Sara Ali Khan Dance: ಕರಣ್ ಬಾತ್‌ರೂಮ್‌ನಲ್ಲಿ ಸಾರಾ ಡ್ಯಾನ್ಸ್.! ಏನ್ ಕಥೆ ?

Published : Dec 23, 2021, 11:49 AM ISTUpdated : Dec 23, 2021, 11:54 AM IST
Sara Ali Khan Dance: ಕರಣ್ ಬಾತ್‌ರೂಮ್‌ನಲ್ಲಿ ಸಾರಾ ಡ್ಯಾನ್ಸ್.! ಏನ್ ಕಥೆ ?

ಸಾರಾಂಶ

Sara Ali Khan: ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಬಾತ್‌ರೂಂನಲ್ಲಿ ಸಾರಾ ಅಲಿ ಖಾನ್ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ಸ್ವತಃ ನಟಿಯೇ ಹೇಳಿದ್ದಾರೆ. ಇದೇನು ಹೊಸ ಕಥೆ ?

ಸಾರಾ ಅಲಿ ಖಾನ್ ಅವರ ಸೋಲೋ ಡ್ಯಾನ್ಸ್ ನಂಬರ್ ಚಕಾ ಚಕ್ ಸಖತ್ ವೈರಲ್ ಆಗುತ್ತಿದೆ. ಬಾಲಿವುಡ್ ಬಹುನಿರೀಕ್ಷಿತ ಸಿನಿಮಾ ಅಟ್ರಾಂಗಿ ರೇಯಲ್ಲಿ ನಟಿ ಚಕಾ ಚಕ್ ಸಾಂಗ್‌ಗೆ ಸಖತ್ತಾಗಿ ಸ್ಟೆಪ್ಸ್ ಹಾಕಿದ್ದು ಈ ಡ್ಯಾನ್ಸ್ ಎಲ್ಲೆಡೆ ವೈರಲ್ ಆಗಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಧನುಷ್ ಅಭಿನಯದ ಅಟ್ರಾಂಗಿ ರೇಯಲ್ಲಿ ಸಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಕಾ ಚಕ್ ಸಿಗ್ನೇಚರ್ ಸ್ಟೆಪ್ ಅಂತೂ ಟ್ರೆಂಡ್ ಕ್ರಿಯೇಟ್ ಮಾಡಿದೆ. ನೆಟ್ಟಿಗರು ಈ ಹಾಡಿಗೆ ಡ್ಯಾನ್ಸ್ ಮಾಡಿ ಟ್ರೆಂಡ್ಸ್‌ಗೆ ಕೈಜೋಡಿಸಿದ್ದಾರೆ. ಆದರೆ ಇಷ್ಟೊಂದು ಹಿಟ್ ಡ್ಯಾನ್ಸ್ ನಟಿ ಪ್ರಾಕ್ಟೀಸ್ ಮಾಡಿದ್ದೆಲ್ಲಿ ಗೊತ್ತೇ ? ಬಾತ್‌ರೂಂನಲ್ಲಿ, ಅದೂ ಕರಣ್ ಜೋಹರ್ ಬಾತ್‌ರೂಂನಲ್ಲಿ.

ಸಾರಾ ಅಲಿ ಖಾನ್ ಕರಣ್ ಜೋಹರ್‌ಗೆ ಶಾಕ್ ಕೊಟ್ಟಿದ್ದಾರೆ. ನಾನು ಡ್ಯಾನ್ಸ್ ಪ್ರಾಕ್ಟೀಸ್ ಮಾಡಿದ್ದು ನಿಮ್ಮ ಮನೆಯ ಬಾತ್‌ರೂಂನಲ್ಲಿ ಎಂದು ಸಾರಾ ಅಲಿ ಖಾನ್ ಹೇಳಿದ್ದು ಕೇಳಿ ಸ್ವತಃ ಕರಣ್ ಅಚ್ಚರಿಗೊಳಗಾಗಿದ್ದಾರೆ. ಹೌದು, ನಿರ್ಮಾಪಕ ಕರಣ್ ಜೋಹರ್ ಅವರ ಮನೆಯ ಬಾತ್‌ರೂಂನಲ್ಲಿ ಸಾರಾ ಅಲಿ ಖಾನ್ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಕರಣ್ ಜೋಹರ್ ಅವರ ಗೋವಾ ಮನೆಯಲ್ಲಿ ಸಾರಾ ಡ್ಯಾನ್ಸ್ ಪ್ರಾಕ್ಟಿಸ್ ಮಾಡಿದ್ದಾಗಿ ಹೇಳಿದ್ದಾರೆ.

ಸಾರಾಳ ಚಕಾಚಕ್‌ಗೆ ಸಖತ್ ಸ್ಟೆಪ್ ಹಾಕಿದ ದೇಸಿ ಅಜ್ಜಿ

ಕಳೆದ ಕೆಲವು ವಾರಗಳಿಂದ ಸಾರಾ ಅಲಿ ಖಾನ್ ಚಕಾ ಚಕ್ ಹುಕ್ ಸ್ಟೆಪ್ ಮಾಡುತ್ತಲೇ ಇದ್ದಾರೆ. ಸಿನಿ ಇಂಡಸ್ಟ್ರಿಯ ಬಹಳಷ್ಟು ಪ್ರಮುಖರ ಜೊತೆ ಪಾಪ್ಪರಾಜಿಗಳ ಜೊತೆಗೂ ಸಾರಾ ಡ್ಯಾನ್ಸ್ ಮಾಡಿದ್ದಾರೆ. ರಣವೀರ್ ಸಿಂಗ್, ಅನನ್ಯಾ ಪಾಂಡೆ, ಮಾಧುರಿ ದೀಕ್ಷಿತ್ ಅವರ ಜೊತೆಗೂ ಸಾರಾ ಡ್ಯಾನ್ಸ್ ಮಾಡಿದ್ದಾರೆ. ಸಾರಾ ಅಲಿ ಖಾನ್ ಲಾಕ್‌ಡೌನ್ ಅವಧಿಯಿಂದಲೇ ಚಕಾಚಕ್ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ ಎಂದು ತಿಳಿದ ಕರಣ್ ಜೋಹರ್ ಅಚ್ಚರಿಪಟ್ಟಿದ್ದಾರೆ.

ಹಾಡಿನ ಬಗ್ಗೆ ನನಗೆ ಏಕೆ ಗೊತ್ತು, ಅಥವಾ ನಾನು ಅದನ್ನು ಮೊದಲು ಕೇಳಿದಾಗ ನಾವು ಒಟ್ಟಿಗೆ ಗೋವಾದಲ್ಲಿದ್ದೆವು. ಪ್ರಾಕ್ಟೀಸ್ ಮಾಡಲು ನಾನು ಉಳಿದುಕೊಳ್ಳುವ ಸ್ಥಳಕ್ಕೆ ಸಾರಾ ಬರುತ್ತಿದ್ದರು. ಅವರ ಜೊತೆಯಲ್ಲಿ ಅವಳ ಡ್ಯಾನ್ಸ್ ಕೊರಿಯೋಗ್ರಾಫರ್, ಅಸಿಸ್ಟೆಂಟ್ ಇದ್ದರು. ಅದೇ ಹಾಡು ಅಲ್ಲವೇ? ಎಂದು ಕರಣ್ ಹೇಳಿದರು. ಸಾರಾ ದೃಢವಾಗಿ ಪ್ರತಿಕ್ರಿಯಿಸಿ, ಓ ದೇವರೇ, ಅವಳು ಪ್ರತಿದಿನ ಬಹಳ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿದ್ದ ಹಾಡು ಇದಾಗಿದೆ ಎಂದು ನಾನು ಹೇಳಿದೆ ಎಂದು ಕರಣ್ ಹೇಳಿದ್ದಾರೆ.

 

ಸಾರಾ ನಂತರ ನಿಮ್ಮ ಬಾತ್ರೂಮ್ನಲ್ಲಿ ಪ್ರಾಕ್ಟೀಸ್ ಎಂದು ಸೇರಿಸಿದರು. ನಾನು ಇದನ್ನು ನಿಮಗೆ ಹೇಳಲು ಬಯಸಲಿಲ್ಲ. ಆದರೆ ಈಗ ನಾನು ಮಾಡಬಹುದು ಎಂದು ನಾನು ಭಾವಿಸುತ್ತೇನೆ. ನಿಮ್ಮ ಕೋಣೆಯ ಕನ್ನಡಿ ತುಂಬಾ ಚಿಕ್ಕದಾಗಿತ್ತು. ಆದರೆ ಸ್ನಾನಗೃಹದಲ್ಲಿ ದೊಡ್ಡ ಕನ್ನಡಿ ಇತ್ತು ಎಂದಿದ್ದಾರೆ. ಕರಣ್ ಇದಕ್ಕೆ ಪ್ರತಿಕ್ರಿಯಿಸಿ, ನೀವು ನನ್ನ ಬಾತ್ರೂಮ್ನಲ್ಲಿ ಚಕಾ ಚಕ್  ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

2020 ರಲ್ಲಿ ಭಾರತದಲ್ಲಿ ಲಾಕ್‌ಡೌನ್ ಸರಾಗಗೊಳಿಸಿದ ನಂತರ ಚಿತ್ರೀಕರಿಸಿದ ಮೊದಲ ತುಣುಕಿನಲ್ಲಿ ಈ ಹಾಡು ಸೇರಿದೆ ಎಂದು ಸಿಂಬಾ ಸ್ಟಾರ್ ಬಹಿರಂಗಪಡಿಸಿದ್ದಾರೆ. ನಾವು ಆರು ತಿಂಗಳ ಕಾಲ ಲಾಕ್‌ಡೌನ್‌ನಲ್ಲಿದ್ದೆವು. ನಾನು ಮೊದಲು ಮಧುರೈಗೆ ಹೋಗಿಲ್ಲ. ಅಥವಾ ದಕ್ಷಿಣದಲ್ಲಿ ಎಲ್ಲಿಯೂ ಸರಿಯಾಗಿ ಹೋಗಿಲ್ಲ. ಹಾಗಾಗಿ ನಾನು ಅಲ್ಲಿರುವುದು, ಆ ಜಗತ್ತನ್ನು ಅನುಭವಿಸುವುದು, ಹಾಡನ್ನು ಚಿತ್ರೀಕರಿಸಿದ ರೀತಿ, ನನ್ನ ಮೊದಲ ಸೋಲೋ ಸಾಂಗ್ ಮಾಡುವುದು, ಇವೆಲ್ಲವೂ ಬಹುಶಃ ತುಂಬಾ ಆಸಕ್ತಿದಾಯಕವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ