಕರಣ್ ಶೋ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬರ್ತಿದೆ. ಜನಪ್ರಿಯ ಶೋಗಳಲ್ಲಿ ಒಂದಾಗದಿರುವ ಕಾಫಿ ವಿತ್ ಕರಣ್ ಶೋಗಾಗಿ ಸಾಕಷ್ಟು ಮಂದಿ ಕಾಯುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಪ್ರೋಮೋ ಪ್ರೇಕ್ಷಕರ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಸದ್ಯ ಕರಣ್ ಜೋಹರ್ ಈ ಶೋನ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಪ್ರಚಾರ ವೇಳೆ ಕರಣ್ ಸಾರಾ ಅಲಿ ಖಾನ್ (Sara Ali Khan) ಮತ್ತು ಕಾರ್ತಿಕ್ ಆರ್ಯನ್ ( Kartik Aaryan) ಅವರ ಸಂಬಂಧದ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ವಿಚಾರವನ್ನು ದೃಢಪಡಿಸಿದರು. ಇಂಡಿಯಾ ಟುಡೇ ಜೊತೆಗಿನ ತನ್ನ ಚಾಟ್‌ನಲ್ಲಿ ಕರಣ್ ಜೋಹರ್ ಹೆಮ್ಮೆಯಿಂದ ಈ ಶೋ ಸಾರಾ ಮತ್ತು ಕಾರ್ತಿಕ್ ಸೇರಿದಂತೆ ಹಲವು ಪ್ರೇಮಕಥೆಗಳನ್ನು ತೋರಿಸಿದೆ ಎಂದು ಬಹಿರಂಗ ಪಡಿಸಿದರು. ಇಬ್ಬರು ಒಂದೇ ಕಡೆ ಕೆಲಸ ಮಾಡುತ್ತಿರುವ ಕಾರಣ ಅವರಿಬ್ಬರೂ ಸೌಹಾರ್ದಯುತವಾಗಿ ಬ್ರೇಕಪ್ ಮಾಡಿಕೊಂಡರು ಎನ್ನಲಾಗಿದೆ.
ಆಂಗ್ಲ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, 'ಸಾರಾ ತನ್ನ ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿರುವ ಕರಣ್ ಮೇಲೆ ಅಸಮಧಾನಾ ಗೊಂಡಿದ್ದಾರೆ. ಪ್ರೇಕ್ಷಕರು ತನ್ನ ವೃತ್ತಿಜೀವನದ ಗ್ರಾಫ್‌ನ ಮೇಲೆ ಮಾತ್ರ ಗಮನ ಹರಿಸಬೇಕು ಎನ್ನುವುದು ಸಾರಾ ಅವರ ಬಯಕೆ. ಹಗಾಗಿ ಬಾಲಿವುಡ್ ನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಲು ತುಂಬಾ ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ತನ್ನ ಜೀವನದ ಬಗ್ಗೆ ಈ ವೈಯಕ್ತಿಕ ಮಾಹಿತಿ ರಿಲೀಸ್ ಆದರೆ ಅಭಿಮಾನಿಗಳ ಗಮನ ಬದಲಾಯಿಸಬಹುದು ಎನ್ನುವುದು ಸಾರಾ ಅವರ ನಂಬಿಕೆ. ಹಾಗಾಗಿ ತನ್ನ ವೈಯಕ್ತಿಕ ಜೀವನವನ್ನು ಆದಷ್ಟು ಖಾಸಗಿಯಾಗಿ ಇಡಲು ಇಷ್ಟಪಡುತ್ತಾರೆ.
50 ವರ್ಷಗಳ ಹಿಂದೆ ಪ್ರಸಾರವಾಗಿದ ದೇಶದ ಮೊದಲ ಟಾಕ್ ಶೋ ಇದು!
ಮೂಲಗಳ ಪ್ರಕಾರ ಕರಣ್ ಜೋಹರ್ ಹೇಳಿಕೆಯಿಂದ ಸಾರಾ ತುಂಬಾ ಅಪ್ ಸೆಟ್ ಆಗಿದ್ದಾರಂತೆ. ಸಾರಾ ಕರಣ್‌ನೊಂದಿಗೆ ಎಂದಿಗೂ ಮಾತನಾಡಬಾರದು ಎಂದು ನಿರ್ಧರಿಸಿದ್ದಾರಂತೆ. ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅವರೊಂದಿಗಿನ ಉತ್ತಮ ಬಾಂಧವ್ಯದ ಕಾರಣ ಕರಣ್ ಮತ್ತು ಸಾರಾ ಉಡುವೆಯೂ ಉತ್ತಮ ಬಾಂಧವ್ಯ ಹೊಂದಿದ್ದರು. ಕಾಫಿ ವಿತ್ ಕರಣ್ ಸೀಸನ್ 7 ರಲ್ಲಿ ಕಾರ್ತಿಕ್ ಅವರನ್ನು ಎಲ್ಲರ ಮಾಜಿ ಎಂದು ಕರೆಯುವ ಮೂಲಕ ಸಾರಾ ಅವರನ್ನು ಪರೋಕ್ಷವಾಗಿ ಕೆಣಕಿದರು.
ಡೆಂಟಲ್ ಕ್ಲಿನಿಕ್‌ನಲ್ಲಿ ಕರಣ್ ಜೋಹರ್, ಪ್ಯಾಪರಾಜಿಗಳಿಗೆ ನೋ ಪೋಸ್..!
ಅಂದಹಾಗೆ ಸಾರಾ ಅಲಿ ಖಾನ್ ಮತ್ತು ಕಾರ್ತಿಕ್ ಆರ್ಯನ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ವೈರಲ್ ಆಗಿತ್ತು. ಆದರೀಗ ಇಬ್ಬರೂ ಬ್ರೇಕಪ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗ ಸಾರಾ ಅಥವಾ ಕಾರ್ತಿಕ್ ಆಗಲಿ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಆದರೀಗ ಕಾಫಿ ವಿತ್ ಕರಣ್ ಶೋನಲ್ಲಿ ಈ ಬಗ್ಗೆ ಕರಣ್ ಮಾತನಾಡಿ ಸಾರಾ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಈ ಶೋನಲ್ಲಿ ಇನ್ನು ಏನೆಲ್ಲ ವಿಚಾರಗಳು ಬಹಿರಂಗವಾಗಿದೆ ಎಂದು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.