ಶಿವರಾತ್ರಿಗೆ ವಿಶ್ ಮಾಡಿದ ಸಾರಾ ಅಲಿ ಖಾನ್ ಸಖತ್ ಟ್ರೋಲ್; ಬೆಂಬಲಕ್ಕೆ ನಿಂತ ಫ್ಯಾನ್ಸ್

By Shruthi Krishna  |  First Published Feb 19, 2023, 2:54 PM IST

ಮಹಾ ಶಿವರಾತ್ರಿ ಹಬ್ಬಕ್ಕೆ ವಿಶ್ ಮಾಡಿದ ಸಾರಾ ಅಲಿ ಖಾನ್ ಸಖತ್ ಟ್ರೋಲ್ ಆಗಿದ್ದಾರೆ. 


ದೇಶದಾದ್ಯಂತ ಮಹಾಶಿವರಾತ್ರಿಯನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ. ಅನೇಕ ಗಣ್ಯರು ಶಿವರಾತ್ರಿಗೆ ಶುಭಕೋರುತ್ತಿದ್ದಾರೆ. ಬಾಲಿವುಡ್ ನಟಿ ಸಾರಾ ಅಲಿ ಖಾನ್ ಕೂಡ ಶಿವರಾತ್ರಿ ಹಬ್ಬಕ್ಕೆ ಅಭಿಮಾನಿಗಳು ಮತ್ತು ದೇಶದ ಜನತೆಗೆ ಶುಭಹಾರೈಸಿದ್ದಾರೆ. ಸಾರಾ ಅಲಿ ಖಾನ್ ಮಧ್ಯಪ್ರದೇಶದ ಓಂಕಾರೇಶ್ವರ ದೇವಾಲಯ ಜ್ಯೋತಿರ್ಲಿಂಗದ ದರ್ಶನ ಪಡೆದಿದ್ದ ಹಳೆಯ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ. ಫೋಟೋಗೆ ಜೈ ಭೋಲೆನಾಥ್ ಎಂದು ಕ್ಯಾಪ್ಷನ್ ನೀಡಿದ್ದಾರೆ. 

ಸಾರಾ ಅಲಿ ಖಾನ್ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಧರ್ಮದ ಆಧಾರದ ಮೇಲೆ ಸಖತ್ ಟ್ರೋಲ್ ಮಾಡಲಾಗುತ್ತಿದೆ. ಆದರೆ ಸಾರಾ ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ತಂದೆ ಮುಸ್ಲಿಂ ಶಿವನ ದೇವಸ್ಥಾನಕ್ಕೆ ಹೋಗಿ ಅಪವಿತ್ರಗೊಳಿಸಬೇಡಿ ಎಂದು ಹೇಳುತ್ತಿದ್ದಾರೆ.  ಇನ್ನು ಕೆಲವರು ಪೋಸ್ಟ್ ಮಾಡಿ ಶಿವನ ಪಕ್ಕದಲ್ಲಿಯೇ ಕುಳಿತು ಫೋಟೋ ಕ್ಲಿಕ್ಕಿಸಿಕೊಳ್ಳಬೇಡಿ ಎಂದು, ಇದು ಶಿವನಿಗೆ ಮಾಡುವ ಅವಮಾನ ಎಂದು ಹೇಳುತ್ತಿದ್ದಾರೆ. ಸಾರಾ ಅವರನ್ನು ಟ್ರೋಲ್ ಮಾಡುತ್ತಿದ್ದಂತೆ ಅಭಿಮಾನಿಗಳು ಸಾರಾ ಪರ ಬ್ಯಾಟ್ ಬೀಸಿದ್ದಾರೆ. 

Tap to resize

Latest Videos

ಅಭಿಮಾನಿಯೊಬ್ಬ ಕಾಮೆಂಟ್ ಮಾಡಿ, ಅವರ ತಂದೆ ಮುಸ್ಲಿಂ ತಾಯಿ ಹಿಂದೂ ಎರಡೂ ಧರ್ಮವನ್ನು ಗೌರವಿಸುತ್ತಾರೆ, ಆಚರಿಸುತ್ತಾರೆ' ಎಂದು ಸಪರ್ಥಿಸಿಕೊಂಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ನಿಮಗಾಗಿ ಅಕ್ಷರಶಃ ಪ್ರಾರ್ಥಿಸಿದೆ. ಏಕೆಂದರೆ ನೀವು ಜಾತ್ಯತೀತತೆಯ ಒಂದು ಉತ್ತಮ ಉದಾಹರಣೆಯಾಗಿದ್ದೀರಿ' ಎಂದು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ಅದು ಅವರ ಆಯ್ಕೆ ಎಂದುಯಾಗಿದೆ.  

ಮತ್ತೆ ಒಂದಾದ ಎಕ್ಸ್ ಲವ್ ಬರ್ಡ್ಸ್; ಲಂಡನ್‌ನಲ್ಲಿ ಒಟ್ಟಿಗೆ ಹೊಸ ವರ್ಷ ಆಚರಿಸಿದ ಕಾರ್ತಿಕ್-ಸಾರಾ ಅಲಿ ಖಾನ್

ಸಾರಾ ಅಲಿ ಖಾನ್ ಎರಡೂ ಧರ್ಮದ ಆಚರಣೆ ಮಾಡುತ್ತಾರೆ. ದೇವಸ್ಥಾನಕ್ಕೂ ಹೋಗುತ್ತಾರೆ, ದರ್ಗಾಗೂ ಭೇಟಿ ನೀಡುತ್ತಾರೆ. ಎರಡು ಧರ್ಮವನ್ನು ಆಚರಣೆ ಮಾಡುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಸಾರಾ ಕೂಡ ಒಬ್ಬರು. ಮುಸ್ಲಿಂ ಆಗಿ ಬೆಳೆದರೂ ಒಂದು ಧರ್ಮಕ್ಕೆ ಮಾತ್ರ ಸೀಮಿತ ಎಂದು ತನ್ನನ್ನು ನಿರ್ಬಂಧಿಸಿಕೊಂಡಿಲ್ಲ. ಆದರೂ ಸಾರಾ ಆಗಾಗ ಟ್ರೋಲ್ ಆಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದಾಗಲೆಲ್ಲ ಸಾರಾ ಟ್ರೋಲ್ ಆಗಿದ್ದಾರೆ.

ಸಾರಾ ಆಲಿ ಖಾನ್‌ , ಶುಭಮನ್‌ ಗಿಲ್‌ ಸಂಬಂಧ; ಸುಳಿವು ನೀಡಿದ ಸೋನಮ್ ಯಾರು?

ಈ ಮೊದಲು ಸಹ ಸಾರಾ ಅಲಿ ಖಾನ್ ಗೆಳತಿ ಜಾನ್ವಿ ಕಪೂರ್ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿ ಟ್ರೋಲ್ ಆಗಿದ್ದರು. ಇದೀಗ ಮತ್ತೆ ಆಕ್ರೋಶ ಎದುರಿಸುತ್ತಿದ್ದಾರೆ. ಆದರೆ ಈ ಬಗ್ಗೆ ಸಾರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ನೀಡುವುದಿಲ್ಲ. ತನ್ನ ಪಾಡಿಗೆ ಸಿನಿಮಾ, ಶೂಟಿಂಗ್ ಮತ್ತು ತನಗೆ ಇಷ್ಟವಾದ ದೇವಸ್ಥಾನ ಮತ್ತು ಸ್ಥಳಗಳಿಗೆ ಭೇಟಿ ನೀಡುತ್ತಿರುತ್ತಾರೆ.  

click me!