ದೇವಸ್ಥಾನಗಳಿಗೆ ಭೇಟಿ ನೀಡಿರುವುದಕ್ಕೆ ತಮ್ಮನ್ನು ಟ್ರೋಲ್ ಮಾಡುತ್ತಿರುವವರಿಗೆ ನಟಿ ಸಾರಾ ಅಲಿ ಖಾನ್ ಖಕಡ್ ತಿರುಗೇಟು ನೀಡಿದ್ದಾರೆ.
ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ (Sara Ali Khan) ಒಂದಿಲ್ಲೊಂದು ವಿವಾದದಲ್ಲಿ ಸಿಲುಕುತ್ತಲೇ ಇರುತ್ತಾರೆ. ಕೆಲ ತಿಂಗಳ ಹಿಂದೆ ಬಾಯ್ಫ್ರೆಂಡ್ ವಿಷಯದಲ್ಲಿ ವಿವಾದಕ್ಕೆ ಸಿಲುಕಿದ್ದರು. ಆದರೆ ಇದೀಗ ವಿಭಿನ್ನ ಕಾರಣಕ್ಕೆ ಟ್ರೋಲ್ ಆಗುತ್ತಿದ್ದಾರೆ. ಅದು ದೇವಸ್ಥಾನಕ್ಕೆ ಹೋಗುವ ವಿಷಯದಲ್ಲಿ. ಈ ಹಿಂದೆ ಕೂಡ ಹಲವಾರು ಬಾರಿ ನಟಿ ದೇವಸ್ಥಾನಕ್ಕೆ ಹೋಗಿದ್ದುಂಟು. ಅದೇನೂ ಅವರಿಗೆ ಹೊಸತಲ್ಲ. ಆದರೆ ಅವರ ದೈವ ಭಕ್ತಿಯ ಬಗ್ಗೆಯೂ ಟೀಕೆ ಎದುರಾಗುತ್ತಲೇ ಇರುತ್ತದೆ. ಸೈಫ್ ಅಲಿ ಪುತ್ರಿ ಎನ್ನುವ ಕಾರಣಕ್ಕೆ ಸ್ಟಾರ್ ಕಿಡ್ ಆಗಿ ಸುಲಭದಲ್ಲಿ ಅವಕಾಶ ಲಭಿಸಿಕೊಂಡಿದ್ದಾರೆ ಎನ್ನುವ ವಿಚಾರದಲ್ಲಿಯೂ ಆಗಾಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ಕೇಳುತ್ತಿರುವ ನಟಿ ಸಾರಾ ಅವರಿಗೆ ಈಗ ದೇವಸ್ಥಾನಕ್ಕೆ ಹೋಗುವ ವಿಷಯದಲ್ಲಿಯೂ ಕಾಲೆಳೆಯಲಾಗುತ್ತಿದೆ.
ಸಾರಾ ಅಲಿ ಖಾನ್ ಅವರು ಬಹಳಷ್ಟು ಹಿಂದೂ ದೇವಾಲಯಗಳಿಗೆ ಭೇಟಿ ಕೊಡುತ್ತಾರೆ. ಬಹುಶಃ ಎಷ್ಟೋ ಜನ ಹಿಂದೂಗಳು ಕೂಡಾ ಸಾರಾ ಅಲಿ ಖಾನ್ ಭೇಟಿ ಮಾಡಿದಷ್ಟು ದೇವಸ್ಥಾನ ನೋಡಿರಲಾರರು. ಅಷ್ಟೊಂದು ದೇವಲಯ, ಮಂದಿರಗಳಿಗೆ ನಟಿ ಭೇಟಿ ಕೊಡುತ್ತಲೇ ಇರುತ್ತಾರೆ. ಇತ್ತೀಚೆಗೆ ನಟಿ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಛಾಯಾಚಿತ್ರಕ್ಕೆ ಸೆರೆ ಸಿಕ್ಕಿದ್ದಾರೆ. ಇದನ್ನೇ ಮಹಾ ಅಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ. ಸಾರಾ ಅಲಿ ಖಾನ್ ಅವರು ಕೇದಾರನಾಥ, ಉಜ್ಜಯಿನಿ ಮಹಾಕಾಳ ದೇವಸ್ಥಾನ (Mahakali Temple) ಸೇರಿದಂತೆ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದರು. ಹಿಂದೂಗಳು ಆರಾಧಿಸುವ ಈ ಕ್ಷೇತ್ರಗಳಿಗೆ ಸಾರಾ ಅಲಿ ಖಾನ್ ತೆರಳಿದ್ದು ಸರಿಯಲ್ಲ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಇವರ ವಿರುದ್ಧ ಸಾಕಷ್ಟು ಕಮೆಂಟ್ಗಳು ಬರುತ್ತಿವೆ. ಒಬ್ಬ ವ್ಯಕ್ತಿಯಂತೂ ಮುಸ್ಲಿಂ ಹೆಸರಿಗೇ ನೀವು ಕಳಂಕ. ನಿಮಗೆ ಖಂಡಿತಾ ಅಲ್ಲಾ ಶಿಕ್ಷೆ ನೀಡುತ್ತಾನೆ ಎಂದು ಕಮೆಂಟ್ ಮಾಡಿದ್ದರು. ಇಂಥಹ ಬಹಳಷ್ಟು ಕಮೆಂಟ್ಗಳು ನಟಿಯ ಪೋಸ್ಟ್ಗೆ ಬಂದಿವೆ.
Sara Ali Khan: ಬಾಯ್ಫ್ರೆಂಡ್ ಶುಭ್ಮನ್ ಗಿಲ್ ಕುರಿತ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ನಟಿ
ನಟಿ ಇತ್ತೀಚೆಗೆ ತಮ್ಮ ಸಿನಿಮಾ ಝರ ಹಟ್ಕೆ ಝರ ಬಚ್ಕೆ ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಹಲವು ದೇವಾಲಯ, ಮಸೀದಿ ಮಂದಿರಗಳಿಗೆ ಭೇಟಿ ಕೊಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ನಟಿ ಇತ್ತೀಚೆಗೆ ಭೇಟಿ ಉಜ್ಜೈನ್ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಅವರ ಭೇಟಿಯ ನಂತರ ಫೋಟೋಗಳನ್ನು ಶೇರ್ ಮಾಡಿದ್ದರು. ಈ ವಿಚಾರವಾಗಿ ನಟಿ ಟ್ರೋಲ್ ಆಗಿದ್ದಾರೆ. ಇದೀಗ ನಟಿ ಅಂಥವರಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ‘ಇದು ನಿಮಗೆ ಸರಿ ಎನಿಸಿದರೆ ಓಕೆ. ನಿಮಗೆ ಇಷ್ಟ ಆಗುತ್ತಿಲ್ಲ ಎಂದ ಮಾತ್ರಕ್ಕೆ ನಾನು ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸುವುದಿಲ್ಲ’ ಎಂದು ಸಾರಾ ಕಡ್ಡಿ ಮುರಿದವರಂತೆ ಕೇಳಿದ್ದಾರೆ. ‘ನನ್ನ ವೈಯಕ್ತಿಕ ನಂಬಿಕೆಗಳು ನನಗೆ ಮಾತ್ರ ಸಂಬಂಧಿಸಿವೆ. ನಾನು ಅಜ್ಮೇರ್ ಶರೀಫ್ ದರ್ಗಾಗೆ ಹೋಗುವಷ್ಟೇ ಶ್ರದ್ಧೆ ಮತ್ತು ಭಕ್ತಿಯಿಂದ ಬಂಗ್ಲಾ ಸಾಹಿಬ್ ಗುರುದ್ವಾರಕ್ಕೆ (Bangla Sahib Gurudwara) ತೆರಳುತ್ತೇನೆ. ಅಷ್ಟೇ ಶ್ರದ್ಧೆಯಿಂದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಹೋಗುತ್ತೇನೆ. ನಾನು ಅದನ್ನು ಮುಂದುವರಿಸುತ್ತೇನೆ. ಜನರು ಏನು ಬೇಕಾದರೂ ಹೇಳಿಕೊಳ್ಳಲಿ. ಅದರಿಂದ ನನಗೆ ತೊಂದರೆ ಇಲ್ಲ. ನಿಮಗೆ ಆ ಕ್ಷೇತ್ರದ ಶಕ್ತಿ ಇಷ್ಟವಾಗಬೇಕು. ನಾನು ಆ ಶಕ್ತಿಯನ್ನು ನಂಬುವವಳು. ನಾನು ನನ್ನ ಕೆಲಸವನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತೇನೆ. ನಾನು ಜನರಿಗಾಗಿ ಕೆಲಸ ಮಾಡುತ್ತೇನೆ. ನೀವು ನನ್ನ ಕೆಲಸ ಇಷ್ಟಪಡದಿದ್ದರೆ ನನಗೆ ಬೇಸರವಾಗುತ್ತದೆ. ಆದರೆ ನನ್ನ ವೈಯಕ್ತಿಕ ನಂಬಿಕೆಗಳು ನನ್ನವು ಮಾತ್ರ ’ ಎಂದು ಅವರು ಹೇಳಿದ್ದಾರೆ.
ಇನ್ನು ಸಾರಾ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ವಿಕ್ಕಿ ಕೌಶಲ್ (Vicky Koushak) ಜೊತೆ ನಟಿಸಿದ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ಹಿಟ್ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ 80 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ‘ಆದಿಪುರುಷ್’ ತೆರೆಕಂಡ ಬಳಿಕ ಇದರ ಹವಾ ಕಡಿಮೆ ಆಗಬಹುದು ಎಂದು ಊಹಿಸಲಾಗಿತ್ತು. ಆದರೆ ಇನ್ನೂ ಅನೇಕ ಕಡೆಗಳಲ್ಲಿ ‘ಜರಾ ಹಟ್ಕೆ ಜರಾ ಬಚ್ಕೆ’ ಚಿತ್ರ ಪ್ರದರ್ಶನ ಕಾಣುತ್ತಿದೆ.
ಸಿನಿಮಾದಲ್ಲಿ ಮತಾಂತರದ ವಿರುದ್ಧ ಹೋರಾಡಿದ ಅದಾ ಶರ್ಮಾ ಕನ್ವರ್ಟ್? ವೈರಲ್ ಫೋಟೋ ಸತ್ಯಾಸತ್ಯತೆ ಏನು?