ಸಂತೋಷಂ ಅವಾರ್ಡ್ಸ್ ಅವಾಂತರ; ಬೆಂಗಳೂರಿಗೆ ವಾಪಸ್ ಹೊರಟ ಸ್ಯಾಂಡಲ್‌ವುಡ್ ತಾರೆಯರು

By Shriram Bhat  |  First Published Dec 3, 2023, 3:39 PM IST

ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ್ದ ನಟ ರಮೇಶ್ ಅರವಿಂದ್, ಸಪ್ತಮಿ ಗೌಡ, ರಾಜವರ್ಧನ್, ಬಿ ಸುರೇಶ್, ಶೈಲಜಾ ನಾಗ್ ಮುಂತಾದವರು ಕಾರ್ಯಕ್ರಮವನ್ನು ಬಾಯ್ಕಾಟ್ ಮಾಡಿ ವಾಪಸ್‌ ಬೆಂಗಳೂರಿಗೆ ಹೊರಟಿದ್ದಾರೆ. 


ತೆಲುಗಿನ ಪ್ರತಿಷ್ಠಿತ 'ಸಂತೋಷಂ ಅವಾರ್ಡ್ಸ್' ನೀಡಲು 'ಕನ್ನಡ ಸ್ಟಾರ್ಸ್'ಗೆ  ಗೋವಾಗೆ ಆಹ್ವಾನ ನೀಡಿದ್ದ ಸುರೇಶ್ ಅವರಿಂದ ಕನ್ನಡದ ಸಿನಿತಾರೆಯರಿಗೆ ಅವಮಾನವಾಗಿದೆ ಎನ್ನಲಾಗಿದೆ. ಮೆಗಾಸ್ಟಾರ್ ಚಿರಂಜೀವಿ ಪಿಆರ್ ಓ ಸುರೇಶ್ ಕೊಂಡೇಟಿಯಿಂದ ಈ ರೀತಿ ಅವಮಾನ  ಆಗಿದ್ದು, ಕನ್ನಡದ ತಾರೆಯರು ಕಾರ್ಯಕ್ರಮವನ್ನು ಬಾಯ್ಕಾಟ್ ಮಾಡಿ ವಾಪಸ್ ಬೆಂಗಳೂರಿಗೆ ಬರುತ್ತಿದ್ದಾರೆ ಎನ್ನಲಾಗಿದೆ. 

ಗೋವಾದಲ್ಲಿ ಬಂದಂತಹ ಅತಿಥಿಗಳಿಗೆ ಸರಿಯಾದ ಆತಿಥ್ಯ ನೀಡದೆ ಅಪಮಾನ ಮಾಡಲಾಗಿದೆ. ಹೋಟೆಲ್ ರೂಮ್ಸ್ ನಿಂದ ಹಿಡಿದು ಹಾಸ್ಪಿಟಾಲಿಟಿ ನೀಡಲು ಸಹ ಆಯೋಜಕರು ವಿಫಲರಾಗಿದ್ದಾರೆ ಎನ್ನಲಾಗಿದೆ. ಕೊನೆಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರಾಂತಿ ಸಿನಿಮಾಗೆ ಅವಾರ್ಡ್ ನೀಡ್ತಿದ್ದಂತೆ ವೇದಿಕೆಯಲ್ಲಿ ಕರೆಂಟ್ ಆಫ್ ಆಗಿದೆಯಂತೆ. ಆಯೋಜನೆಯಲ್ಲಿ ಮಹಾ ಎಡವಟ್ಟು ನಡೆದಿದ್ದು, ಕನ್ನಡಿಗರಿಗೆ ತೆಲುಗು ಆಯೋಜಕರಿಂದ ಮೋಸವಾಗಿದೆ ಎನ್ನಲಾಗಿದೆ. ಕಾರ್ಯಕ್ರಮಕ್ಕೆ ಕರೆದು ಈ ರೀತಿ ಅವಮಾನ ಆಗಿರುವುದು ತುಂಬಾ ಬೇಸರ ತರಿಸಿದೆ ಎಂದು ಗೋವಾಗೆ ಹೋಗಿ ವಾಪಸ್ಸಾಗುತ್ತಿರುವ ಸೆಲೆಬ್ರಿಟಿಗಳು ಹೇಳಿದ್ದಾರೆ.

Tap to resize

Latest Videos

ಗಂಡು ಮಕ್ಕಳಿಗೆ ಅಪ್ಪ ಏನು ಕಲಿಸಬೇಕೆಂದು ಹೇಳಿಕೊಟ್ಟ ನಟಿ ಸಾಯಿ ಪಲ್ಲವಿ!

ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ್ದ ನಟ ರಮೇಶ್ ಅರವಿಂದ್, ಸಪ್ತಮಿ ಗೌಡ, ರಾಜವರ್ಧನ್, ಬಿ ಸುರೇಶ್, ಶೈಲಜಾ ನಾಗ್ ಮುಂತಾದವರು ಕಾರ್ಯಕ್ರಮವನ್ನು ಬಾಯ್ಕಾಟ್ ಮಾಡಿ ವಾಪಸ್‌ ಬೆಂಗಳೂರಿಗೆ ಹೊರಟಿದ್ದಾರೆ. ಗೋವಾದ ಕಾರ್ಯಕ್ರಮಕ್ಕೆ ಹೋಗಿದ್ದ ಸುಮಾರು 30ರಿಂದ 35 ಮಂದಿ ಕನ್ನಡಿಗರಿಗೆ ಅವಮಾನವಾಗಿದೆ. ಹೊಟೆಲ್ ರೂಮು ಬುಕ್ಕಿಂಗ್, ಆತಿಥ್ಯ ಎಲ್ಲದರಲ್ಲೂ ಎಡವಟ್ಟು ಎದ್ದು ಕಾಣುತ್ತಿದೆ ಎಂದು ಕನ್ನಡದ ನಟನಟಿಯರು ಕೋಪಗೊಂಡಿದ್ದಾರೆ ಎನ್ನಲಾಗಿದೆ. 

ಯಾರದೋ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ, ರಶ್ಮಿಕಾ ಮಂದಣ್ಣ ಉಪದೇಶ ಕೇಳಿ ನೆಟ್ಟಿಗರು ಸುಸ್ತೋ ಸುಸ್ತು!

ತಮಿಳು ತಾರೆಯರು ಕೂಡ ಸಂತೋಷಂ ಫಿಲ್ಮ್ ಅವಾರ್ಡ್ಸ್ ನಲ್ಲಿ ಭಾಗಿಯಾಗದಿರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಅವರಿಗೂ ಸಹ ಕಾರ್ಯಕ್ರಮದಲ್ಲಿ ಪ್ರಾಯೋಜಕರಿಂದ ಬಹಳಷ್ಟು ಎಡವಟ್ಟುಗಳು ನಡೆದಿವೆ ಎನ್ನಲಾಗಿದೆ. ಈ ಮೊಲದೇ ಟ್ವೀಟ್ ಮೂಲಕ ತಮಿಳು ಮಂದಿ ಅಸಹಕಾರ ವ್ಯಕ್ತಪಡಿಸಿದ್ದರು. ಇದೀಗ ತಮಿಳು ತಾರೆಯರೂ ಕೂಡ ಕಾರ್ಯಕ್ರಮ ಬಾಯ್ಕಾಟ್ ಮಾಡಲು ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ, ತೆಲುಗು ಸಿನಿತಾರೆಯರನ್ನು ಹೊರತು ಪಡಿಸಿ ಕನ್ನಡ, ತಮಿಳು ಸ್ಟಾರ್ಸ್ ಭಾಗವಹಿಸುವಿಕೆ ಈ ಮೂಲಕ ತಡೆಯಾದಂತಾಗಿದೆ. 

click me!