ಲವ್ ಲೆಟರ್ ಬರೆದು ತಗಲಾಕ್ಕೊಂಡಿದ್ದೆ; ಪ್ರೀತಿ ವಿಚಾರ ರಿವೀಲ್ ಮಾಡಿದ ಸಾಯಿ ಪಲ್ಲವಿ

Published : Jul 10, 2022, 01:44 PM IST
ಲವ್ ಲೆಟರ್ ಬರೆದು ತಗಲಾಕ್ಕೊಂಡಿದ್ದೆ; ಪ್ರೀತಿ ವಿಚಾರ ರಿವೀಲ್ ಮಾಡಿದ ಸಾಯಿ ಪಲ್ಲವಿ

ಸಾರಾಂಶ

ಸದ್ಯ ಸಾಯಿ ಪಲ್ಲವಿ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಸಾಯಿ ಪಲ್ಲವಿ ತನ್ನ ಜೀವನದ ಇಂಟ್ರಸ್ಟಿಂಗ್ ವಿಚಾರ ರಿವೀಲ್ ಮಾಡಿದ್ದಾರೆ.  ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸಾಯಿ  ಪಲ್ಲವಿ ತನ್ನ ಪ್ರೀತಿ ವಿಚಾರ ಬಹಿರಂಗ ಪಡಿಸಿದ್ದಾರೆ. ಲವ್ ಲೆಟರ್ ಬರೆದು ಮನೆಯವರ ಬಳಿ ತಗಲಾಕ್ಕೊಂಡ ವಿಚಾರವನ್ನು ಸಾಯಿ ಪಲ್ಲವಿ ಹೇಳಿದ್ದಾರೆ. 

ಸೌತ್ ಸಿನಿರಂಗದ ಖ್ಯಾತ ನಟಿ ಸಾಯಿ ಪಲ್ಲವಿ (Sai Pallavi) ಯಾರಿಗೆತಾನೆ ಇಷ್ಟ ಆಗಲ್ಲ. ಸರಳ, ಸುಂದರ ಸಾಯಿ ಪಲ್ಲವಿ ನಟನೆಯಲ್ಲೂ ಅಧ್ಭುತ. ನಟಿಯರು ಅಂದರೆ ಮೇಕಪ್, ದುಬಾರಿ ಡ್ರೆಸ್, ಹೈ ಫೈ ಜೀವನ ಎಲ್ಲಾ ಐಷಾರಾಮಿ ಹೀಗೆ ಇರಬೇಕು ಎನ್ನುವ ಕಲ್ಪನೆಯನ್ನು ಬ್ರೇಕ್ ಮಾಡಿದ ನಟಿ ಸಾಯಿ ಪಲ್ಲವಿ. ಸಿಂಪಲ್ ಆಗಿ ಕಾಣಿಸಿಕೊಳ್ಳುವ ನಟಿ ಸಾಯಿ ಪಲ್ಲವಿ ಉತ್ತಮ ನಟಿ ಜೊತೆಗೆ ಪ್ರತಿಭಾವಂತೆ ಕೂಡ ಹೌದು. ಸಾಯಿ ಪಲ್ಲವಿ ನಟನೆಯ ಬಹುತೇಕ ಸಿನಿಮಾಗಳು ಸೂಪರ್ ಹಿಟ್. ಅಭಿಮಾನಿಗಳ ಹೃದಯ ಗೆದ್ದ ಚಿತ್ರಗಳಾಗಿವೆ. ಸದ್ಯ ಈ ಪ್ರೇಮಂ ಬ್ಯೂಟಿ ಗಾರ್ಗಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 

ಸಾಯಿ ಪಲ್ಲವಿ ಕೊನೆಯದಾಗಿ ವಿರಾಟ ಪರ್ವಂ (Virata Parvam) ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಜೊತೆ ತೆಲುಗು ಸ್ಟಾರ್ ನಟ ರಾಣಾ ದಗ್ಗುಬಾಟಿ (Rana Daggubati) ಕಾಣಿಸಿಕೊಂಡಿದ್ದರು. ಈ ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ನಿರೀಕ್ಷೆಯ ಮಟ್ಟದ ಗೆಲುವು ಸಿಕ್ಕಲ್ಲವಾದರೂ ವಿಮರ್ಶಾತ್ಮಕವಾಗಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಯಿ ಪಲ್ಲವಿ ಮತ್ತೊಮ್ಮೆ ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅದ್ಭುತ ಅಭಿನಯದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು. 

ಸದ್ಯ ಸಾಯಿ ಪಲ್ಲವಿ ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಸಾಯಿ ಪಲ್ಲವಿ ತನ್ನ ಜೀವನದ ಇಂಟ್ರಸ್ಟಿಂಗ್ ವಿಚಾರ ರಿವೀಲ್ ಮಾಡಿದ್ದಾರೆ. ಸಾಯಿ ಪಲ್ಲವಿ ಲವ್ ಗಾಸಿಪ್ ನಿಂದ ಕೊಂಚ ದೂರ ಅಂದರೆ ತಪ್ಪಿಲ್ಲ. ಯಾಕೆಂದರೆ ಸಾಯಿ ಪಲ್ಲವಿ ಹೆಸರು ಬೇರೆಯವರ ಜೊತೆ ತಗಲಾಕ್ಕೊಂಡಿದ್ದು ಕಡಿಮೆ. ಅಲ್ಲದೇ ತನ್ನ ಪ್ರೀತಿ ವಿಚಾರವನ್ನು ಸಾಯಿ ಪಲ್ಲವಿ ಎಲ್ಲಿಯೂ ರಿವೀಲ್ ಮಾಡಿಲ್ಲ. ಆದರೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸಾಯಿ  ಪಲ್ಲವಿ ತನ್ನ ಪ್ರೀತಿ ವಿಚಾರ ಬಹಿರಂಗ ಪಡಿಸಿದ್ದಾರೆ. ಲವ್ ಲೆಟರ್ ಬರೆದು ಮನೆಯವರ ಬಳಿ ತಗಲಾಕ್ಕೊಂಡ ವಿಚಾರವನ್ನು ಸಾಯಿ ಪಲ್ಲವಿ ಹೇಳಿದ್ದಾರೆ. 

ಸಾಯಿ ಪಲ್ಲವಿ 'ಗಾರ್ಗಿ'ಗೆ ರಕ್ಷಿತ್ ಸಾಥ್; ಹೃದಯ ಕದಲಿಸಿದ ಸಿನಿಮಾ ಎಂದ ಸಿಂಪಲ್ ಸ್ಟಾರ್

ಸಾಯಿ ಪಲ್ಲವಿ ಮತ್ತು ರಾಣಾ ದಗ್ಗುಬಾಟಿ ಇತ್ತೀಚಿಗಷ್ಟೆ ನೆಟ್ ಫ್ಲಿಕ್ಸ್ ಗೆ  ಸಂದರ್ಶನ ನೀಡಿದ್ದರು. ಈ ವೇಳೆ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಸಾಯಿ ಪಲ್ಲವಿ ಮತ್ತು ರಾಣಾ ತನ್ನ ಜೀವನದ ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ವಿಭಿನ್ನವಾಗಿರುವ ಈ ಸಂದರ್ಶನ ನೋಡಿಗರ ಗಮನ ಸೆಳೆಯುತ್ತಿದೆ.  ಮೈ ವಿಲೇಜ್ ಶೋ ಎನ್ನುವ ಹೆಸರಿನಲ್ಲಿ ಗಂಗವ್ವ ಎನ್ನುವವರು ಸಂದರ್ಶನ ಮಾಡಿದ್ದಾರೆ.

ಸಂದರ್ಶನದಲ್ಲಿ ಸಾಯಿ ಪಲ್ಲವಿ ಚಿಕ್ಕವಳಾಗಿದ್ದಾಗ ಒಬ್ಬ ಹುಡುಗನಿಗೆ ಲವ್ ಲೆಟರ್ ಬರೆದು ಮನೆಯವರ ಬಳಿ ತಗಲಾಕ್ಕೊಂಡಿದ್ದೆ ಎಂದು ಹೇಳಿದ್ದಾರೆ. 'ನಾನು ಚಿಕ್ಕವಳಾಗಿದ್ದಾಗ ಅಂದರೆ 7ನೇ ತರಗತಿಯಲ್ಲಿ ಒಬ್ಬ ಹುಡುಗನಿಗೆ ಲವ್ ಲೆಟರ್ ಬರೆದಿದ್ದೆ. ಅಪ್ಪ-ಅಮ್ಮನಿಗೆ ಗೊತ್ತಾಯಿತು. ಬಳಿಕ ಅವರು ನನಗೆ ಸರಿಯಾಗಿ ಹೊಡೆದಿದ್ದರು' ಎಂದು ಹೇಳಿದ್ದಾರೆ. ಆ ಹುಡುಗ ಯಾರು ಎನ್ನುವ ವಿಚಾರವನ್ನು ಸಾಯಿ ಪಲ್ಲವಿ ಬಹಿರಂಗ ಪಡಿಸಿಲ್ಲ. 

ಸಾಯಿ ಪಲ್ಲವಿಯಿಂದ ಮಾಧ್ಯಮದವರು ಕಲಿಯುವುದು ಸಾಕಷ್ಟಿದೆ; ನಟ ಕಿಶೋರ್

ಇದೇ ಸಮಯದಲ್ಲಿ ವಿರಾಟ ಪರ್ವಂ ಸಿನಿಮಾದ ಚಿತ್ರೀಕರಣ ಅನುಭವವನ್ನು ಬಿಚ್ಚಿಟ್ಟಿದ್ದಾರೆ.  ರಾಣಾ ದಗ್ಗುಬಾಟಿ ಯಾರಿಗಾದರೂ ಲೆಟರ್ ಬರೆದಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ರಾಣಾ, ತನ್ನ ತಾತನಿಗೆ ಬಿಟ್ಟರೆ ಬೇರೆ ಯಾರಿಗೂ ಬರೆದಿಲ್ಲ ಎಂದಿದ್ದಾರೆ. ಇನ್ನು ಸಾಯಿ ಪಲ್ಲವಿ ಮತ್ತು ರಾಣಾ ಇಬ್ಬರು ಗಂಗವ್ವ ಬಳಿ ನಿಮ್ಮ ಲವ್ ಸ್ಟೋರಿ ಹೇಳುವಂತೆ ಕೇಳಿದ್ದಾರೆ. ಗಂಗವ್ವ ನಮ್ಮ ಸಮಯದಲ್ಲಿ ಬೇಗ ಮದುವೆ ಮಾಡಲಾಗುತ್ತಿತ್ತು. ಆ ವಯಸ್ಸಿನಲ್ಲಿ ನಮಗೆ ಲವ್ ಬಗ್ಗೆ ಗೊತ್ತಿರಲಿಲ್ಲ. ನಾವು ದೊಡ್ಡವರಾದ ಬಳಿಕ ನಮಗೆ ಲವ್ ಮತ್ತು ಪ್ರೀತಿಯಲ್ಲಿ ಬೀಳುವ ಬಗ್ಗೆ ಗೊತ್ತಾಯಿತು. ಇವಾಗಿನ ಪ್ರೀತಿ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!