ಬಾಕ್ಸ್ ಆಫೀಸ್‌ನಲ್ಲಿ ಸೋತ 'ಅಲಾ ವೈಕುಂಠಪುರಮುಲೋ' ಹಿಂದಿ ರಿಮೇಕ್; ಕಾರ್ತಿಕ್ ಆರ್ಯನ್ 'ಶೆಹಜಾದ' ಗಳಿಸಿದೆಷ್ಟು?

Published : Feb 19, 2023, 02:18 PM IST
ಬಾಕ್ಸ್ ಆಫೀಸ್‌ನಲ್ಲಿ ಸೋತ 'ಅಲಾ ವೈಕುಂಠಪುರಮುಲೋ' ಹಿಂದಿ ರಿಮೇಕ್; ಕಾರ್ತಿಕ್ ಆರ್ಯನ್ 'ಶೆಹಜಾದ' ಗಳಿಸಿದೆಷ್ಟು?

ಸಾರಾಂಶ

ಕಾರ್ತಿಕ್ ಆರ್ಯನ್ ನಟನೆಯ ಬಹುನರೀಕ್ಷೆಯ ಶೆಹಜಾದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಲು ವಿಫಲವಾಗಿದೆ. 

ಬಾಲಿವುಡ್ ಖ್ಯಾತ ನಟ ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೊನ್ ನಟನೆಯ ಶೆಹಜಾದ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಲು ವಿಫಲವಾಗಿದೆ. ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ಅಬ್ಬರದ ನಡುವೆ ಕಾರ್ತಿಕ್ ಆರ್ಯನ್ ಶೆಹಜಾದ ಮಂಕಾಗಿದೆ. ಭಾರಿ ನಿರೀಕ್ಷೆಯೊಂದಿಗೆ ಬಂದ ಶೆಹಜಾದ ಸಿನಿಮಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಈ ಸಿನಿಮಾ ಸದ್ಯ 12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನ 6 ಕೋಟಿ ರೂಪಾಯಿ ಮತ್ತು 2ನೇ ದಿನವೂ ಕೂಡ ಅಷ್ಟೆಗಳಿಸಿದೆ. 

ವಾರಾಂತ್ಯದಲ್ಲಿ ಶೆಹಜಾದಾ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇತ್ತು. ಆದರೆ ಅಭಿಮಾನಿಗಳನ್ನು ಸೆಳೆಯುವಲ್ಲಿ ಕಾರ್ತಿಕ್ ಆರ್ಯನ್ ವಿಫಲವಾಗಿದೆ. ಶಿವರಾತ್ರಿ ಇದ್ದರೂ ಶೆಹಜಾದ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲ. ಕಲೆಕ್ಷನ್ ದಿನದಿಂದ ದಿನಕ್ಕೆ ಕಡಿಮೆಯಾಗಿದೆ. ಪಠಾಣ್ ಸಿನಿಮಾ ರಿಲೀಸ್ ಆಗಿ ಅನೇಕ ದಿನಗಳಾದರೂ ಬಾಕ್ಸ್ ಆಫೀಸ್ ನಲ್ಲಿ ತನ್ನ ಓಟ ಮುಂದುವರೆಸಿದೆ. ಪಠಾಣ್ ಅಬ್ಬರಕ್ಕೆ ಶೆಹಜಾದ ತತ್ತರಿಸಿದೆ. 

ರೋಹಿತ್ ಧವನ್ ನಿರ್ದೇಶನದ ಶೆಹಜಾದಾ ಚಿತ್ರಕ್ಕೆ ಅಲ್ಲು ಅರ್ಜುನ್ ನಟನೆಯ ಅಲಾ ವೈಕುಂಠಪುರಮುಲೂ ಸಿನಿಮಾದ ರಿಮೇಕ್ ಆಗಿದೆ.  2020ರಲ್ಲಿ ಬಂದ ತೆಲುಗು ಸಿನಿಮಾ ಇದಾಗಿದ್ದು  ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಲೆಕ್ಷನ್ ಮಾಡಿತ್ತು. ಆದರೆ ಹಿಂದಿ ರಿಮೇಕ್ ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲವಾಗಿದೆ. 

ನನ್ನ ಲೈಫ್‌ಲಿ ಪ್ರೀತಿಗೆ ಅವಕಾಶವಿದೆ; ಮದುವೆ ಬಗ್ಗೆ ಮೌನ ಮುರಿದ ಕಾರ್ತಿಕ್ ಆರ್ಯನ್

ಕಾರ್ತಿಕ್ ಆರ್ಯನ್ ನಟನೆಯ ಈ ಹಿಂದಿನ ಅಂದರೆ 2022ರಲ್ಲಿ ರಿಲೀಸ್ ಆಗಿದ್ದ ಫ್ರೆಡ್ಡಿ ಮತ್ತು  ಭೂಲ್ ಭುಲೈಯಾ 2 ಉತ್ತಮ ಪ್ರದರ್ಶನ ಕಂಡಿತ್ತು. ಫ್ರೆಡ್ಡಿ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಭೂಲ್ ಭುಲೈಯಾ 2 ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು, ಬಾಕ್ಸ್ ಆಫೀಸ್‌ನಲ್ಲಿ ₹180 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿತ್ತು. ಹಾಗಾಗಿ ಶೆಹಜಾದ ಮೇಸಲೂ ನಿರೂಕ್ಷೆ ದುಪ್ಪಟ್ಟಾಗಿತ್ತು.  ಆದರೀಗ ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲವಾಗಿದೆ. 

Kartik Aaryan: 10 ದಿನಗಳ ಶೂಟಿಂಗ್​ಗೆ 20 ಕೋಟಿ ಪಡೆದ ಬಾಲಿವುಡ್​ ಚಾಕೊಲೇಟ್​ ಬಾಯ್​!

ಶೆಹಜಾದ ಸಿನಿಮಾ ವಿವಿಧ ರೀತಿಯಲ್ಲಿ ಪ್ರಮೋಷನ್ ಮಾಡಿತ್ತು. ಬೈ 1 ಗೆಟ್ 1 ಟಿಕೆಟ್ ಆಫರ್ ಕೂಡ ನೀಡಿತ್ತು. ಆದರೂ ನಿರೀಕ್ಷೆಯ ಗೆಲುವು ದಾಖಲಿಸಿಲ್ಲ. ಶೆಹಜಾದಾ ಮೂಲತಃ ಫೆಬ್ರವರಿ 10 ರಂದು ಬಿಡುಗಡೆಯಾಗಬೇಕಿತ್ತು ಆದರೆ ಪಠಾಣ್‌ನೊಂದಿಗೆ ಘರ್ಷಣೆಯನ್ನು ತಪ್ಪಿಸಲು ಫೆಬ್ರವರಿ 17 ಕ್ಕೆ ರಿಲೀಸ್ ಮಾಡಲಾಯಿತು. ಪಠಾಣ್ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?