KGF 2‌ಗೆ ಒಂದು ವರ್ಷ: 'ಅಧೀರ' ಸಂಜಯ್ ದತ್ ಭಾವನಾತ್ಮಕ ಹೇಳಿಕೆ ವೈರಲ್

Published : Apr 14, 2023, 05:37 PM IST
KGF 2‌ಗೆ ಒಂದು ವರ್ಷ:  'ಅಧೀರ' ಸಂಜಯ್ ದತ್ ಭಾವನಾತ್ಮಕ ಹೇಳಿಕೆ ವೈರಲ್

ಸಾರಾಂಶ

KGF 2‌ ರಿಲೀಸ್ ಆಗಿ ಒಂದು ವರ್ಷವಾಗಿದೆ. 'ಅಧೀರ' ಆಗಿ ಅಬ್ಬರಿಸಿದ್ದ ಬಾಲಿವುಡ್ ಸ್ಟಾರ್ ಸಂಜಯ್ ದತ್ ಭಾವನಾತ್ಮಕ ಹೇಳಿಕೆ ವೈರಲ್ ಆಗಿದೆ.

ಭಾರತೀಯ ಸಿನಿಮಾದಲ್ಲಿ ಇತಿಹಾಸ ಸೃಷ್ಟಿಸಿದ ಕೆಜಿಎಫ್-2 ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಆಗಿದೆ. ಕಳೆದ ವರ್ಷ ಇದೇ ದಿನ ಅಂದರೆ ಏಪ್ರಿಲ್ 14ರಂದು ಬಾರಿ ನಿರೀಕ್ಷೆಯ ಕೆಜಿಎಫ್ 2 ಅದ್ದೂರಿಯಾಗಿ ರಿಲೀಸ್ ಆಗಿತ್ತು. ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ ಧೂಳ್ ಎಬ್ಬಿಸಿತ್ತು.  ಕೆಜಿಎಫ್ ಮೊದಲ ಭಾಗ ರಿಲೀಸ್ ಆಗಿ ನಾಲ್ಕು ವರ್ಷಗಳ ಬಳಿಕ ಕೆಜಿಎಫ್ 2 ರಿಲೀಸ್ ಆಗಿ ದಾಖಲೆ ಬರೆದಿತ್ತು. ಪಾರ್ಟ್-2 ಇಡೀ ಭಾರತೀಯ ಸಿನಿಮಾರಂಗವೇ ಅಚ್ಚರಿ ಪಡುವಂತೆ ಮಾಡಿತ್ತು. ಕನ್ನಡ ಸಿನಿಮಾರಂಗಕ್ಕೆ ಹೊಸ ಭಾಷ್ಯ ಬರೆದ ಕೆಜಿಎಫ್ 2 ಸಿನಿಮಾ ಮಾಡಿದ ಒಂದೆರಡಲ್ಲ. ಭಾರತದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್‌ನಲ್ಲಿ ಕೆಜಿಎಫ್-2 ಕೂಡ ಒಂದು ಎನ್ನುವುದೇ ವಿಶೇಷ. 

ಇತಿಹಾಸ ಸೃಷ್ಟಿಸಿದ ಸಿನಿಮಾದ ಬಗ್ಗೆ ಹೊಂಬಾಳೆ ಫಿಲ್ಮ್ಸ್ ವಿಶೇಷ ವಿಡಿಯೋ ಶೇರ್ ಮಾಡಿದೆ. ವಿಡಿಯೋ ಜೊತೆಗೆ ಕೆಜಿಎಫ್ 3 ಬಗ್ಗೆ ಸುಳಿವು ನೀಡಿದೆ ಹೊಂಬಾಳೆ ಫಿಲ್ಮ್ಸ್. ಇನ್ನು ಬಾಲಿವುಡ್ ಸ್ಟಾರ್ ಸಂಜಯ್ ದತ್ ಕೂಡ ಕೆಜಿಎಫ್-2 ಒಂದು ವರ್ಷ ಪೂರೈಸಿದ ಸಂತಸ ಹಂಚಿಕೊಂಡಿದ್ದಾರೆ. ಕೆಜಿಎಫ್-2 ಮೂಲಕ ಬಾಲಿವುಡ್ ಸ್ಟಾರ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಅಧೀರ ಆಗಿ ಅಬ್ಬರಿಸಿದ್ದರು. ಈ ಪಾತ್ರ ಸಂಜಯ್ ದತ್ ಅವರಿಗೂ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಈ ಪಾತ್ರದ ಬಗ್ಗೆ ಸಂಜಯ್ ದತ್ ಯಾವಾಗಲೂ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಇದೀಗ ಟ್ವೀಟ್ ಮಾಡಿರುವ ಸಂಜಯ್ ಇದೊಂದು ನಂಬಲಾದ ಅನುಭವವಾಗಿದೆ ಎಂದು ಹೇಳಿದ್ದಾರೆ.

'KGF Chapter2 ನಲ್ಲಿ ಕೆಲಸ ಮಾಡಿದ್ದು ನನಗೆ ನಂಬಲಾಗದ ಅನುಭವವಾಗಿದೆ. ನಿಮ್ಮಲ್ಲಿ ಕೆಲವರಿಗೆ ತಿಳಿದಿರುವಂತೆ, ನಾನು ನನ್ನ ವೈಯಕ್ತಿಕ ಸವಾಲುಗಳ ನಡುವೆಯೂ ಮತ್ತು ಕೆಲವೊಮ್ಮೆ ಮುಂದಿನ ಹಾದಿ ತುಂಬಾ ಕಷ್ಟಕರವಾಗಿದೆ ಎಂದು ತೋರುತ್ತಿತ್ತು. ಅದಾಗ್ಯೂ, ಕೆಜಿಎಫ್ 2 ಸೆಟ್‌ನಲ್ಲಿರುವುದು ಮತ್ತು ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರ ಉತ್ಸಾಹ ನೋಡಿ ನನ್ನ ಸವಾಲುಗಳನ್ನು ಜಯಿಸಲು ಮತ್ತು ಶಕ್ತಿಯುತವಾಗಿ ಮತ್ತು ಉತ್ತಮವಾಗಿ ಹೊರಹೊಮ್ಮಲು ನನಗೆ ಸ್ಫೂರ್ತಿ ನೀಡಿತು' ಎಂದು ಹೇಳಿದ್ದಾರೆ. 

ಇತಿಹಾಸ ಸೃಷ್ಟಿಸಿದ KGF-2ಗೆ 1 ವರ್ಷ; ವಿಶೇಷ ವಿಡಿಯೋ ಮೂಲಕ ಪಾರ್ಟ್-3 ಸುಳಿವು ನೀಡಿದ ಹೊಂಬಾಳೆ ಫಿಲ್ಮ್ಸ್

'ಅವಿರತವಾಗಿ ಶ್ರಮಿಸಿದ ಪ್ರತಿಭಾವಂತ ಪಾತ್ರವರ್ಗ ಮತ್ತು ಸಿಬ್ಬಂದಿ ನನ್ನನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಯಶ್, ಈಗ ನನ್ನ ಸಹೋದರ, ಮತ್ತು ನಮ್ಮ ನಿರ್ದೇಶಕ  ಪ್ರಶಾಂತ್ ನೀಲ್ ಅದ್ಭುತ ಪ್ರತಿಭೆ. ಅವರು ಉತ್ತಮ ಕೆಲಸಗಳನ್ನು ಮಾಡುತ್ತಾರೆ ಎಂದು ನನಗೆ ಖಾತ್ರಿಯಿದೆ' ಎಂದಿದ್ದಾರೆ.

'ಚಿತ್ರವು ಒಂದು ವರ್ಷ ಪೂರೈಸಿದೆ. ನಿಮ್ಮೆಲ್ಲರಿಂದ ನಮಗೆ ಸಿಕ್ಕಿರುವ ಪ್ರೀತಿ ಮತ್ತು ಮೆಚ್ಚುಗೆಯಿಂದ ನಾನು ತುಂಬಾ ಸಂತೋಷಗೊಂಡಿದ್ದೇನೆ. ನಿಮ್ಮ ಬೆಂಬಲವು ಕೆಜಿಎಫ್ 2 ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿಯಾಗಿದೆ ಮತ್ತು ಅದಕ್ಕಾಗಿ ನಾನು ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಕಾಗಲ್ಲ. ಚಿತ್ರದ ಯಶಸ್ಸು ಕಾರ್ತಿಕಗೌಡ, ವಿಜಯ್ ಕಿರಗಂದೂರು ಸರ್ ಹಾಗೂ ಇಡೀ ಹೊಂಬಾಳೆ ತಂಡದವರ ಪರಿಶ್ರಮ ಮತ್ತು ಸಮರ್ಪಣಾಭಾವಕ್ಕೆ ಸಾಕ್ಷಿಯಾಗಿದೆ ಮತ್ತು ನಾನು ಅದರ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ' ಎಂದು ಸಂಜಯ್ ದತ್ ಸರಣಿ ಟ್ವೀಟ್ ಮಾಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​: ಮಾತು ನಿಜವಾಗೋಯ್ತು- ವಿಡಿಯೋ ವೈರಲ್​
ಅಮಿತಾಭ್ ಮಾತ್ರವಲ್ಲ, ಇವರೆಲ್ಲರೂ ಶೂಟಿಂಗ್ ಸೆಟ್‌ನಿಂದ ಜೀವ ಉಳಿಸಿಕೊಂಡು ಬಂದವರೇ