ನನ್ನ ಹೇಳಿಕೆಯಿಂದ ಯಾವುದೇ ಮುಜುಗರವಿಲ್ಲ; ತಂದೆಯಿಂದಲೇ ಲೈಂಗಿಕ ದೌರ್ಜನ್ಯ ಹೇಳಿಕೆಗೆ ಖುಷ್ಬೂ ರಿಯಾಕ್ಷನ್

By Shruthi KrishnaFirst Published Mar 8, 2023, 5:13 PM IST
Highlights

ತಂದೆಯಿಂದನೆ ಲೈಂಗಿಕ ದೌರ್ಜನ್ಯ ಹೇಳಿಕೆಗೆ ಯಾವುದೇ ಮುಜುಗರವಿಲ್ಲ ಎಂದು ನಟಿ ಖುಷ್ಬೂ ಸುಂದರ್ ಹೇಳಿದ್ದಾರೆ. 

ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ತಮ್ಮ ತಂದೆಯಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದೆ ಎಂದು ಬಹಿರಂಗ ಪಡಿಸಿದ್ದಾರೆ. ಖುಷ್ಬೂ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹೇಳಿಕೆ ಬಳಿಕ ಮತ್ತೆ ಪ್ರತಿಕ್ರಿಯೆ ನೀಡಿರುವ ಖುಷ್ಬೂ ಪ್ರಮಾಣಿಕತೆಯಿಂದ ಹೊರಬಂದ ಘಟನೆ ಇದು, ಇದನ್ನ ರಿವೀಲ್ ಮಾಡಿರುವುದರಿಂದ ನನಗೆ ಯಾವುದೇ ನಾಚಿಕೆ ಇಲ್ಲ ಎಂದು ಹೇಳಿದ್ದಾರೆ. 8ನೇ ವಯಸ್ಸಿನಲ್ಲಿ ತನ್ನ ತಂದೆಯೇ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ ನಟಿ ಖುಷ್ಬೂ ತಾನು ಆಶ್ಚರ್ಯಕರವಾದ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದಾರೆ. 

'ನಾನು ಆಶ್ಚರ್ಯಕರವಾದ ಹೇಳಿಕೆಯನ್ನು ನೀಡಿಲ್ಲ. ಇದು ಪ್ರಮಾಣಿಕತೆ ಎಂದು ಭಾವಿಸುತ್ತೇನೆ. ನಾನು ಇದನ್ನ ರಿವೀಲ್ ಮಾಡಿದ್ದಕ್ಕೆ ನನಗೇನು ನಾಚಿಕೆ ಇಲ್ಲ. ಏಕೆಂದರೆ ಇದನ್ನು ನಾನು ಅನುಭವಿಸಿದ್ದೀನಿ. ಅಪರಾಧಿಯು ತಾನು ಮಾಡಿದ್ದಕ್ಕಾಗಿ ನಾಚಿಕೆಪಡಬೇಕು ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು. 8ನೇ ವಯಸ್ಸಿನಲ್ಲಿ 

Latest Videos

ಖುಷ್ಬೂ ಹೇಳಿಕೆ 

'ಬಾಲ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವಾದರೆ ಮಾನಸಿಕವಾಗಿ ದೊಡ್ಡ ಪರಿಣಾಮ ಬೀರುತ್ತದೆ. ಅದರಿಂದ ಇಡೀ ಜೀವನ ಹೆದರಿಕೊಳ್ಳಬೇಕಾಗುತ್ತದೆ. ನನ್ನ ತಾಯಿ ವೈವಾಹಿಕ ಜೀವನದಲ್ಲಿ ಅತಿ ಹೆಚ್ಚು ನಿಂದನೆಗಳನ್ನು ಎದುರಿಸಿದ್ದರು. ಹೆಂಡತಿ ಮೇಲೆ ಹಲ್ಲೆ ಮಾಡುವುದು, ಮಕ್ಕಳನ್ನು ಹೊಡೆಯುವುದು ಅಪರಾಧ ಆದರೆ ಆ ಮನುಷ್ಯ ತಮ್ಮ ಜನ್ಮ ಹಕ್ಕ ಎನ್ನುವ ರೀತಿ ವರ್ತಿಸುತ್ತಿದ್ದ. ನಾನು 8 ವರ್ಷದ ಹುಡುಗಿ ಆಗಿದ್ದಾಗ ನನಗೆ ಕಿರುಕುಳ ನೀಡಲು ಆರಂಭಿಸಿದ. ದೌರ್ಜನ್ಯದ  ಬಗ್ಗೆ ಧ್ವತಿ ಎತ್ತಿ ಮಾತನಾಡಲು ಧೈರ್ಯ ಬಂದಿದ್ದೇ ನಾನು 15 ವರ್ಷ ಮುಟ್ಟಿದ್ದಾಗ' ಎಂದು ಬರ್ಖಾ ದತ್ ಜೊತೆ ಮೊಜೊ ಸ್ಟೋರಿಗಾಗಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ವ್ಹೀಲ್‌ಚೇರ್‌ಗಾಗಿ 30 ನಿಮಿಷ ಕಾಯಬೇಕಾಯ್ತು: ಏರ್‌ ಇಂಡಿಯಾ ವಿರುದ್ಧ ಗರಂ ಆದ ಖುಷ್ಬೂ ಸುಂದರ್

ಸಿನಿಮಾರಂಗದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿರುವ ಖುಷ್ಬೂ ಬಳಿಕ ರಾಜಕೀಯಕ್ಕೆ ಎಂಟ್ರಿ ಕೊಟ್ಟರು. 2010 ರಲ್ಲಿ ಖುಷ್ಬೂ ಡಿಎಂಕೆ ಸೇರುವ ಮೂಲಕ ರಾಜಕೀಯ ಪಯಣ ಪ್ರಾರಂಭಿಸಿದರು. 4 ವರ್ಷಗಳ ಸೇವೆ ಸಲ್ಲಿಸಿದ ನಂತರ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದರು. 6 ವರ್ಷಗಳು ಪಕ್ಷಕ್ಕೆ ಸೇವೆ ಸಲ್ಲಿಸಿದ ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. 2020ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.  

ತಂದೆಯಿಂದಲ್ಲೇ ನಟಿ ಖುಷ್ಬೂಗೆ ಲೈಂಗಿಕ ದೌರ್ಜನ್ಯ; ತಾಯಿ ಕೂಡ ನಂಬಲ್ಲ ಅನ್ನೋ ಭಯವಿತ್ತು ಎಂದ 'ಶಾಂತಿ ಕ್ರಾಂತಿ' ನಟಿ

ಖುಷ್ಬೂ ಜರ್ನಿ:

ಹಿಂದಿ ಸಿನಿಮಾರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಖುಷ್ಬೂ ಬಳಿಕ 1986ರಲ್ಲಿ ಸೌತ್ ಸಿನಿಮಾ ರಂಗ ಪ್ರವೇಶ ಮಾಡಿದರು. ಕಲಿಯುಗ ಪಾಂಡವುಲು ಚಿತ್ರದ ಮೂಲಕ ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಬಣ್ಣ ಹಚ್ಚಿದರು. ಖುಷ್ಬೂ ನಿಜವಾದ ಹೆಸರು ನಖತ್ ಖಾನ್‌. ಉತ್ತರ ಭಾರತದ ಮುಸ್ಲಿಂ ಕುಟಂಬದಲ್ಲಿ ಜನಿಸಿದವರು. ಸುಂದರ್ ಅವರನ್ನು ಮದುವೆಯಾಗುವ ಮುನ್ನ ಅವರು ಹಿಂದೂ ಸಂಪ್ರದಾಯವನ್ನು ಅನುಸರಿಸಿದರು. ಮದುವೆ ಬಳಿಕ ತಮ್ಮ ಗಂಡನ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡರು. ಖುಷ್ಬೂ ಮತ್ತು ಸುಂದರ್ ದಂಪತಿ ತಮ್ಮ ಮಕ್ಕಳಿಗೆ ಆವಂತಿಕಾ ಮತ್ತು ಆನಂದಿತಾ ಎಂದು ಹೆಸರಿಟ್ಟಿದ್ದಾರೆ.

click me!