ವಾರೆಗಿತ್ತಿಯರಾಗಲು ರೆಡಿಯಾಗಿರೋ ಸಾರಾ ಅಲಿ ಖಾನ್ ಮತ್ತು ಜಾಹ್ನವಿ ಕಪೂರ್ ವರ್ಕ್ಔಟ್ ವಿಡಿಯೋ ವೈರಲ್. ವಿಡಿಯೋಗೆ ಫ್ಯಾನ್ಸ್ ಫಿದಾ!
ಬಾಲಿವುಡ್ನಲ್ಲಿ ಇಬ್ಬರು ನಟಿಯರು ಪ್ರಾಣ ಗೆಳತಿಯರಾಗಿ ಇರುವುದು ಸ್ವಲ್ಪ ಕಷ್ಟವೇ. ಆದರೆ ಇದಕ್ಕೆ ವ್ಯತಿರಿಕ್ತ ಆಗಿದ್ದಾರೆ ಸೈಫ್ ಅಲಿ ಪುತ್ರಿ ಸಾರಾ ಅಲಿ ಖಾನ್ ಮತ್ತು ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್. ಪ್ರತಿಷ್ಠಿತ ಕುಟುಂಬದ ಈ ಇಬ್ಬರೂ ಕುತೂಹಲ ಎಂಬಂತೆ ಬಾಲಿವುಡ್ನ ಗೆಳತಿಯರು. ಮಾತ್ರವಲ್ಲದೇ, ಇವರಿಬ್ಬರೂ ವಾರೆಗಿತ್ತಿಯರಾಗಲು ರೆಡಿಯಾಗುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಹೌದು! ಇವರು ಜೊತೆಯಾಗಿ ಹಿಂದೊಮ್ಮೆ ವಿವಾದಿತ ಷೋ ಎನಿಸಿಕೊಂಡಿರೋ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ ಶೋದಲ್ಲಿ ಭಾಗವಹಿಸಿ ಹಲ್ಚಲ್ ಕೂಡ ಸೃಷ್ಟಿಸಿದವರು. ಕರಣ್ ಜೋಹರ್ ಅವರು ಯಾರ ಹೆಸರನ್ನೂ ಹೇಳದೇ ಇಬ್ಬರು ಸಹೋದರರ ನಡುವೆ ನೀವಿಬ್ಬರೂ ಈ ಹಿಂದೆ ಡೇಟಿಂಗ್ ಮಾಡ್ತಿದ್ರಿ, ಆ ಡೇಟಿಂಗ್ ಬಗ್ಗೆ ಒಂಚೂರು ಇಲ್ಲಿ ಹೇಳ್ತೀರಾ ಎಂದಾಗ ಗೆಳೆತಿಯರು ತಬ್ಬಿಬ್ಬಾಗಿದ್ದರು. ಇಬ್ಬರೂ ಟಾಪಿಕ್ ಚೇಂಜ್ ಮಾಡಿ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಅವರ ಈ ರಿಯಾಕ್ಷನ್, ಅವರು ಯಾರ ಜೊತೆಗೆ ಡೇಟ್ ಮಾಡ್ತಿದ್ರು ಅನ್ನೋ ವಿಚಾರವನ್ನು ಈ ಕಾರ್ಯಕ್ರಮ ನೋಡಿದ ಕೆಲವರು ಹುಡುಕಿ ತೆಗೆದಿದ್ದರು. ಅಷ್ಟಕ್ಕೂ ಇವರಿಬ್ಬರು ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಮೊಮ್ಮಕ್ಕಳಾದ ವೀರ್ ಪಹಾರಿಯಾ ಮತ್ತು ಶಿಖರ್ ಪಹಾರಿಯಾ ಸಹೋದರರ ಜೊತೆ ಡೇಟಿಂಗ್ನಲ್ಲಿದ್ದಾರೆ ಎಂದೇ ಹೇಳಲಾಗುತ್ತಿದೆ. ತಾವು ವೀರ್ ಪಹಾರಿಯಾ ಜತೆಗೆ ಡೇಟ್ ಮಾಡುತ್ತಿದ್ದೆ ಎಂಬ ವಿಚಾರವನ್ನು ಈ ಹಿಂದೆಯೇ ಸಾರಾ ಅಲಿಖಾನ್ ಹೇಳಿಕೊಂಡಿದ್ದರು. ನಾನು ಡೇಟ್ ಮಾಡಿದ ಏಕೈಕ ವ್ಯಕ್ತಿ ಅದು ವೀರ್. ಅದಾದ ಬಳಿಕ ನನ್ನ ಜೀವನದಲ್ಲಿ ಬೇರಾರು ಇಲ್ಲ. ಇಬ್ಬರು ಸಹಮತಿ ಮೇಲೆಯೇ ಬೇರೆಯಾದೆವು ಎಂದಿದ್ದರು. ಆದರೆ ಜಾಹ್ನವಿ ಮಾತ್ರ ಶಿಖರ್ ಜೊತೆ ದೇಶ-ವಿದೇಶ ಸುತ್ತುತ್ತಲೇ ಇದ್ದರೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಓರೆಗಿತ್ತಿಯರಾಗಲು ರೆಡಿಯಾಗ್ತಿದ್ದಾರೆ ಎಂದೇ ಹೇಳಲಾಗುತ್ತಿದೆ.
ಇದೀಗ ಈ ಗೆಳತಿಯರು, ಫಿಟ್ನೆಸ್ ದಿನಚರಿಯನ್ನು ಶುರುಮಾಡಿಕೊಂಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಶನಿವಾರದ ವರ್ಕ್ಔಟ್ ಎನ್ನುವ ಶೀರ್ಷಿಕೆ ಅಡಿ ಇವರಿಬ್ಬರೂ ತಮ್ಮ ಪ್ರೇರಕ ಫಿಟ್ನೆಸ್ ತಜ್ಞ ಮತ್ತು ಸ್ನೇಹಿತರಾದ ನಮ್ರತಾ ಪುರೋಹಿತ್ ಅವರ ಮಾರ್ಗದರ್ಶನದಲ್ಲಿ Pilates ಸ್ಟುಡಿಯೋದಲ್ಲಿ ಫಿಟ್ನೆಸ್ನಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ಇವರಿಬ್ಬರೂ ಟ್ರೇನಿಂಗ್ ಸಮಯದಲ್ಲಿ, ಹಲವಾರು ರೀತಿಯ ವರ್ಕ್ಔಟ್ ಮಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಕ್ರಿಯಾತ್ಮಕ ತರಬೇತಿ ವಿಧಾನವನ್ನು ಅತ್ಯಂತ ಪರಿಣಾಮಕಾರಿ ಮತ್ತು ಸ್ಪಷ್ಟವಾಗಿ ಮಾಡಿರುವುದನ್ನು ಕಂಡು ಅಭಿಮಾನಿಗಳು ಭೇಷ್ ಭೇಷ್ ಎನ್ನುತ್ತಿದ್ದಾರೆ.
undefined
ಮಾಡೆಲ್ ಜೊತೆ ಸಿದ್ಧಾರ್ಥ್ ಮಲ್ಹೋತ್ರಾ ಇದೇನು ರ್ಯಾಂಪ್ ವಾಕಾ, ರೊಮಾನ್ಸಾ? ಕಿಯಾರಾ ಎಲ್ಲಿದ್ಯಮ್ಮಾ?
ಅಷ್ಟಕ್ಕೂ ಚಿತ್ರತಾರೆಯರು ತಮ್ಮ ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಕೊಡುವುದು ಇದ್ದೇ ಇರುತ್ತದೆ. ಅದೇ ರೀತಿ ಈ ಇಬ್ಬರೂ ಗೆಳತಿಯರು ಕೂಡ ಸಾಕಷ್ಟು ವರ್ಕ್ಔಟ್ ಮಾಡುತ್ತಾರೆ. ಸಾರಾ ಅಲಿ ಖಾನ್ ಕುರಿತು ಹೇಳುವುದಾದರೆ, ಇವರು ಹಿಂದೂ ಧರ್ಮದ ಪಾಲನೆ ಮಾಡುತ್ತಿದ್ದಾರೆ. ಆಗಾಗ್ಗೆ ದೇವಾಲಯಗಳಿಗೆ ಭೇಟಿ ಕೊಟ್ಟು ಒಂದು ವರ್ಗದ ಕೆಂಗಣ್ಣಿಗೆ ಗುರಿಯಾಗುವುದೂ ಇದೆ. ಕೇದಾರನಾಥ, ಅಮರನಾಥ ಯಾತ್ರೆ ಮಾಡಿ ಬಂದಿದ್ದಾರೆ. ಶಿವಧ್ಯಾನದಲ್ಲಿಯೂ ತೊಡಗಿಸಿಕೊಂಡು ಅದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾಗ ಕೆಲವರು ಸಾಕಷ್ಟು ಟೀಕೆ ಕೂಡ ಮಾಡಿದ್ದರು. ಒಟ್ಟಿನಲ್ಲಿ ಈ ಇಬ್ಬರೂ ಸ್ನೇಹಿತೆಯರು ಸಕತ್ ಸದ್ದು ಮಾಡುತ್ತಲೇ ಇರುತ್ತಾರೆ. ಎಲ್ಲರಿಗೂ ತಿಳಿರುವಂತೆ ನಟಿ ಜಾಹ್ನವಿ ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಪುತ್ರಿಯಾದರೆ, ಸಾರಾ ಅಲಿ ಖಾನ್, ಸೈಫ್ ಅಲಿ ಖಾನ್ ಮತ್ತು ರೀನಾ ದತ್ತಾ ಅವರ ಪುತ್ರಿ.
ಇನ್ನು ಜಾಹ್ನವಿ ಕಪೂರ್, ಹೆಚ್ಚು ಸಮಯವನ್ನು ಜಿಮ್ನಲ್ಲಿ ಕಳೆಯುತ್ತಾರೆ. ಜತೆಗೆ ಜಂಕ್ ಫುಡ್ ತಿನ್ನೋಕೂ ಅವರು ಆದ್ಯತೆ ನೀಡುತ್ತಾರೆ.ಈ ಕುರಿತು ಕೆಲ ತಿಂಗಳ ಹಿಂದೆ ಅವರೇ ಮಾಹಿತಿ ನೀಡಿದ್ದರು. ಕಳೆದ ವರ್ಷ ಬೇಸಿಗೆಯಲ್ಲಿ ತಾವು ನಾನಾ ರೀತಿಯ ತಿನಿಸುಗಳನ್ನು ತಿನ್ನುತ್ತಾ, ಜಿಮ್ ಮಾಡುತ್ತಾ, ಶೂಟಿಂಗ್ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದಾಗಿ ತಿಳಿಸಿದ್ದರು. ಈ ಬೇಸಿಗೆಯನ್ನು ಹೇಗೆ ಕಳೆಯುತ್ತಾರೆ ಎನ್ನುವುದನ್ನು ನೋಡಬೇಕಿದೆಯಷ್ಟೇ. ಇದೇ ವೇಳೆ ಶಿಖರ್ ಪಹಾರಿಯಾ ಜೊತೆ ಟೆಂಪಲ್ ರನ್ ಮಾಡುವುದನ್ನೂ ಮಾಡುತ್ತಿದ್ದಾರೆ. ಈಚೆಗೆ ಈ ಜೋಡಿ ಒಟ್ಟಿಗೇ ಪೂಜೆಗೆ ಕುಳಿತಿದ್ದರಿಂದ ಮದ್ವೆಯಾಯಿತು ಎಂದೇ ಸುದ್ದಿಯಾಗಿತ್ತು.
36 ವರ್ಷದ ಬಳಿಕ ಏಕ್, ದೋ, ತೀನ್... ಎಂದ ಮಾಧುರಿ: ಅಮೆರಿಕದ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ ನಟಿ!